Search
  • Follow NativePlanet
Share
» »ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ

ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ

ಕಾಶಿ ಲಾಬ್ ಮುಕ್ತಿ ಭವನದ ಬಗ್ಗೆ ಕೇಳಿದ್ದೀರಾ? ಇದನ್ನು ಸಾವಿನ ಹೊಟೇಲ್ ಎನ್ನಲಾಗುತ್ತದೆ. ಇದು ವಾರಣಾಸಿಯಲ್ಲಿದೆ. ಈ ಮುಕ್ತಿ ಭವನದ ವಿಶೇಷತೆ ಎಂದರೆ ಇಲ್ಲಿ ಸಾಯುವ ಕೊನೆಹಂತದಲ್ಲಿರುವವರಿಗೆ ಆಶ್ರಯ ನೀಡಲಾಗುತ್ತದೆ. ಯಾರು ತಮ್ಮ ಜೀವನದ ಕೊನೇ ಘಳಿಗೆಯಲ್ಲಿರುತ್ತಾರೋ ಅಂತವರಿಗಾಗಿ ನಿರ್ಮಿಸಿರುವ ಭವನ ಇದಾಗಿದೆ.

ಮೋಕ್ಷ ಪ್ರಾಪ್ತಿ

ಮೋಕ್ಷ ಪ್ರಾಪ್ತಿ

PC:juggadery

ವಾರಣಾಸಿಯು ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಇದು ಹಿಂದೂಗಳ ಪವಿತ್ರ ತೀರ್ಥ ಸ್ಥಳವೂ ಆಗಿದೆ. ವಾರಣಾಸಿಯಲ್ಲಿ ಯಾರು ಸಾವನ್ನಪ್ಪುತ್ತಾರೋ ಅವರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವುದು ಹಲವರ ನಂಬಿಕೆ. ಹಾಗಾಗಿ ಬಹಳಷ್ಟು ಜನರು ತಾವು ವಾರಣಾಸಿಯಲ್ಲೇ ಕೊನೆಕ್ಷಣವನ್ನು ಕಳೆಯಬೇಕೆಂದು ಬಯಸುತ್ತಾರೆ.

ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ? l

 ಡೆತ್ ಹೊಟೇಲ್

ಡೆತ್ ಹೊಟೇಲ್

PC:Jorge Royan

ಮುಕ್ತಿ ಭವನವು ಒಂದು ರೀತಿಯ ಡೆತ್ ಹೊಟೇಲ್ ಎನ್ನಬಹುದು. ಕೊನೆಕ್ಷಣವನ್ನು ಕಳೆಯ ಬಯಸುವ ಜನರಿಗಾಗಿ ನಿರ್ಮಿಸಲಾಗಿರುವಂತಹ ಭವನ ಇದಾಗಿದೆ. ಇಲ್ಲಿ 12 ಕೋಣೆಗಳಿವೆ. 60 ವರ್ಷದ ಬಥರವ ನಾಥ ಶುಕ್ಲ ಎನ್ನುವವರು ಇಲ್ಲಿನ ಮ್ಯಾನೇಜರ್, ಕೆಲವೊಮ್ಮೆ ಇಲ್ಲಿ ಬರುವವರ ಸಂಖ್ಯೆ 12ಕ್ಕಿಂತಲೂ ಅಧಿಕ ಇರುತ್ತದೆ. ಆಗ ಅಲ್ಲೇ ಬದಿಯಲ್ಲಿ ಬೆಡ್‌ಗಳನ್ನು ಹಾಕಿ ಅಡ್ಜೆಸ್ಟ್ ಮಾಡಲಾಗುತ್ತದೆ.

 ಮುಕ್ತಿ ಭವನದ ಕಂಡೀಶನ್‌ಗಳು

ಮುಕ್ತಿ ಭವನದ ಕಂಡೀಶನ್‌ಗಳು

PC:Ilya Mauter

ಈ ಮುಕ್ತಿ ಭವನದಲ್ಲಿ ಕೆಲವು ಕಂಡೀಶನ್‌ಗಳಿವೆ. ಅದೇನೆಂದರೆ ಇಲ್ಲಿಗೆ ಬರುವ ಯಾವುದೇ ವ್ಯಕ್ತಿ 2 ವಾರಗಳ ಕಾಲ ಮಾತ್ರ ಅಲ್ಲಿ ನೆಲೆಸಬಹುದು. ಒಂದು ವೇಳೆ 2 ವಾರದೊಳಗೆ ಸಾವನ್ನಪ್ಪಲಿಲ್ಲವೆಂದಾದಲ್ಲಿ ಅಲ್ಲಿಂದ ಹಿಂದಿರುಗಬೇಕು. ಆ ಕೋಣೆಯನ್ನು ಬೇರೆಯವರಿಗೆ ನೀಡಬೇಕು. ಕೆಲವೊಮ್ಮೆ ಅವರ ಸಾವು ಸಮೀಪಿಸುತ್ತಿದೆ ಎಂದು ಅಲ್ಲಿನ ಮ್ಯಾನೇಜರ್‌ಗೆ ಅನಿಸಿದರೆ ಅವರು ಅಲ್ಲಿ ಉಳಿಯುವ ದಿನವನ್ನು ಮುಂದೂಡಬಹುದು. ಬೈರವ್‌ನಾಥ್‌ರಿಗೆ 44 ವರ್ಷಗಳ ಅನುಭವ ಇದೆ.

ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?

ಸಂಬಂಧಿಕರಿಗೂ ಆಶ್ರಯ ನಿಡುತ್ತಾರೆ

ಸಂಬಂಧಿಕರಿಗೂ ಆಶ್ರಯ ನಿಡುತ್ತಾರೆ

PC: Jorge Royan

ಈ ಮುಕ್ತಿ ಭವನದಲ್ಲಿ ಸಾಯುವ ವ್ಯಕ್ತಿಯ ಜೊತೆಗೆ ಬಂದಿರುವ ಸಂಬಂಧಿಕರಿಗೂ ಆಶ್ರಯವನ್ನು ನೀಡಲಾಗುತ್ತದೆ. ವ್ಯಕ್ತಿ ಸಾಯುವವರೆಗೆ ಅವರು ಕಾಯುವುದಾದರೆ ಅಥವಾ ಅಲ್ಲೇ ಉಳಿಯ ಬಯಸಿದರೆ ಅವರು ದಿನಕ್ಕೆ 20 ರೂ.ಯನ್ನು ನೀಡಬೇಕು. ಬಡವರಿಗೆ ಆಶ್ರಯ ಉಚಿತವಾಗಿದೆ.

 ಆಧ್ಯಾತ್ಮಿಕ ವಾತಾವರಣ

ಆಧ್ಯಾತ್ಮಿಕ ವಾತಾವರಣ

PC:CC BY 4.0

ಆಧ್ಯಾತ್ಮಿಕ ವಾತಾವರಣಮುಕ್ತಿ ಭವನದಲ್ಲಿ ಪ್ರತಿನಿತ್ಯ ಆಧ್ಯಾತ್ಮಿಕ ವಾತಾವರಣ ಇರುತ್ತದೆ. ಪ್ರತಿದಿನ ಶಾಂತಿ ಮಂತ್ರವನ್ನು ಪಠಿಸಲಾಗುವುದು. ಇದರ ಒಳಗೆ ಪ್ರವಾಸಿಗರಿಗೂ ಪ್ರವೇಶ ನೀಡಲಾಗುತ್ತದೆ. ಇದರ ಒಳಗೆ ಒಂದು ಅಲ್ಲಿ ಬಂದು ಉಳಿದಿರುವ ವ್ಯಕ್ತಿಗಳ ಕೊನೆಕಾಲವನ್ನು ಕಣ್ಣಾರೆ ನೋಡುವುದು ಹಾಗೂ ಅವರ ಜೀವನವನ್ನು ಅರಿಯಲು ಅವಕಾಶವಾಗುತ್ತದೆ.

ಭೇಟಿಗೆ ಅವಕಾಶ

ಭೇಟಿಗೆ ಅವಕಾಶ

ಮುಕ್ತಿ ಭವನಕ್ಕೆ ನೀಡುವುದರಿಂದ ನಿಮ್ಮ ಸ್ವಂತ ಜೀವನದಲ್ಲಿ ಒಂದು ದೃಷ್ಟಿಕೋನದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಇದು ಸಾವಿನ ರಿಯಾಲಿಟಿ ಮತ್ತು ಪ್ರಕ್ರಿಯೆಯನ್ನು ಪ್ರಭಾವ ಬೀರುತ್ತದೆ, ಜೀವನದ ಬಗ್ಗೆ ಒಂದು ಪಾಠವನ್ನು ಕಲಿಸಿಕೊಡುತ್ತದೆ ಎನ್ನುತ್ತಾರೆ ಬೈರವ್‌ನಾಥ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more