Search
  • Follow NativePlanet
Share
» »ಮಕ್ಕಳೊಂದಿಗೆ ಕಾಲಕಳೆಯಲು ಸೂಕ್ತವಾದ ಮುಂಬೈನ ತಾಣಗಳಿವು

ಮಕ್ಕಳೊಂದಿಗೆ ಕಾಲಕಳೆಯಲು ಸೂಕ್ತವಾದ ಮುಂಬೈನ ತಾಣಗಳಿವು

By Manjula Balaraj Tantry

ಕನಸಿನ ನಗರ ಎಂದೇ ಕರೆಯಲ್ಪಡುವ ಮುಂಬೈ ಮಹಾನಗರ, ಆಧುನಿಕ ತಂತ್ರಜ್ಞಾನದಿಂದ ವೇಗವಾಗಿ ಬೆಳೆಯುತ್ತಿರುವ ವಿಶ್ವದ ನಗರಗಳಲ್ಲಿ ಒಂದು. ಹಾಗಾಗಿ, ಈ ನಗರವನ್ನು ಭಾರತದ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆಧುನಿಕ ಸೌಲಭ್ಯಗಳ ಜೊತೆ ನೂರಾರು ಪ್ರವಾಸೀ ಸ್ಥಳಗಳನ್ನು ಹೊಂದಿರುವ ಮುಂಬೈ, ಪ್ರವಾಸಿಗರಿಗೆ ವಿವಿಧ ರೀತಿಯ ಆಕರ್ಷಣೀಯ ಸ್ಥಳಗಳನ್ನು ತನ್ನ ಮಡಿಲಲ್ಲಿ ಹೊಂದಿದೆ. ಇದರಿಂದ ಬೇದಭಾವವಿಲ್ಲದೇ ಎಲ್ಲಾ ವಯಸ್ಸಿನ ಪ್ರವಾಸಿಗರನ್ನು ಮುಂಬೈ ತನ್ನತ್ತ ಸೆಳೆಯುತ್ತದೆ.

ಕನಸಿನ ನಗರಿಯಲ್ಲಿ ಈ ಸೀಸನ್ ನಲ್ಲಿ ಮಕ್ಕಳನ್ನು ಸುತ್ತಾಡಿಸಿದರೆ ಹೇಗೆ? ನಮ್ಮ ಘನ ಇತಿಹಾಸ, ವಿಜ್ಞಾನ ಮತ್ತು ಪ್ರಕೃತಿಯ ವಿಷಯವನ್ನು ಮೋಜುಮಸ್ತಿಯಿಂದ ಮಕ್ಕಳಿಗೆ ವಿವರಿಸುವ ಉದ್ದೇಶವನ್ನು ಹೊಂದಿದ್ದರೆ, ಮುಂಬೈ ನಗರದಲ್ಲಿ ಅಂತಹ ಸ್ಥಳಗಳು ಬೇಕಾದಷ್ಟು ಸಿಗುತ್ತವೆ. ಹಾಗಾಗಿ, ನಿಮ್ಮ ವಾರಾಂತ್ಯದ ಸಮಯವನ್ನು ಮಕ್ಕಳಿಗಾಗಿ ಮುಂಬೈ ನಗರದಲ್ಲಿ ಮೀಸಲಿಡಿ.

ಮುಂಬೈ ಮೃಗಾಲಯ

ಮುಂಬೈ ಮೃಗಾಲಯ

Amey_A

ಮೃಗಾಲಯ ಅನ್ನುವುದು ವಿಶ್ವದ ಯಾವುದೇ ಭಾಗದ ಮಕ್ಕಳಿಗೆ ಪ್ರಿಯವಾದಂತಹ ಜಾಗ. ಹಾಗಾಗಿ, ಮುಂಬೈನ ಮೃಗಾಲಯಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ, ಇದರಿಂದ ಮಕ್ಕಳು ಹಾಯಾಗಿ ತಿರುಗಿ ಪ್ರಾಣಿಗಳ ಜೀವನಶೈಲಿಯನ್ನು ಹತ್ತಿರದಿಂದ ನೋಡುವಂತಾಗುತ್ತದೆ ಅಲ್ಲವೇ?
ಮಂಗ, ಆನೆ, ರಾಜಹಂಸ ಮುಂತಾದ ನೂರಾರು ಪ್ರಾಣಿಪಕ್ಷಿಗಳಿಗೆ, ಐವತ್ತು ಎಕರೆ ವಿಸ್ತೀರ್ಣದಲ್ಲಿರುವ ಮುಂಬೈ ಮೃಗಾಲಯ ಆಸರೆಯಾಗಿದೆ. ಹಾಗಾಗಿ ಇದು, ಮಕ್ಕಳ ಜೊತೆ ಸಮಯ ವಿನಿಯೋಗಿಸಲು ಅತ್ಯಂತ ಪ್ರಸಕ್ತ ಸ್ಥಳವಾಗಿದೆ.

ಅತ್ಯುತ್ತಮವಾದ ಗಾರ್ಡನ್, ಕಣ್ಣು ಕುಕ್ಕುವ ಬಗೆಬಗೆಯ ಮರಗಳು ಮುಂತಾದವುಗಳಿಂದ ನಮ್ಮೊಳಗಿನ ಶಾಂತಿ ಕಾಪಾಡಲು ಈ ಸ್ಥಳ ಪರಿಸರ ಮಾಲಿನ್ಯ ಮುಕ್ತ ತಾಣವಾಗಿದೆ. ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಇಂತಹ ಸ್ಥಳಗಳಿಗೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ನೀವು ಮನಸ್ಸು ಮಾಡುವುದಿಲ್ಲವೇ?

ಜುಹು ಬೀಚ್

ಜುಹು ಬೀಚ್

Gr8.philosopher

ಮಕ್ಕಳ ಜೊತೆ ಆರಾಮಾಗಿ, ಅಲೆಗಳ ಗಂಭೀರ ನರ್ತನದೊಂದಿಗೆ ಕಾಲಕಳೆಯಲು ಜುಹು ಬೀಚ್ ಗಿಂತ ಮಿಗಿಲಾದ ಇನ್ನೊಂದು ಸ್ಥಳಬೇಕೇ? ಕೆಲವರು ಹೇಳಿದಂತೆ, ಮಕ್ಕಳ ಜೊತೆ ಸಮಯ ಕಳೆಯುವುದೇ ಜೀವನದಲ್ಲಿನ ಸುಂದರ ಕ್ಷಣಗಳು. ಹಾಗಾಗಿ, ಮುಂಬೈನಲ್ಲಿನ ಜುಹು ಬೀಚ್ ನಲ್ಲಿ ಮಕ್ಕಳ ಜೊತೆ ವಾರಾಂತ್ಯ ಕಳೆದರೆ ಹೇಗೆ? ಉತ್ತಮ ವಾತಾವರಣದ ಜೊತೆ, ತಾಳ್ಮೆ ಕಳೆದುಕೊಳ್ಳುವ ನಗರದ ಪರಿಸರವಿದ್ದರೂ, ಬೀಚ್ ಬಳಿಯಿರುವ ಸ್ಥಳೀಯ ಖಾದ್ಯಗಳನ್ನು ಸೇವಿಸುತ್ತಾ ಇಲ್ಲಿ ಕಳೆಯುವ ಸಮಯ ನಿಜವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದು.

ಜುಹು ಬೀಚ್ ನಲ್ಲಿ ನೀವು ಮಕ್ಕಳೊಂದಿಗೆ ಕಳೆದ ಸಮಯವನ್ನು ಆಲ್ಬಂ ಮಾಡಿದರೆ ಹೇಗೆ? ಜುಹು ಬೀಚ್ ಯಾವಾಗಲೂ ಸ್ಥಳೀಯರು ಮತ್ತು ಪ್ರವಾಸಿಗರಿಂದ ತುಂಬಿದ್ದರೂ, ಸುಂದರವಾದ ವಾತಾವರಣ ಮತ್ತು ಪರಿಸರದಿಂದ ಈ ಆಲ್ಬಂ ನೆನಪಿನಲ್ಲಿ ಉಳಿಯುವಂತದ್ದು. ಮಕ್ಕಳ ಜೊತೆ ಮಣ್ಣಿನ ಅರಮನೆಯನ್ನು ಜುಹು ಬೀಚಿನ ಮರಳಿನೊಂದಿಗೆ ತಯಾರಿ ಮಾಡಿದರೆ ಹೇಗೆ?

ಗೇಟ್ ವೇ ಆಫ್ ಇಂಡಿಯಾ

ಗೇಟ್ ವೇ ಆಫ್ ಇಂಡಿಯಾ

PC- Government of Maharashtra

ಮುಂಬೈನ ಅತ್ಯಮೂಲ್ಯ ಗುರುತು ಮತ್ತು ಗತವೈಭವವನ್ನು ಸಾರುವ ಮತ್ತು ಹೆಚ್ಚು ಗುರುತಿಸಲ್ಪಡುವ ಕಟ್ಟಡಗಳಲ್ಲಿ ಗೇಟ್ ವೇ ಆಫ್ ಇಂಡಿಯಾ ಕೂಡಾ ಒಂದು. ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷ್ ದೊರೆ ಮತ್ತು ರಾಣಿಗೆ ಗೌರವಾರ್ಥವಾಗಿ ನಿರ್ಮಿಸಲಾಗಿರುವ ಈ ಕಟ್ಟಡ, ಅದ್ಭುತ ವಾಸ್ತು ಶಿಲ್ಪದ ಸ್ಮಾರಕವಾಗಿದ್ದು, ಲಕ್ಷಾಂತರ ಪ್ರವಾಸಿಗರನ್ನು ತನ್ನಲ್ಲಿ ಆಕರ್ಷಿಸುತ್ತದೆ. ನಿಮ್ಮ ಮಕ್ಕಳನ್ನು ಇಂತಹ ಅದ್ಭುತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಈ ಕಟ್ಟಡದ ಬಗ್ಗೆ ಮಕ್ಕಳಿಗೆ ವಿವರಿಸುವುದಿಲ್ಲವೇ?

ಅದ್ಭುತ ವಾಸ್ತು ಶಿಲ್ಪದ ಸ್ಮಾರಕ ಇದು ಎನ್ನುವುದು ಒಂದೆಡೆಯಾದರೆ ಅರಬ್ಬೀ ಸಮುದ್ರದ ಸುಂದರೆ ನೀಲಿ ಬಣ್ಣಕ್ಕೆ ತಿರುಗಿರುವ ನೀರನ್ನೂ ಕಾಣಬಹುದು, ಜೊತೆಗೆ ನೂರಕ್ಕೂ ಹೆಚ್ಚು ಇರುವ ಪಾರಿವಾಳಗಳನ್ನು ನೋಡುತ್ತಾ ಮತ್ತು ಎಳನೀರನ್ನು ಸವಿಯಬಹುದು. ಇವೆಲ್ಲಾ ಕಾರಣಕ್ಕಾಗಿ ಗೇಟ್ ವೇ ಆಫ್ ಇಂಡಿಯಾ ಮಕ್ಕಳ ಜೊತೆಗೆ ಕಾಲಕಳೆಯಲು ವಾರಾಂತ್ಯದಲ್ಲಿ ಹೇಳಿ ಮಾಡಿಸಿದ ಜಾಗವಾಗಿದೆ.

ನೆಹರೂ ತಾರಾಲಯ

ನೆಹರೂ ತಾರಾಲಯ

Rakeshpate

ಮೋಜು ಮಸ್ತಿ ಆಟ ಮತ್ತು ವಿಜ್ಞಾನದ ಬಗ್ಗೆ ಮಕ್ಕಳಿಗೆ ವಿವರಿಸಬೇಕಾದಲ್ಲಿ ನೆಹರೂ ತಾರಾಲಯಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸ್ಥಳಗಳಲ್ಲಿ ನೆಹರೂ ತಾರಾಲಯ ಒಂದಾಗಿದೆ. ಆದುದರಿಂದ, ವಾರಾಂತ್ಯದಲ್ಲಿ ಈ ಸುಂದರ ತಾಣವನ್ನು ತಪ್ಪಿಸಿಕೊಳ್ಳಬಾರದು.

ಮಕ್ಕಳ ಸಭಾಂಗಣದಿಂದ ಹಿಡಿದು, ಮಕ್ಕಳ ವಿಜ್ಞಾನ ಉದ್ಯಾನವನಕ್ಕೆ ಭೇಟಿ ಮತ್ತು ಪರದೆಯಲ್ಲಿ ಕಾಣಸಿಗುವ ಆಸಕ್ತಿದಾಯಕ ಯೋಜನೆಗಳನ್ನು ವೀಕ್ಷಿಸುವ ಮೂಲಕ, ನೆಹರೂ ತಾರಾಲಯದಲ್ಲಿ ಮಕ್ಕಳು ಆನಂದಿಸಲು ಬೇಕಾಗುವ ಸಾಕಷ್ಟು ವಿಷಯಗಳು ಇರುತ್ತದೆ. ಹಾಗಾಗಿ, ಮಕ್ಕಳನ್ನು ರಾತ್ರಿ ಚಕ್ರ, ನಕ್ಷತ್ರಗಳ ವ್ಯೂಹ, ತಾರಾಲೋಕ, ಇತರ ಖಗೋಳ ಶಾಸ್ತ್ರಗಳ ಬಗ್ಗೆ ಕಲಿಯಲು ಇಲ್ಲಿಗೆ ಕರೆದುಕೊಂಡು ಹೋಗುವುದು ಸೂಕ್ತ.

ಸ್ನೋ ವರ್ಲ್ಡ್

ಸ್ನೋ ವರ್ಲ್ಡ್

ಫೋನೆಕ್ಸ್ ಮಾರ್ಕೆಟ್ ಸಿಟಿ ಭಾಗದಲ್ಲಿರುವ ಸ್ನೋ ವರ್ಲ್ಡ್ ಮಕ್ಕಳ ಜೊತೆ ಆನಂದವಾಗಿ ಕಳೆಯಲು ಇರುವ ಮತ್ತೊಂದು ಸ್ಥಳ. 1800 ಚದರ ಅಡಿ ವಿಸ್ತೀರ್ಣದಲ್ಲಿರುವ ಸ್ನೋ ವರ್ಲ್ಡ್, ಪ್ರವಾಸಿಗರಿಗೆ ಮಂಜಿನ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವನ್ನು ನೀಡುತ್ತದೆ. ಇಗ್ಲೂ ಹೌಸ್, ಸ್ಕೇಟಿಂಗ್ ಸೇರಿದಂತೆ ಮಂಜು, ಹಿಮಕ್ಕೆ ಸಂಬಂಧಪಟ್ಟ ವಿವಿಧ ರೀತಿಯ ಆಟ, ಚಟುವಟಿಕೆಗಳು ಸ್ನೋ ವರ್ಲ್ಡ್ ನಲ್ಲಿ ಲಭ್ಯವಿರುತ್ತದೆ.

ಇಲ್ಲಿಯವರೆಗೆ ಯಾವುದೇ ಹಿಮಪಾತದ ತಾಣಕ್ಕೆ ನಿಮ್ಮ ಕುಟುಂಬವನ್ನು ಕರೆದುಕೊಂಡು ಹೋಗಿರದಿದ್ದರೆ, ಸ್ನೋ ವರ್ಲ್ಡ್ ಖಂಡಿತವಾಗಿಯೂ ಈ ವಾರಾಂತ್ಯದಲ್ಲಿ ಭೇಟಿ ನೀಡುವ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X