Search
  • Follow NativePlanet
Share
» » 25 ವರ್ಷಗಳ ನಂತರ ತೆರೆಯಲಾಗ್ತಿದೆ ಇಡುಕ್ಕಿ ಡ್ಯಾಮ್ ; ಹೋದ್ರೆ ಅಪಾಯ ಖಂಡಿತ

25 ವರ್ಷಗಳ ನಂತರ ತೆರೆಯಲಾಗ್ತಿದೆ ಇಡುಕ್ಕಿ ಡ್ಯಾಮ್ ; ಹೋದ್ರೆ ಅಪಾಯ ಖಂಡಿತ

ಕೇರಳವು ಅನೇಕ ಪ್ರವಾಸಿ ತಾಣಗಳನ್ನು ತನ್ನಲ್ಲಿ ಹೊಂದಿದೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಅನೇಕರು ಭೇಟಿ ನೀಡಲು ಬಳಸುವ ಪ್ರಮುಖ ಪ್ರವಾಸಿ ಕೇಂದ್ರಗಳು ಕೇರಳದಲ್ಲಿವೆ. ಈಗ ಕೇರಳಕ್ಕೆ ಪ್ರವಾಸ ಕೈಗೊಳ್ಳಬೇಕು ಎನ್ನುವವರಿಗೆ ಒಂದು ಸಮಸ್ಯೆ ತಲೆದೋರಿದೆ. ಅದೇನೆಂದರೆ ನೆರೆಯ ಕಾಟ. ಇಡುಕ್ಕಿ ಡ್ಯಾಮ್ ತುಂಬುತ್ತಾ ಬಂದಿದ್ದು, ಡ್ಯಾಮ್ ಬಾಗಿಲು ತೆರೆಯಬೇಕಾದ ಪರಿಸ್ಥಿತಿ ಬಂದಿದೆ.

ಇಡುಕ್ಕಿ ಪ್ರವಾಸ ನಿಷೇಧ

ಇಡುಕ್ಕಿ ಪ್ರವಾಸ ನಿಷೇಧ

PC:Vengolis

ಕೇರಳದ ಪ್ರಮುಖ ಪರ್ಯಾಟನಾ ಸ್ಥಳವಾಗಿರುವ ಇಡುಕ್ಕಿ ಡ್ಯಾಮ್ ನಲ್ಲಿ ತನ್ನ ಕ್ಷಮತೆಗೂ ಮೀರಿದ ನೀರು ತುಂಬಿರುವುದರಿಂದ ಇದನ್ನು ತೆರೆಯುವ ಸಾಧ್ಯತೆ ಇದೆ. ಹಾಗಾಗಿ ಇಡುಕ್ಕಿ ಡ್ಯಾಮ್‌ನ ಸಮೀಪದ ಪ್ರವಾಸಿ ತಾಣಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ನೀರಿನಿಂದ ಉಂಟಾಗುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ವಿಪತ್ತು ನಿರ್ವಹಣಾ ಇಲಾಖೆಯು ಕೆಲವು ನಿರ್ಧಿಷ್ಟ ಪ್ರದೇಶಗಳಿಗೆ ಪ್ರವಾಸವನ್ನು ಕೈಗೊಳ್ಳದಂತೆ ಸೂಚಿಸಿದೆ.

ಡ್ಯಾಮ್ ತೆರೆದು ನೀರು ಬಿಡಲಾಗುವುದು

ಡ್ಯಾಮ್ ತೆರೆದು ನೀರು ಬಿಡಲಾಗುವುದು

ಕೇರಳದ ಪೆರಿಯರ್ ನದಿಯ ಮಟ್ಟದಲ್ಲಿ ವಿಪರೀತ ಏರಿಕೆ ಕಂಡು ಬಂದಿದ್ದು ನೆರೆ ಸಂಭವಿಸಲಿದೆ. ಹಾಗಾಗಿ ಸಮೀಪದ ಹಳ್ಳಿಯ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಈ ನದಿಯ ನೀರಿನ ಮಟ್ಟವು ೨೩೯೫ ಫೀಟ್ ಇದೆ. ೨೪೦೦ ಫೀಟ್ ಬರುತ್ತಿದ್ದಂತೆ ಡ್ಯಾಮ್‌ನ್ನು ತೆರೆಯಲಾಗುವುದು.

ಎಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ

ಎಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ

ಇಡುಕ್ಕಿ ಜಿಲ್ಲೆಯ ಕಾಂಜಿಕುಂಜಿ. ಮರಿಯಾಪುರಂ, ಕೊನ್ನಥಾಡಿ, ವಾಜಾಥೋಪ್ ಹಾಗೂ ವಾಥಿಕುಡ್ಡಿಯಲ್ಲಿ ಪರ್ಯಾಟಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

25 ವರ್ಷದಲ್ಲಿ ಮೊದಲ ಬಾರಿಗೆ

25 ವರ್ಷದಲ್ಲಿ ಮೊದಲ ಬಾರಿಗೆ

PC:Vengolis

25 ವರ್ಷದ ನಂತರ ಇದೇ ಮೊದಲ ಭಾರಿಗೆ ಡ್ಯಾಮ್‌ನ ಬಾಗಿಲು ತೆರೆದು ನೀರನ್ನು ಬಿಡಲಾಗುತ್ತಿದೆ. ಇದರಿಂದ ಅನೇಕ ಪರಿವಾರದ ಮನೆ ಹಾನಿಯಾಗಲಿದೆ. ಅಲ್ಲದೆ ಕೇರಳ ವಿಪತ್ತು ನಿರ್ವಹಣಾ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

ಎಲ್ಲಿದೆ ಇಡುಕ್ಕಿ ಆರ್ಕ್ ಡ್ಯಾಮ್

ಎಲ್ಲಿದೆ ಇಡುಕ್ಕಿ ಆರ್ಕ್ ಡ್ಯಾಮ್

PC:Hrishikesh.kb

ಇಡುಕ್ಕಿ ಆರ್ಕ್ ಡ್ಯಾಮ್ ಕೇರಳದ ಪೆರಿಯಾರ್‌ ನದಿಗೆ ಕಟ್ಟಲಾಗಿದೆ. ಇದು ಏಶಿಯಾದ ಮೊದಲ ಹಾಗೂ ವಿಶ್ವ ದ ಎರಡನೇ ಆರ್ಕ್ ಡ್ಯಾಮ್ ಇದಾಗಿದೆ. ಇದು ೫೫೦ ಫೀಟ್ ಎತ್ತರ ಹಾಗೂ ೬೫೦ ಫೀಟ್ ಅಗಲವಿದೆ. ಇದು ಕುರಾವನ್ ಹಾಗೂ ಕುರಾಥಿ ಬೆಟ್ಟದ ನಡುವೆ ನಿರ್ಮಿಸಲಾಗಿದೆ. ಇದೊಂದು ಶಾಂತ ಹಾಗೂ ಸುಂದರ ಪ್ರವಾಸಿ ತಾಣವಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ ಕೊಟ್ಟಾಯಂ ರೈಲು ನಿಲ್ದಾಣ ಹಾಗೆಯೇ ಸಮೀಪದ ಏರ್‌ಪೋರ್ಟ್ ಎಂದರೆ ಕೊಚ್ಚಿನ್ ಏರ್‌ಪೋರ್ಟ್. 99 ಕಿ.ಮೀ ದೂರದಲ್ಲಿದೆ ಕೊಚ್ಚಿನ್ ಏರ್‌ಪೋರ್ಟ್. ನಂತರ ನೀವು ಟ್ಯಾಕ್ಸಿ ಮೂಲಕ ಆ ಸ್ಥಳವನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X