Search
  • Follow NativePlanet
Share
» » ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ

ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ

ಕಾಶಿ ವಿಶ್ವನಾಥ ಮಂದಿರವು ಒಂದು ಪ್ರಸಿದ್ಧ ಶಿವ ಮಂದಿರವಾಗಿದ್ದು, ಇಲ್ಲಿ ಶ್ರಾವಣ ಮಾಸದಲ್ಲೇಲ್ಲಾ ಜನಜಂಗುಳಿಯಿಂದ ಕೂಡಿರುತ್ತದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಈ ಮಂದಿರಕ್ಕೆ ಪೌರಾಣಿಕ ಮಹತ್ವವಿದೆ. ನೀವು ಶ್ರಾವಣ ಮಾಸದಲ್ಲಿ ಯಾವುದಾದರೂ ಶಿವನ ದೇವಾಲಯಕ್ಕೆ ಹೋಗಬೇಕೆಂದುಕೊಂಡಿದ್ದರೆ ನಾವು ನಿಮಗೆ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗುವಂತೆ ಸಲಹೆ ನೀಡುತ್ತೇವೆ.

ಕಾಶಿ ವಿಶ್ವನಾಥ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಳಲ್ಲಿ ಒಂದಾಗಿದೆ. ಕಾಶೀ ವಿಶ್ವನಾಥ ಮಂದಿರಕ್ಕೆ ನೀವು ಒಮ್ಮೆಯೂ ಹೋಗಿಲ್ಲ ಇದೇ ಮೊದಲ ಬಾರಿಗೆ ಹೋಗುತ್ತಿದ್ದೀರೆಂದಾದರೆ ಇಲ್ಲಿದೆ ಕೆಲವು ಮಾಹಿತಿಗಳು...

 ಶಿವ- ಪಾರ್ವತಿ ಒಟ್ಟಿಗೆ ನೆಲೆಸಿದ್ದಾರೆ

ಶಿವ- ಪಾರ್ವತಿ ಒಟ್ಟಿಗೆ ನೆಲೆಸಿದ್ದಾರೆ

PC:Akshaypilot19

ಶ್ರಾವಣ ಮಾಸದಲ್ಲಿ ಎಲ್ಲಾ ಶಿವಲಿಂಗಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಆದರೆ ಈ ಮಂದಿರಕ್ಕೆ ತನ್ನದೇ ಆದ ವಿಶೇಷತೆ ಇದೆ. ಈ ಸ್ಥಳದಲ್ಲಿ ಸ್ವತಃ ಶಿವನು ನೆಲೆಸಲು ಬಂದಿದ್ದನು ಎನ್ನಲಾಗುತ್ತದೆ. ಈ ಸ್ಥಳದಲ್ಲಿ ಶಿವ ಹಾಗೂ ಪಾರ್ವತಿ ಒಟ್ಟಿಗೆ ನೆಲೆಸಿದ್ದಾರೆ. ಇದು ಬೇರೆಯಾವ ಮಂದಿರದಲ್ಲೂ ಕಾಣಲು ಸಿಗುವುದಿಲ್ಲ ಹಾಗಾಗಿ ವಾರಣಾಸಿಯನ್ನು ಮುಕ್ತಿ ಧಾಮ ಎಂದೂ ಕರೆಯುತ್ತಾರೆ.

ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ಮಂದಿರದಲ್ಲಿ ಅನ್ಯ ಧರ್ಮಿಯರಿಗೆ ಪ್ರವೇಶವಿಲ್ಲ

ಮಂದಿರದಲ್ಲಿ ಅನ್ಯ ಧರ್ಮಿಯರಿಗೆ ಪ್ರವೇಶವಿಲ್ಲ

ಈ ದೇವಾಲಯವು ಬನಾರಸ್‌ನ ಶಂಕರಿ ಬೀದಿಯ ಸ್ವಲ್ಪ ಮುಂದೆ ಇದೆ.
ಜನಜಂಗುಳಿಯಿಂದ ಪಾರಾಗಬೇಕಾದರೆ ಬೆಳಗ್ಗೆ ೭ ಗಂಟೆಗೆಗೂ ಮೊದಲೇ ಮಂದಿರ ತಲುಪಿ. ಶ್ರಾವಣದ ಸೋಮವಾರದಂದು ರಾತ್ರಿಯಿಂದಲೇ ಭಕ್ತರು ದೇವಸ್ಥಾನದಲ್ಲಿ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸುತ್ತಾರೆ.
ಮಂದಿರದಲ್ಲಿ ಬ್ಯಾಗ್, ಲ್ಯಾಪ್‌ಟಾಪ್, ಕ್ಯಾಮರಾ, ಬೆಂಕಿಪೊಟ್ಟಣ, ಬೆಲ್ಟ್, ಅಗರಬತ್ತಿ ಇತ್ಯಾದಿಯನ್ನು ಕೊಂಡೊಯ್ಯಬಾರದು.
ದೇವಸ್ಥಾನವು ಪ್ರತಿದಿನ ಬೆಳಗ್ಗೆ ೨.೩೦ಕ್ಕೆ ತೆರೆಯುತ್ತದೆ. ದಿನದಲ್ಲಿ ಐದು ಬಾರಿ ಆರತಿ ನಡೆಯುತ್ತದೆ. ಕೊನೆಯ ಆರತಿ ರಾತ್ರಿ ೧೦.೩೦-೧೧ ಗಂಟೆ ಸಮಯಕ್ಕೆ ನಡೆಯುತ್ತದೆ.

ಭೇಟಿ ನೀಡಲು ಸೂಕ್ತ ಸಮಯ

ಭೇಟಿ ನೀಡಲು ಸೂಕ್ತ ಸಮಯ

ಧಾರ್ಮೀಕತೆಯಿಂದ ನೋಡುವುದಾದರೆ ಶ್ರಾವಣ ಮಾಸವು ಕಾಶಿ ವಿಶ್ವನಾಥನ ಮಂದಿರಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಅದನ್ನು ಹೊರತುಪಡಿಸಿ ನೀವು ಸರಿಯಾಗಿ ಕಾಶಿ ವಿಶ್ವನಾಥನ ಶಿವಲಿಂಗವನ್ನು ದರ್ಶಣ ಮಾಡಬೇಕೆಂದಿದ್ದರೆ ನವಂಬರ್‌-ಮಾರ್ಚ್‌ನಲ್ಲಿ ಹೋಗಿ. ಈ ಸಂದರ್ಭದಲ್ಲಿ ಸ್ವಲ್ಪ ಚಳಿ ಇರುತ್ತದೆ ಆದರೆ ಮಂದಿರಲ್ಲಿ ಭಕ್ತರ ಸಂಖ್ಯೆ ಹೆಚ್ಚು ಇರುವುದಿಲ್ಲ.

ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್? ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

ಡ್ರೆಸ್‌ ಕೋಡ್

ಡ್ರೆಸ್‌ ಕೋಡ್

ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ಹೋಗಲು ಯಾವುದೇ ರೀತಿಯ ವಿಶೇಷ ಡ್ರೆಸ್‌ಕೋಡ್‌ಗಳಿಲ್ಲ. ಆದರೆ ದೇವಸ್ಥಾನದ ಒಳಗೆ ಹೋಗಲು ನಿಮ್ಮ ಕೈ , ಕಾಲು ಮುಚ್ಚಿರಬೇಕು. ನೀವು ಭಾರತೀಯ ಸಂಪ್ರಾದಾಯಿಕ ಬಟ್ಟೆಯನ್ನು ಹೊರತುಪಡಿಸಿ ವೆಸ್ಟರ್ನ್ ಬಟ್ಟೆಯನ್ನೂ ಧರಿಸಬಹುದು.

 ವಾರಣಾಸಿ ತಲುಪುವುದು ಹೇಗೆ?

ವಾರಣಾಸಿ ತಲುಪುವುದು ಹೇಗೆ?

ವಾರಣಾಶಿಯಲ್ಲಿ ಮೂರು ರೈಲುನಿಲ್ದಾಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ವಾರಣಾಸಿ ಜಂಕ್ಷನ್ ರೈಲು ನಿಲ್ದಾಣ. ಉಳಿದೆರಡು ರೈಲು ನಿಲ್ದಾಣಗಳ ನಗರದಿಂದ ೮ ಕಿ.ಮೀ ದೂರದಲ್ಲಿದೆ.
ವಿಮಾನದಲ್ಲಿ ಹೋಗುವುದಾದರೆ ಲಾಲ್‌ ಬಹದಾದ್ದೂರ್‌ ಶಾಸ್ತ್ರೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಾರಣಾಸಿಯು ನಗರದಿಂದ ೨೬ ಕಿ.ಮೀ ದೂರದಲ್ಲಿದೆ.
ರಸ್ತೆ ಮಾರ್ಗ ಮೂಲಕ ಹೋಗುವುದಾದರೆ ದೇಶದ ವಿವಿಧ ದೊಡ್ಡ ದೊಡ್ಡ ನಗರಗಳಿಂದ ವಾರಣಾಸಿಗೆ ನೇರ ಬಸ್‌ ವ್ಯವಸ್ಥೆ ಇದೆ. ಅಲ್ಲಿಂದ ಕ್ಯಾಬ್ ಮೂಲಕ ದೇವಸ್ಥಾನವನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X