Search
  • Follow NativePlanet
Share
» »ಕರ್ನಾಟಕದ ವೈಭವ ಸಾರುವ ಚಿತ್ರಗಳ ಪ್ರವಾಸ

ಕರ್ನಾಟಕದ ವೈಭವ ಸಾರುವ ಚಿತ್ರಗಳ ಪ್ರವಾಸ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು ಹಲವು ವಿಶೇಷತೆ, ವೈವಿಧ್ಯತೆಗಳನ್ನು ಒಳಗೊಂಡಿರುವ ಸುಂದರ ರಾಜ್ಯವಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಹೀಗೆ ಹಲವು ರಂಗಗಳಲ್ಲಿ ತನ್ನದೆ ಆದ ವಿಶಿಷ್ಟ ಶ್ರೀಮಂತಿಕೆ, ಸ್ಥಾನಮಾನ ಹೊಂದಿರುವ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ಭೇಟಿ ನೀಡಲೇಬೇಕಾದ ಒಂದು ಪ್ರಮುಖ ರಾಜ್ಯ ಎಂದರೂ ತಪ್ಪಾಗಲಾರದು.

ಹೋಟೆಲ್ಸ್ ಡಾಟ್ ಕಾಮ್ ಮೂಲಕ ಹೋಟೆಲ್ ಬುಕಿಂಗ್ ಮೇಲೆ 50% ರಷ್ಟು ಕಡಿತ ನೀಡುವ ಉಚಿತ ಕೂಪನ್ನುಗಳು

ಭಾರತದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕರ್ನಾಟಕವನ್ನು ಭೌಗೋಳಿಕವಾಗಿ 'ಕರಾವಳಿ' ಹಾಗು 'ಮಲೆನಾಡು' ಎಂದು ವಿಂಗಡಿಸಲಾಗಿದೆ. ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸಿಮೆಯನ್ನು ಉತ್ತರ ಹಾಗು ದಕ್ಷಿಣ ಭಾಗದ ಬಯಲು ಸೀಮೆಗಳೆಂದು ವಿಭಜಿಸಲಾಗಿದೆ.

ಉಪಯುಕ್ತ ಕೊಂಡಿ : ಕರ್ನಾಟಕದಲ್ಲಿರುವ ಪ್ರವಾಸ ವಿಶೇಷ ಸ್ಥಳಗಳು

ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲ ಅದ್ಭುತ ರಾಜ್ಯವಾಗಿದೆ. ಪ್ರಯಾಣಿಕನೆ ಇರಲಿ, ಪ್ರವಾಸಿಗನೆ ಇರಲಿ, ಸಾಹಸಪ್ರೀಯನೆ ಇರಲಿ, ಅನ್ವೇಷಕನೆ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯಬಯಸುವ ಸದಭಿರುಚಿಯ ವ್ಯಕ್ತಿಯೆ ಆಗಿರಲಿ, ಅವರವರ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ಪ್ರವಾಸಿ ಆಕರ್ಷಣೆಗಳನ್ನು ಹಾಗೂ ಸ್ಥಳಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ.

ವಿಶೇಷ ಲೇಖನ : ಕರ್ನಾಟಕದಲ್ಲಿರುವ ಜಿಲ್ಲೆಗಳು

ಕರ್ನಾಟಕ ಕುರಿತು ತಿಳಿಯಬಹುದಾದ ಅದ್ಭುತ ಹಾಗೂ ಅಮೋಘ ಚಿತ್ರಗಳ ಸವಾರಿ ಆರಂಭಿಸಿರಿ...ಹಾಗೆ ನೋಡಿದರೆ ಕರ್ನಾಟಕವನ್ನು ಚಿತ್ರಗಳಲ್ಲಿ ಪರಿಚಯಿಸುವುದು ಅಸಾಧ್ಯ ಆದ್ದರಿಂದ ಕೇವಲ ಕೆಲವು ಆಯ್ದ ಚಿತ್ರಗಳನ್ನು ಮಾತ್ರವೆ ತೆಗೆದುಕೊಳ್ಳಲಾಗಿದೆ.

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಪ್ರಸ್ತುತ ಲೇಖನವು ಕರ್ನಾಟಕದ ವೈಭವ, ನಿಸರ್ಗ ಸೌಂದರ್ಯ, ಇಲ್ಲಿ ಕಂಡುಬರುವ ವೈವಿಧ್ಯಮಯ ಜೀವನಶೈಲಿ, ಬಗೆ ಬಗೆಯ ಜೀವ ಸಂಕುಲ ಹಾಗೂ ಐತಿಹಾಸಿಕ ಶ್ರೀಮಂತಿಕೆಯನ್ನು ಅದ್ಭುತವಾಗಿ ಸಾರುವ ಚಿತ್ರಗಳ ಸವಾರಿಯನ್ನು ಮಾಡಿಸುತ್ತದೆ. ಚಿತ್ರಗಳನ್ನು ನೋಡಿ ಕರ್ನಾಟಕದ ವೈಭವವನ್ನು ನಿಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳಿ.

ಚಿತ್ರಕೃಪೆ: parisaramahiti.kar.nic.in

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮಲ್ಲಳ್ಳಿ ಜಲಪಾತ : ಇದು ಕೊಡಗು ಜಿಲ್ಲೆಯಲ್ಲಿರುವ ಸುಂದರ ಜಲಪಾತವಾಗಿದೆ. ಕುಮಾರಧಾರ ನದಿ ನೀರು ಈ ಜಲಪಾತಕ್ಕೆ ಮೂಲವಾಗಿದ್ದು, ಇದು ಸೋಮವಾರಪೇಟೆಯಿಂದ ಸುಮಾರು 25 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Premnath Thirumalaisamy

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕುದುರೆಮುಖ : ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿ ಗಿರಿಧಾಮ. ವರ್ಷದ ಎಲ್ಲ ಸಮಯದಲ್ಲೂ ಭೇಟಿ ನೀಡಲು ಯೋಗ್ಯವಾದ ಕುದುರೆಮುಖವು ಪ್ರಕೃತಿಯ ವೈಭವದಿಂದ ಭೂಷಿತವಾಗಿದೆ. ಇಲ್ಲಿನ ಶೋಲಾ ಅರಣ್ಯ್ಗಳು ಇದರ ಭೂದೃಶ್ಯಾವಳಿಗಳ ಅಂದ ಚೆಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರಕೃಪೆ: Karunakar Rayker

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಳಗಾವಿ ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಶ್ರೀಮಂತಿಕೆಯ ಪುರಾತನ ಜೈನ ಮಂದಿರ. ಈ ಮಂದಿರವು ಕಮಲ ಬಸದಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಚಿತ್ರಕೃಪೆ: Manjunath Doddamani

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಎಂಬ ಗ್ರಾಮದ ಬಳಿಯಿರುವ ಧೂಪದಾಳ್ ಜಲಾಶಯ. ಇದೊಂದು ಜಲವಿದ್ಯುತ್ ಉತ್ಪಾದನಾ ಕೇಂದ್ರವಾಗಿದ್ದು, ಘಟಪ್ರಭಾ ನದಿಗೆ ನಿರ್ಮಿಸಲಾಗಿದೆ. ಇದೊಂದು ಹವ್ಯಾಸಿ ಮೀನು ಹೀಡಿಯುವ ಕೇಂದ್ರವೂ ಸಹ ಹೌದು.

ಚಿತ್ರಕೃಪೆ: Shil.4349

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

"ಉತ್ತರ ಕರ್ನಾಟಕದ ನಯಾಗ್ರಾ" ಎಂದು ಪ್ರೀತ್ಯಿಂದಲೂ ಸಹ ಕರೆಯಲ್ಪಡುವ ಗೋಕಾಕ್ ಪಟ್ಟಣದಲ್ಲಿರುವ ಈ ಜಲಪಾತವು ಗೋಕಾಕ್ ಜಲಪಾತ ಎಂತಲೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತವು 171 ಅಡಿಗಳಷ್ಟು ಎತ್ತರದಿಂದ ಧರೆಗುರುಳುತ್ತದೆ.

ಚಿತ್ರಕೃಪೆ: Shishirmk

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಳಗಾವಿ ಜಿಲ್ಲೆಯ ಸೌದತ್ತಿ ಬಳಿಯಿರುವ ನವೀಲುತೀರ್ಥವು ಒಂದು ಅದ್ಭುತವಾದ ಪಿಕ್ನಿಕ್ ತಾಣವಾಗಿದೆ. ಮಲಪ್ರಭಾ ನದಿಗೆ ನಿರ್ಮಿಸಲಾದ ಇಲ್ಲಿನ ಭವ್ಯ ಜಲಾಶಯವು ನ್ವೀಲುತೀರ್ಥ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಚಿತ್ರಕೃಪೆ: Manjunath Doddamani

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಳಗಾವಿಯಲ್ಲಿರುವ ಪ್ರಸಿದ್ಧ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಆವರಣ.

ಚಿತ್ರಕೃಪೆ: Souravmohanty2005

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಗಣಿಗಳ ದಣಿ ಎಂದು ಹೇಳಬಹುದಾದ ಕರ್ನಾಟಕದ ಬಳ್ಳಾರಿ ಜಿಲ್ಲೆಯು ತನ್ನಲ್ಲಿರುವ ಐತಿಹಾಸಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಹಂಪಿಯನ್ನು ಹೊಂದಿದೆ. ಅಲ್ಲದೆ ಬಳ್ಳಾರಿಯೂ ಸಹ ತನ್ನ ಕೋಟೆಗೆ ಪ್ರಸಿದ್ಧವಾಗಿದೆ. ಬಳ್ಳಾರಿ ಕೋಟೆ.

ಚಿತ್ರಕೃಪೆ: Ravibhalli

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬಳ್ಳಾರಿ ಜಿಲ್ಲೆಯಲ್ಲಿರುವ, ಒಂದಾನೊಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಅತಿ ಪ್ರತಿಷ್ಠಿತ ನಗರವಾಗಿದ್ದ ಹಂಪಿಯು ತನ್ನಲ್ಲಿರುವ ಅತ್ಯದ್ಭುತ ಐತಿಹಾಸಿಕ ರಚನೆಗಳಿಗೆ ವಿಶ್ವದಲ್ಲೆ ಖ್ಯಾತಿಗಳಿಸಿದೆ. ಹಂಪಿಯಲ್ಲಿರುವ ಆನೆಗಳ ವಾಸಮನೆ. ಹಂಪಿಯ ಕುರಿತು ತಿಳಿಯಿರಿ.

ಚಿತ್ರಕೃಪೆ: Arian Zwegers

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಹಂಪಿಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಒಂದು ಸುಂದರ ನೋಟ.

ಚಿತ್ರಕೃಪೆ: Indi Samarajiva

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಹಂಪಿಯಲ್ಲಿ ದೂರದಿಂದ ಅಚ್ಯುತರಾಯನ ಗುಡಿ ಕಂಡುಬರುವ ರೀತಿ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮೈಸೂರಿನಲ್ಲಿ ದಸರಾ ಹಬ್ಬ ಬಹು ಜನಪ್ರೀಯ. ಹಿಮ್ದಿನಿಂದಲೂ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರಲಾಗಿರುವ ಈ ಉತ್ಸವ ಅಂತಾರಾಷ್ಟ್ರೀಯ ವಲಯದಲ್ಲೂ ಸಹ ಮಹತ್ವ ಪಡೆದಿದೆ. ಇಂತಹ ಒಂದು ಸಂದರ್ಭದಲ್ಲಿ ಕಲಾವಿದನೊಬ್ಬ ತನ್ನ ಕೌಶಲ್ಯ ಮೆರೆಯುತ್ತಿರುವುದು.

ಚಿತ್ರಕೃಪೆ: Swaminathan

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಶಿವನಸಮುದ್ರ ಕರ್ನಾಟಕದ ದಕ್ಷಿಣ ಭಾಗದಲ್ಲಿ ನೆಲೆಸಿರುವ ಒಂದು ಅದ್ಭುತ ಪ್ರವಾಸಿ ಕೇಂದ್ರ. ಕಾವೇರಿ ನದಿಯಿಂದುಂಟಾಗುವ ಇಲ್ಲಿನ ಜಲಪಾತ ಎರಡು ಕವಲುಗಳಲ್ಲಿ ಒಡೆದು ಗಗನಚುಕ್ಕಿ ಹಾಗೂ ಭರಚುಕ್ಕಿಗಳೆಂದು ಹೆಸರುವಾಸಿಯಾಗಿವೆ. ಮಂಡ್ಯ ಜಿಲ್ಲೆಯಲ್ಲಿರುವ ಈ ತಾಣವು ಪ್ರೇಕ್ಷಣೀಯ ಸ್ಥಳವಾಗಿದೆ.

ಚಿತ್ರಕೃಪೆ: Arun Prabhu

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಶಿವನಸಮುದ್ರದ ಅಷ್ಟೊಂದು ಆಳವಾಗಿರದ ಕಾವೇರಿ ನೀರಿನ ಒಂದು ಕೊಳದಲ್ಲಿ ಆನಂದತುಂದಿಲದಿಂದ ಆಟವಾಡುತ್ತಿರುವ ಕೋತಿಗಳು.

ಚಿತ್ರಕೃಪೆ: Navaneeth KN

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಾಯುವ ಘಳಿಗೆ....ಬೆಂಗಳೂರಿನ ಬೆಳಂದೂರು ಕೆರೆ ಮುಂಜಾವಿನ ಮಂಜಿನಲಿ ಕಂಡು ಬಂದ ರೀತಿ.

ಚಿತ್ರಕೃಪೆ: Anoop Kumar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಂಬಳ ಒಂದು ವಿಶಿಷ್ಟ ಆಚರಣೆ ಆಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಆಚರಿಸಲ್ಪಡುತ್ತದೆ. ಪಿಲಿಕುಳದಲ್ಲಿ ನಡೆದಿರುವ ಕಂಬಳದ ಒಂದು ನೋಟ. ಏನೀದು ಕಂಬಳ?

ಚಿತ್ರಕೃಪೆ: Anoop Kumar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಬಿನಿ ಹಿನ್ನೀರು ಕಾಡಿನ ಪ್ರದೇಶವು ಕರ್ನಾಟಕದ ಪ್ರಖ್ಯಾತ ವನ್ಯಜೀವಿ ಧಾಮಗಳ ಪೈಕಿ ಒಂದಾಗಿದ್ದು ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಕಬಿನಿಯ ಕಾಡಿನಲ್ಲಿ ಪ್ರವಾಸಿಗರೊಬ್ಬರ ಮುಂದೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವಂತೆ ತೋರುತ್ತಿರುವ ಆನೆ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಬಿನಿಯಲ್ಲಿನ ಮೋಹಕ ಸೂರ್ಯಾಸ್ತ ಮರೆಯುವುದು ಕಷ್ಟ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಬಿನಿ ಸೂರ್ಯಾಸ್ತದ ಮತ್ತೊಂದು ಹತ್ತಿರದ ನೋಟ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮೈಸೂರು ಬಳಿಯಿರುವ ಸೋಮನಾಥಪುರವು ತನ್ನಲ್ಲಿರುವ ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಬಲು ಪ್ರಖ್ಯಾತವಾಗಿದೆ. ಬೇಲೂರಿನ ಚೆನ್ನಕೇಶವದಂತೆಯೆ ಇದೂ ಸಹ ತನ್ನ ಅಮೋಘ್ ಕೆತ್ತನೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಳಂಬೆಳಿಗ್ಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲೊಂದು ಸುತ್ತು. ಸೂರ್ಯನ ಎಳೆಯ ರಷ್ಮಿಗಳು ತಮ್ಮ ಶಕ್ತಿಯಿಂದ ಮೃದುವಾಗಿ ಬಂಡೆಯ ಮೇಲೆ ಹೊಳಪನ್ನು ತಂದಿರುವ ಪರಿ. ಇದಕ್ಕೆ ಪ್ರತಿ ದಿನ ಸಾಕ್ಷಿಯಾಗಿ ನಿಲ್ಲುವ ಕೆಂಪೇಗೌಡ ಗೋಪುರ.

ಚಿತ್ರಕೃಪೆ: Vinoth Chandar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕರ್ನಾಟಕದ ಪಕ್ಷಿಕಾಶಿ ಎಂದೆ ಪ್ರಖ್ಯಾತವಾಗಿರುವ ರಂಗನತಿಟ್ಟುವಿನಲ್ಲಿ ತನ್ನ ವ್ಯಯಾರದಿಂದ ಪ್ರಸನ್ನಗೊಂಡಿರುವ ಒಂದು ಸುಂದರ ಎಗ್ರೆಟ್ ಪಕ್ಷಿ.

ಚಿತ್ರಕೃಪೆ: Koshy Koshy

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬೆಂಗಳೂರಿನ ಅಲಸೂರು ಕೆರೆಯ ಸೂರ್ಯೋದಯ ನೋಡಿದ್ದೀರಾ?

ಚಿತ್ರಕೃಪೆ: Swaminathan

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮೈಸೂರು ಬಳಿಯ ಶ್ರೀರಂಗ ಪಟ್ಟಣದ ಕಾವೇರಿ ನದಿಯನ್ನು ದಾಟಿ ಮುಂದೆ ಸಾಗುತ್ತಿರುವ ಪ್ರಯಾಣಿಕ ರೈಲಿನ ಒಂದು ಸುಂದರ ನೋಟ.

ಚಿತ್ರಕೃಪೆ: David Brossard

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕರ್ನಾಟಕದ ಅತ್ಯಂತ ಪ್ರಖ್ಯಾತ ಗಿರಿಧಾಮ ಕೊಡಗು. ಇಲ್ಲಿನ ಪರಿಸರವು ಹಿತಕರವಾಗಿರುವುದೂ ಅಲ್ಲದೆ ಪ್ರಕೃತಿಯ ಸೊಬಗಿನಿಂದ ಕೂಡಿದ್ದು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೋಡಗು ನಾಡಿನ ಮೋಡಿ ಮಾಡುವ ಸೌಂದರ್ಯ.

ಚಿತ್ರಕೃಪೆ: Nikhil Verma

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಚಿಕ್ಕಮಗಳೂರು ಕರ್ನಾಟಕದ ಮತ್ತೊಂದು ಪ್ರಖ್ಯಾತ ಪ್ರವಾಸಿ ಸ್ಥಳ. ಈ ಜಿಲ್ಲೆಯಲ್ಲಿ ಸಾಕಷ್ಟು ನೋಡಲು ಯೋಗ್ಯವಾದ ಸ್ಥಳಗಳಿದ್ದು, ಇದು ತನ್ನಲ್ಲಿರುವ ಸುಂದರ ಬೆಟ್ಟ ಗುಡ್ಡಗಳ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Vikram Vetrivel

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಉತ್ತರ ಕರ್ನಾಟಕ ಭಾಗದಲ್ಲಿರುವ ವಿಜಯಪುರ (ಹಿಂದಿನ ಬಿಜಾಪುರ) ವು ಒಂದು ಐತಿಹಾಸಿಕ ಪ್ರವಾಸಿ ವಿಶೇಷ ಪಟ್ಟಣವಾಗಿದೆ. ಆದಿಲ್ ಶಾಹಿಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ನಗರದಲ್ಲಿ ಅನೇಕ ಐತಿಹಾಸಿಕ ರಚನೆಗಳನ್ನು ಇಂದಿಗೂ ಕಾಣಬಹುದಾಗಿದೆ. ಅವುಗಳಲ್ಲಿ ಪ್ರಮುಖವಾಗಿದೆ ಗೋಲ ಗುಮ್ಮಟ.

ಚಿತ್ರಕೃಪೆ: Amith

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಇದು ಬೆಂಗಳೂರಿನ ಕೆಂಫೋರ್ಟ್ ಶಿವನ ಪ್ರತಿಮೆಯಂತೂ ಅಲ್ಲ...ಅಂದರೆ ಈ ಶಿವನ ಪ್ರತಿಮೆ ಇರುವುದಾದರೂ ಎಲ್ಲಿ? ಇದಿರುವುದು ವಿಜಯಪುರದಲ್ಲಿ. ವಿಜಯಪುರದ ಸಿಂದಗಿ ರಸ್ತೆ ಬಳಿಯಿರುವ ಶಿವಪುರ ಎಂಬಲ್ಲಿರುವ ಬಸಂತವನ ಶಿವ ಪ್ರತಿಮೆ ಇದು ಬರೋಬ್ಬರಿ 85 ಅಡಿಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Sissssou2

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:


ಕರ್ನಾಟಕದ ಕುಂದಾಪುರದ ಬಳಿಯಿರುವ ಕರಾವಳಿ ತೀರಗಳ ಒಂದು ಸುಂದರ ಪ್ರದೇಶ.

ಚಿತ್ರಕೃಪೆ: Arun Prabhu

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಎರಡನೆಯ ಅತಿ ಎತ್ತರದ ಶಿವನ ಪ್ರತಿಮೆಯಿರುವ ಮುರುಡೇಶ್ವರ ಪಟ್ಟಣವು ಇರುವುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ. ಇದರ ಎತ್ತರ ಸುಮಾರು 123 ಅಡಿಗಳು.

ಚಿತ್ರಕೃಪೆ: Sam valadi

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮುರುಡೇಶ್ವರವು ಅತ್ಯಂತ ಎತ್ತರದ ದೇವಸ್ಥಾನ ಗೋಪುರಕ್ಕೂ ಸಹ ಖ್ಯಾತಿಗಳಿಸಿದೆ. ಮುರುಡೇಶ್ವರ ಶಿವನ ದೇವಸ್ಥಾನದ ರಾಜ ಗೋಪುರವು 20 ಅಂತಸ್ತುಗಳನ್ನು ಹೊಂದಿದ್ದು ಸುಮಾರು 237.5 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Pvnkmrksk

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಉತ್ತರ ಕನ್ನಡ ಅಥವಾ ಕಾರವಾರವು ಪ್ರವಾಸಿ ಕ್ಷೇತ್ರವಾಗಿದೆ. ಸಾಕಷ್ಟು ಆಕರ್ಷಣೀಯ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ. ಕಾರವಾರದಲ್ಲಿರುವ ಹಡುಗು ಸಂಗ್ರಹಾಲಯದ ಒಂದು ಸುಂದರ ನೋಟ.

ಚಿತ್ರಕೃಪೆ: Prashant Dobhal

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕಾರವಾರದಲ್ಲಿ ಹರಿದಿರುವ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅದ್ಭುತ ಸೇತುವೆ. ಈ ಸೇತುವೆ ಕಾರವಾರವನ್ನು ಪಕ್ಕದ ಗೋವಾದೊಂದಿಗೆ ಸುಲಲಿತವಾಗಿ ಬೆಸೆಯುತ್ತದೆ.

ಚಿತ್ರಕೃಪೆ: Abhijeet Rane

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಬೃಹತ್ ಬಸವೇಶ್ವರರ ಪ್ರತಿಮೆ. ಈ ಬೃಹತ್ ಪ್ರತಿಮೆಯು ಸುಮಾರು 108 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Irrigator

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಕರ್ನಾಟಕದ ಉತ್ತರದ ತುತ್ತ ತುದಿಯಾದ ಬೀದರ್ ಪಟ್ಟಣವು ತನ್ನ ಐತಿಹಾಸಿಕ ಶ್ರೀಮಂತಿಕೆಯಿರುವ ಕೋಟೆಯಿಂದ ಸಾಕಷ್ಟು ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Santosh3397

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮದಕರಿ ನಾಯಕರಾಳಿದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಅಂದಿನ ಸಮಯದ ಅದ್ಭುತ ರಕ್ಷಣಾ ನೀತಿಯನ್ನು ತೋರ್ಪಡಿಸುತ್ತದೆ. ಈ ಕೋಟೆಯನ್ನು ಬೇಧಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.

ಚಿತ್ರಕೃಪೆ: Pavithrah

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವಪ್ರಖ್ಯಾತ ಜೋಗದ ಗುಂಡಿ ಅಥವಾ ಜೋಗ ಜಲಪಾತ. ಶರಾವತಿ ನದಿಯಿಂದುಂಟಾಗುವ ಈ ಎತ್ತರದ ರುದ್ರ ಭಯಂಕರ ಜಲಪಾತವು ರಾಜಾ, ರೋರರ್, ರಾಕೆಟ್ ಹಾಗೂ ಲೇಡಿಗಳೆಂದ ನಾಲ್ಕು ಧಾರೆಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Vmjmalali

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಮೈಸೂರು ಬಳಿಯ ಶ್ರೀರಂಗಪಟ್ಟಣದಲ್ಲಿರುವ ಪ್ರಮುಖ ಆಕರ್ಷಣೆಗಳ ಪೈಕಿ ಮಂಚೂಣಿಯಲ್ಲಿದೆ ಬೃಂದಾವನ ಉದ್ಯಾನ. ಸಾಕಷ್ಟು ವಿಶಾಲವಾಗಿರುವ ಈ ಉದ್ಯಾನವು ತನ್ನ ಪ್ರಾಂಗಣದಲ್ಲಿ ಅದ್ದೂರಿ ಹೋಟೆಲ್ ಅನ್ನೂ ಸಹ ಹೊಂದಿದೆ.

ಚಿತ್ರಕೃಪೆ: Natraj Ramangupta

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಸಂಜೆಯ ಸಮಯದಿ ಉದ್ಯಾನವು ಬಣ್ಣದ ಕಾರಂಜಿ ಹಾಗೂ ಸಂಗೀತದಿಂದ ಕಂಗೊಳಿಸುತ್ತದೆ. ಕೃಷ್ಣರಾಜ ಸಾಗರ ಜಲಾಶಯದ ಹಿಂಬದಿಯಲ್ಲಿ ರಚಿತವಾಗಿರುವ ಈ ಉದ್ಯಾನವು ಭೇಟಿ ನೀಡಲೇಬೇಕಾದ ತಾಣವಾಗಿದೆ.

ಚಿತ್ರಕೃಪೆ: Ashwin Kumar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾದ ಮೈಸೂರು ನಗರದ ಪ್ರಮುಖ ಆಕರ್ಷಣೆ ಮೈಸೂರು ಅರಮನೆ. ಇಂದಿಗೂ ಮೈಸೂರು ರಾಜವಂಶಸ್ಥರ ಅಡಿಯಲ್ಲಿರುವ ಈ ಅದ್ಭುತ ಅರಮನೆಯು ದಸರಾ ಸಂದರ್ಭದಲ್ಲಿ ಸುಂದರವಾಗಿ ದೀಪಾಲಂಕೃತಗೊಂಡು ನವ ವಧುವಿನಂತೆ ಕಳೆಯಿಂದ ಕೂಡಿರುತ್ತದೆ.

ಚಿತ್ರಕೃಪೆ: Ashwin Kumar

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಹಳೇಬೀಡುವಿನ ಕೇದಾರೇಶ್ವರ ದೇವಸ್ಥಾನದ ಪ್ರಾಂಗಣ. ಹೊಯ್ಸಳ ವಾಸ್ತು ಶೈಲಿಗೆ ಅದ್ಭುತವಾದ ಉದಾಹರಣೆಯಾಗಿರುವ ಈ ದೇಗುಲ ಅಂದಿನ ಕಾಲದ ಅತ್ಯದ್ಭುತ ಶಿಲ್ಪಕಲೆ ಕೆತ್ತನೆಗೆ ಒಂದು ಹಿಡಿದ ಕೈಗನ್ನಡಿಯಾಗಿದೆ.

ಚಿತ್ರಕೃಪೆ: Arian Zwegers

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಪಶ್ಚಿಮ ಘಟ್ಟದಲ್ಲಿ ಅದರಲ್ಲೂ ಶರಾವತಿ ಕಣಿವೆ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206 ರ ಮಾರ್ಗದಲ್ಲಿ ಕಂಡುಬರುವ ಪ್ರಕೃತಿಯ ಅಮೋಘ ಸೌಂದರ್ಯ.

ಚಿತ್ರಕೃಪೆ: Sankara Subramanian

ಭವ್ಯ ಕರ್ನಾಟಕ ಪರಿಚಯ:

ಭವ್ಯ ಕರ್ನಾಟಕ ಪರಿಚಯ:

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಮೇಲಿರುವ ದೇವಸ್ಥಾನ. ಮುಂಜಾವಿನ ಸಮಯದಲ್ಲಿ ಇಲ್ಲಿನ ಪರಿಸರವು ಮಂಜಿನಿಂದ ಆವೃತವಾಗಿದ್ದು ಹಿಮದ ಹಾಗೆಯೆ ಗೋಚರಿಸುವುದರಿಂದ ಇದಕ್ಕೆ ಹಿಮವದ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Premnath Thirumalaisamy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X