Search
  • Follow NativePlanet
Share
» »ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ತೋಳಗಳು ಮಾಂಸಹಾರಿ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಆದರೆ ತೋಳಗಳು ಸಸ್ಯಾಹಾರವನ್ನೂ ಸೇವಿಸುತ್ತವೆ ಎನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲವೆಂದಾದಲ್ಲಿ ನಾವಿಂದು ನೀಡಿದ್ದೇವೆ ಸಸ್ಯಾಹಾರ ಸೇವಿಸುವ ತೋಳಗಳ ಬಗ್ಗೆ ಅದೂ ಕೂಡಾ ದೇವರ ಪ್ರಸಾದವನ್ನು ಸೇವಿಸುವ ತೋಳಗಳು . ಹಾಗಾದರೆ ಈ ತೋಳಗಳು ಎಲ್ಲಿವೆ. ಯಾವ ದೇವರ ಪ್ರಸಾದ ಸೇವಿಸಲು ಬರುತ್ತವೆ ಅನ್ನೋದನ್ನು ತಿಳಿಯೋಣ.

ಕಾಲಾ ಡುಂಗರ್ ದೇವಸ್ಥಾನ

ಕಾಲಾ ಡುಂಗರ್ ದೇವಸ್ಥಾನ

PC: Raman Patel

ನಾವಿಂದು ಹೇಳುತ್ತಿರುವುದು ಗುಜರಾತ್‌ನ ರನ್‌ಆಫ್ ಕಚ್‌ ಬಳಿಯಿರುವ ಕಾಲಾ ಡುಂಗರ್ ದೇವಸ್ಥಾನದ ಬಗ್ಗೆ. ಈ ದೇವಸ್ಥಾನವು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ರೂಪವಾದ ದತ್ತಾತ್ರೇಯ ದೇವರಿಗೆ ಅರ್ಪಿಸಲಾಗಿದೆ.

ಪ್ರಸಾದ ಸ್ವೀಕರಿಸುವ ತೋಳಗಳು

ಪ್ರಸಾದ ಸ್ವೀಕರಿಸುವ ತೋಳಗಳು

PC: Bhargavinf

ಈ ತೋಳಗಳು ದತ್ತಾತ್ರೇಯ ದೇವರ ಪ್ರಸಾದವನ್ನು ಸೇವಿಸಲು ಪ್ರತೀ ದಿನ 2 ಸಲ ಇಲ್ಲಿಗೆ ಬರುತ್ತವಂತೆ. ತೋಳಗಳಿಗೆ ಪ್ರಸಾದವನ್ನು ಅರ್ಪಿಸುವ ಮುನ್ನ ಅದನ್ನು ದತ್ತಾತ್ರೇಯ ದೇವರಿಗೆ ನೈವೇದ್ಯಕ್ಕಿಡಲಾಗುತ್ತದೆ.

 ತಪಸ್ಸು ಮಾಡಿದ ಸ್ಥಳ

ತಪಸ್ಸು ಮಾಡಿದ ಸ್ಥಳ

PC:Raman Patel

ದತ್ತಾತ್ರೇಯ ದೇವರು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದರು. ಅವರು ತಪಸ್ಸು ಮಾಡಿದ ಬೆಟ್ಟದ ಮೇಲೆ ಇಂದು ಒಂದು ಭವ್ಯವಾದ ದೇವಸ್ಥಾನವನ್ನು ಕಾಣಬಹುದು.

ಪೌರಾಣಿಕ ಕಥೆ

ಪೌರಾಣಿಕ ಕಥೆ

ಹಿಂದೆ ದತ್ತಾತ್ರೇಯ ದೇವರು ಇಲ್ಲಿ ತಪಸ್ಸು ಮಾಡುತ್ತಿದ್ದಾಗ ತೋಳವೊಂದು ದೇವರ ಬಳಿ ಬರುತ್ತದಂತೆ. ತೋಳವು ಮಾಂಸಾಹಾರವಾಗಿರುವುದರಿಂದ ಅದಕ್ಕೆ ನೀಡಲು ತನ್ನ ಬಳಿ ಏನೂ ಇರುವುದಿಲ್ಲ. ಹಾಗಾಗಿ ತನ್ನ ಶರೀರದ ಮಾಂಸವನ್ನು ಆ ತೋಳಕ್ಕೆ ನೀಡುತ್ತಾರಂತೆ. ಆದ್ರೆ ತೋಳವು ಅದನ್ನು ಸೇವಿಸುವುದಿಲ್ಲ.

ಮೊದಲ ನೈವೇದ್ಯ

ಮೊದಲ ನೈವೇದ್ಯ

PC:Raman Patel

ಮಾಂಸಹಾರಿ ತೋಳಗಳು ಸಸ್ಯಹಾರಿ ಸೇವನೆ ಮಾಡುವುದು ವಿಚಿತ್ರವೇ ಸರಿ, ಈ ದೇವಾಲಯದಲ್ಲಿ ಮೊದಲ ನೈವೇದ್ಯವನ್ನು ಈ ತೋಳಗಳಿಗೆ ಅರ್ಪಿಸಲಾಗುತ್ತದೆ. ತೋಳಗಳು ಈ ಪ್ರಸಾದವನ್ನು ತಿಂದು ಕಾಡಿನೊಳಕ್ಕೆ ಹೋಗುತ್ತವೆ. ಈ ಮಂದಿದಲ್ಲಿ ದಿನಕ್ಕೆ ಎರಡು ಬಾರಿ ಮಧ್ಯಾಹ್ನ ಹಾಗೂ ಸಾಯಂಕಾಲ ಪ್ರಸಾದವನ್ನು ಅಪರ್ಪಿಸಲಾಗುತ್ತದೆ. ಜನರ ಪ್ರಕಾರ ಆ ತೋಳ ದತ್ತಾತ್ರೇಯ ದೇವರ ಭಕ್ತರು ಎನ್ನಲಾಗುತ್ತದೆ.

ಭಕ್ತರ ನಂಬಿಕೆ

ಭಕ್ತರ ನಂಬಿಕೆ

PC:Raman Patel

ಪ್ರಸಾದವನ್ನು ಅಪರ್ಪಿಸಿದ ನಂತರ ಆ ತಟ್ಟೆಯನ್ನು ಬಡಿಯಲಾಗುತ್ತದೆ. ಈ ಮೂಲಕ ತೋಳಗಳಿಗೆ ಅಲ್ಲಿ ಪ್ರಸಾದವಿದೆ ಎನ್ನುವುದನ್ನು ತಿಳಿಸುವ ಸೂಚನೆಯಾಗಿದೆ. ಇದೊಂದು ಚಮತ್ಕಾ ಎನ್ನುವುದು ಭಕ್ತರ ನಂಬಿಕೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Raman Patel

ಬಸ್‌: ಅಹಮದಾಬಾದ್‌ನಿಂದ ಪ್ರಯಾಣಿಸುವವರಿಗೆ, ರೈಲಿಗಿಂತ ಸ್ವಲ್ಪಮಟ್ಟಿಗೆ ದುಬಾರಿ ಆದರೂ ಬಸ್ ಹೆಚ್ಚು ಅನುಕೂಲಕರವಾಗಿರುತ್ತದೆ. ಹಲವಾರು ಖಾಸಗಿ ಕಂಪನಿಗಳು ಸ್ಲೀಪರ್ ಬಸ್‌ಗಳನ್ನು ರನ್ ಮಾಡುತ್ತವೆ, ಭುಜ್‌ಗೆ ರಾತ್ರಿ 8 ರಿಂದ 11 ರವರೆಗೆ ನಗರವನ್ನು ಬಿಟ್ಟು ಮರುದಿನ ಬೆಳಿಗ್ಗೆ 6 ಗಂಟೆ ಮತ್ತು 8 ಗಂಟೆ ನಡುವೆ ಭುಜ್‌ಗೆ ಬರುತ್ತವೆ.
ರೈಲು: ಎರಡು ದಿನನಿತ್ಯದ ಎಕ್ಸ್ಪ್ರೆಸ್ ರೈಲುಗಳು, ಭುಜ್ ಎಕ್ಸ್ಪ್ರೆಸ್ ಮತ್ತು ಕಚ್ ಎಕ್ಸ್ಪ್ರೆಸ್, ಭುಜ್‌ನಿಂದ ಅಹಮದಾಬಾದ್‌ಗೆ ಮತ್ತು ಮುಂಬೈಗೆ ಹೋಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X