Search
  • Follow NativePlanet
Share
» »ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್

ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್

By Vijay

ಟ್ರೆಕ್ ಅಥವಾ ಚಾರಣ ಮಾಡುವುದೆಂದರೆ ಇಂದಿನ ಯುವ ಪೀಳಿಗೆಗೆ ಪಂಚಪ್ರಾಣ. ರಜೆಗಳು ಬಂತೆಂದರೆ ಸಾಕು ಸಮಾನ ಮನಸ್ಕ ಸ್ನೇಹಿತರು ನಗರಗಳಿಂದ ಲಘು ದೂರದಲ್ಲಿರುವ ಯಾವುದಾದರೊಂದು ಶಾಂತಮಯ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ಸ್ಥಳಕ್ಕೆ ಹೊರಡಲು ಯೋಚಿಸಿಯೆ ಬಿಡುತ್ತಾರೆ.

ಅದರಲ್ಲೂ ಬೆಟ್ಟವನ್ನು ಏರುತ್ತ ಟ್ರೆಕ್ ಮಾಡುವುದೆಂದರೆ ಒಂದು ರೀತಿಯ ರೋಮಾಂಚನವಿದ್ದಂತೆಯೆ! ಇನ್ನೊಂದು ಗಮನಿಸ ಬೇಕಾದ ಅಂಶವೆಂದರೆ ಟ್ರೆಕ್ಕಿಂಗ್ ನಂತಹ ಚಟುವಟಿಕೆಗಳು ಕಳೆದ ಕೆಲ ವರ್ಷಗಳಿಂದ ಹೆಚ್ಚಾಗುತ್ತಿವೆಯಾದರೂ ಇದು ಕಂಡುಬರುತ್ತಿರುವುದು ಬಹುತೇಕ ಮಹಾನಗರಗಳಲ್ಲಿಯೆ ಮಾತ್ರ. ಇತರೆ ನಗರಗಳಲ್ಲಿ ಇದು ಇನ್ನೂ ನಿಧಾನವಾಗಿ ಬೆಳೆಯುತ್ತಿದೆ ಎಂದೆ ಹೇಳಬಹುದು.

ಥಾಮಸ್ ಕುಕ್ ನ ಎಲ್ಲ ಉಚಿತ ಪ್ರವಾಸಿ ಕೂಪನ್ನುಗಳನ್ನು ಪಡೆಯಿರಿ

ಇದಕ್ಕೆ ಕಾರಣಗಳು ಹಲವಾರಿರಬಹುದು. ಅದರಲ್ಲಿ ಒಂದಾಗಿದೆ ಮಹಾನಗರಗಳಲ್ಲಿನ ರಭಸದ ಜೀವನಶೈಲಿ. ಇದರಿಂದ ಒತ್ತಡ ಉಂಟಾಗಿ ಆವಾಗಾವಾಗ ನಗರವಾಸಿಗಳು ಅದರಲ್ಲೂ ವಿಶೇಷವಾಗಿ ಯುವ ಜನರು ಇಂತಹ ಶಾಂತಮಯ ಸ್ಥಳಗಳಿಗೆ ಸ್ನೇಹಿತರೊಂದಿಗೆ ಬೆರೆತು ಅಲ್ಪ ಸಮಯವಾದರೂ ಹಾಯಾಗಿ ಕಳೆಯಲು ಚಾರಣದಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ವಿಶೇಷ ಲೇಖನ : ಸಾಹಸದ ಬೆನ್ನೇರಿ ಸಾವನದುರ್ಗ ಏರಿ

ಬೆಂಗಳೂರು ಸಹ ದಕ್ಷಿಣದ ಮಹಾನಗರಗಳ ಪೈಕಿ ಒಂದಾಗಿದ್ದು ಇಲ್ಲಿಯೂ ಸಹ ಚಾರಣದಂತಹ ಅಪಾರ ಚಟುವಟಿಕೆಗಳು ವಾರಾಂತ್ಯಗಳಲ್ಲಿ ನಡೆಯುತ್ತಲೆ ಇರುತ್ತವೆ. ಅಂತರಗಂಗೆಯಾಗಲಿ ಇಲ್ಲವೆ ಸಾವನದುರ್ಗ ಬೆಟ್ಟವಾಗಲಿ ಬೆಂಗಳೂರಿಗೆ ಹತ್ತಿರದಲ್ಲಿದ್ದು ಚಾರಣದ ಅದ್ಭುತ ಆನಂದವನ್ನು ಕರುಣಿಸುತ್ತವೆ. ನೀವು ಈ ಎರಡು ಸ್ಥಳಗಳಿಗೆ ತೆರಳಿದ್ದರೆ, ಮತ್ತೊಂದು ಬೆಟ್ಟಕ್ಕೆ ಎದುರು ಕಾಯುತ್ತಿದ್ದರೆ, ಕಬ್ಬಾಲದುರ್ಗಕ್ಕೊಮ್ಮೆ ಭೇಟಿ ನೀಡಿ. ಇನ್ನೊಂದು ವಿಷಯ ಕಬ್ಬಾಲ ದುರ್ಗದ ಬೆಟ್ಟ ರಾತ್ರಿ ಚಾರಣಕ್ಕೂ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ashok Shaw

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲು ಎನ್ನುವುದು ಒಂದು ಗ್ರಾಮವಾಗಿದ್ದು ಇಲ್ಲಿರುವ ಕಬ್ಬಾಲು ಬೆಟ್ಟದಿಂದ ಇದಕ್ಕೆ ಈ ಹೆಸರು ಬಂದಿದೆ. ಕಬ್ಬಾಲುಬೆಟ್ಟದ ಮೇಲೆ ಕಬ್ಬಾಲಮ್ಮ ದೇವಿಗೆ ಮುಡಿಪಾದ ದೇವಾಲಯವಿರುವುದನ್ನು ಗಮನಿಸಬಹುದು.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲುದುರ್ಗ ಸಾವನದುರ್ಗದ ರೀತಿಯಲ್ಲೆ ಒಂದು ಬೆಟ್ಟವಾಗಿದ್ದು ಹತ್ತಲು ಯೋಗ್ಯವಾಗಿದೆ. ಸಾವನದುರ್ಗದ ಹಾಗೆ ಅತಿ ಕಠಿಣವಿಲ್ಲದಿದ್ದರೂ ಕಬ್ಬಾಲು ಬೆಟ್ಟ ಏರುವಾಗ ಅಲ್ಲಲ್ಲಿ ಬೆಟ್ಟವು ಸುಮಾರು 60 ಡಿಗ್ರಿಗಳಷ್ಟು ಲಂಬವಾಗಿರುವುದರಿಂದ ಸಾಕಷ್ಟು ಜಾಗರೂಕತೆ ವಹಿಸಬೇಕು.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವ ಹಲವಾರು ಪರಿಣಿತ ಚಾರಣಿಗರ ಸಂಘ ಸಂಸ್ಥೆಗಳು ವಾರಾಂತ್ಯದ ರಜೆಗಳಲ್ಲಿ ಕಬ್ಬಾಲುದುರ್ಗಕ್ಕೆ ರಾತ್ರಿ ಚಾರಣಗಳನ್ನು ಏರ್ಪಡಿಸುತ್ತಿರುತ್ತಾರೆ. ನಿಮಗೆ ಆ ರೀತಿಯಾಗಿ ಚಾರಣ ಮಾಡುವುದು ಇಷ್ಟವಿದ್ದರೆ ತೆರಳಬಹುದು.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಇಲ್ಲದಿದ್ದರೆ ಸ್ನೇಹಿತರೊಂದಿಗೆ ಹಾಯಾಗಿ ದಿನದ ಸಮಯದಲ್ಲೆ ಬೆಟ್ಟ ಹತ್ತುವುದು ಕೂಡ ಒಂದು ರೋಮಾಂಚನಕಾರಿಯಾದ ಅನುಭವವೆ ಆಗಿದೆ. ಆದರೆ ನೀವು ಬೆಟ್ಟ ಹತ್ತುವುದನ್ನು ಬೆಳಿಗ್ಗೆ ಎಷ್ಟು ಮುಂಚಿತವಾಗಿ ಪ್ರಾರಂಭಿಸುತ್ತಿರೋ ಅಷ್ಟು ಒಳ್ಳೆಯದು. ಏಕೆಂದರೆ ವಾತಾವರಣ ತಂಪಾಗಿದ್ದು ಹೆಚ್ಚು ಆಯಾಸದ ಅನುಭವವಾಗುವುದಿಲ್ಲ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಇನ್ನೂ ರಾತ್ರಿಯಲ್ಲೂ ಸಹ ಸಾಕಷ್ಟು ಜನರು ಬೆಟ್ಟ ಹತ್ತುವುದನ್ನು ಬಯಸುತ್ತಾರೆ. ಕಾರಣ ಬೆಳಂಬೆಳಿಗ್ಗೆ ಸೂರ್ಯನು ಉದಯಿಸಿದಾಗ ಈ ಬೆಟ್ಟ ಮೇಲಿಂದ ಕಂಡು ಬರುವ ದೃಶ್ಯ ಅತ್ಯಂತ ಸುಂದರವಾಗಿರುತ್ತದೆ. ಇಂತಹ ಒಂದು ಅದ್ಭುತ ಸೂರ್ಯೋದ್ಯಯವನ್ನು ಆಸ್ವಾದಿಸುವ ದೃಷ್ಟಿಯಿಂದಲೆ ರಾತ್ರಿಯ ಟ್ರೆಕ್ ಬಲು ಜನಪ್ರೀಯವಾಗಿದೆ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಬೆಟ್ಟದ ಮೇಲೆ ಹತ್ತುವಾಗ ಸುತ್ತಮುತ್ತಲಿನ ಪ್ರದೇಶಗಳ ಹಸಿರಿನ ಛಾಯೆಯು ಸುಂದರವಾಗಿ ಕಂಗೊಳಿಸುತ್ತದೆ. ಶಾಂತತೆಯ ಅನುಭವ, ತಂಗಾಳಿಯ ಕಲರವ ಮನಸ್ಸಿಗೆ ಮುದ ನೀಡುತ್ತದೆ. ಒಟ್ಟಾರೆಯಾಗಿ ಈ ಚಾರಣ ಎಂದಿಗೂ ಮರೆಯಲಾಗದ ಒಂದು ಅನುಭವ ನೀಡುತ್ತದೆ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ರಾತ್ರಿ ಚಾರಣ ಮಾಡಬಯಸ್ಸಿದ್ದಲ್ಲಿ ಪರಿಣಿತರ ಜೊತೆ ಅಥವಾ ಗುಂಪಿನಲ್ಲಿ ಹೊರಡುವುದು ಉತ್ತಮ. ಇನ್ನೊಂದು ವಿಚಾರವೆಂದರೆ ಬೆಟ್ಟವನ್ನು ನಿರ್ಭಯದಿಂದ ಹಾಗೂ ಸುಗಮವಾಗಿ ಹತ್ತಲು ಒಂದು ನಿರ್ದಿಷ್ಟ ಸ್ಥಳದಿಂದ ಬೆಟ್ಟದೆ ಮೇಲೆ ಮೆಟ್ಟಿಲುಗಳನ್ನು ಕೊರೆಯಲಾಗಿದ್ದು, ಆಧಾರಕ್ಕೆಂದು ಕಂಬಿಯನ್ನೂ ಸಹ ಕಾಣಬಹುದು. ಆ ಸ್ಥಳದಿಂದಲೆ ಬೆಟ್ಟ ಏರುವುದು ಉತ್ತಮ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗವು ಬೆಂಗಳೂರಿನಿಂದ ಸುಮಾರು 80 ಕಿ.ಮೀ ಗಳಷ್ಟು ದೂರದಲ್ಲಿದ್ದು ಕನಕಪುರದಿಂದ 20 ಕಿ.ಮೀ ಗಳಷ್ಟು ದೂರವಿದೆ. ಬೆಂಗಳೂರಿನಿಂದ ಕನಕಪುರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ನಿಮ್ಮ ಸ್ವಂತ/ಬಾಡಿಗೆ ವಾಹನಗಳಲ್ಲಿ ತೆರಳಿದರೆ ಬಲು ಅನುಕೂಲ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಮೊದಲಿಗೆ ಕನಕಪುರಕ್ಕೆ ತೆರಳಿ ಅಲ್ಲಿಂದ ಸತನೂರಿಗೆ, ಸತನೂರಿನಿಂದ ಮುಂದೆ ಬಲ ತಿರುವು ಪಡೆಯುವುದರ ಮೂಲಕ ಕಬ್ಬಾಲು ಗ್ರಾಮಕ್ಕೆ ತಲುಪಬಹುದು. ಹಾಗಾದರೆ ಈ ಟ್ರೆಕ್ ಮಾಡಲು ನೀವು ರೆಡಿನಾ?

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗದ ಬೆಟ್ಟದ ಮೇಲಿಂದ ರಮಣೀಯವಾಗಿ ಕಂಡುಬರುವ ಸುತ್ತಮುತ್ತಲಿನ ಪ್ರದೇಶದ ನೋಟ.

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗಕ್ಕೊಂದು ಟ್ರೆಕ್:

ಕಬ್ಬಾಲದುರ್ಗದ ಬೆಟ್ಟಕೇರುವಾಗ ಕಂಡುಬರುವ ಒಂದು ಪುರಾತನ ಕೊಳ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X