Search
  • Follow NativePlanet
Share
» »ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

ಭಾರತ ದೇಶವು ದೇವಾಲಯಗಳ ನಿಲಯ ಎಂದೇ ಹೇಳಬಹುದು. ಬಹುಶಃ ಇಲ್ಲಿರುವ ದೇವಾಲಯ ಬೇರೆ ಎಲ್ಲೂ ಕಾಣಲು ಬರುವುದಿಲ್ಲ. ಒಂದೊಂದು ದೇವಾಲಯಕ್ಕೂ ಅದರದೇ ಆದ ವಿಶೇಷತೆಗಳಿವೆ. ಅವುಗಳಲ್ಲಿ ಕೆಲವು ದೇವತೆಗಳು ಮಹಿಮಾನ್ವಿತ ಶಕ್ತಿಯನ್ನು ಹೊಂದಿರುತ್ತವೆ.

ಭಾರತ ದೇಶವು ದೇವಾಲಯಗಳ ನಿಲಯ ಎಂದೇ ಹೇಳಬಹುದು. ಬಹುಶಃ ಇಲ್ಲಿರುವ ದೇವಾಲಯ ಬೇರೆ ಎಲ್ಲೂ ಕಾಣಲು ಬರುವುದಿಲ್ಲ. ಒಂದೊಂದು ದೇವಾಲಯಕ್ಕೂ ಅದರದೇ ಆದ ವಿಶೇಷತೆಗಳಿವೆ. ಅವುಗಳಲ್ಲಿ ಕೆಲವು ದೇವತೆಗಳು ಮಹಿಮಾನ್ವಿತ ಶಕ್ತಿಯನ್ನು ಹೊಂದಿರುತ್ತವೆ.

ಆದ್ದರಿಂದಲೇ ಅನೇಕ ಮಂದಿ ಪ್ರವಾಸಿಗರು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅದಕ್ಕೆ ಮುಖ್ಯವಾ ಉದಾಹರಣೆ ಜೋಗೇಶ್ವರಿ ದೇವಾಲಯ. ಈ ಗುಡಿಯು ಅತ್ಯಂತ ಪ್ರಾಚೀನವಾದುದು ಅಂದರೆ, ೫ ನೇ ಶತಮಾನಕ್ಕಿಂತ ಹಿಂದಿನದು.

ಇಲ್ಲಿನ ವಿಶೇಷತೆ ಏನೆಂದರೆ ಈ ದೇವಾಲಯಕ್ಕೆ ಹೆಚ್ಚಾಗಿ ಮಹಿಳೆಯರು ಭೇಟಿ ನೀಡುತ್ತಿರುತ್ತಾರೆ. ಇದಕ್ಕೆ ಕಾರಣವೇನು? ಎಂಬುದು ಸಂಕ್ಷಿಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

೧.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

೧.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅತ್ಯಂತ ಪುರಾತನವಾದ ಜೋಗೇಶ್ವರಿ ದೇವಿಯು ಮುಂಬೈ ಮಹಾನಗರದ ಪ್ರಸಿದ್ಧ ದೇವಾಲಯ. ಈ ದೇವಾಲಯದ ಹೆಸರಿನಿಂದಲೇ ಆ ಪ್ರದೇಶಕ್ಕೆ ಜೋಗೇಶ್ವರಿ ಎಂಬ ಹೆಸರು ಬಂದಿತು. ಇದೊಂದು ಗುಹಾ ದೇವಾಲಯವಾಗಿದೆ.

೨.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

೨.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಈ ದೇವಾಲಯವನ್ನು ಬೆಟ್ಟವನ್ನು ಕೊರೆದು ನಿರ್ಮಿಸಲ್ಪಟ್ಟಿದೆ. ಈ ದೇವಿಯನ್ನು ಆದಿ ಪರಾಶಕ್ತಿಯ ಪ್ರತಿರೂಪ ಎಂದು ಭಾವಿಸಲಾಗುತ್ತದೆ. ನಿರ್ದಿಷ್ಟವಾಗಿ ಈ ದೇವಿಯನ್ನು ಆರಾಧನೆ ‌ಮಾಡುವುದರಿಂದ ಸಕಲ‌ ರೋಗಗಳು ಗುಣವಾಗುತ್ತದೆ ಎಂಬುದು ಭಕ್ತರ‌ ಪ್ರಬಲವಾದ ನಂಬಿಕೆಯಾಗಿದೆ.

೩.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

೩.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅದಕ್ಕಾಗಿಯೇ ಹಲವು ಭಕ್ತರು ಈ ದೇವಿಯನ್ನು ಪೂಜಿಸಲು ದೂರದೂರದ ಸ್ಥಳಗಳಿಂದ ಭೇಟಿ ನೀಡುತ್ತಿರುತ್ತಾರೆ. ಈ ಜೋಗೇಶ್ವರಿ ದೇವಿ ಇನ್ನೂ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಅನೇಕ ಕುಟುಂಬಗಳಿಗೆ ಕುಲ ದೇವತೆಯಾಗಿದ್ದಾಳೆ.

೪.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

೪.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅದೇ ವಿಧವಾಗಿ ಈ ಜೋಗೇಶ್ವರಿ ದೇವಿಯನ್ನು ಆರಾಧಿಸುವವರಲ್ಲಿ ಮಹಾರಾಷ್ಟ್ರದ ಜೊತೆಜೊತೆಗೆ ‌ಗುಜರಾತ್ ಪ್ರಜೆಗಳು ಇದ್ದಾರೆ. ಈ ಮಹಿಮಾನ್ವಿತವಾದ ದೇವಾಲಯವನ್ನು ೫ ನೇ ಶತಮಾನದಲ್ಲಿ ನಿರ್ಮಾಣ ಮಾಡಿದ ಹಾಗೆ ಇಲ್ಲಿ ದೊರೆತಿರುವ ಶಾಸನಗಳ ಮೂಲಕ ತಿಳಿದುಕೊಳ್ಳಬಹುದು.

೫.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

೫.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅಜಂತಾ ಮತ್ತು ಎಲ್ಲೋರಾ ಗುಹೆಗಳನ್ನು ನಿರ್ಮಾಣ ಮಾಡಿದವರರೇ ಈ ಜೋಗೇಶ್ವರಿ ಗುಹಾ ದೇವಾಲಯವನ್ನು ನಿರ್ಮಾಣ ಮಾಡಿರಬಹುದು ಎಂದು ಅನುಮಾನ ಪಡಲಾಗಿದೆ.

6.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

6.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅಜಂತಾ, ಎಲ್ಲೋರಾ ಗುಹೆಗಳ ನಿರ್ಮಾಣ ಪೂರ್ತಿಯಾದ ನಂತರ ಹಿಂದಿರುಗುವ ಸಂದರ್ಭದಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿಗಾಗಿ ನೆಲೆನಿಂತ ಕಾರ್ಮಿಕರೇ ಈ ದೇವಾಲಯವನ್ನು ನಿರ್ಮಿಸಿರಬಹುದು ಎಂಬ ಕಥೆಯು ಪ್ರಚಾರದಲ್ಲಿದೆ.

7.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

7.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಈ ಕಾರ್ಮಿಕರಿಗೆ ಅಲ್ಲಿನ ಸ್ಥಳೀಯ ರಾಜನ ಸಹಕಾರದಿಂದ ನಿರ್ಮಾಣ ಮಾಡಿದರು ಎನ್ನಲಾಗಿದೆ. ಮುಂಬೈ ನಗರದಲ್ಲಿ ಜೋಗೇಶ್ವರಿ ಎಂಬ ಪ್ರದೇಶದಲ್ಲಿ ಈ ಜೋಗೇಶ್ವರಿ ಗುಹಾ ದೇವಾಲಯವಿದೆ. ಈ ತಾಯಿಯನ್ನು ದರ್ಶನ ಮಾಡುವ ಸಲುವಾಗಿ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.

8.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

8.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಈ ಗುಹಾ ದೇವಾಲಯದಲ್ಲಿ ಕೇವಲ ಪಾರ್ವತಿ ಅವತಾರವಾದ ಜೋಗೇಶ್ವರಿ ದೇವಿಯೇ ಅಲ್ಲದೇ, ಪರಮೇಶ್ವರನು ಕೂಡ ನೆಲೆಸಿದ್ದಾನೆ. ಗಣಪತಿ ಹಾಗು ಇನ್ನಿತರ ದೇವತಾ ಮೂರ್ತಿಗಳನ್ನು ಕೂಡ ಈ ಗುಹಾ ದೇವಾಲಯದಲ್ಲಿ ನಾವು ಕಾಣಬಹುದು.

9.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

9.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಒಂದು ಕಾಲದಲ್ಲಿ ಈ ಜೋಗೇಶ್ವರಿ ಗುಹಾ ದೇವಾಲಯಕ್ಕೆ ಅಂಬೋಲಿ ಗುಹಾಲಯ ಎಂದು ಕೂಡ ಕರೆಯುತ್ತಿದ್ದರಂತೆ. ಪ್ರತಿ ಶಿವರಾತ್ರಿಯಂದು, ಕಾರ್ತಿಕ ಸೋಮವಾರದಂದು ಇಲ್ಲಿ ಪ್ರತ್ಯೇಕವಾದ ಪೂಜೆಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.

10.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

10.ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

PC:YOUTUBE

ಅಷ್ಟೇ ಅಲ್ಲ ಇದೊಂದು ಮೊಟ್ಟ ಮೊದಲ ಗುಹಾ ದೇವಾಲಯ ಎಂದು ಕೂಡ ಕರೆಯುತ್ತಾರೆ. ಈ ತಾಯಿಯನ್ನು ನಿಷ್ಟೆ-ಭಕ್ತಿಯಿಂದ ಆರಾಧಿಸಿದವರಿಗೆ ದೀರ್ಘ ಸುಮಂಗಳಿಯಾಗಿ ಬಾಳವ ಸೌಭಾಗ್ಯವನ್ನು ಕರುಣಿಸುತ್ತಾಳಂತೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ತೆರಳಲು ಮುಂಬೈನ ಅನೇಕ ನಗರ ಪ್ರದೇಶಳಿಂದ ಬಸ್ಸುಗಳು, ಲೋಕಲ್ ಟ್ರೈನ್‍ಗಳು ಕೂಡ ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X