
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 55 ಕಿ.ಮೀ ದೂರದಲ್ಲಿರುವ ಜಾನಪದ ಲೋಕವು ನಿಜಕ್ಕೂ ಒಮ್ಮೆಯಾದರೂ ಕುಟುಂಬದೊಂದಿಗೆ ಭೇಟಿ ನೀಡಲೇಬೇಕಾದ ಸ್ಥಳ. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯಗಳು ಅಳಿದು ಹೋಗುವ ಭಯವಿದ್ದಾಗ, ಅದನ್ನು ಉಳಿಸಿ, ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ಅದರ ವೈಭವ ಕುರಿತು ತಿಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.
ಇಂತಹ ಒಂದು ದೃಷ್ಟಿಯಿಂದ ಹಲವು ವರ್ಷಗಳಿಂದ ಕರ್ನಾಟಕ ಜಾನಪದ ಪರಿಷತ್ ಅಡಿಯಲ್ಲಿ ನಿರ್ವಹಣೆಗೊಳ್ಳುತ್ತಿರುವ ಜಾನಪದ ಅಥವಾ ಜನಪದ ಲೋಕ ಒಂದು ಆಕರ್ಷಕ ಹಾಗೂ ಗ್ರಾಮೀಣ ಸಂಸ್ಕೃತಿ - ಸಂಪ್ರದಾಯಗಳ ಸ್ವಾದವಿರುವ ಹೂರಣವಾಗಿದೆ.
ವಾರಾಂತ್ಯದ ರಜೆಗಳಲ್ಲಿ ಮನರಂಜನೆ, ಸಂತಸ ನೀಡುವ, ಪ್ರಾಕೃತಿಕ ಸೊಬಗಿನ ಸ್ಥಳಗಳಿಗೆ ಹೋಗುವುದು ಸಾಮಾನ್ಯ. ಆದರೆ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಬಲು ಹತ್ತಿರದಿಂದ ನೋಡಬಯಸ್ಸಿದ್ದಲ್ಲಿ, ನಮ್ಮ ಇಂದಿನ ಮಕ್ಕಳಿಗೆ ಅವುಗಳ ಕುರಿತು ಜ್ಞಾನ ನೀಡುವ ಆಸೆಯಿದ್ದಲ್ಲಿ ಒಂದೊಮ್ಮೆ ಜಾನಪದ ಲೋಕಕ್ಕೆ ಭೇಟಿ ನೀಡಿ ನೋಡಿ. ನಿಮಗೂ ಸಹ ಸಂತಸ, ಹೆಮ್ಮೆ, ನೆಮ್ಮದಿ ಉಂಟಾಗದೆ ಇರಲಾರದು.

ಜನಮನ ಸೆಳೆವ ಜಾನಪದ ಲೋಕ
ಜಾನಪದ ಲೋಕ ತನ್ನ ಹೆಸರಿಗೆ ತಕ್ಕ ಹಾಗೆ ನಿರ್ಮಿಸಲ್ಪಟ್ಟಿದ್ದು ಇಲ್ಲಿ ಸಾಕಷ್ಟು ಗ್ರಾಮೀಣ ವಸ್ತುಗಳು, ಸಂಗೀತ ವಾದ್ಯಗಳು ಹಾಗೂ ಗ್ರಾಮೀಣ ಜೀವನಶೈಲಿಯ ಪರಿಚಯ ಮಾಡಿಕೊಡುವಂತಹ ವಸ್ತು ವಿಷಯಗಳು, ಜೀವನ ಶೈಲಿಯನ್ನು ಬಹು ಹತ್ತಿರದಿಂದ ಕಾಣಬಹುದು, ಅದೂ ಸಹ ಪ್ರಶಾಂತವಾದ ಪರಿಸರದಲ್ಲಿ.
ಚಿತ್ರಕೃಪೆ: Titodutta

ಜನಮನ ಸೆಳೆವ ಜಾನಪದ ಲೋಕ:
ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್ ಎಲ್ ನಾಗೇಗೌಡರು ಬಹುಶಃ ಎಲ್ಲ ಕನ್ನಡಿಗರಿಗೂ ಚಿರ ಪರಿಚಿತರು. ಬಹುಮುಖ ಪ್ರತಿಭೆ ಹೊಂದಿದ್ದ ಇವರ ನೆಚ್ಚಿನ ಕನಸೆ ಇಂದು ನಮ್ಮ ನಿಮ್ಮೆಲ್ಲರ ಮುಂದೆ ಜಾನಪದ ಲೋಕವಾಗಿ ನೆನಸಾಗಿ ನಿಂತಿದೆ. ಇವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೆರಗನಹಳ್ಳಿಯವರು. ಐ ಎ ಎಸ್ ಅಧಿಕಾರಿಯಾಗಿ, ಬರಹಗಾರರಾರಿ, ಸಮಾಜ ಸೇವಕರಾಗಿ ಕೊನೆಯಲ್ಲಿ ನಿವೃತ್ತರಾದ ನಂತರ ಈ ಜಾನಪದ ಲೋಕವನ್ನು ಸ್ಥಾಪಿಸಿದ ಮಹಾನುಭಾವರು. ಜಾನಪದ ಲೊಕದಲ್ಲಿರುವ ನಾಗೇಗೌಡರ ಪ್ರತಿಮೆ.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಜಾನಪದ ಲೋಕ ಒಂದು ಸುಂದರ ವಸ್ತು ಸಂಗ್ರಹಾಲಯವಾಗಿದ್ದು ಇದನ್ನು ಪ್ರವೇಶಿಸಿದ ಕೂಡಲೆಯೆ ಬೃಹದಾಕಾರದ ಮಹಾದ್ವಾರವೊಂದು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಮಹಾದ್ವಾರವು ದೊಡ್ಡದಾದ ಕೊಂಬು ಕಹಳೆ ಹಾಗೂ ಹರಿಗೆಗಳಿಂದ ಅಲಂಕೃತವಾಗಿದ್ದು 20 ಅಡಿಗಳಷ್ಟು ಎತ್ತರವಾಗಿದೆ. ದ್ವಾರದ ಎರಡೂ ಬದಿಯಲ್ಲಿ ಎತ್ತರದ ಹಿತ್ತಾಳೆಯ ನಂದಿ ಧ್ವಜಗಳಿರುವುದನ್ನು ಕಾಣಬಹುದು. ಜಾನಪದ ಲೋಕದ ಲೋಗೊ ಅಥವಾ ಸಂಕೇತ.
ಚಿತ್ರಕೃಪೆ: Abhinavgarule

ಜನಮನ ಸೆಳೆವ ಜಾನಪದ ಲೋಕ:
ಇಲ್ಲಿ ವಿವಿಧ ವಸ್ತು ವಿಷಯಗಳನ್ನು ವಿವಿಧ ಆಯಾಮಗಳಲ್ಲಿ ತೋರ್ಪಡಿಸುವ ಲೋಕಮಾತಾ ಮಂದಿರ, ಚಿತ್ರ ಕುಟೀರ, ಶಿಲ್ಪ ಮಾಲಾ, ಲೋಕಹಲ್ ಮುಂತಾದವುಗಳನ್ನು ನೋದಬಹುದಾಗಿದೆ. ಇನ್ನೊಂದು ವಿಷಯವೆಂದರೆ ಜನಪದ ಸಂಗೀತ ನಮ್ಮ ಸಂಸ್ಕೃತಿಯ ಜೀವಾಳ. ಅನುಭವಗಳಿಂದಲೆ ಆಡು ಭಾಷೆಯಲ್ಲಿ, ಸ್ಥಳೀಯ ವಾದ್ಯಗಳೊಂದಿಗೆ ರುಪ ತಳೆದು ಹಳ್ಳಿಗರ ಬಾಯಲ್ಲಿ ಸದಾ ಹರಿದಾಡುವ ಸಂಗೀತವು ಉತ್ಸಾಹಗೊಳ್ಳುವಂತೆ ಮಾಡುತ್ತದೆ.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಈ ಲೋಕದಲ್ಲಿ ಜಾನಪದ ಹಾಡುಗಳ, ನೃತ್ಯಗಳು ತರಬೇತಿ, ಡಿಪ್ಲೊಮಾ ಕೋರ್ಸುಗಳನ್ನು ಒದಗಿಸಲಾಗುತ್ತದೆ. ಮಾಹಿತಿಗಾಗಿ ಜಾನಪದ ಲೋಕವನ್ನು ಸಂಪರ್ಕಿಸಿ. ಪ್ರಸ್ತುತ ಇಲ್ಲಿರುವ ಅದ್ಭುತ ಹಾಗೂ ಕೌತುಕಮಯ ವಸ್ತುಗಳ ದರ್ಶನವನ್ನು ಮುಂದಿನ ಸ್ಲೈಡುಗಳ ಮೂಲಕ ಮಾಡೋಣ.
ಚಿತ್ರಕೃಪೆ: Subhashish Panigrahi

ಜನಮನ ಸೆಳೆವ ಜಾನಪದ ಲೋಕ:
ಇದು ಕಡಜದ ಗೂಡು. ಅವರೆಕಾಳು ಗಾತ್ರದಷ್ಟಿರುವ ಕೆಂಪು ಬಣ್ಣದ ಹೆಗ್ಗಡಜವು ಆಂತರಿಕವಾಗಿ ಹಲವು ಅಂತಸ್ತುಗಳುಳ್ಳ ಈ ರೀತಿಯ ಗೂಡನ್ನು ನಿರ್ಮಿಸುತ್ತದೆ. ಇಂತಹ ಗೂಡನ್ನು ನಿರ್ಮಿಸಲು ಕಡಜವು ಸುಮಾರು ಎರಡು ವರ್ಷಗಳಷ್ಟು ಕಾಲಾವಧಿ ತೆಗೆದುಕೊಳ್ಳುತ್ತದೆ.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಶಯನಾವಸ್ಥೆಯಲ್ಲಿರುವ ಜಾನಪದ ಲೋಕದ ವಿಷ್ಣು.
ಚಿತ್ರಕೃಪೆ: Gopal Venkatesan

ಜನಮನ ಸೆಳೆವ ಜಾನಪದ ಲೋಕ:
ಭಾರತೀಯ ಹಿಂದು ದೇವಾಲಯಗಳ ಸಂಪ್ರದಾಯವನ್ನು ಎತ್ತಿ ತೋರಿಸುವ ಅದೆ ಸಮಯದಲ್ಲಿ ಹಿಂದಿನಿಂದಲೂ ಭಾರತೀಯರಿಗಿದ್ದ ಕಲಾ ಕೌಶಲ್ಯವನ್ನು ಎತ್ತಿ ಸಾರುವ ರಥ.
ಚಿತ್ರಕೃಪೆ: Rrburke

ಜನಮನ ಸೆಳೆವ ಜಾನಪದ ಲೋಕ:
ಸಾಮಾನ್ಯವಾಗಿ ಆದಿವಾಸಿಗಳು ಬಳಸುವಂತಹ ಕೆಲವು ಪರಿಕರಗಳನ್ನು ಈ ಜಾನಪದ ಲೋಕದಲ್ಲಿ ಪ್ರದರ್ಶಿಸಲಾಗಿದೆ.
ಚಿತ್ರಕೃಪೆ: Nvvchar

ಲೋಕ ಮಹಲ್
ಇದು ಎರಡು ಅಂತಸ್ತಿನ ಕಟ್ಟಡವಾಗಿದೆ. ಇದು ಮೂಡಲಪಯ ಯಕ್ಷಗಾನ ಮತ್ತು ಗರುಡಿಯ ಜಾನಪದ ನೃತ್ಯಗಳನ್ನು ನಿರ್ವಹಿಸುವ ಅನೇಕ ದೊಡ್ಡ ಗೊಂಬೆಗಳನ್ನು ಪ್ರದರ್ಶಿಸುತ್ತದೆ. ವಾಸ್ತವವಾಗಿ, ಗರುಡಿ ಗೊಂಬೆಗಳು ಬುಡಕಟ್ಟು ಸಂಸ್ಕೃತಿಯಲ್ಲಿ ಪ್ರಮುಖವಾದ ಪ್ರಾಮುಖ್ಯತೆಯನ್ನು ಹೊಂದಿವೆ, ಏಕೆಂದರೆ ಅವುಗಳನ್ನು ಔಪಚಾರಿಕ ನೃತ್ಯ ಮೆರವಣಿಗೆಯಲ್ಲಿಬಳಸಲಾಗುತ್ತದೆ. ಚೌ ಮುಖವಾಡಗಳು, ಪೂರ್ವ ಭಾರತದ ವಿಶೇಷತೆಗಳನ್ನು ಕೂಡಾ ಪ್ರದರ್ಶಿಸಲಾಗುತ್ತದೆ.
ಚಿತ್ರಕೃಪೆ: Gopal Venkatesan

ಅಯಗರಮಾಲ
ದಿನ ನಿತ್ಯದ ದಿನಚರಿಯಲ್ಲಿ ಹಳ್ಳಿಗರು ಬಳಸಲಾಗುವ ವಿಭಿನ್ನ ರೀತಿಯ ಕಬ್ಬಿನ ರಸ ತೆಗೆಯುವ, ಕುಂಬಾರಿಕೆ, ಮರದ ರಥಗಳು, ಕಾಟೇಜ್ ಕೈಗಾರಿಕೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಉಪಕರಣಗಳನ್ನು ಪ್ರದರ್ಶಿಸಲಾಗುತ್ತದೆ. 50 ಜನರಿಗೆ ಅವಕಾಶ ಕಲ್ಪಿಸುವ ಒಂದು ಸಣ್ಣ ಕೈಗೊಂಬೆ ರಂಗಮಂದಿರವೂ ಈ ವಿಂಗ್‌ನ ಒಂದು ಭಾಗವಾಗಿದೆ. ಇನ್ನು ಗ್ರೀಕ್ ಆಂಫಿಥಿಯೇಟರ್‌ನ ಆಕಾರದಲ್ಲಿ 1000 ಜನರು ಆಸೀನರಾಗುವಂತಹ ಒಂದು ವಿಶಾಲವಾದ ಮುಕ್ತ-ರಂಗಮಂದಿರವಿದೆ.
ಚಿತ್ರಕೃಪೆ: Subhashish Panigrahi

ದೊಡ್ಡ ಮನೆ
ಇದೊಂದು ಸಂಪ್ರದಾಯಿಕ ಹಳ್ಳಿ ಮನೆಯನ್ನು ಪ್ರತಿಬಿಂಬಿಸುತ್ತದೆ. ಈ ಮನೆಯನ್ನು ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ನಡೆಸಲು ಗ್ರಾಮದ ಸಮುದಾಯ ಕೇಂದ್ರವಾಗಿ ಬಳಸಲಾಗುತ್ತದೆ.
ಚಿತ್ರಕೃಪೆ: Nvvchar

ಜನಮನ ಸೆಳೆವ ಜಾನಪದ ಲೋಕ:
ಮನಸೆಳೆವ ತೂಗು ಬೊಂಬೆಗಳಾಟ. ಇಂದಿನ ಆಧುನಿಕತೆಯಲ್ಲಿ ಈ ರೀತಿಯ ಕಲೆಗಳು ಕಡಿಮೆಯಾಗುತ್ತಿರುವುದು ನಿಜಕ್ಕೂ ಆತಂಕಕರ. ಈ ರೀತಿಯಾಗಿಯಾದರೂ ಅದರ ಕುರಿತು ಮಾಹಿತಿ ನೀಡಿ ಬೆಳೆಸಿಕೊಂಡು ಹೋಗಬೇಕಾಗಿದೆ.
ಚಿತ್ರಕೃಪೆ: Gopal Venkatesan

ಭೇಟಿ ಸಮಯ ಹಾಗೂ ಟಿಕೇಟ್
ವೀಕ್ಷಕರು, ಪ್ರವಾಸಿಗರು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30 ರವರೆಗೆ ಈ ಜನಪದ ಲೋಕಕ್ಕೆ ಭೇಟಿ ನೀಡಲು ಅವಕಾಶವಿದೆ. ಮಂಗಳವಾರ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಜನಪದ ಲೋಕ ಮುಚ್ಚಿರುತ್ತದೆ. ಇದರೊಳಗೆ ಭೇಟಿ ನೀಡಬೇಕಾದರೆ ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಟಿಕೇಟ್ ಪಡೆಯಬೇಕು.
ಚಿತ್ರಕೃಪೆ: Nvvchar

ಉತ್ಸವಗಳು
ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ ಲೋಕೋಸ್ಸವ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಮುಖ್ಯವಾಗಿ ಇದರ ಸಂಸ್ಥಾಪಕರಾದ ನಾಗೇಗೌಡ ಅವರ ಜನ್ಮ ಶತಮಾನೋತ್ಸವದ ಪರವಾಗಿ ಆಚರಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ದಸರಾ ಮತ್ತು ಜುಲೈನಲ್ಲಿ ಬರುವ ಗಾಳಿಪಟ ಉತ್ಸವವನ್ನು ಜಾನಪದಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಕಲಾವಿದರು ಮತ್ತು ಜಾನಪದ ಸಾಹಿತಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಚಿತ್ರಕೃಪೆ: Subhashish Panigrahi

ತಲುಪುವುದು ಹೇಗೆ?
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವು ಬೆಂಗಳೂರಿನಿಂದ ಸುಮಾರು 52 ಕಿ.ಮೀ ದೂರದಲ್ಲಿದೆ. ಜನಪದ ಲೋಕ ಬಸ್ ಸ್ಟಾಪ್ ನಿಂದ ಕೇವಲ 5 ನಿಮಿಷಗಳ ನಡೆದರೆ ನೀವು ಜನಪದ ಲೋಕ ತಲುಪುತ್ತೀರಿ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬಸ್ ಮೂಲಕ ನೀವು ಜನಪದ ಲೋಕವನ್ನು ತಲುಪಬಹುದು. ನೀವು ರಾಮನಗರದಿಂದ ಜನಪದ ಲೋಕ ತಲುಪಬೇಕೆಂದಿದ್ದರೆ ಟ್ಯಾಕ್ಸಿ ಮೂಲಕ ತಲುಪಬಹುದು.
ಚಿತ್ರಕೃಪೆ: Titodutta

ಜನಮನ ಸೆಳೆವ ಜಾನಪದ ಲೋಕ:
ಒಬ್ಬರಿಗೊಬ್ಬರು ಏನು ಮಾತನಾಡುತ್ತಿರಬಹುದು ಈ ಪುತ್ಥಳಿ ಮುಖಗಳು! ಊಹಿಸಬಲ್ಲಿರಾ?
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಹಳೆಯ ಕಾಲದಲ್ಲಿ ಗ್ರಾಮಸ್ಥರಿಂದ, ಆದಿವಾಸಿಗಳಿಂದ ಬೇಟೆಗಾಗಿ ಉಪಯೋಗಿಸಲ್ಪಡುತ್ತಿದ್ದ ಬಾಣಗಳು.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಹಿಂದೆ ಈ ರೀತಿಯ ವಿನ್ಯಾಸದ ಗೋಡೆ ಆಧಾರಗಳನ್ನು ನೆಟ್ಟು ದೀಪಗಳನ್ನು ಹಚ್ಚಲಾಗುತ್ತಿತ್ತು.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಗ್ರಾಮೀಣ ಪರಂಪರೆಯ ವಿವಿಧ ನುಡಿ ವಾದ್ಯಗಳು.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಕುಂಕುಮ ಬಟ್ಟಲುಗಳು, ಉದ್ಧರಣೆಗಳು.
ಚಿತ್ರಕೃಪೆ: Cherishsantosh

ಜನಮನ ಸೆಳೆವ ಜಾನಪದ ಲೋಕ:
ಹಳೆಯ ಶೈಲಿಯ ಇಳಿಗೆ ಮಣೆ.
ಚಿತ್ರಕೃಪೆ: Cherishsantosh