» »ಅರ್ಧ ರಾತ್ರಿಯ ಸಮಯದಲ್ಲಿ ಶಿರವಿಲ್ಲದ ದೇಹ ತಿರುಗುವ ಪ್ರದೇಶವಿದು

ಅರ್ಧ ರಾತ್ರಿಯ ಸಮಯದಲ್ಲಿ ಶಿರವಿಲ್ಲದ ದೇಹ ತಿರುಗುವ ಪ್ರದೇಶವಿದು

Written By:

ಭಾರತ ದೇಶದಲ್ಲಿ ದೇವಾಲಯದಲ್ಲಿರುವ ದೇವರುಗಳಿಗೆ ಎಷ್ಟು ಸ್ಥಾನವನ್ನು ನೀಡಿದ್ದೇವೂ ಅಷ್ಟೇ ದೆವ್ವಗಳಿಗೂ ಸಹ ಸ್ಥಾನವನ್ನು ನೀಡಿದ್ದೇವೆ. ನಾರಾಸ್ತಿಕರಾಗಲಿ, ಆಸ್ತಿಕರಾಗಲಿ, ನಂಬಿಕೆ ಉಳ್ಳವರು, ಇಲ್ಲದೇ ಇರುವವರು ಕೂಡ ಒಮ್ಮೆ ನಂಬಿಕೆ ಹುಟ್ಟಿಸುವಂತಹ ಘಟನೆಗಳು ನಡೆದಾಗ ನಂಬಲೇಬೇಕಾದ ಅನಿರ್ವಾಯ ಒದಗುತ್ತದೆ.

ಕಲಿಯುಗದಲ್ಲೂ ದೆವ್ವಗಳ ಬಗ್ಗೆ ಹಲವಾರು ರೀತಿಯ ರೋಚಕ ಕಥೆಗಳನ್ನು ಕೇಳುತ್ತಾ ಬರುತ್ತಿದ್ದೇವೆ. ಒಂದೊಂದು ಕಥೆ ಭಯನಕವೇ ಅಲ್ಲದೇ ಅನುಮಾನಗಳಿಗೂ ಎಡೆ ಮಾಡಿಕೊಡುತ್ತವೆ. ನೀವು ಒಮ್ಮೆಯಾದರು ಶಿರವೇ ಇಲ್ಲದ ದೆವ್ವವನ್ನು ನಿಜ ಜೀವನದಲ್ಲಿ ಕಂಡಿದ್ದೀರಾ? ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಂಡಿರಬಹುದು. ಶಿರವಿಲ್ಲದ ಒಂದು ಪ್ರೇತಾತ್ಮ ಒಂದು ಪ್ರದೇಶದಲ್ಲಿದೆ. ಇದು ಸಿನಿಮಾ ಕಥೆ ಅಲ್ಲ ಬದಲಾಗಿ ತಮಿಳು ನಾಡಿನಲ್ಲಿ ನಿಜವಾಗಿಯೂ ನಡೆದ ಘಟನೆಯಾಗಿದೆ.

ಪ್ರಸ್ತುತ ಲೇಖನದಲ್ಲಿ ಶಿರವಿಲ್ಲದ ಪ್ರೇತಾತ್ಮವಿರುವ ಸ್ಥಳದ ಬಗ್ಗೆ ತಿಳಿಯೋಣ.

ಎಲ್ಲಿ ನಡೆಯಿತು?

ಎಲ್ಲಿ ನಡೆಯಿತು?

ತಮಿಳುನಾಡು ಜಿಲ್ಲೆಯ ವಾನಿಯಂಬಾಡಿ ಸಮೀಪದಲ್ಲಿ ಬಟ್ಟಾಪೆಟ್ಟ ಗ್ರಾಮ ಅಲ್ಲಿ ಶಿರವಿಲ್ಲದ ದೇಹವನ್ನು ತಿರುಗುವುದನ್ನು ಕಂಡ ಸ್ಥಳೀಯರು ಹೆದರಿ ಹಲವಾರು ಪೂಜೆಗಳನ್ನು ಮಾಡಿದರಂತೆ.

PC:YOUTUBE

ಗ್ರಾಮಸ್ಥರು

ಗ್ರಾಮಸ್ಥರು

ಬಟ್ಟಾಪೆಟ್ಟ ಗ್ರಾಮದಲ್ಲಿ ಸುಮಾರು 1000 ಕ್ಕಿಂತ ಅಧಿಕ ಜನರು ವಾಸಿಸುತ್ತಿದ್ದಾರೆ. ಇಲ್ಲಿರುವ ಸ್ಥಳೀಯರು ಇಂತಹ ಭಯಾನಕ ಘಟನೆಯಿಂದ ಭಯಬೀತಿಗೊಂಡಿದ್ದರಂತೆ.

PC:YOUTUBE

ರಕ್ತಕಾಠೇರಿ

ರಕ್ತಕಾಠೇರಿ

ಇದರಿಂದ ಭಯ ಭ್ರಾಂತರಾದ ಸ್ಥಳೀಯರು ತಮ್ಮ ಮನೆಯ ಬಾಗಿಲುಗಳು, ಕಿಟಕಿಗಳು ಮುಚ್ಚಿದರಂತೆ. ಶಿರವಿಲ್ಲದ ದೆವ್ವವೂ ಅತ್ಯಂತ ಭಯಂಕರವಾದ ಹಾಗೂ ರಕ್ತಕಾಠೇರಿ ಎಂದು ಕೆಲವರು ಹೇಳಿದ್ದರಿಂದ ಮತ್ತಷ್ಟು ಭಯಗೊಂಡಿದ್ದರು.

PC:YOUTUBE

ಭಯಾನಕ

ಭಯಾನಕ

ನಿಜವಾಗಿಯೂ ಹೇಳಬೇಕೆಂದರೆ ಅಲ್ಲಿನ ಸ್ಥಳೀಯರು ಹೇಳಿದ ಪ್ರಕಾರ, ಬಾಗಿಲು ತಟ್ಟುವ ಶಬ್ದ ಕೇಳಿಸುತ್ತದೆ ಹೋರ ಬಂದು ನೋಡಿದರೆ ಯಾರು ಅಲ್ಲಿ ಇರುವುದಿಲ್ಲ. ಹಾಗೆಯೇ ಅಲ್ಲಿನ ಕೆಲವು ಸ್ಥಳೀಯರು ಸ್ವತಃ ಶಿರವಿಲ್ಲದ ದೇಹವು ತಿರುಗುತ್ತಿರುವುದನ್ನು ಕಂಡಿದ್ದಾರಂತೆ.

PC:YOUTUBE

ಭಯಾನಕ ಶಬ್ದ

ಭಯಾನಕ ಶಬ್ದ

ರಾತ್ರಿಯಾಗುತ್ತಿದ್ದಂತೆ ಹಲವಾರು ಭಯಾನಕ ಹಾಗೂ ವಿಚಿತ್ರವಾದ ಶಬ್ಧಗಳು ಕೇಳಿಸುತ್ತದೆಯಂತೆ. ಹೀಗಾಗಿ ಸಂಜೆಯಾಗುತ್ತಿದ್ದಂತೆಯೇ ಸ್ಥಳೀಯರು ಮನೆಯ ಬಾಗಿಲನ್ನು ಮುಚ್ಚಿ ಬಿಡುತ್ತಾರಂತೆ. ಹಾಗೆಯೇ ರಾತ್ರಿ ಸಮಯದಲ್ಲಿ ಯಾರು ಒಡಾಡಿದ ಹಾಗೆ ನೀರು ಚೆಲ್ಲಿದ ಹಾಗೆ ಕೇಳಿಸುತ್ತದೆ ಎಂದು ಹೇಳುತ್ತಾರೆ.

PC:YOUTUBE

ಶಿರವಿಲ್ಲದ ದೇಹ

ಶಿರವಿಲ್ಲದ ದೇಹ

ಬಟ್ಟಾಪೆಟ್ಟ ಗ್ರಾಮ ಪಂಚಾಯಿತಿಯ ಸಮಾವೇಶ ಮಾಡಿ ಈ ದುಷ್ಟ ಶಕ್ತಿಯನ್ನು ಈ ಗ್ರಾಮದಿಂದ ತೊಲಗಿಸಬೇಕು ಎಂದು ಸಕಲ ಪ್ರಯತ್ನವನ್ನು ಮಾಡಲು ಸಿದ್ಧವಾದರು.

PC:YOUTUBE

ಆಜಂನೇಯ ಸ್ವಾಮಿ ದೇವಾಲಯ

ಆಜಂನೇಯ ಸ್ವಾಮಿ ದೇವಾಲಯ

ಆ ಪ್ರೇತಾತ್ಮವನ್ನು ಗ್ರಾಮದಿಂದ ಹೊರಹಾಕಲು ಪ್ರತ್ಯೇಕವಾದ ಪೂಜೆಯನ್ನು ಮಾಡಲು ಮುಂದಾದರು. ಹಾಗಾಗಿ ಮಂಗಳವಾರ ರಾತ್ರಿ ಭೋತ್ಚಾಟನೆ ಮಾಡುವ ಮಹಾನ್ ಶಕ್ತಿ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಪ್ರತ್ಯೇಕವಾದ ಪೂಜೆಯನ್ನು ಮಾಡಿದರು.


PC:YOUTUBE

 ಇಬ್ಬರು ಮೃತರಾದರು

ಇಬ್ಬರು ಮೃತರಾದರು

ಆಂಜನೇಯ ಸ್ವಾಮಿ ಸ್ಥಳೀಯರಲ್ಲಿ ಒಬ್ಬರ ಮೇಲೆ ಬಂದು ಈ ಪ್ರದೇಶದಲ್ಲಿ ಆ ಭಯಕಂರವಾದ ಪ್ರೇತಾತ್ಮ ಇದೆ ಎಂದೂ ಹಾಗೂ ಇಗಾಗಲೇ ಇಬ್ಬರು ಮೃತರಾದರು ಹಾಗೆಯೇ ಇನ್ನೂ ಮೂರು ಜನ ಮೃತರಾಗುವ ಸಂಭವವಿದೆ ಎಂದು ಹೇಳಿದರು.

PC:YOUTUBE

ಪೂಜೆ

ಪೂಜೆ

ನಂತರ ಆಂಜನೇಯ ಸ್ವಾಮಿಯನ್ನು ಊರೆಲ್ಲಾ ಮೆರವಣಿಗೆ ಮಾಡಿಸಿ ರಾತ್ರಿಯ ದಿನ ಮನೆಯ ಬಾಗಿಲಿಗೆ ದೇವಾಲಯದಿಂದ ದೀಪವನ್ನು ತಂದು ಬೆಳಗಿದರು.

PC:YOUTUBE

ತಲುಪವ ಬಗೆ?

ತಲುಪವ ಬಗೆ?

ತಮಿಳುನಾಡು ಜಿಲ್ಲೆಯ ವಾನಿಯಂಬಾಡಿ ಸಮೀಪದಲ್ಲಿ ಬಟ್ಟಾಪೆಟ್ಟ ಗ್ರಾಮಕ್ಕೆ ಭೇಟಿ ನೀಡಬೇಕಾದರೆ ಕರ್ನಾಟಕದ ಕೋಲಾರದಿಂದ ಸುಮಾರು 91 ಕಿ.ಮೀ, ಹೊಸೂರಿನಿಂದ ಸುಮಾರು 96 ಕಿ,ಮೀ, ಮದನಪಲ್ಲಿಯಿಂದ 102 ಕಿ,ಮೀ ಪೆರುಮನಲ್ಲೂರಿನಿಂದ ಸುಮಾರು 210 ಕಿ,ಮೀ ಅಂತರದಲ್ಲಿದೆ. ಅನುಮಾನವಿರುವವರು ಒಮ್ಮೆ ಈ ಗ್ರಾಮಕ್ಕೆ ಭೇಟಿ ಕೊಡಿ.


PC:YOUTUBE

Please Wait while comments are loading...