Search
  • Follow NativePlanet
Share
» »ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?

ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?

ಮೇ 12 ಕ್ಕೆ ಕರ್ನಾಟಕ ವಿಧಾಸಭೆ ಚುನಾವಣೆ ನಡೆದಿದ್ದು, ಮೇ 15 ರಂದು ಮತ ಎಣಿಕೆ ಕಾರ್ಯ ಮುಗಿದು ಫಲಿತಾಂಶ ಹೊರಬಿದ್ದಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತವಾಗಿದೆ. ಇಂದು ಬಿಜೆಪಿಯ ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿಯೂ ಆಗಿದೆ. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಲಿಗೆ ಕಾರಣ ಏನು ಅನ್ನುವ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಅದಕ್ಕೆ ಕಾರಣ ಚಾಮುಂಡೇಶ್ವರಿ ಎನ್ನುವ ಸುದ್ದಿ ಹಬ್ಬುತ್ತಿದೆ. ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದು. ಅದಕ್ಕೆ ಚಾಮುಂಡೇಶ್ವರಿಯೇ ಕಾರಣ ಎನ್ನುವ ವದಂತಿ ಹಬ್ಬುತ್ತಿದೆ.

ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!

ಮೈಸೂರಿನ ಚಾಮುಂಡೇಶ್ವರಿ

ಮೈಸೂರಿನ ಚಾಮುಂಡೇಶ್ವರಿ

PC: Saravana Kumar

ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಉತ್ತರ ಕರ್ನಾಟಕದ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತಿದ್ದಾರೆ. ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರವು ದೇವಿ ಚಾಮುಂಡೇಶ್ವರಿಯ ಹೆಸರಿನಿಂದ ಕೂಡಿದೆ. ಚಾಮುಂಡೇಶ್ವರಿಯು ಮೈಸೂರಿನ ಆರಾಧ್ಯ ದೈವ ಎಂದೇ ಹೇಳಬಹುದು.

ಸತಿಯ ಕೂದಲು ಬಿದ್ದಿದ್ದು ಇಲ್ಲಿ

ಸತಿಯ ಕೂದಲು ಬಿದ್ದಿದ್ದು ಇಲ್ಲಿ

PC:HPNadig

ದೇವಿ ಸತಿಯ ದೇಹದ ಭಾಗಗಳು ಬಿದ್ದಿರುವ ಸ್ಥಳವೆಲ್ಲಾ ಶಕ್ತಿಪೀಠಗಳಾಗಿರುವುದು ನಿಮಗೆ ಗೊತ್ತೇ ಇದೆ. ದೇವಿಯ ದೇಹದ ಒಂದೊಂದು ಭಾಗ ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದಿದೆ. ಇಲ್ಲಿ ಸತಿಯ ಕೂದಲು ಬಿದ್ದಿದ್ದವು ಎನ್ನಲಾಗುತ್ತದೆ. ಈ ದೇವಾಲಯವು ಮೈಸೂರಿನಿಂದ ಸುಮಾರು 13 ಕಿ.ಮಿ ದೂರದಲ್ಲಿದೆ. ಚಾಮುಂಡೇಶ್ವರಿಯನ್ನು ದುರ್ಗಾ ದೇವಿಯ ರೂಪ ಎನ್ನಲಾಗುತ್ತದೆ. ಬೆಟ್ಟದ ಮೇಲಿರುವ ಈ ಮಂದಿರವು ಮಹಿಷಾಸುರನ ವಧಿಸಿದರ ಪ್ರತೀಕ ಎನ್ನಲಾಗುತ್ತದೆ.

ಚಿನ್ನದ ದೇವಿಯ ಮೂರ್ತಿ

ಚಿನ್ನದ ದೇವಿಯ ಮೂರ್ತಿ

PC: youtube

ಈ ಮಂದಿರವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಈ ಮಂದಿರದ ಗರ್ಭಗುಡಿಯಲ್ಲಿರುವ ದೇವಿಯ ವಿಗ್ರಹವು ಚಿನ್ನದಿಂದ ಮಾಡಲಾಗಿರುವಂತಹದ್ದು. ದ್ರಾವಿಡ ವಾಸ್ತುಕಲೆಯ ಉತ್ತಮ ಉದಾಹರಣೆ ಇದಾಗಿದೆ. ಇದರ ಗೋಪುರವು ಏಳು ಅಂತಸ್ತನ್ನು ಹೊಂದಿದೆ. ಇದರ ಎತ್ತರ 40.ಮೀ ಇದೆ. ಮುಖ್ಯ ಮಂದಿರದ ಹಿಂದೆ ಮಹಾಬಲೇಶ್ವರನಿಗೆ ಸಮರ್ಪಿತವಾದ ಸಣ್ಣ ಮಂದಿರವೊಂದಿದೆ. ಇದು 1000 ವರ್ಷಕ್ಕೂ ಹಳೆಯ ಮಂದಿರವಾಗಿದೆ. ಚಾಮುಂಡೇಶ್ವರಿ ಮಂದಿರದ ಸಮೀಪದಲ್ಲೇ ಮಹಿಷಾಸುರನ ದೊಡ್ಡ ಪ್ರತಿಮೆ ಇದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Saiprasadvanapamala

ನೀವು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಇದು ಮೈಸೂರಿನಿಂದ 139 ಕಿ.ಮೀ ದೂರದಲ್ಲಿದೆ. ರೈಲಿನಲ್ಲಿ ಹೋಗುವುದಾದರೆ ಮೈಸೂರಿಗೆ ಬೆಂಗಳೂರಿನಿಂದ ಸಾಕಷ್ಟು ರೈಲು ವ್ಯವಸ್ಥೆ ಇದೆ. ಇನ್ನೂ ಮೈಸೂರಿಗೆ ದೇಶದ ಎಲ್ಲಾ ದೊಡ್ಡ ನಗರಗಳಿಂದ ಬಸ್ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X