Search
  • Follow NativePlanet
Share
» »ಏಕಾಂಗಿ ಪ್ರಯಾಣಕ್ಕೆ ಸೂಕ್ತವಾದ ಅಗ್ರಮಾನ್ಯ ತಾಣಗಳಿವು

ಏಕಾಂಗಿ ಪ್ರಯಾಣಕ್ಕೆ ಸೂಕ್ತವಾದ ಅಗ್ರಮಾನ್ಯ ತಾಣಗಳಿವು

By Manjula Balaraj Tantry

ಜನರು ಅನೇಕ ಕಾರಣಗಳಿಗಾಗಿ ಪ್ರಯಾಣ ಮಾಡುತ್ತಾರೆ. ಕೆಲವರು ನಗರದ ಅದೇ ದಿನನಿತ್ಯ ಜೀವನದಿಂದ ಬೇಸತ್ತು ಬೇರೆ ಕಡೆಗೆ ಪ್ರಯಾಣ ಬೆಳೆಸಿದರೆ ಇನ್ನು ಕೆಲವರು ಒಮ್ಮೊಮ್ಮೆ ಜೀವನದಲ್ಲಿ ಯಾವುದಾದರೂ ಹೊಸತನವನ್ನು ಅನುಭವಿಸುವುದಕ್ಕಾಗಿ ಪ್ರಯಾಣ ಮಾಡುತ್ತಾರೆ. ಇನ್ನು ಕೆಲವರು ರೋಚಕತೆಗಾಗಿ ಮತ್ತು ಸ್ವತಃ ತಾವೇ ಆರಾಮದಾಯಕವಾಗಿರಲು ಪ್ರಯಾಣ ಮಾಡ ಬಯಸುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಕೆಲವು ಕಾರಣಗಳಿಗೆ ಕಾಯುತ್ತಾರೆ. ಅಂದರೆ ಕೆಲವು ಸಮಯಕ್ಕಾಗಿ ಅಥವಾ ತಮ್ಮ ಜೊತೆಗೆ ಯಾರನ್ನಾದರೂ ಕರೆದೊಯ್ಯಲು ಇತ್ಯಾದಿ ಕಾರಣಗಳಿಗಾಗಿ ಪ್ರಯಾಣ ಮಾಡಲು ಕಾಯುತ್ತಾರೆ ಆದರೆ ಏಕಾಂತವಾಗಿ ಪ್ರಯಾಣ ಮಾಡ ಬಯಸುವ ಇನ್ನು ಕೆಲವು ಪ್ರಯಾಣಿಕರು ತಮ್ಮದೇ ಆದ ಸಾಹಸವನ್ನು ಮಾಡಬಯಸುತ್ತಾರೆ.

ನೀವು ಒಬ್ಬಂಟಿಯಾಗಿ ಪ್ರಯಾಣ ಮಾಡುವವರಾಗಿದ್ದು ಅನ್ವೇಷಣೆ ಮಾಡಲು ಇಷ್ಟ ಪಡುವವರಾಗಿದ್ದಲ್ಲಿ ನಮ್ಮಲ್ಲಿ ಮಹಾರಾಷ್ಟ್ರದ ಕೆಲವು ಅದ್ಬುತವಾದ ಒಬ್ಬಂಟಿಯಾಗಿ ಪ್ರಯಾಣ ಮಾಡಬಹುದಾದ ತಾಣಗಳಿವೆ. ಆದುದರಿಂದ ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಂಡು ಇಲ್ಲಿಗೆ ಹೊರಡಲು ತಯಾರಾಗಿ

ಮುಂಬೈ

ಮುಂಬೈ

ಮಹಾರಾಷ್ಟ್ರದ ರಾಜಧಾನಿಯಾಗಿರುವ ಮುಂಬೈನ ಬಗ್ಗೆ ಹೆಚ್ಚಿನದೇನು ಹೇಳುವ ಅವಶ್ಯಕತೆಯಿಲ್ಲ ನೀವು ಒಬ್ಬಂಟಿಯಾಗಿ ಮುಂಬೈಗೆ ಪ್ರಯಾಣ ಮಾಡುವುದೇ ಒಂದು ಅಭೂತಪೂರ್ವ ಅನುಭವ. ಲವಣಮಿಶ್ರಿತ ಸಮುದ್ರದ ಗಾಳಿ, ಯಾವಾಗಲೂ ಗಿಜಿಗುಡುತ್ತಿರುವ ಜನಸಂದಣಿ, ಸದಾ ತುಂಬಿರುವ ರೈಲ್ವೆ ನಿಲ್ದಾಣ, ಜೊತೆಗೆ ಸವಿಯಲು ಮತ್ತು ಖರೀದಿಸಲು ಬೇಕಾದಷ್ಟು ಆಯ್ಕೆ, ಈ ಎಲ್ಲಾ ಕಾರಣಕ್ಕಾಗಿ ಮುಂಬೈ ನಗರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಇಲ್ಲಿಯ ಮೆರೀನ್ ಡ್ರೈವ್, ಗೇಟ್ ವೇ ಆಫ್ ಇಂಡಿಯ, ವಸ್ತು ಸಂಗ್ರಹಾಲಯ ಮತ್ತು ಆರ್ಟ್ ಗ್ಯಾಲರಿಗಳಿಗೆ ಅಥವಾ ಅಚ್ಚರಿಯೆನಿಸುವಂತಹ ಖಾವು ಗಲ್ಲಿಗಳು ಅಥವಾ ಪುಡ್ ಸ್ಟ್ರೀಟ್ ಗಳಿಗೆ ಭೇಟಿ ಕೊಡಿ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ಹಾಜೀ ಅಲಿ ಮಸೀದಿ ಮತ್ತು ಮೌಂಟ್ ಮೇರೀ ಚರ್ಚ್ ಗಳಲ್ಲಿ ಶಾಂತಿ ಮತ್ತು ಸರಳತೆಯ ಅನುಭವವನ್ನು ಪಡೆಯಿರಿ

ಔರಂಗಬಾದ್

ಔರಂಗಬಾದ್

ಐತಿಹಾಸಿಕ ನಗರವಾಗಿರುವ ಔರಂಗಬಾದ್ ತನ್ನ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಪ್ರಸಿದ್ದ ಸ್ಮಾರಕವೆಂದರೆ ಬೀಬೀ ಕಾ ಮಕ್ಬರಾ, ಇದು ಆಗ್ರಾದ ಪ್ರಸಿದ್ಧ ತಾಜ್ ಮಹಲ್ ನ ಪ್ರತಿಕೃತಿಯಾಗಿದೆ. ಔರಂಗಬಾದಿನ ಇತರ ಪ್ರವಾಸೀ ಆಕರ್ಷಣೆಗಳೆಂದರೆ ಅಜಂತಾ ಮತ್ತು ಎಲ್ಲೋರಾ ಗುಹೆಗಳು. ಮಹಾರಾಷ್ಟ್ರದಲ್ಲಿಯ ಈ ಕಲ್ಲಿನ ಪ್ರಾಚೀನ ಸ್ಮಾರಕಗಳು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಔರಂಗಬಾದಿನಿಂದ ಸುಮಾರು 140 ಕಿಮೀ ಅಂತರದಲ್ಲಿರುವ ಲೋನಾರ್ ಕ್ರೇಟರ್ ಗೆ ಭೇಟಿ ಕೊಡಬಹುದಾಗಿದೆ ಇದೊಂದು ಬೆರಗು ಗೊಳಿಸುವ ಕುಳಿಯಾಗಿದ್ದು ಹಲವು ದಶಲಕ್ಷ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಉಲ್ಕಾ ಶಿಲೆಯು ಭೂಮಿ ಮೇಲೆ ಬಿದ್ದಾಗ ಈ ರಚನೆ ಯಾಗಿದ್ದು ಇಲ್ಲಿಯ ಸರೋವರವು ನಿರ್ಮಿತವಾಗಿದೆ.

ಪುಣೆ

ಪುಣೆ

PKharote

ಒಬ್ಬಂಟಿಯಾಗಿ ಪ್ರಯಾಣ ಮಾಡಬಹುದಾದ ಮಹಾರಾಷ್ಟ್ರದ ಇನ್ನೊಂದು ದೊಡ್ಡ ಪಟ್ಟಣವೆಂದರೆ ಅದು ಪುಣೆ. ಮುಂಬೈನ ವೇಗ ಗತಿಯ ಜೀವನಕ್ಕೆ ವಿರುದ್ದವಾಗಿ ಪುಣೆಯಲ್ಲಿ ಜೀವನವು ಆರಾಮದಾಯಕ ಮತ್ತು ವಿಶ್ರಾಂತಿದಾಯಕವಾದುದಾಗಿದೆ. ಮಹಾರಾಷ್ಟ್ರದ ಜನರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪುಣೆಯಲ್ಲಿ ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಮರಾಠ ಸಾಮ್ರಾಜ್ಯದ ಕಾಲದಲ್ಲಿಯ ನಗರದಾದ್ಯಂತ ಹರಡಿರುವ ಪುರಾತನ ಕೋಟೆಗಳು ಮತ್ತು ಅರಮನೆಗಳಿಗೆ ಭೇಟಿ ಕೊಡಬಹುದು . ಪೂರ್ವದ ಆಕ್ಸ್ಫರ್ಡ್ ಎಂದು ಹೆಸರಾಗಿರುವ ಈ ನಗರವು ಎಲ್ಲಾ ವೃತ್ತಿಗೆ ಪೂರಕವಾಗಿರುವ ಅನೇಕ ವಿದ್ಯಾ ಸಂಸ್ಥೆಗಳನ್ನು ಹೊಂದಿದೆ. ಪುಣೆಯು ಹೊಸತು ಮತ್ತು ಹಳೆಯ ವಿಚಾರಗಳನ್ನು ಮಾತ್ರವಲ್ಲದೆ ಆಧುನಿಕ ಮತ್ತು ಸಾಂಪ್ರದಾಯಿಕ ಜೀವನ ಶೈಲಿಯನ್ನು ತನ್ನಲ್ಲಿ ಸಮ್ಮಿಲನವಾಗಿಸಿರುವಂತಹ ಒಂದು ಉತ್ತಮವಾದ ಸ್ಥಳವಾಗಿದೆ.

ಮಾಥರಾನ್

ಮಾಥರಾನ್

ಮಾಥರಾನ್ ಮುಂಬೈಗೆ ಹತ್ತಿರದಲ್ಲಿದ್ದು ಮಹಾರಾಷ್ಟ್ರದಲ್ಲಿಯ ಒಂದು ಪ್ರಸಿದ್ದ ಗಿರಿಧಾಮವಾಗಿದೆ. ಇದು ನಗರದ ನಿವಾಸಿಗಳಿಗೆ ಜನಪ್ರಿಯವಾದ ಸ್ಥಳವಾಗಿದೆ ಮತ್ತು ಆಗದೆ ಇರಲು ಸಾಧ್ಯವು ಏಕೆ ಇಲ್ಲ? ಇಲ್ಲಿ ವಾಹನಗಳು ಸಂಪೂರ್ಣವಾಗಿ ನಿಷಿದ್ದವಾಗಿರುವುದರಿಂದ ಅದರ ಅರ್ಥ ಇಲ್ಲಿ ಉತ್ತಮವಾದ ತಾಜತನದಿಂದ ಕೂಡಿದ ಮತ್ತು ಮಾಲಿನ್ಯ ರಹಿತ ಉತ್ತಮ ಗುಣಮಟ್ಟದ ಗಾಳಿಯು ಸಿಗುತ್ತದೆ. ಕರ್ಜಾತ್ ತಲುಪಲು ಮುಂಬೈನಿಂದ ಸ್ಥಳೀಯ ರೈಲಿನಲ್ಲಿ ಪ್ರಯಾಣ ಮಾಡಬಹುದು. ಇಲ್ಲಿಂದ ಗಿರಿಧಾಮವು ಕೇವಲ 20 ಕಿ.ಮೀ ಅಂತರದಲ್ಲಿದೆ.

ಇಲ್ಲಿರುವ ರೋಮಾಂಚಕ ನರಲ್-ಮಾಥೆರಾನ್ ಆಟದ ಟ್ರೈನ್ ನಲ್ಲಿ ನೀವು ಸವಾರಿ ಮಾಡಬಹುದು. ಸಾಹಸಿಗಳು ಇಲ್ಲಿಯ ಮಾಥರಾನ್ ನ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಚಾರಣಕ್ಕೂ ಹೋಗಬಹುದಾಗಿದೆ. ನೀವು ಒಮ್ಮೆ ಬೆಟ್ಟದ ಮೇಲೆ ಹೋದಲ್ಲಿ ನೀವು ಇಲ್ಲಿ ಮನಮೋಹಕ ಹಾಗೂ ಭವ್ಯವಾದ ಪಶ್ಚಿಮಘಟ್ಟಗಳ ಮತ್ತು ಸುತ್ತುವರಿದ ಸೊಂಪಾದ ಕಣಿವೆಗಳ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.

ಆಲಿಭಾಗ್

ಆಲಿಭಾಗ್

Paapu07

ಕರಾವಳಿ ಪಟ್ಟಣವಾದ ಆಲಿಭಾಗ್ ಮುಂಬೈನಲ್ಲಿದೆ ಮತ್ತು ಮುಂಬೈ ವಾಸಿಗಳಿಗೆ ಇದೊಂದು ಅತ್ಯಂತ ಜನಪ್ರಿಯ ವಾರಾಂತ್ಯದ ಭೇಟಿಕೊಡುವ ತಾಣವೆನಿಸಿದೆ . ಅನೇಕ ಬೀಚ್ ಗಳನ್ನು ತನ್ನಲ್ಲಿ ಹೊಂದಿದ್ದು ಜನಪ್ರಿಯ ಬೀಚ್ ಗಳಿಂದ ಹಿಡಿದು ಕಡಿಮೆ ಭೇಟಿ ಕೊಡಲ್ಪಡುವ ಬೀಚ್ ಗಳ ವರೆಗೆ ತನ್ನಲ್ಲಿ ಕಚ್ಚಾವಾದ ಬೀಚ್ ಗಳನ್ನು ಹೊಂದಿರುವ ಆಲಿಭಾಗ್ ಬೀಚ್ ಪ್ರಿಯರಿಗೆ ಒಂದು ಸ್ವರ್ಗವೇ ಸರಿ. ಆಲಿಭಾಗ್ ವರ್ಸೋಲಿ, ಕಾಶಿದ್ ಮತ್ತು ಕಿಹಿಮ್ ಇಲ್ಲಿಯ ಇನ್ನಿತರ ಬೀಚ್‌ಗಳಲ್ಲಿ ಪ್ರಮುಖವಾದವುಗಳಾಗಿವೆ. ಇಲ್ಲಿ 17 ನೇ ಶತಮಾನಕ್ಕೆ ಸಂಬಂಧಿಸಿದ ಕೊಲಬಾ ಕೋಟೆ ಮತ್ತು ಆಕರ್ಷಕ ಮುರುದ್ ಜನ್ಜೀರಾ ಇದನ್ನು ಜಂಜೀರಾ ಜಾಲ್ ದುರ್ಗ್ ಗೆ ಇದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಮುರುದ್ ಎಂಬ ಮೀನುಗಾರಿಕಾ ಗ್ರಾಮದ ದ್ವೀಪದಲ್ಲಿ ಇನ್ನೊಂದು 17ನೇ ಶತಮಾನದ ಕೋಟೆಯಾಗಿದೆ. ಇಲ್ಲಿಗೂ ಕೂಡಾ ಭೇಟಿ ನೀಡಬಹುದಾಗಿದೆ.

ಪಂಚಗಣಿ

ಪಂಚಗಣಿ

ಸತಾರಾ ಜಿಲ್ಲೆಯಲ್ಲಿರುವ ಪಂಚಗಣಿ ಮಹಾರಾಷ್ಟ್ರದ ಇನ್ನೊಂದು ಪ್ರಸಿದ್ದ ಗಿರಿಧಾಮವಾಗಿದೆ. ಇಲ್ಲಿ ಅತ್ಯಂತ ಗಮನಾರ್ಹವಾದ ಅಂಶವೆಂದರೆ ಪಂಚಗಣಿಯು ಒಂದು ಪ್ರಸ್ಥಭೂಮಿಯಾಗಿದ್ದು - ಇದು ದೊಡ್ಡ ಜ್ವಾಲಾಮುಖಿ ಪ್ರಸ್ಥಭೂಮಿಯಾಗಿದೆ. ಈ ಭೂಮಿಯು ಹೇರಳವಾದ ನೈಸರ್ಗಿಕ ಸೌಂದರ್ಯತೆಯಿಂದ ಆಶೀರ್ವದಿಸಲ್ಪಟ್ಟಿದೆ. ಪಂಚಗಣಿ ಎಂದರೆ ಐದು ಬೆಟ್ಟಗಳು ಎಂದರ್ಥ. ಸ್ವಾತಂತ್ರ್ಯಾ ಪೂರ್ವದ ಯುಗದಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಇದು ಬೇಸಿಗೆಯನ್ನು ಕಳೆಯುವ ತಾಣವಾಗಿತ್ತೆನ್ನಲಾಗುತ್ತದೆ. ಪಂಚಗಣಿಯಲ್ಲಿ ವರ್ಷವಿಡೀ ಆಹ್ಲಾದಕರ ಹವಾಮಾನವಿರುತ್ತದೆ. ಇದು ಸ್ಟ್ರಾಬೆರಿ ತೋಟಗಳಿಗೆ ಪ್ರಸಿದ್ದವಾಗಿದೆ. ಇಲ್ಲಿ ಪಶ್ಚಿಮ ಘಟ್ಟಗಳ ಮನಮೋಹಕ ದೃಶ್ಯಗಳನ್ನು ಹೊಂದಿದೆ ಮತ್ತು ಇಲ್ಲಿ ಕೆಲವು ಸಾಹಸಮಯ ಚಟುವಟಿಕೆಗಳಾದ ಪಾರಾಗೈಡ್ಲಿಂಗ್ ಟ್ರಕ್ಕಿಂಗ್ ಇತ್ಯಾದಿಗಳಿಗೆ ಅವಕಾಶವಿದೆ .

ಮಹಾಬಲೇಶ್ವರ್

ಮಹಾಬಲೇಶ್ವರ್

ಸುತ್ತಲೂ ಬೆರಗುಗೊಳಿಸುವಂತಯ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳು ಇವೆಲ್ಲವುಗಳಿಂದ ತುಂಬಿಕೊಂಡಿರುವ ಮಹಾಬಲೇಶ್ವರ್ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಒಂದು ಅತೀ ದೊಡ್ಡ ಗಿರಿಧಾಮವಾಗಿದೆ. ಈ ಜನಪ್ರಿಯ ತಾಣವು ವರ್ಷವಿಡೀ ಪ್ರಯಾಣಿಗರು ಮತ್ತು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಆಹ್ಲಾದಕರ ಹವಾಗುಣ ,ತಾಜಾಗಾಳಿ, ನಯನ ಮನೋಹರ ದೃಶ್ಯಾವಳಿ, ಅಸಂಖ್ಯಾತ ಜಲಪಾತಗಳು ಕಾಡುಗಳು ಇವೆಲ್ಲವನ್ನೂ ಹೊಂದಿರುವ ಮಹಾಬಲೇಶ್ವರ್ ಒಂದು ಅತ್ಯುನ್ನತ ಸ್ಥಳವಾಗಿದ್ದು ನಮ್ಮನ್ನು ನಾವು ವಿಶ್ರಾಂತಿಗೊಳಿಸಿಕೊಳ್ಳಲು ಮತ್ತು ಪ್ರಕೃತಿಯೊಂದಿಗೆ ಬೆರೆಯಲು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಅರ್ತೂರು ಪಾಯಿಂಟ್, ವೆನ್ನಾ ಸರೋವರ, ನೀಡ್ಲ್ ಹೋಲ್ ಪಾಯಿಂಟ್ , ಕೋನ್ಯ ವನ್ಯಜೀವಿ ಧಾಮ ಮತ್ತು ಲಿಂಗಮಾಲ ಜಲಪಾತಕ್ಕೆ ಭೇಟಿ ಕೊಟ್ಟು ಮಹಾಬಲೇಶ್ವರದ ಸಂಪೂರ್ಣ ಸೌಂದರ್ಯತೆಯನ್ನು ಅನುಭವಿಸಿ.

ಸತಾರಾ

ಸತಾರಾ

ಮಹಾರಾಷ್ಟ್ರದ ಕೃಷ್ಣ ಮತ್ತು ವೆನ್ನಾ ನದಿಗಳ ಸಂಗಮಕ್ಕೆ ಹತ್ತಿರದಲ್ಲಿರುವ ಸತಾರಾ ಪುಣೆ ನಗರದಿಂದ 110 ಕಿ.ಮೀ ದೂರದಲ್ಲಿದೆ. ಮರಾಠ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಸತಾರಾ ಐತಿಹಾಸಿಕ ದೃಷ್ಟಿಯಿಂದ ಪ್ರಮುಖ ನಗರವೆನಿಸಿದೆ. ಸತಾರಾ ಎಂದರೆ ಸ್ಥಳೀಯ ಪರಿಭಾಷೆಯಲ್ಲಿ " ಏಳು ಬೆಟ್ಟಗಳು " ಎಂದು ಅರ್ಥೈಸುತ್ತದೆ ಇದು ಈ ನಗರವನ್ನು ಸುತ್ತುವರಿದಿದೆ. ಖಾಸ್ ಪ್ರಸ್ಥಭೂಮಿಯು ಇಲ್ಲಿಯ ಇನ್ನೊಂದು ಭೇಟಿ ಕೊಡಬಹುದಾದ ಪ್ರಮುಖ ಸ್ಥಳವಾಗಿದೆ. ವಿಶ್ವ ನೈಸರ್ಗಿಕ ಪರಂಪರೆ ತಾಣಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಕಾಸ್ ಪ್ರಸ್ಥಭೂಮಿಯು ಮಾನ್ಸೂನ್ ತಿಂಗಳುಗಳಲ್ಲಿ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳಗಳಲ್ಲೊಂದಾಗಿದೆ. ಸಜ್ಜಾಂಗಡ್ ಮತ್ತು ಅಜಿನ್ಕ್ಯಾತಾರಾ ಇವು ಸತಾರಾದಲ್ಲಿರುವಾಗ ಭೇಟಿ ನೀಡಬೇಕಾದ ಇನ್ನಿತರ ಸ್ಥಳಗಳಾಗಿವೆ.

ಲಾವಸ

ಲಾವಸ

ಮುಂಬೈ ಮತ್ತು ಪುಣೆಯ ನಡುವೆ ಇಲ್ಲಿ ಅನೇಕ ನಯನ ಮನೋಹರ ತಾಣಗಳಿವೆ ಇವುಗಳಲ್ಲಿ ಪ್ರಮುಖವಾಹಿನಿಯೆಂದರೆ ಲಾವಾಸಾ ಕೂಡಾ ಒಂದು. ಲಾವಾಸ ಒಂದು ಖಾಸಗಿಯಾಗಿ ಯೋಜಿಸಲ್ಪಟ್ಟ ನಗರವಾಗಿದ್ದು ಈ ನಗರವು ಸುಂದರವಾಗಿ ಮತ್ತು ಒಂದು ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲ್ಪಟ್ಟಿದುದರಿಂದ ಇಲ್ಲಿಗೆ ಭೇಟಿ ಕೊಡಲೇ ಬೇಕಾದುದಾಗಿದೆ. ಇದರ ಸೌಂದರ್ಯತೆ , ನಗರವನ್ನು ನಿರ್ಮಿಸಿದ ರೀತಿ ನೋಡಿದರೆ ಇದು ಇಟಲಿಯ ಪೊರ್ಟೋ ಫಿನೋ ನಗರದಿಂದ ಸ್ಪೂರ್ತಿ ಪಡೆದಂತಿದೆ. ಈ ನಗರದ ಬೀದಿಯಲ್ಲಿ ನಡೆಯುತ್ತಿದ್ದರೆ ಇಟಲಿಯ ನಗರದ ಸುಂದರ ಬೀದಿಯಲ್ಲಿ ನಡೆದ ಅನುಭವವಾಗುತ್ತದೆ ಮತ್ತು ಇಲ್ಲಿಯ ಕಟ್ಟಡಗಳೂ ಕೂಡಾ ಅದೇ ಅನುಭವವನ್ನು ನೀಡುತ್ತದೆ. ನಗರವನ್ನು ಯೋಜಿಸಿರುವ ಹಿನ್ನಲೆ ಬೆರಗುಗೊಳಿಸುತ್ತದೆ ಇಲ್ಲಿ ಬೆಟ್ಟಗಳು, ಕಣಿವೆಗಳು ಮತ್ತು ಸರೋವರಗಳಿಂದ ಕೂಡಿದ ಸುಂದರ ದೃಶ್ಯಗಳಿವೆ.

ನಾಸಿಕ್

ನಾಸಿಕ್

Vineetghare

ಮಹಾರಾಷ್ಟ್ರದ ಗೋದಾವರಿ ನದಿ ದಡದಲ್ಲಿ ಸ್ಥಾಪಿತವಾದ ನಾಸಿಕ್ ದೇಶದ ಒಂದು ಅತ್ಯಂತ ಪ್ರಾಚೀನ ನಗರಗಳಲ್ಲೊಂದಾಗಿದೆ. ನಾಸಿಕ್ ಗೆ ಪ್ರವಾಸ ಮಾಡುವುದೆಂದರೆ ಇದು ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಸ್ಥಳೀಯ ಸಂಪ್ರದಾಯಗಳ ಅನುಭವವನ್ನು ಅನುಭವಿಸುವಂತೆ ಮಾಡುತ್ತದೆ. ಇಲ್ಲಿ ಶತಮಾನಗಳಿಗೂ ಹಳೆಯದಾದ ದೇವಾಲಯಗಳನ್ನು ಭೇಟಿ ಕೊಡಬಹುದಾಗಿದ್ದು ಇವು ಅನೇಕ ಆಸಕ್ತಿದಾಯಕ ಹಿಂದೂ ಪೌರಾಣಿಕ ದಂತ ಕಥೆಗಳನ್ನು ಹೇಳುತ್ತದೆ. ಇದು ನಗರದ ಒಂದು ಮುಖವಾದರೆ ಇನ್ನೊಂದು ಕಡೆಯಲ್ಲಿ ಇದು ಸಂಪೂರ್ಣವಾಗಿ ಆಧುನಿಕತೆಯಿಂದ ಕೂಡಿದೆ. ಪ್ರಸಿದ್ದ ಸೂಲಾ ದ್ರಾಕ್ಷಿತೋಟಗಳು ನಾಸಿಕ್ ನಲ್ಲಿಯೇ ನೆಲೆಸಿದೆ. ದೇಶದ ಅತ್ಯಂತ ದೊಡ್ಡ ಉತ್ಸವಗಳಲ್ಲೊಂದಾದ ಸೂಲ ಉತ್ಸವಕ್ಕೆ ಲಕ್ಷಾಂತರ ಜನರು ಭೇಟಿಕೊಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X