Search
  • Follow NativePlanet
Share
» »ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

By Vijay

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.

ಪವಿತ್ರ ನಾಲ್ಕುಧಾಮಗಳ ಯಾತ್ರೆಗಳೆಂದರೆ ಯಾವುವು?

ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ ಕೇದಾರನಾಥವು ಅತಿ ಭೀಕರವಾದ ನೆರೆಗೆ ಒಳಗಾಗಿತ್ತು.

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಚಿತ್ರಕೃಪೆ: wikipedia

ಕೇದಾರನಾಥ ಪಟ್ಟಣದ ಅನೇಕ ಕಟ್ಟಡಗಳು ಹಾಗೂ ಇತರೆ ರಚನೆಗಳಿಗೆ ಸಿಕ್ಕಾಪಟೆ ಹಾನಿ ಉಂಟಾದರೂ ಕೇದಾರನಾಥ ದೇವಾಲಯಕ್ಕೆ ಅಷ್ಟೊಂದು ಹೇಳಿಕೊಳ್ಳುವ ಹಾನಿಯಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎತ್ತರದ ಪರ್ವತದಿಂದ ಹರಿದು ಬರುತ್ತಿದ್ದ ರಭಸದ ಜಲಧಾರೆಗೆ ದೊಡ್ಡದಾದ ಬಂಡೆಯೊಂದು ಅಡ್ಡ ನಿಂತು ದೇವಾಲಯಕ್ಕೆ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.

ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೆಲ ಪಂಡಿತರು ಹೇಳುವ ಪ್ರಕಾರ, ಸಾಕ್ಷಾತ್ ಶಿವನೆ ಇಲ್ಲಿ ಕೇದಾರ ಖಂಡದ ಅಧಿದೇವನಾಗಿ ನೆಲೆಸಿರುವುದರಿಂದ ಮುಂದೆಯೂ ಈ ದೇವಾಲಯಕ್ಕೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವಂತೆ. 2013 ರಲ್ಲಿ ಇಲ್ಲಿ ಪ್ರವಾಹ ಜರುಗಿದ ನಂತರ ಸಾಕಷ್ಟು ಹಾನಿಯುಂಟಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಅಸು ನಿಗಿದ್ದರು. ಹೀಗಾಗಿ ದೇವಾಲಯ ಮರು ನಿರ್ಮಾಣದ ಕೂಗೆದ್ದಿತ್ತು.

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಚಿತ್ರಕೃಪೆ: Naresh Balakrishnan

ಆದರೆ ಶಸ್ತ್ರಜ್ಞರು, ಪಂಡಿತರು, ವಿದ್ವಾಂಸರು ಹೇಳುವಂತೆ ಇಲ್ಲಿ ಈಗಾಗಲೆ ಸಾಕಷ್ಟು ದೇಹಗಳು ಭೂಮಿಯಲ್ಲಿ ಹಾಗೆಯೆ ಹೂತು ಹೋಗಿರುವುದರಿಂದ ನಕಾರಾತ್ಮಕ ಶಕ್ತಿಯು ಸಾಕಷ್ಟಿದ್ದು ಮೊದಲು ಪ್ರತಿ ಕಳೆಬರವನ್ನು ತೆಗೆದು ನಂತರ ಸ್ಥಳವನ್ನು ಶುದ್ಧಗೊಳಿಸಿ ನಂತರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಾಲಯದ ಮರು ನಿರ್ಮಾಣದ ಕಾರ್ಯ ಕೈಗೊಳ್ಳಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ.

ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ

ಇನ್ನು ಈ ಸ್ಥಳಕ್ಕೆ ಸಂಬಂಧಿಸಿದಂತೆ ಕಥೆ ಏನೆಂದರೆ, ಹಿಂದೆ ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಶಿವನನ್ನು ದರ್ಶಿಸಿ ತಮ್ಮ ಮೇಲೆ ಬಂದೊದಗಿರುವ ಹತ್ಯಾ ಪಾಪಗಳಿಂದ ಮುಕ್ತರಾಗಬೇಕೆಂದು ಬಯಸಿದ್ದರು ಹಾಗೂ ಆ ಕಾರ್ಯದ ನಿಮಿತ್ತ ಕಾಶಿಗೆ ತೆರಳಿದ್ದರು. ಇದನ್ನರಿತ ಶಿವ ಅವರಿಗೆ ಕಾಣದ ಎತ್ತಿನ ವೇಶದಲ್ಲಿ ಉತ್ತರಾಖಂಡದ ಸ್ಥಳಕ್ಕೆ ತೆರಳಿದ್ದ.

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಚಿತ್ರಕೃಪೆ: Kmishra19

ಈ ವಿಷಯ ತಿಳಿದುಕೊಂಡ ಪಾಂಡವರು ತಮ್ಮ ಪ್ರಯತ್ನ ಬಿಡದೆ ಉತ್ತರಾಖಂದ ಆ ಸ್ಥಳಕ್ಕೆ ತೆರಳಿ ಕಾಶಿಯಿಂದ ಬಂದ ಮಾರು ವೇಶದ ಶಿವನನ್ನು ಎತ್ತಿನ ರುಪದಲ್ಲಿರುವುದನ್ನು ಗಮನಿಸಿದರು. ಹೀಗೆ ಈ ಎತ್ತು ಕಂಡ ಸ್ಥಳವು ಗುಪ್ತಕಾಶಿಯಾಯಿತು. ನಂತರ ಅವರು ಶಿವನನ್ನು ಮೆಚ್ಚಿಸಿ ಅವನ ಆಶೀರ್ವಾದ ಪಡೆದು ಮೋಕ್ಷ ಹೊಂದಿದರು.

ಇದಕ್ಕೆ ಸಂಕೇತವಾಗಿಯೆ ಇಲ್ಲಿ ತ್ರಿಕೋನಾಕಾರದ ಶಿವಲಿಂಗನನ್ನು ಕೇದಾರನಾಥನಾಗಿ ಪೂಜಿಸಲಾಗುತ್ತದೆ. ಈ ಸ್ಥಳದ ಮಹಿಮೆಯೆಂದರೆ ಯಾರು ಈ ಶಿವನನ್ನು ಭಕ್ತಿಯಿಂದ ಪೂಜಿಸುವರೊ ಅವರ ಎಲ್ಲ ಕರ್ಮಗಳು ಬಿಳುಚಿಕೊಂಡು ನಂತರ ಅವರು ತೀರಿ ಹೋದ ಮೇಲೆ ಕೈಲಾಸವನ್ನು ಸೇರುತ್ತಾರೆಂಬ ಪ್ರತೀತಿಯಿದೆ.

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಚಿತ್ರಕೃಪೆ: anurupa_chowdhury

ಕೇದಾರನಾಥಕ್ಕೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗಿನ ಸಮಯ ಅನುಕೂಲ ಎನ್ನಬಹುದು. ಆದರೂ ಮಳೆಯ ಮುನ್ಸೂಚನೆಗಳನ್ನು ಆಧರಿಸಿ ಪ್ರವಾಸ ಯೋಜಿಸಿದರೆ ಉತ್ತಮ. ಮಂದಾಕಿನಿ ತಟದಲ್ಲಿರುವ ಕೇದಾರನಾಥಿಗೆ ರಸ್ತೆ ಮಾರ್ಗದಿಂದ ಹೋಗಬಹುದಾದರೂ ಕೊನೆಯ 14 ಕಿ.ಮೀ ಚಾರಣದ ಮೂಲಕವೆ ಪ್ರವೇಶಿಸಬೇಕು. ಏಕೆಂದರೆ ಅಷ್ಟೊಂದು ಕಠೋರವಾಗಿದೆ ಇಲ್ಲಿನ ಭೂಪ್ರದೇಶಗಳು.

ಉತ್ತರಾಖಂಡದ ಪ್ರಭಾವಶಾಲಿ ದೇವಾಲಯಗಳು

ಮುಂದೆ ಚಳಿಗಾಲದ ಸಮಯದಲ್ಲಿ ಇಲ್ಲಿ ವಿಪರಿತವಾದ ಹವಾಮಾನವಿರುತ್ತದೆ. ಎಲ್ಲ ಸ್ಥಳಗಳು ಮಂಜುಗಟ್ಟಿರುತ್ತವೆ ಹಾಗೂ ಈ ಸಂದರ್ಭದಲ್ಲಿ ಯಾವುದೆ ರಸ್ತೆ ಮಾರ್ಗಗಳು ಗೋಚರಿಸುವುದಿಲ್ಲ. ಈ ಆರು ತಿಂಗಳುಗಳ ಕಾಲ ಕೇದಾರನಥ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳನ್ನು ಉಖಿಮಠದಲ್ಲಿ ತಂದಿರಿಸಿ ಪೂಜಿಸಲಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more