• Follow NativePlanet
Share
» »ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

Written By:

ಗಂಗಾನದಿಯ ನಂತರ ಪವಿತ್ರವಾದ ನದಿ ಎಂದು ಭಾವಿಸುವ ನದಿಯೇ ಕಾವೇರಿ. ಹಾಗಾಗಿಯೇ ಕಾವೇರಿಯನ್ನು ದಕ್ಷಿಣ ಗಂಗೆ ಎಂದು ಕರೆಯುತ್ತಾರೆ. ದೇವಗುರುವಾದ ಬೃಹಸ್ಪತಿ ತುಲಾರಾಶಿಯಲ್ಲಿ ಪ್ರವೇಶವಾದ್ದರಿಂದ ಕಾವೇರಿ ನದಿಗೆ ಪುಪ್ಕರವು ಪ್ರಾರಂಭವಾಗುತ್ತದೆ. ತಮಿಳುನಾಡು, ಕರ್ನಾಟಕ ರಾಜ್ಯದ ಪ್ರಜೆಗಳು ಕಾವೇರಿ ಪುಷ್ಕರದಲ್ಲಿ ಪುಣ್ಯ ಸ್ನಾನವನ್ನು ಆಚರಿಸಿ ಪುನೀತರಾಗುತ್ತಾರೆ. ನರ್ಮದಾ ನದಿ ತೀರದಲ್ಲಿ ತಪಸ್ಸು, ಕುರುಕ್ಷೇತ್ರದಲ್ಲಿ ದಾನ, ಕಾಶಿಕ್ಷೇತ್ರದಲ್ಲಿ ಮರಣಿಸುವುದರಿಂದ ಉಂಟಾಗುವ ಫಲವು ಕೇವಲ ಪುಷ್ಕರದಲ್ಲಿ ಸ್ನಾನ ಮಾಡುವುದರಿಂದ ಉಂಟಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಎಲ್ಲಿ ಹುಟ್ಟಿತು?
ಪೂರ್ವದಲ್ಲಿ ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಕಾವೇರು ಎಂಬ ರಾಜನು ಇದ್ದನಂತೆ. ಆತನಿಗೆ ಮಕ್ಕಳು ಇಲ್ಲದೇ ಇದ್ದುದ್ದರಿಂದ ಬ್ರಹ್ಮನ ಬಗ್ಗೆ ತಪಸ್ಸು ಮಾಡಿದನು. ಬ್ರಹ್ಮನು ಆತನ ತಪಸ್ಸಿಗೆ ಮೆಚ್ಚಿ, ಒಂದು ಮುದ್ದಾದ ಮಗುವನ್ನು ಪ್ರಸಾದಿಸುತ್ತಾನೆ. ಕಾವೇರಿ ಎಂಬ ಹೆಸರನ್ನು ಇಟ್ಟು ಅತ್ಯಂತ ಮುದ್ದಾಗಿ ಆ ಮಗುವನ್ನು ಸಾಕುತ್ತಾನೆ.

pc: Rayabhari


ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಆ ಮಗುವಿಗೆ ಯವ್ವನ ಬಂದ ತಕ್ಷಣ ಆಕೆಯನ್ನು ಆಗಸ್ತ್ಯ ಮಹರ್ಷಿ ಬಂದು ವಿವಾಹವನ್ನು ಮಾಡಿಕೊಳ್ಳುತ್ತಾನೆ. ವಿವಾಹ ಸಮಯದಲ್ಲಿ ತನನ್ನು ಎಂದಿಗೂ ಬಿಟ್ಟು ಒಂಟಿಯಾಗಿ ಇರಬಾರದು ಎಂದು ಅಗಸ್ತ್ಯನಿಗೆ ಕೋರಿಕೊಳ್ಳುತ್ತಾಳೆ ಕಾವೇರಿ. ಅದಕ್ಕೆ ಅಂಗೀಕರ ಮಾಡಿದ ಅಗಸ್ತ್ಯನು ಒಂದು ದಿನ ತನ್ನ ಶಿಷ್ಯರಿಗೆ ತತ್ತ್ವಶಾಸ್ತ್ರ ರಹಸ್ಯಗಳನ್ನು ಬೋಧಿಸುವ ಸಲುವಾಗಿ ಶಿಷ್ಯರನ್ನು ದೂರವಾಗಿ ಕರೆದುಕೊಂಡು ಹೋಗಿ ಪಾಠವನ್ನು ಹೇಳಿಕೊಡುತ್ತಾನೆ.

pc:Mr.S.Koilraj

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಪತಿ ತನ್ನನ್ನು ಬಿಟ್ಟು ಹೋಗಿದ್ದರಿಂದ ಕಾವೇರಿಯು ಕೋಪದಿಂದ ಒಂದು ನದಿಯಲ್ಲಿ ಧುಮುತ್ತಾಳೆ. ಆದರೆ, ಆಕೆಯು ಬ್ರಹ್ಮನ ಪ್ರಸಾದವಾದ್ದರಿಂದ ಮರಣ ಹೊಂದುವುದಕ್ಕಿಂತ ಮುಂಚೆ ನದಿಯಾಗಿ ಮಾರ್ಪಟಾಗಿ ಬ್ರಹ್ಮಗಿರಿ ಪರ್ವತದ ಮೇಲೆ ಪ್ರವಹಿಸುತ್ತಾ ಸಾಗಿದಳು.

pc:Rsrikanth05


ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಆಕೆಯೇ ಕಾವೇರಿ ನದಿಯಾಗಿ ಪ್ರಸಿದ್ಧಿ ಹೊಂದಿದಳು. ಮತ್ತೊಂದು ಕಥೆ ಏನೆಂದರೆ ತನ್ನನ್ನು ಬಿಟ್ಟು ಇರುವುದಕ್ಕೆ ಆಗಲ್ಲ ಎಂದು ಹೇಳಿದ್ದ ಪತ್ನಿಯನ್ನು ಮನ್ನಿಸಿದ ಅಗಸ್ತ್ಯನು ಆಕೆಯನ್ನು ಜಲರೂಪದಲ್ಲಿ ಮಾರ್ಪಟು ಮಾಡಿ ತನ್ನ ಕಮಂಡದಲ್ಲಿ ಇಟ್ಟುಕೊಂಡು ಯಾವಾಗಲೂ ತನ್ನ ಹತ್ತಿರವೇ ಇರಿಸಿಕೊಂಡಿದ್ದನು ಎಂದು ಹೇಳಲಾಗುತ್ತದೆ.

pc:Ranjithkumar.i

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಆದರೆ, ಒಮ್ಮೆ ಈ ಪ್ರದೇಶದಲ್ಲಿ ಅತ್ಯಂತ ಕ್ಷಾಮವು ಬಂದಿತು. ಮಳೆಯೇ ಇಲ್ಲದೇ ಜಲಾಶಯವೆಲ್ಲಾ ಆವಿಯಾಯಿತು. ಬೆಳೆಗಳು ಬೆಳೆಯದೆ ಪ್ರಜೆಗಳು ವಿಘ್ನೇಶ್ವರನನ್ನು ಪ್ರಾರ್ಥಿಸಿದರು. ವಿನಾಯಕನು ಹಸುವಿನ ರೂಪದಲ್ಲಿ ಆಗಸ್ತ್ಯನ ಹತ್ತಿರ ಬಂದು, ಹುಲ್ಲನ್ನು ತಿನ್ನುವ ಹಾಗೆ ಮಾಡಿ ಕಮಂಡಲವನ್ನು ಕೆಳಗೆ ಬೀಳುವ ಹಾಗೆ ಮಾಡಿದನು.

pc:Arunankapilan

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಅದರಿಂದ ಕಾವೇರಿ ಸ್ವಲ್ಪ ನದಿರೂಪವಾಗಿ ಅಲ್ಲಿಂದ ತನ್ನ ಹುಟ್ಟಿದ ಸ್ಥಳವಾದ ಬ್ರಹ್ಮಗಿರಿಯವರೆವಿಗೂ ಪ್ರವಹಿಸಿದಳು. ಅದರಿಂದ ಆಯಾ ಪ್ರದೇಶವೆಲ್ಲಾ ಸಸ್ಯಶ್ಯಾಮಲವಾಯಿತು. ಕರ್ನಾಟಕದಲ್ಲಿನ ಪಶ್ಚಿಮದಲ್ಲಿರುವ ಕೊಡಗು ಜಿಲ್ಲೆಯಲ್ಲಿನ ತಲಾಕಾವೇರಿ ಎಂಬ ಪ್ರದೇಶದಲ್ಲಿ ಹುಟ್ಟಿ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಪ್ರವಹಿಸುತ್ತದೆ. ಹೇಮಾವತಿ, ಷಿಂಷಾ, ಆರ್ಕಾವತಿ, ಕುಂಬಿನಿ, ಭವಾನಿ, ನೋಯ್ಯಲ್, ಅಮರಾವತಿ ನದಿಗಳು ಕಾವೇರಿಯ ಉಪನದಿಗಳು.

pc:Ssriram mt


ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ತಲಕಾವೇರಿ, ಕುಷಲ್ ನಗರ, ಶ್ರೀರಂಗಪಟ್ಟಣ, ಭವಾನಿ, ನಮ್ಮಕ್ಕಳ್, ತಿರುಚಿರಾಪಲ್ಲಿ, ಕುಂಭಕೋಣಂ, ಮಾಯಾವರಂ ನಗರಗಳಲ್ಲಿ ಪ್ರವಹಿಸುತ್ತದೆ. ಕಾವೇರಿ ನದಿ ಪ್ರಕೃತಿ ನೀಡಿರುವ ಒಂದು ವರ ಪ್ರಸಾದವೇ ಸರಿ.

pc:EnforcerOffice

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಮೈಸೂರಿನ ಹುಲಿ ಟಿಪ್ಪುಸುಲ್ತಾನನ ರಾಜಧಾನಿಯಾದ ಶ್ರೀರಂಗಪಟ್ಟಣವು ಕಾವೇರಿ ನದಿ ತೀರದಲ್ಲಿಯೇ ಇದೆ. ತಮಿಳುನಾಡಿನಲ್ಲಿನ ಸುಪ್ರಸಿದ್ಧವಾದ ಪುಣ್ಯಕ್ಷೇತ್ರವಾದ ಶ್ರೀರಂಗ, ಕೊಂಭಕೋಣಂ ಸೌಂದರ್ಯಕ್ಕೆ ನಿಲಯವಾದ ಬೃಂದಾವನ ಗಾರ್ಡನ್ಸ್ ಕೂಡ ಕಾವೇರಿ ತೀರದಲ್ಲಿಯೇ ಇದೆ.

pc: Dr Ajay Balachandran


ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಚೆನ್ನ ಕೇಶವ ಸ್ವಾಮಿ ದೇವಾಲಯ
12 ನೇ ಶತಮಾನದಲ್ಲಿ ಹೊಯ್ಸಳ ರಾಜರ ಕಾಲಕ್ಕೆ ಸಂಬಂಧಿಸಿದ ಈ ದೇವಾಲಯದ ನಿರ್ಮಾಣವು ತನ್ನದೇ ಆದ ಶಿಲ್ಪಕಲಾ ಚಾರ್ತುಯ ಅಪರೂಪವಾದುದು. ಮೂರನೇ ನರಸಿಂಹ ವರ್ಮ ನಿರ್ಮಾಣ ಮಾಡಿದ ಈ ದೇವಾಲಯವು ಕಾವೇರಿ ಪುಷ್ಕರ ಸ್ನಾನ ಭಕ್ತರಿಗೆ ಆಕರ್ಷಿಸುತ್ತದೆ.

pc:Rsmn

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಭಗಮಂಡಲ ದೇವಾಲಯ
ಕರ್ನಾಟಕದಲ್ಲಿನ ಭಗಮಂಡಲದಲ್ಲಿನ ಈ ದೇವಾಲಯ ಭಗಂದ ಮಹರ್ಷಿಯ ಹೆಸರು ಮೇಲೆ ನೆಲೆಸಿದೆ. ಭಗಮಂಡಲದಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪುಣ್ಯಪ್ರಧಾನವಾದುದು ಎಂಬುದು ಭಕ್ತರ ನಂಬಿಕೆಯಾಗಿದೆ.

pc:வணக்கம்

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ವಿಶ್ವೇಶ್ವರಾಲಯ, ಕರ್ನಾಟಕ
8 ನೇ ಶತಮಾನದಲ್ಲಿ ಚಾಳುಕ್ಯರ ಶಿಲ್ಪಕಲಾ ಶೈಲಿಯಿಂದ ನಿರ್ಮಾಣ ಮಾಡಿದ ಈ ದೇವಾಲಯ ಅತ್ಯಂತ ಪುರಾತನವಾದುದು. ಶ್ರೀ ರಂಗ ಪಟ್ಟಣದಲ್ಲಿನ ಶ್ರೀ ರಂಗನಾಥಸ್ವಾಮಿ ದೇವಾಲಯ, ಸೋಮನಾಥಪುರದಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ ಕೂಡ ತಪ್ಪದೇ ಭೇಟಿ ನೀಡಿ ಬನ್ನಿ.

pc:Ssriram mt

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಮೊದಲು ಪುಷ್ಕರ ನದಿಗೆ ಪ್ರಾರ್ಥನೆ ಮಾಡಿ ತೀರದಲ್ಲಿ ಇದ್ದು, ಮಣ್ಣನ್ನು ಮೂರು ಬಾರಿ ನೀರಿನಲ್ಲಿ ಹಾಕಿ ತದನಂತರ ಸಂಕಲ್ಪ ಮಾಡಿಕೊಂಡು ಪುಷ್ಕರದಲ್ಲಿ ಸ್ನಾನ ಮಾಡಬೇಕು. ಪಿತೃದೇವತೆಗಳಿಗೆ ತರ್ಪಣ ಮಾಡುತ್ತಾರೆ.

pc:Rsmn

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತ?

ಹಾಗೆಯೇ ಪ್ರವಾಹಕ್ಕೆ ಅಭಿಮುಖವಾಗಿ ಸ್ನಾನ ಮಾಡಬೇಕು. ಪುಷ್ಕರ ಯಾತ್ರೆ ಮಾಡಿದವರಿಗೆ, ನದಿ ಪೂಜೆಗಳು ನಿರ್ವಹಿಸಿದವರಿಗೆ ವ್ಯಾಧಿಗಳು, ಪಾಪಗಳು ತೊಲಗಿ, ಧೀರ್ಘಾ ಆಯುಷ್ಯ ಲಭಿಸುತ್ತದೆ ಎಂದು ಪುರಾಣ ಕಥೆ ಕೂಡ ಇದೆ.

pc:Aravind Sivaraj


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ