Search
  • Follow NativePlanet
Share
» »ಛತ್ರಪತಿ ಶಿವಾಜಿ ಟರ್ಮಿನಸ್‌ನ ಒಳಗೆ ಹೇಗಿದೆ ಒಮ್ಮೆ ನೋಡಿ

ಛತ್ರಪತಿ ಶಿವಾಜಿ ಟರ್ಮಿನಸ್‌ನ ಒಳಗೆ ಹೇಗಿದೆ ಒಮ್ಮೆ ನೋಡಿ

By Manjula Balaraj Tantry

ಈ ಹಿಂದೆ ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲ್ಪಡುತ್ತಿದ್ದ ಈ ಕಟ್ಟಡ, ಈಗ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ಎಂದು ಕರೆಯಲಾಗುತ್ತಿದ್ದು ಯುನೆಸ್ಕೋ ಪಾರಂಪರಿಕ ಕಟ್ಟಡ ಎಂದು 2004ರಲ್ಲಿ ಘೋಷಿತವಾಯಿತು. ಜೊತೆಗೆ, ಇದು ವಿಶ್ವದ ಅತ್ಯಂತ ಸುಂದರ ರೈಲ್ವೆ ಸ್ಟೇಷನ್ ಗಳಲ್ಲೊಂದು.

1. ಗೋಥಿಕ್ ಶೈಲಿಯ ವಾಸ್ತು ಶಿಲ್ಪ

1. ಗೋಥಿಕ್ ಶೈಲಿಯ ವಾಸ್ತು ಶಿಲ್ಪ

Nanasur

19ನೇ ಶತಮಾನದ ಆಸು ಪಾಸಿನಲ್ಲಿ ಈ ಟರ್ಮಿನಸ್ ನ ರಚನೆಯನ್ನು ಗೋಥಿಕ್ ಶೈಲಿಯಲ್ಲಿ ಯೋಜನೆಯನ್ನು ಚಿತ್ರೀಕರಿಸಲಾಯಿತು. ಆ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಚರ್ಚೆಯ ಮುಖ್ಯವಿಷಯವೆಂದರೆ ಈ ಕಟ್ಟಡದ ವಾಸ್ತುಶಿಲ್ಪ ಶೈಲಿಯ ಬಗ್ಗೆ ಆಗಿತ್ತು. ಆ ಸಮಯದ ಕೈಗಾರಿಕಾ ಕ್ರಾಂತಿಯು ಒಂದು ಹಂತದಲ್ಲಿ ಉತ್ಕರ್ಷಗೊಂಡಿದ್ದರೂ, ವಿನ್ಯಾಸಗಳು ಮತ್ತು ಶೈಲಿಗಳು ಬಹಳ ಆಕರ್ಷಕವಾಗಿರಲಿಲ್ಲ. ಆರಂಭಿಕ ಹಂತದಲ್ಲಿ, ಕೈಗಾರಿಕಾ ಕ್ರಾಂತಿಯು ಇಂಗ್ಲೆಂಡಿನ ದೃಶ್ಯಕ್ಕೆ ಒಂದು ದುರಾದೃಷ್ಟವೆನ್ನುವಂತೆ ಪರಿಗಣಿಸಲ್ಪಟ್ಟಿತ್ತು. ಯೋಜನೆಯು ಭವ್ಯವಾದ ಮತ್ತು ನಿರಂತರವಾಗಿ ಕಟ್ಟಡಗಳನ್ನು ನಿರ್ಮಿಸುವುದು ಆಗಿತ್ತು. ವಿನ್ಯಾಸಕಾರರು ಇಂಗ್ಲೆಂಡಿನ ಮಹಾ ಚರ್ಚುಗಳ ಶೈಲಿಯಲ್ಲಿ ಅಚ್ಚೊತ್ತಲು ನಿರ್ಧರಿಸಿದರು. ಹೀಗಾಗಿ ವಿಕ್ಟೋರಿಯಾ ಟರ್ಮಿನಸ್ ಗಾಗಿ ಗೋಥಿಕ್ ಶೈಲಿಯ ವಾಸ್ತು ಶಿಲ್ಪವನ್ನು ಆರಿಸಿದರು. ಗೋಥಿಕ್ ಶೈಲಿಯ ಸಮನಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ರಚನೆಯು ಈ ಶೈಲಿಗೆ ಒಂದು ಪ್ರಮುಖವಾದ ಉದಾಹರಣೆಯಾಗಿದೆ. ಈ ಟರ್ಮಿನಸ್ ಅನ್ನು 1878 ರಿಂದ 10 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಯಿತು.

ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

2. ಕ್ಯಾಥೆಡ್ರಲ್

2. ಕ್ಯಾಥೆಡ್ರಲ್

Ram Vidhya Sagar

ಇದನ್ನು ಬ್ರಿಟಿಷರ ಅತ್ಯಂತ ಹೆಸರಾಂತ ವಾಸ್ತುಶಿಲ್ಪಿ ಎಫ್ ಡಬ್ಲು. ಸ್ಟೀವನ್ಸ್ ಅವರಿಂದ ವಿನ್ಯಾಸಗೊಳಿಸಲಾಗಿದೆ. ಈ ರಚನೆಯು ಅನೇಕ ಗೋಥಿಕ್ ಅಂಶಗಳನ್ನು ಒಳಗೊಂಡ ಭಾರತೀಯ ವಿನ್ಯಾಸದಲ್ಲಿದೆ. ಸಿ ಎಸ್ ಟಿ ಯಲ್ಲಿರುವ ಯಲ್ಲಿರುವ ಎತ್ತರವಾದ ಧುವಗಳಲ್ಲಿರುವ ಗಾರ್ಗೋಯಿಲ್ ಗಳು ಮುಂಗಾರು ಮಳೆಯ ಸಮಯದಲ್ಲಿ ನೀರನ್ನು ಹೊರ ಹಾಕಲು ಸಹಾಯ ಮಾಡುತ್ತವೆ. ಈ ರಚನೆಯು ಗೋಡೆಗಳಿಂದ ಹೊರಕ್ಕೆ ಚಾಚಿರುವ ಪ್ರಾಣಿಗಳ ಕೆತ್ತನೆಯ ಸಂಗ್ರಹವಿದೆ. ಕ್ಯಾಥೆಡ್ರಲ್ ಒಳಭಾಗವನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿ ಹೊರಗಿನ ಪ್ರಪಂಚದ ದುಷ್ಟಗಳಿಂದ ಸಂಪೂರ್ಣವಾಗಿ ತೆಗೆದುಹಾಕಲ್ಪಟ್ಟಿದೆ. ವಿಲಕ್ಷಣ ಕಲ್ಲಿನ ಜೀವಿಗಳು ಚರ್ಚ್ ನ ಪ್ರವೇಶದ್ವಾರದಲ್ಲಿರುವುದು ಶುದ್ದೀಕರಣದ ಎಚ್ಚರಿಕೆಯಾಗಿದ್ದು ಈ ಪವಿತ್ರ ನೆಲದೊಳಗೆ ಪ್ರವೇಶಿಸುವ ಮೊದಲು ಸಿದ್ದ ಪಡಿಸುವ ಸಂಕೇತವಾಗಿದೆ.

3. ಪೆನಿನ್ಸುಲಾ ರೈಲ್ವೇ ಲಾಂಛನ

3. ಪೆನಿನ್ಸುಲಾ ರೈಲ್ವೇ ಲಾಂಛನ

Karthik Nadar

ಪೂರ್ವ ಮತ್ತು ಪಶ್ಚಿಮಗಳು ಸೇರುವಲ್ಲಿ ನಮಗೆ ರೈಲು ಗಳಲ್ಲಿ ಪ್ರವೇಶಿಸುವ ಮೊದಲು ಟರ್ಮಿನಸ್ ನಲ್ಲಿ ಮುಂಗಡವಾಗಿ ಟಿಕೆಟ್ ಖರೀದಿಸಲು ಕೌಂಟರ್ ನಲ್ಲಿ ಸಾಲಾಗಿ ನಿಲ್ಲಬೇಕು. ಟಿಕೆಟ್ ಪಡೆಯುವಾಗ ನಾವೊಂದು ಜಗತ್ತಿನ ಅತೀ ಸುಂದರವಾದ ಸ್ಥಳದಲ್ಲಿದ್ದೇವೆ ಎಂಬುದನ್ನು ಯಾವಾಗಲೂ ಮರೆಯುತ್ತೇವೆ. ಕೆಲವು ಕ್ಷಣ, ನಾವು ಮರದಿಂದ ಮುಚ್ಚಲ್ಪಟ್ಟ ಹಾಗೂ ಹೊಂಬಣ್ಣದ ನಕ್ಷತ್ರಗಳನ್ನು ನೀಲಿ ಬಣ್ಣದ ಮೇಲೆ ಬರೆಯಲಾದ ಮೇಲ್ಚಾವಣಿಗಳ ಅಡಿಯಲ್ಲಿ ನಿಲ್ಲುತ್ತೇವೆ. ಬಲಭಾಗದಲ್ಲಿ, ಕಮಾನಿನ ಪ್ರವೇಶದ್ವಾರದ ಮೇಲಿರುವ ಅನೇಕ ಶಿಖರಗಳು(ಕ್ರೆಸ್ಟ್) ಭವ್ಯ ಭಾರತದ ಪೆನಿನ್ಸುಲಾ ರೈಲ್ವೇ ಲಾಂಛನವನ್ನು ಒಳಗೊಂಡಿರುತ್ತವೆ, ಇದು ಅಮೃತಶಿಲೆಯ ಸ್ತಂಭಗಳಿಂದ ಮತ್ತು ಸುಂದರವಾಗಿ ಕೆತ್ತಿದ ಕಲ್ಲಿನ ಕಮಾನುಗಳಿಂದ ಆವೃತವಾಗಿದೆ. ಟಿಕೆಟ್ ಕೌಂಟರ್ಗಳ ಮೇಲೆ ಇರುವ ಚೇಂಬರ್ ನ ಗ್ಯಾಲರಿಯು ಬಹುಕಾಂತೀಯ ಮಿಂಟನ್ ಟೈಲ್ ನಿಂದ ಕೂಡಿರುವ ಮಹಡಿಗಳಾಗಿವೆ.

4. ಪ್ರವೇಶ ದ್ವಾರದಲ್ಲಿ ದೈತ್ಯಾಕಾರದ ಹುಲಿ ಇದೆ

4. ಪ್ರವೇಶ ದ್ವಾರದಲ್ಲಿ ದೈತ್ಯಾಕಾರದ ಹುಲಿ ಇದೆ

Av9

ಈ ಟರ್ಮಿನಸ್ ಅನ್ನು ಹತ್ತಿರದಿಂದ ನೋಡಿದರೆ ಇಲ್ಲಿ ಅನೇಕ ಭಾರತೀಯ ವಿಷಯಗಳ ಪೂರ್ಣ ಪ್ರಮಾಣದ ಮಾಹಿತಿ ದೊರೆಯುತ್ತದೆ. ಇದು ನವಿಲುಗಳ ಗರಿಗಳಿಂದ ಕೆಳಗೆ ಹರಿಯಲ್ಪಟ್ಟು ಅದರಲ್ಲಿ ಕೆಳಗೆ ದೇಶದ ಸಸ್ಯ ಮತ್ತು ಪ್ರಾಣಿಗಳ ಒಂದು ನೋಟವನ್ನು ನೀಡುತ್ತದೆ. ಮತ್ತು ಕಟ್ಟಡದ ಮುಖ್ಯ ಪ್ರವೇಶ ದ್ವಾರದಲ್ಲಿ ಕಾವಲುಗಾರರಂತೆ ಕಾಣಿಸುವ ದೈತ್ಯಾಕಾರದ ಹುಲಿಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬಾರದು . ಸ್ಟೀವನ್ ತಮ್ಮ ವಿನ್ಯಾಸದಲ್ಲಿ ಭಾರತೀಯ ಅಂಶಗಳನ್ನು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಅಂಗೀಕರಿಸಿದ್ದು ಮಾತ್ರವಲ್ಲದೆ ಇಲ್ಲಿ ಧಾರ್ಮಿಕ ಚಿತ್ರಣಗಳನ್ನೂ ತುಂಬಿಸಿದ್ದಾರೆ. ಗೋಥಿಕ್ ವಾಸ್ತುಶಿಲ್ಪದ ಧಾರ್ಮಿಕ ಚಿತ್ರಣವನ್ನು ಸಾಮಾನ್ಯವಾಗಿ ಚರ್ಚ್ ಗಳಲ್ಲಿ ಕಾಣಬಹುದು ಆದರೆ ಟರ್ಮಿನಸ್ ಜಾತ್ಯಾತೀತ ವಾದುದರಿಂದ ಇಲ್ಲಿಯೂ ಈ ರಚನೆಯನ್ನು ಅಳವಡಿಸಲಾಗಿದೆ.

5. ಅಷ್ಟಭುಜಾಕೃತಿಯ ಗುಮ್ಮಟ

5. ಅಷ್ಟಭುಜಾಕೃತಿಯ ಗುಮ್ಮಟ

Avinash Anand

ಅಷ್ಟಭುಜಾಕೃತಿಯ-ಚಪ್ಪಡಿಯಿಂದ ನಿರ್ಮಿಸಲಾದ ಗುಮ್ಮಟವು ಟರ್ಮಿನಸ್ ನ ಕಿರೀಟವಾಗಿದೆ. ಈ ಕಲ್ಲಿನ ಗುಮ್ಮಟವು ತನ್ನದೇ ಆದ ಒಂದು ವಿಭಿನ್ನತೆಯನ್ನು ಹೊಂದಿದ್ದು ಜಗತ್ತಿನ ಯಾವುದೇ ನಿಲ್ದಾಣದಲ್ಲಿಯೂ ಕಾಣಸಿಗುವುದಿಲ್ಲ. ಈ ಗುಮ್ಮಟವು ಮೊದಲ ಅಷ್ಟಭುಜಾಕೃತಿಯ ಚಪ್ಪಡಿಯ ಗುಮ್ಮಟವಾಗಿದ್ದು ಇದನ್ನು ಗೋಥಿಕ್ ಶೈಲಿಯ ಕಟ್ಟಡವನ್ನಾಗಿ ನಂತರ ಮಾರ್ಪಡಿಸಲಾಯಿತು ಮತ್ತು ಇದು ನಗರದ ಇನ್ನಿತರ ಯಾವುದೇ ಸಾರ್ವಜನಿಕ ಕಟ್ಟಡಗಳ ಪೈಕಿ ಇದು ಮೊದಲನೆಯದು.ಗೋಥಿಕ್ ರಚನೆಯ ಮೇಲೆ ಗುಮ್ಮಟಗಳನ್ನು ಕಾಣುವುದು ಒಂದು ಸಾಮಾನ್ಯ ವಿಷಯವಲ್ಲ.

6. 16.6 ಅಡಿ ಎತ್ತರದ ಮಹಿಳೆಯ ಪ್ರತಿಮೆ

6. 16.6 ಅಡಿ ಎತ್ತರದ ಮಹಿಳೆಯ ಪ್ರತಿಮೆ

Karthik Nadar

ಈ ಗುಮ್ಮಟವನ್ನು ಎತ್ತರದ ಡ್ರಮ್ ನಲ್ಲಿ ಇರಿಸಲಾಗಿದ್ದು ಜಿ ಐ ಪಿಆರ್ ನ ಅಧಿಕೃತ ಲಾಂಛನವನ್ನು ಚಿತ್ರಿಸುವ ಎರಡು ಹಂತದ ಬಣ್ಣದ ಕೋಟಿಂಗ್ ನೀಡಲಾದ ಗಾಜಿನ ಫಲಕಗಳನ್ನು ಹೊಂದಿದೆ. ಗುಮ್ಮಟದ ಮೇಲಿನ ಭಾಗದಲ್ಲಿ ಅಭಿವೃದ್ದಿಯ ಪ್ರತಿಮೆಯಿದ್ದು ಇದು 16.6 ಅಡಿ ಎತ್ತರವಿದೆ ಈ ಪ್ರತಿಮೆಯು ಒಬ್ಬ ಮಹಿಳೆಯದ್ದಾಗಿದ್ದು ಈ ಮಹಿಳೆ ತನ್ನ ಕೈಯಲ್ಲಿ ಉರಿಯುವ ಟಾರ್ಚ್ ಅನ್ನು ತನ್ನ ಬಲಕೈಯಲ್ಲಿ ಹಿಡಿದುಕೊಂಡಿದ್ದಾಳೆ ಮತ್ತು ತನ್ನ ಎಡಕೈಯಲ್ಲಿ ಒಂದು ವಕ್ರವಾದ ಚಕ್ರವನ್ನು ಹಿಡಿದಿದ್ದಾಳಿ ಈ ಎಡಭಾಗವು 1969 ರಲ್ಲಿ ಮಿಂಚಿನಿಂದ ಬಲಿಯಾಗಿದ್ದು ಇದನ್ನು ಜೆ.ಜೆ ಕಲಾ ಶಾಲೆಯಿಂದ ಪುನಸ್ಥಾಪಿಸಲಾಯಿತು.

Read more about: india mumbai

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more