Search
  • Follow NativePlanet
Share
» »ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿ

ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿ

By Vijay

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಹೆದ್ದಾರಿಯಲ್ಲಿ ಸುಮಾರು 35 ಕಿ.ಮೀ ಚಲಿಸಿದರೆ ಒಂದು ಅದ್ಭುತವಾದ ಮನರಂಜನೆಯಿಂದ ಸಂಪದ್ಭರಿತವಾದ ಅನನ್ಯ ವಿರಾಮ ತಾಣ ದೊರೆಯುತ್ತದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಿತವಿರುವ ಈ ಮನರಂಜನಾ ವಿರಾಮ ಕೇಂದ್ರವನ್ನು ಅಧಿಕೃತವಾಗಿ ಇನ್ನೊವೇಟಿವ್ ಫಿಲ್ಮ್ ಸಿಟಿ ಎಂಬ ಹೆಸರಿನಿಂದ ಕರೆಯುತ್ತಾರೆ. ವಾರಾಂತ್ಯದ ರಜಾ ದಿನಗಳನ್ನು ಅತ್ಯಂತ ಮಧುರವಾಗಿ ಕಳೆಯಲು ಇದು ಆದರ್ಶಪ್ರಾಯವಾದ ಸ್ಥಳವಾಗಿದೆ.

ಅಲ್ಲದೆ ಮಕ್ಕಳಿಗೆ, ಯುವಕ, ಯುವತಿಯರಿಗೆಂದೆ ಸಾಕಷ್ಟು ಪ್ರಮುಖವಾದ, ಉತ್ಸಾಹ ಇಮ್ಮಡಿಗೊಳಿಸುವಂತಹ ಹಲವಾರು ಚಟುವಟಿಕೆಗಳಿರುವುದನ್ನು ಇಲ್ಲಿ ಕಾಣಬಹುದು. ಈ ಒಟ್ಟಾರೆ ತಾಣವು ಹಲವು ವಿಭಾಗಗಳಲ್ಲಿ ವಿಂಗಡನೆಗೊಂಡಿದ್ದು, ಪ್ರತಿಯೊಂದು ವಿಭಾಗಗಳು ವಿಶಿಷ್ಟ ಆಕರ್ಷಣೆಗಳಿಂದ ಕೂಡಿದೆ. ಪ್ರಸ್ತುತ ಲೇಖನವು ಇಲ್ಲಿ ಕಂಡುಬರುವ ಹಲವು ಕೌತುಕಮಯ ಚಿತ್ರಗಳ ಸವಾರಿಯನ್ನು ಮಾಡಿಸುತ್ತದೆ.

ಇನ್ನು ಇನ್ನೊವೇಟಿವ್ ಫಿಲ್ಮ್ ಸಿಟಿಗೆ ನೀವು ಬಸ್ಸಿನಲ್ಲಿ ತೆರಳಬೇಕೆಂದಿದ್ದರೆ ಬಿಎಂಟಿಸಿ ವೊಲ್ವೊ ಬಸ್ಸುಗಳಲ್ಲಿ ತೆರಳಬಹುದು. ಈ ಬಸ್ಸುಗಳು ಬೆಂಗಳೂರಿನ ಶಿವಾಜಿ ನಗರ, ಮೆಜೆಸ್ಟಿಕ್, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿ ಮುಂತಾದೆಡೆಗಳಿಂದ ಲಭ್ಯವಿರುತ್ತದೆ. ಬೆಳಿಗ್ಗೆ 9.30 ಹೊರಡುವ ಈ ಬಸ್ಸುಗಳು ಫಿಲ್ಮ್ ಸಿಟಿಯಿಂದ ಸಂಜೆ 6.30 ಘಂಟೆಗೆ ವಾಪಾಸಾಗುತ್ತವೆ. ಅಲ್ಲದೆ ಬಿಎಂಟಿಸಿ ಬಸ್ಸುಗಳ ಸೇವೆ ಪಡೆದುಕೊಂಡಿದ್ದಕ್ಕೆ ಫಿಲ್ಮ್ ಸಿಟಿಯಲ್ಲಿ ನಿಮಗೆ ವಿನಾಯ್ತಿ ಕೂಡ ಲಭ್ಯವಾಗುತ್ತದೆ.

ಫಿಲ್ಮ್ ಸಿಟಿ ಪ್ರವೇಶ ದರ ಹಾಗೂ ಅದಕ್ಕೆ ದೊರಕುವ ವಿವಿಧ ಮನರಂಜನಾ ಚಟುವಟಿಕೆಗಳ ಕುರಿತು ಮಾಹಿತಿ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಬನ್ನಿ ಈ ಲೇಖನವನ್ನು ಕೌತುಕಮಯ ಸಂಗ್ರಹಗಳ ಸಂಗ್ರಹಾಲಯದಿಂದ ಪ್ರಾರಂಭಿಸೋಣ. "ನಂಬಿದರೆ ನಂಬಿ ಬಿಟ್ಟರೆ ಬಿಡಿ" ಎನ್ನುವ ರೀತಿಯಲ್ಲಿ ಹಲವು ಆಸಕ್ತಿದಾಯಕ ವಿಚಾರಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Jim Ankan Deka

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ನೀರು ಬಿಳುತ್ತಿದೆ ಆದರೆ ಎಲ್ಲಿಂದ? ಎಷ್ಟೆ ಬಿದ್ದರೂ ಕೊಳಾಯಿ ಮಾತ್ರ ತುಂಬುತ್ತಿಲ್ಲ!

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ನಗುತ್ತಿರುವ ಬುದ್ಧನ ವಿಗ್ರಹ. ಇದರಲ್ಲೇನು ಮಹಾ ಅಂತ ಅನಬೇಡಿ. ಇದರ ಬೆಲೆ ಬರೋಬ್ಬರಿ ಒಂದು ಮಿಲಿಯನ್ ಅಮೇರಿಕನ್ ಡಾಲರ್. ಅಂದರೆ ಸುಮಾರು 60 ಲಕ್ಷ ರೂಪಾಯಿಗೂ ಮೇಲ್ಪಟ್ಟು.

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಸಂಗ್ರಹಾಲಯದಲ್ಲಿರುವ ವಿಚಿತ್ರ ಚಿತ್ರ. ಗಡ್ಡವಿರುವ ಈ ಮಹಿಳೆಗೆ ಒಂದೆ ದಿನದಲ್ಲಿ ಏಳು ಬಾರಿ ಮದುವೆ ಪ್ರಸ್ತಾಪಗಳು ಬಂದಿದ್ದವಂತೆ!

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಈತ್ ಆಸ್ಟ್ರೇಲಿಯಾ ದೇಶದ ಒಬ್ಬ ಬೆಸ್ತ. ಒಮ್ಮೆ ಭಯಂಕರವಾದ ಶಾರ್ಕ್ ಮೀನಿನ ಕೈಯಲ್ಲಿ ಸಿಕ್ಕು ಉಳಿಯಲಾರದಷ್ಟು ಗಾಯಮಾಡಿಕೊಂಡರೂ ಅಚ್ಚರಿ ಎಂಬಂತೆ ಬದುಕಿದ. ಅವನು ತೊಟ್ಟಿದ್ದ ಬಟ್ಟೆಯು ಆತನ ಕರುಳನ್ನು ಅದರ ಸ್ಥಳದಲ್ಲೆ ಹಿಡಿದಿಟ್ಟ ಕಾರಣ ಆತ ಬದುಕಿದನೆನ್ನಲಾಗಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಜಗತ್ತಿನ ಅತಿ ಎತ್ತರದ ವ್ಯಕ್ತಿಯ ಮೇಣದ ಪ್ರತಿಮೆ. ಇತನ ಸರಿ ಸುಮಾರು 9 ಅಡಿಗಳಷ್ಟಂತೆ!

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಪೂರ್ವಜರ ತಲೆ ಬುರುಡೆಯನ್ನು ಬಳಸಿ ಈ ಮುಖವಾಡವನ್ನು ಮಾಡಿ ಮನೆಗಳ ಮುಂದೆ ನೇತು ಹಾಕುತ್ತಿದ್ದರು. ಇದನ್ನು ನ್ಯೂ ಗಿನಿಯ ಎಂಬ ದೇಶದಲ್ಲಿ ಹಿಂದೆ ಮಾಡುತ್ತಿದ್ದರು!

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಇಕ್ವೇಡಾರ್ ನ ಜೆರಾವೊ ಇಂಡಿಯನ್ನರು ಶತ್ರುಗಳ ರುಂಡಗಳನ್ನು ತಮ್ಮ ಧೈರ್ಯ ಹಾಗೂ ಹಿರಿಮೆಗಾಗಿ ಟ್ರೋಫಿಗಳಂತೆ ಬಳಸುತ್ತಿದ್ದರು. ಅದಕ್ಕಾಗಿ ಅವರು ಶತ್ರುಗಳನ್ನು ಸಾಯಿಸಿದಾಗ ಅವರ ರುಂಡಗಳನ್ನು ಬೇರ್ಪಡಿಸಿ ಒಂದು ರೀತಿಯ ಔಷಧಿಯೊಂದಿಗೆ ಅದನ್ನು ಬೇಯಿಸುತ್ತಿದ್ದರು. ಇದರಿಂದ ರುಂಡಗಳು ತಮ್ಮ ನೈಜ ಗಾತ್ರದಿಂದ ಚಿಕ್ಕ ಆಕಾರದ್ದಾಗುತ್ತಿದ್ದವು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಸಂಪೂರ್ಣವಾಗಿ ಪಚ್ಚೆ ಕಲ್ಲಿನಿಂದ ಮಾಡಲಾದ ಚೈನೀಸ್ ಡ್ರ್ಯಾಗನ್ ಹಡಗಿನ ಮಾದರಿ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಎಲಿಜಬೆತ್ ಟೇಲರ್ ಳ ನೈಜ ಕೂದಲಿನ ಮಾದರಿ. ಈಕೆ ಹಾಲಿವುಡ್ ಕಂಡ ಅತಿ ಪ್ರತಿಭಾವಂತ ತಾರೆ. 1960 ರ ಸಮಯದಲ್ಲಿ ಕ್ಲಿಯೋಪಾತ್ರಾ ಚಿತ್ರಕ್ಕಾಗಿ ಕೂದಲನ್ನು ತುಂಡರಿಸಿಕೊಳ್ಳಲು ಈಕೆಗೆ ಒಂದು ಮಿಲಿಯನ್ ಡಾಲರ್ ಹಣ ನೀಡಿದ್ದರಂತೆ!

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮರ್ಲೀನ್ ಮನ್ರೊ ಜಗದ್ವಿಖ್ಯಾತ ಹಾಲಿವುಡ್ ತಾರೆ. ಈಕೆಯ ಹೆಗ್ಗುರುತುಗಳೆಂದರೆ ಕೆಂಪು ಕೂದಲು ಹಾಗೂ ತುಟಿಗಳ ಮುತ್ತಿನ ಮುದ್ರೆ. ಇವೆರಡನ್ನು ಈ ಸಂಗ್ರಹಾಲಯದಲ್ಲಿ ಕಾಣಾಹುದು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಎಡ: ಆಫ್ರಿಕಾದ ಕ್ಯಾಮರೂನ್ ದೇಶದ ಆದಿವಾಸಿಗಳು ಹಿಂದೆ ಗುಲಾಮರ ಚರ್ಮದಿಂದ ಈ ಮುಖವಾಡವನ್ನು ಅಲಂಕರಿಸುತ್ತಿದ್ದರಂತೆ! ಇದನ್ನು ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಧ್ವಜದ ರೀತಿಯಲ್ಲಿ ಉಪಯೋಗಿಸಲಾಗುತ್ತಿತ್ತು.

ಬಲ: ಹಲವು ಶತಮಾನಗಳಿಂದ ಒರಿಯಂಟಲ್ ಕಲಾವಿದರು ನೈಸರ್ಗಿಕ ವಸ್ತುಗಳಲ್ಲಿ ರಚಿಸುವ ಕಲೆಗೆ ಅತೀವ ಪ್ರಸಿದ್ಧರಾಗಿದ್ದರು. ಚೆರ್‍ರಿ ಗಿಡದ ಬೇರಿನಿಂದ ಈ ಸೂಕ್ಷ್ಮವಾದ ಕೆತ್ತನೆಯನ್ನು ಮಾಡಲಾಗಿದೆಯಂತೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ 2007 ರಲ್ಲಿ ಜನಿಸಿದ ಎರಡು ತಲೆಗಳುಳ್ಳ ಹಸುವಿನ ಮಾದರಿ. ಇಂದು ಇದು ಅಲ್ಲಲ್ಲಿ ಸಾಮಾನ್ಯವಾದರೂ ಹಿಂದೆ ಇದನ್ನು ದೊಡ್ಡ ಅಪಶಕುನ ಎಂತಲೆ ಭಾವಿಸುತ್ತಿದ್ದರು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಕಾಂಗರೂ, ಗಿಡ್ಡ ಜಾತಿಯ ಕಾಂಗರೂ, ಡಿಂಗೊ, ಮೊಸಳೆ ಎಲುಬುಗಳು ಹಾಗೂ ದೊಡ್ಡ ಗಾತ್ರದ ಹಲ್ಲಿಯ ತಲೆ ಬುರುಡೆಯನ್ನು ಉಪಯೋಗಿಸಿ ಸ್ಟೀಗೊಸಾರಸ್ ಎಂಬ ಈ ಜೀವಿಯ ಮಾದರಿಯನ್ನು ಸಿದ್ಧಪಡಿಸಲಾಗಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಕಲಾವಿದನೊಬ್ಬನಿಂದ ಸಂಪೂರ್ಣವಾಗಿ ಒಂಟೆಯ ಎಲುಬುಗಳನ್ನು ಬಳಸಿ ಮಾಡಲಾಗಿರುವ ಸುಂದರ ಕಲಾಕೃತಿ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ 19 ನೇಯ ಶತಮಾನದಲ್ಲಿ ವಿಜ್ಞಾನ ಅಷ್ಟೊಂದು ಪ್ರಗತಿ ಹೊಂದಿರದ ಕಾರಣ ಕೆಲವೊಮ್ಮೆ ಜೀವವಿದ್ದರೂ ಮರಣಿಸಿದರೆಂದು ಭಾವಿಸಲಾಗಿ ಸಂಸ್ಕಾರ ಮಾಡುತ್ತಿದ್ದರು. ಕ್ರಮೇಣ ಇಂತಹ ಅವಘಡಗಳನ್ನು ತಪ್ಪಿಸಲು ಒಂದು ವಿಶಿಷ್ಟವಾದ ಕಾಫೀನುಗಳನ್ನು ವಿನ್ಯಾಸಗೊಳಿಸಲಾಯಿತು. ಇದರ ಪ್ರಕಾರ "ಮರಣಿಸಿದ" ವ್ಯಕ್ತಿಯು ಎಚ್ಚರಗೊಂಡಾಗ ಕಾಫೀನಿಗೆ ಜೋಡಿಸಲಾಗಿದ್ದ ಘಂಟೆಗಳು ಬಾರಿಸುತ್ತಿದ್ದವು. ಇದರಿಂದ ದಾರಿ ಹೋಕರು ಇಲ್ಲವೆ ಗುಂಡಿ ತೋಡುವವರು ಮತ್ತೆ ಅಗೆದು ಜೀವಗಳನ್ನು ಬದುಕಿಸುತ್ತಿದ್ದರು. ಗುಂಡಿ ತೋಡುವವರು ಹೆಚ್ಚಾಗಿ ಇದನ್ನು ರಾತ್ರಿಯ ಸಮಯದಲ್ಲೆ ಮಾಡಿದ್ದರಿಂದ ರಾತ್ರಿ ಪಾಳಯವನ್ನು ಜನಪ್ರಿಯವಾಗಿ "ಗ್ರೇವ್ ಯಾರ್ಡ್ ಶಿಫ್ಟ್" ಎಂದು ಕರೆಯಲಾಯಿತು. ಚಿತ್ರದಲ್ಲಿ ಕಾಣುತ್ತಿರುವುದು ವಿಶಿಷ್ಟ ವಿನ್ಯಾಸದ ಕಾಫೀನು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ರಾಜರುಗಳ ಸಮಯದಲ್ಲಿ ಯುದ್ಧದಲ್ಲಿ ಉಪಯೋಗಿಸಲಾಗುತ್ತಿದ್ದ ವಿವಿಧ ಭಯ ತರಿಸುವಂತಹ ಆಯುಧಗಳು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

1200 ರ ಸಮಯದಲ್ಲಿ ಅದರಲ್ಲೂ ಚೀನಾ ದೇಶದಲ್ಲಿ ಸುಳ್ಳು ಹೇಳುವುದು ದೊಡ್ಡ ಅಪರಾಧವಾಗಿತ್ತು. ಯಾರಾದರೂ ಸುಳ್ಳು ಹೇಳುವುದು ಕಂಡುಬಂದರೆ ಅವರನ್ನು ಅರೆನಗ್ನರನ್ನಾಗಿ ಮಾಡಿ ಒಂದು ಉಕ್ಕಿನ ಕೊಳವೆಗೆ ಕೈಕಾಲುಗಳನ್ನು ಕಟ್ಟಿ ಬಿಗಿಯಲಾಗುತ್ತಿತ್ತು. ಹಾಗೂ ಕೊಳವೆಯ ಕೆಳಗಡೆಯಿಂದ ಬೆಂಕಿ ಉರಿಸಲಾಗುತ್ತಿತ್ತು. ಆಶ್ಚರ್ಯವೆಂದರೆ ಈ ರೀತಿಯ ಶಿಕ್ಷೆಯಿಂದ ಹೇಗೆ ಹಿಂಸಿಸುತ್ತಿದ್ದರೆಂದರೆ ಆ ವ್ಯಕ್ತಿಯು ಅತೀವ ವೇದನೆಯಿಂದ ನರಳುತ್ತ ಸಾಯುವ ಹಂತ ತಲುಪಿದಾಗ ಆತನನ್ನು ಬಿಚ್ಚಿ ಸಾಯಲು ಮಾತ್ರ ಬಿಡುತ್ತಿರಲಿಲ್ಲ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

1840 ರಲ್ಲಿ ಬಾಸ್ಟನ್ ನಗರದಲ್ಲಿ ತಯಾರಿಸಲಾದ ವ್ಯಾಂಪಾಯರ್ (ರಕ್ತ ಹೀರುವ ಬಾವಲಿ ಮನುಷ್ಯರು) ಕಿಟ್. ಟ್ರಾನ್ಸಿಲ್ವೇನಿಯಾಗೆ ಹೊರಡುವ ಪ್ರವಾಸಿಗರಿಗೆ ಈ ಬಾವಲಿ ಮನುಷ್ಯರನ್ನು ಸಂಹರಿಸಬಹುದಾದ ಆಯುಧಗಳ ಈ ಸಂಗ್ರಹವನ್ನು ಮಾರುತ್ತಿದ್ದರಂತೆ. (ವ್ಯಾಂಪಾಯರ್ಸ್ ಅನ್ನುವುದು ಒಂದು ಕಾಲ್ಪನಿಕ ಅನಿಸಿಕೆಯಾಗಿದೆ).

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

16 ನೇಯ ಶತಮಾನದಲ್ಲಿ ಬಳಕೆಯಲ್ಲಿದ್ದ ವಿವಿಧ ಆಯುಧಗಳು ಹಾಗೂ ಇತರೆ ಉಪಕರಣಗಳು. ಬಲ ತುದಿಯಲ್ಲಿರುವುದು ಅವಮಾನದ ಮುಖವಾಡ. ಇದನ್ನು ಜರ್ಮನಿಯಲ್ಲಿ ಉಪಯೋಗಿಸಲಾಗುತ್ತಿತ್ತು. ಈ ಮುಖವಾಡ ಹಾಕಿ ಕೊಂಡವನು ಎಲ್ಲೆ ಹೊದರೂ ಜನರಿಂದ ಛಿ, ಥೂ ಎಂದೆನಿಸಿಕೊಂಡು ಅವಮಾನದಿಂದ ಬಳಲುತ್ತಿದ್ದನು.

ಕೆಳಗಡೆ ಇರುವುದು ರಕ್ಷಣಾ ಉಪಕರಣ. ಹಿಂದೆ ಯೋಧರು ಯುದ್ಧಗಳಿಗೆ ತೆರಳಿದಾಗ ಅವರ ಪತ್ನಿಯರು ಇತರೆ ಪರ ಪುರುಷರಿಂದ ರಕ್ಷಣೆ ಪಡೆಯಲು ಇದನ್ನು ಧರಿಸುತ್ತಿದ್ದರು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮೆಕ್ಸಿಕನ್ ಚಿತ್ರಕಲಾವಿದನಾದ ಎನ್ರೀಕ್ ರಾಮೋಸ್ ಎಂಬಾತನು ಚಿಟ್ಟೆಯ ರೆಕ್ಕೆಗಳ ಮೇಲೆ ವರ್ಣ ಚಿತ್ರ ಬಿಡಿಸುತ್ತಿದ್ದನು. ಚಿತ್ರದಲ್ಲಿ ಕಾಣುತ್ತಿರುವುದು ಚಿಟ್ಟೆಯ ರೆಕ್ಕೆಯ ಮೇಲೆ ಬಿಡಿಸಲಾದ ಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ ವಿನ್ಸಿ ಹಾಗೂ ಅವನ ಪ್ರಖ್ಯಾತಿಗಳಿಸಿದ ಚಿತ್ರವಾದ ಮೊನಾಲಿಸಾ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮೆಕ್ಸಿಕನ್ ಚಿತ್ರಕಲಾವಿದನಾದ ಎನ್ರೀಕ್ ರಾಮೋಸ್ ನಿಂದ ಬಾವಲಿಯ ರೆಕ್ಕೆಯ ಮೇಲೆ ಬಿಡಿಸಲಾದ ವರ್ಣಚಿತ್ರ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಅಲೇಕ್ಸಾಂಡ್ರಿಯಾ ದೇಶದ ಅಲೀಪಿಯಸ್ ಎಂಬ ಕುಬ್ಜನ ಮಾದರಿ ಪ್ರತಿಮೆ. ಈತನ ಎತ್ತರ ಬರೋಬ್ಬರಿ 17 ಇಂಚುಗಳು ಮಾತ್ರ. ರಾಜದ್ರೋಹದ ಆಪಾದನೆಗೆ ಒಳಗಾಗಿದ್ದ ಈತನನ್ನು ಗಿಳಿ ಪಂಜರದಲ್ಲಿ ಬಂಧಿಸಿಡಲಾಗಿತ್ತು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ನಂಬಿದರೆ ನಂಬಿ ಬಿಟ್ಟರೆ ಬಿಡಿ! ಇಲ್ಲಿ ಕಾಣುತ್ತಿರುವ ಬಾಣಗಳು ಒಂದೆ ಕಟ್ಟಿಗೆಯಿಂದ ಯಾವುದೆ ಜೋಡಣೆಗಳಿಲ್ಲದೆ ಏಕಾಕೃತಿಯಲ್ಲಿ ಮಾಡಲ್ಪಟ್ಟಿದ್ದು, ಗಾಜಿನ ಸೀಸೆ ಹಾಗೂ ಉಕ್ಕಿನ ಸುರುಳಿಗಳಲ್ಲಿ ವಿಸ್ಮಯಕಾರಿಯಾಗಿ ಸೇರಿಸಲಾಗಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮಕ್ಕಳು ಅತೀವವಾಗಿ ಸಂತಸಪಡುವ ಮತ್ತೊಂದು ಮನರಂಜನಾ ಕೇಂದ್ರವೆಂದರೆ ಇನ್ನೊವೇಟಿವ್ ಫಿಲ್ಮ್ ಸಿಟಿಯ ಡೈನೋ ಪಾರ್ಕ್. ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಈ ಜೀವಿಗಳು ಇಂದಿಗೂ ಮಕ್ಕಳ ಹೃದಯಗಳಲ್ಲಿ ರಾರಾಜಿಸುತ್ತಿವೆ. ಈ ದೃಢಕಾಯ ಜೀವಿಗಳ ಪ್ರತಿರೂಪಗಳನ್ನು ಇಲ್ಲಿ ಸವಿಯಬಹುದಾಗಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಜೀವಿಗಳ ಪ್ರತಿಕೃತಿಗಳು. ಇವುಗಳನ್ನು ನೋಡುವುದೆಂದರೆ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಆನಂದ ಹಾಗೂ ರೋಮಾಂಚನ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಜೀವಿಗಳ ಪ್ರತಿಕೃತಿಗಳು. ಇವುಗಳನ್ನು ನೋಡುವುದೆಂದರೆ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಆನಂದ ಹಾಗೂ ರೋಮಾಂಚನ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಜೀವಿಗಳ ಪ್ರತಿಕೃತಿಗಳು. ಇವುಗಳನ್ನು ನೋಡುವುದೆಂದರೆ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಆನಂದ ಹಾಗೂ ರೋಮಾಂಚನ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಜೀವಿಗಳ ಪ್ರತಿಕೃತಿಗಳು. ಇವುಗಳನ್ನು ನೋಡುವುದೆಂದರೆ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಆನಂದ ಹಾಗೂ ರೋಮಾಂಚನ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹಿಂದೆ ಜೀವಿಸಿದ್ದವೆನ್ನಲಾದ ಅತಿ ವಿಶಾಲಕಾಯದ ಜೀವಿಗಳ ಪ್ರತಿಕೃತಿಗಳು. ಇವುಗಳನ್ನು ನೋಡುವುದೆಂದರೆ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಆನಂದ ಹಾಗೂ ರೋಮಾಂಚನ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿಯ ಕಾರ್ಟೂನ್ ಸಿಟಿಯು ಮಕ್ಕಳು ಇಷ್ಟಪಡುವ ಮತ್ತೊಂದು ವಿಭಾಗ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮಕ್ಕಳು ಹಾಗೂ ಯುವಜನರು ಇಷ್ಟ ಪಡುವ ಅಮೋಘ ರೈಡುಗಳು ಇಲ್ಲಿ ಲಭ್ಯವಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮಕ್ಕಳು ಹಾಗೂ ಯುವಜನರು ಇಷ್ಟ ಪಡುವ ಅಮೋಘ ರೈಡುಗಳು ಇಲ್ಲಿ ಲಭ್ಯವಿದೆ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಕಾಣಬಹುದಾದ ಅಕ್ವಾ ಸಿಟಿ ಪೂಲ್ ಎಂಬ ಜಲ ಕ್ರೀಡಾ ಕೊಳ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷ ಕೇಂದ್ರವೆಂದರೆ ಮೇಣದ ಸಂಗ್ರಹಾಲಯ. ಜಗದ್ವಿಖ್ಯಾತ ಜನಪ್ರಿಯ ವ್ಯಕ್ತಿಗಳ ಮಾನವ ಗಾತ್ರದ ಮೇಣದ ಪ್ರತಿರೂಪಗಳನ್ನು ಕಾಣಬಹುದು.
ಬನ್ನಿ ಹಾಗಾದರೆ ಮುಂದಿನ ಸ್ಲೈಡುಗಳಲ್ಲಿ ಯಾವ ಯಾವ ವ್ಯಕ್ತಿಗಳು ಇದ್ದಾರೆ ಎಂಬುದನ್ನು ತಿಳಿಯೋಣ.

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮಹಾತ್ಮಾ ಗಾಂಧೀಜಿ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಪ್ರಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲೀನ್.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಹ್ಯಾರಿ ಪಾಟರ್.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಎಂಜಲಿನಾ ಜೂಲಿ ಎಂಬ ಹಾಲಿವುಡ್ ಮಾದಕ ನಟಿ.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಮೈಕಲ್ ಜಾಕ್ಸನ್ ಹಾಗೂ ಇತರೆ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕಲಾವಿದರು.

ಚಿತ್ರಕೃಪೆ: Rameshng

ಇನ್ನೊವೇಟಿವ್ ಫಿಲ್ಮ್ ಸಿಟಿ:

ಇನ್ನೊವೇಟಿವ್ ಫಿಲ್ಮ್ ಸಿಟಿ:

ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್ ಹಿಟ್ಲರ್.

ಚಿತ್ರಕೃಪೆ: Rameshng

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X