Search
  • Follow NativePlanet
Share
» »ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ಸಾಮಾನ್ಯವಾಗಿ ಮಹಾ ಶಿವನು ಲಿಂಗ ಸ್ವರೂಪಿಯಾಗಿ ದರ್ಶನ ನೀಡುತ್ತಾನೆ. ಆತನು ಹಲವಾರು ವಿಭಿನ್ನವಾದ ಶೈಲಿಯಲ್ಲಿದ್ದಾನೆ. ಬಹುಶಃ ನೀವು ಎಂದೂ ಅಂತಹ ಶಿವಲಿಂಗವನ್ನು ಕಂಡಿರದೇ ಇರಬಹುದು. ಹಾಗಾದರೆ ಆ ಶಿವಲಿಂಗಗಳು ಯಾವುವು? ಅವುಗಳು ಯಾವ ಪುಣ್ಯ ಕ್ಷೇತ್

ನಮ್ಮ ದಿನನಿತ್ಯದ ಜೀವನದಲ್ಲಿ ದೇವಾಲಯಗಳು ಹಾಗು ದೇವತೆಗಳು ಹೆಚ್ಚಾಗಿ ಪಾತ್ರವಹಿಸುತ್ತಾರೆ. ದಿನನಿತ್ಯದ ಜಂಜಾಟದಲ್ಲಿ ಹಾಗು ಹಲವಾರು ಸಮಸ್ಯೆಗಳಿಂದ ಮುಕ್ತಿಯ ಮಾರ್ಗ ದೇವಾಲಯಗಳೇ ಎಂದು ನಾವು ಭಾವಿಸುವುದುಂಟು. ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ದೇವತೆಗಳನ್ನು ಕಾಣಬಹುದು. ಒಂದೊಂದು ದೇವತೆಗಳು ಒಂದೊಂದಕ್ಕೆ ಅತ್ಯಂತ ಪ್ರಸಿದ್ಧಿ ಹೊಂದಿದವರು. ನಮ್ಮ ಧರ್ಮದಲ್ಲಿ ಶೈವ ಮತ ಹಾಗು ವೈಷ್ಣವ ಮತ ಎಂದು 2 ರಾಜಕೀಯ ಪಕ್ಷಗಳಿವೆ.

ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಆ ಪಕ್ಷಗಳಿಗೆ ಆ ಪಕ್ಷದವರು ಭೇಟಿ ನೀಡಿ ದರ್ಶನ ಭಾಗ್ಯ ಪಡೆಯುತ್ತಾರೆ. ಆದರೆ ದೇವತೆಗಳಲ್ಲಿಯೇ ಇಲ್ಲದ ಪಕ್ಷಪಾತ ನಮ್ಮಲ್ಲಿ ಏಕೆ? ಏಲ್ಲಾ ದೇವತೆಗಳು ಒಂದೇ ಎಂದು ಪೂಜಿಸೋಣ. ಆದರೆ ಇತ್ತೀಚಿಗೆ ಆ 2 ಪಕ್ಷಗಳು ಕಡಿಮೆಯಾಗಿರುವುದು ಸ್ವಾಗತರ್ಹ. ಲೇಖನದಲ್ಲಿ ಮುಖ್ಯವಾಗಿ ಶಿವಲಿಂಗದ ಬಗ್ಗೆ ತಿಳಿಯೋಣ.

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಸಾಮಾನ್ಯವಾಗಿ ಮಹಾ ಶಿವನು ಲಿಂಗ ಸ್ವರೂಪಿಯಾಗಿ ದರ್ಶನ ನೀಡುತ್ತಾನೆ. ಆತನು ಹಲವಾರು ವಿಭಿನ್ನವಾದ ಶೈಲಿಯಲ್ಲಿದ್ದಾನೆ. ಬಹುಶಃ ನೀವು ಎಂದೂ ಅಂತಹ ಶಿವಲಿಂಗವನ್ನು ಕಂಡಿರದೇ ಇರಬಹುದು. ಹಾಗಾದರೆ ಆ ಶಿವಲಿಂಗಗಳು ಯಾವುವು? ಅವುಗಳು ಯಾವ ಪುಣ್ಯ ಕ್ಷೇತ್ರದಲ್ಲಿ ನೆಲೆಸಿವೆ? ಎಂಬುದನ್ನು ಸಂಕ್ಷೀಪ್ತವಾಗಿ ತಿಳಿಯೋಣ.

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಅಮರನಾಥ ದೇವಾಲಯ

ಅಮರನಾಥ ದೇವಾಲಯ

ಈ ಅಮರನಾಥ ದೇವಾಲಯವು ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಇದೊಂದು ಮೂಲತಃ ಗುಹಾ ದೇವಾಲಯವಾಗಿದೆ. ಇದು ವರ್ಷದ ನಿರ್ಧಿಷ್ಟವಾದ ಅವಧಿಯಲ್ಲಿ ಮಾತ್ರ ಕಂಡು ಬರುವ ಶಿವಲಿಂಗವಾಗಿದೆ. ಈ ಶಿವಲಿಂಗ ಸ್ವಯಂ ಮಂಜುಗಡ್ಡೆಯಿಂದ ಸೃಷ್ಟಿಯಾದ ಶಿವಲಿಂಗವಾಗಿದ್ದು, ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿಗೆ ಹಲವಾರು ಭಕ್ತರು ಭೇಟಿ ನೀಡಿ ಪಾವನರಾಗುತ್ತಾರೆ.

PC::Gktambe

ಹಂಪಿ ಕಲ್ಲು ಹಾಸಿಗೆ ಶಿವಲಿಂಗ

ಹಂಪಿ ಕಲ್ಲು ಹಾಸಿಗೆ ಶಿವಲಿಂಗ

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣವಾದ ಬಳ್ಳಾರಿ ಜಿಲ್ಲೆಯ ಹಂಪಿಯ ತುಂಗಭಧ್ರಾ ನದಿಯ ತಟದಲ್ಲಿರುವ ಕಲ್ಲು ಬಂಡೆಗಳ ಕಲ್ಲು ಹಾಸಿನ ಮೇಲೆ 108 ಶಿವಲಿಂಗಗಳನ್ನು ಕೆತ್ತಲಾಗಿದೆ. ಇದೊಂದು ವಿಭಿನ್ನ ರೀತಿಯ ಶಿವಲಿಂಗ ರಚನೆಯಾಗಿದ್ದು, ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

PC:: Pratheepps

ಜಮ್ಮ ಕಾಶ್ಮೀರದ ಶಿವಲಿಂಗ

ಜಮ್ಮ ಕಾಶ್ಮೀರದ ಶಿವಲಿಂಗ

ಜಮ್ಮ ಕಾಶ್ಮೀರದ ಅನಂತನಾಗ್ ಜಿಲ್ಲೆಯ ವೆರಿನಾಗ್‍ನಲ್ಲಿರುವ ಒಮೋಹ್ ದೇವಾಲಯದಲ್ಲಿರುವ ವಿಶೇಷವಾಗಿ ಕಂಡುಬರುವ ಶಿವಲಿಂಗ ಇದಾಗಿದೆ. ಈ ಶಿವಲಿಂಗವನ್ನು ಅತ್ಯಂತ ಮಹಿಮಾನ್ವಿತವಾದುದು ಎಂದು ಹೇಳಲಾಗುತ್ತದೆ. ಈ ಶಿವಲಿಂಗವನ್ನು ಭಕ್ತಿಯಿಂದ ಪೂಜಿಸಿದರೆ ಶಿವನ ಕೃಪೆ ಶೀಘ್ರವಾಗಿ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

PC: Akshey25


ಹೊಯ್ಸಳೇಶ್ವರ ದೇವಾಲಯ

ಹೊಯ್ಸಳೇಶ್ವರ ದೇವಾಲಯ

ಹಾಸನ ಜಿಲ್ಲೆಯ ಹೊಯ್ಸಳೇಶ್ವರ ದೇವಾಲಯದಲ್ಲಿನ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಹೋಯ್ಸಳೇಶ್ವರನಾಗಿ ಕರೆಯಲಾಗುತ್ತದೆ. ಗರ್ಭಗೃಹದ ಬಾಗಿಲು ತೆರೆಯುತ್ತಿದ್ದಂತೆ ಕಣ್ಣಿಗೆ ಕಾಣುವುದು ಅದ್ಭುತವಾದ ಶಿವಲಿಂಗ. ಶಿವಲಿಂಗವನ್ನು ಕಾಣುತ್ತಾ ಇದ್ದರೆ ಆ ಪರಮಶಿವನೇ ನೇರವಾಗಿ ದರ್ಶನ ನೀಡುತ್ತಿದ್ದಾನೆ ಎಂಬಂತೆ ಕಾಣುತ್ತದೆ.


PC:Anks.manuja


ಕೋಟಿಲಿಂಗ

ಕೋಟಿಲಿಂಗ

ಕೋಟಿ ಲಿಂಗವಿರುವ ಪುಣ್ಯಕ್ಷೇತ್ರ ನಮ್ಮ ಕರ್ನಾಟಕ ರಾಜ್ಯದಲ್ಲಿನ ಕೋಲಾರದಲ್ಲಿದೆ. ಇಲ್ಲಿ ಅತ್ಯಂತ ದೊಡ್ಡದಾದ ಶಿವಲಿಂಗವನ್ನು ಕಾಣಬಹುದು. ಹಾಗೆಯೇ ದೇವಾಲಯವು ಅತ್ಯಂತ ವಿಶಾಲವಾಗಿದ್ದು, ಲಕ್ಷಾನುಗಟ್ಟಲೆ ಶಿವಲಿಂಗವನ್ನು ಇಲ್ಲಿ ಸ್ಥಾಪಿಸಲಾಗಿದೆ. ಒಂದೇ ಸ್ಥಳದಲ್ಲಿ ಲಕ್ಷಾಂತರ ಶಿವಲಿಂಗವನ್ನು ಕಾಣುವುದೇ ಒಂದು ವೈಭವ.


PC:gsnewid

ಹಂಪಿ ಬಡವಿ ಶಿವಲಿಂಗ

ಹಂಪಿ ಬಡವಿ ಶಿವಲಿಂಗ

ಹಂಪಿಯಲ್ಲಿರುವ ಬಡವಿ ಲಿಂಗವಿದು. ಈ ಶಿವಲಿಂಗಕ್ಕೆ ಒಂದು ರೋಚಕವಾದ ಕಥೆಯು ಕೂಡ ಇದೆ. ಆಶ್ಚರ್ಯ ಏನಪ್ಪ ಎಂದರೆ ಈ ದೊಡ್ಡ ಗಾತ್ರದ ಶಿವಲಿಂಗವಿರುವ ಕೋಣೆಯು ಸದಾ ನೀರಿನಿಂದಲೇ ತುಂಬಿರುತ್ತದೆ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗಮನಸೆಳೆಯುವ ರಚನೆಗಳಲ್ಲಿ ಈ ದೇವಾಲಯದ ಶಿವಲಿಂಗವು ಒಂದಾಗಿದೆ.


PC:Arun Varadarajan

ಮಧ್ಯಪ್ರದೇಶದ ನದಿ

ಮಧ್ಯಪ್ರದೇಶದ ನದಿ

ಮಧ್ಯಪ್ರದೇಶದ ಮಹೇಶ್ವರದಲ್ಲಿ ಹರಿಯುತ್ತಿರುವ ನರ್ಮದಾ ನದಿಯಲ್ಲಿ ಪ್ರತಿಷ್ಟಾಪಿಸಿರುವ ಈ ಶಿವಲಿಂಗವು ಅತ್ಯಂತ ಅದ್ಭುತವಾಗಿದೆ. ಶಿವಲಿಂಗದ ಎದುರು ನಂದಿ ಸ್ವಾಮಿಯು ನೆಲೆಸಿದ್ದಾನೆ. ಪುರುಷ ಹಾಗು ಪ್ರಕೃತಿ ಸಮಾಗಮ ಸೂಚಿಸುವ ಈ ಶಿವಲಿಂಗದ ಸ್ಥಳ ಸಾಕಷ್ಟು ಪವಿತ್ರವಾದುದು. ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.


PC:nevil zaveri

ಭೋಜೇಶ್ವರ ದೇವಾಲಯ

ಭೋಜೇಶ್ವರ ದೇವಾಲಯ

ಈ ದೇವಾಲಯವು ಮಧ್ಯ ಪ್ರದೇಶದ ಭೋಜಪುರ ಗ್ರಾಮದಲ್ಲಿರುವ ಐತಿಹಾಸಿಕವಾದ ದೇವಾಲಯವಾಗಿದೆ. ಈ ಭೋಜೇಶ್ವರ ದೇವಾಲಯದ ಶಿವಲಿಂಗವು ಏಳುವರೆ ಅಡಿಗಳಷ್ಟು ಎತ್ತರವಾಗಿದೆ. ಈ ದೇವಾಲಯವು ಮಧ್ಯ ಪ್ರದೇಶದ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.


PC:Yann

ಉದಯಗಿರಿ ಗುಹೆ

ಉದಯಗಿರಿ ಗುಹೆ

ಮಧ್ಯ ಪ್ರದೇಶದ ವಿದಿಶಾದಲ್ಲಿರುವ ಉದಯಗಿರಿ ಗುಹೆಯಲ್ಲಿ ಕಂಡುಬರುವ ಅತ್ಯಂತ ಅಪರೂಪದ ಶಿವಲಿಂಗವಾಗಿದೆ. ಇದೊಂದು ಮುಖವನ್ನು ಹೊಂದಿರುವ ಶಿವಲಿಂಗವಾಗಿದ್ದು, ಇದನ್ನು ಮುಖಲಿಂಗ ಎಂದೇ ಕರೆಯಲಾಗುತ್ತದೆ. ಇದು ಸಾಕಷ್ಟು ವಿಶೇಷವಾದ ವಿನ್ಯಾಸ ಹೊಂದಿರುವ ಶಿವಲಿಂಗವೇ ಆಗಿದೆ.


PC: Zippymarmalade

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಮಹಾರಾಷ್ಟ್ರದಲ್ಲಿನ ಹರಿಶ್ಚಂದ್ರಗಡ್‍ದಲ್ಲಿರುವ ಕೇದಾರೇಶ್ವರ ದೇವಾಲಯದಲ್ಲಿ ಅತ್ಯಂತ ಮಾಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯವು ಒಂದು ಗುಹಾ ದೇವಾಲಯವಾಗಿದ್ದು, ನಾಲ್ಕು ಸ್ತಂಭಗಳನ್ನು ಹೊಂದಿದೆ. ಆದರೆ ಆ ನಾಲ್ಕು ಸ್ತಂಭಗಳಲ್ಲಿ ಈಗಾಗಲೇ 3 ಸ್ತಂಭಗಳು ನಾಶ ಹೊಂದಿದ್ದು, ಇನ್ನು ಉಳಿದಿರುವುದೇ ಒಂದೇ ಸ್ತಂಭವಾಗಿದೆ. ಆ ಸ್ತಂಭ ಉರುಳಿದರೆ ಯುಗಾಂತ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

PC:rohit gowaikar

ಭೂಸಂದೇಶ್ವರ ದೇವಾಲಯ

ಭೂಸಂದೇಶ್ವರ ದೇವಾಲಯ

ಒಡಿಶಾಸ ಬಲಸೋರ್ ಜಿಲ್ಲೆಯ ಭೋಗರೈ ಎಂಬ ಗ್ರಾಮದಲ್ಲಿ ಭೂಸಂದೇಶ್ವರ ಎಂಬ ದೇವಾಲಯವಿದೆ. ಆ ದೇವಾಲಯದಲ್ಲಿ ಅತ್ಯಂತ ಮಾಹಿಮಾನ್ವಿತವಾದ ಶಿವಲಿಂಗವಿದೆ. ಇದು ಆ ರಾಜ್ಯದ ಅತ್ಯಂತ ದೊಡ್ಡದಾದ ಶಿವಲಿಂಗವಾಗಿದೆ. ಇದನ್ನು ಜಾಗೃತ ಸ್ಥಳ ಎಂಬ ಹೆಸರು ಪಡೆದು ಖ್ಯಾತಿ ಪಡೆದಿದೆ.


PC:: Monjit.paul

ಜಂಬುಕೇಶ್ವರ ದೇವಾಲಯ

ಜಂಬುಕೇಶ್ವರ ದೇವಾಲಯ

ತಮಿಳುನಾಡಿನ ಶ್ರೀರಂಗನ ಜಂಬುಕೇಶ್ವರ ದೇವಾಲಯದಲ್ಲಿ ಒಂದು ಪ್ರಭಾವ ಶಾಲಿ ದೇವಾಲಯವಿದೆ. ಈ ಲಿಂಗವನ್ನು ಕುಬೇರ ಲಿಂಗ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಶಿವಲಿಂಗವನ್ನು ಯಾರು ಭಕ್ತಿ ಹಾಗು ಶ್ರದ್ಧೆಯಿಂದ ಪೂಜಿಸುತ್ತಾರೆಯೋ ಅವರಿಗೆ ಸ್ವಾಮಿಯು ಸಕಲ ಸಂಪತ್ತು, ಧನ, ಧಾನ್ಯಗಳನ್ನು ನೀಡುತ್ತಾನೆ ಎನ್ನಲಾಗಿದೆ.


PC:: Ilya Mauter


ಲಖಮಂಡಲ ದೇವಾಲಯ

ಲಖಮಂಡಲ ದೇವಾಲಯ

ಉತ್ತರಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯ ಜೌನ್ಸಾರ್-ಬವಾರ್ ಪ್ರದೇಶದಲ್ಲಿರುವ ಲಖಮಂಡಲ ದೇವಾಲಯ ಇದಾಗಿದ್ದು, ಈ ದೇವಾಲಯವು ಪ್ರತಿನಿತ್ಯವು ತೆರದ ಛಾವಣಿಯ ಶಿವಲಿಂಗವಾಗಿದೆ.

PC:Bpmnnit

ಭೀಮೇಶ್ವರ ದೇವಾಲಯ

ಭೀಮೇಶ್ವರ ದೇವಾಲಯ

ಈ ದೇವಾಲಯವು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಮಲಕೋಟ ಪಟ್ಟಣದಲ್ಲಿದೆ. ಈ ಶಿವಲಿಂಗವನ್ನು ಕುಮಾರ ರಾಮ ಭೀಮೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ನೆಲೆಸಿರುವ ಶಿವಲಿಂಗವು ಅತ್ಯಂತ ಶಕ್ತಿದಾಯಕವಾದುದು ಎಂದು ನಂಬಲಾಗಿದೆ.

PC:Palagiri

ಬೃಹದೀಶ್ವರ ದೇವಾಲಯ

ಬೃಹದೀಶ್ವರ ದೇವಾಲಯ

ತಮಿಳುನಾಡಿನಲ್ಲಿ ಹಲವಾರು ಶಿವಲಿಂಗ ದೇವಾಲಯಗಳಿವೆ. ಅದರಲ್ಲಿ ಬೃಹದೀಶ್ವರ ದೇವಾಲಯವು ತಮಿಳು ನಾಡಿನ ಅತ್ಯಂತ ಪ್ರಾಚೀನವಾದ ಹಾಗು ಪ್ರಸಿದ್ಧಿವಾದ ದೇವಾಲಯವಾಗಿದೆ. ಈ ದೇವಾಲಯವು ಹಲವಾರು ವಿಶೇಷವನ್ನು ಹೊಂದಿದ್ದು, ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಇಲ್ಲಿನ ಶಿವಲಿಂಗವು ಏಕಶಿಲಾ ಶಿವಲಿಂಗವಾಗಿದೆ.


PC:Shefali11011


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X