Search
  • Follow NativePlanet
Share
» »ಈ ಸ್ಥಳಗಳಿಗೆ ತೆರಳಿ, ಅದ್ಭುತ ಸಂಗೀತ ಆಲಿಸಿ

ಈ ಸ್ಥಳಗಳಿಗೆ ತೆರಳಿ, ಅದ್ಭುತ ಸಂಗೀತ ಆಲಿಸಿ

By Vijay

ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕರಿಗೆ ಒತ್ತಡ, ಹತಾಶೆ, ಬೇಸರ ಉಂಟಾದರೆ ಸಂಗೀತ ಕೇಳಲಿಚ್ಛಿಸುತ್ತೇವಲ್ಲವೆ? ಹೌದು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಸಂಗೀತಗಳನ್ನು ಆಲಿಸುವುದರಿಂದ ತಕ್ಷಣ ಮನಸ್ಸಿಗೆ ನೆಮ್ಮದಿ, ಶಾಂತಿ ಉಂಟಾಗುತ್ತದೆ. ಕೆಲವು ದೇಶಗಳಲ್ಲಿ ಸಂಗೀತವನ್ನು ಕೆಲ ಒತ್ತಡದ ಸಮಸ್ಯೆಗಳಿಗೆ ಪರಿಹಾರವಾಗಿಯೂ ಬಳಸಲಾಗುತ್ತದೆ.

ಹಾಡುವುದಾಗಲಿ, ವಾದ್ಯಗಳನ್ನು ನುಡಿಸುವುದಾಗಲಿ ಸಂಗೀತದ ಪ್ರಮುಖ ಅಂಗಗಳು. ಸಂಗೀತದಲ್ಲಿ ಪಾಶ್ಚಿಮಾತ್ಯ, ಶಾಸ್ತ್ರೀಯ, ಜನಪದ, ಆಧುನಿಕ, ಭಾವಗೀತೆ ಹೀಗೆ ಹಲವು ವಿಭಿನ್ನ ಪ್ರಕಾರಗಳಿವೆ. ಭಾರತವು ಮೊದಲಿನಿಂದಲೂ ಸಂಗೀತ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನೆ ಪಡೆದಿದೆ. ಋಷಿ ಮುನಿಗಳ ಕಾಲದಿಂದಲೂ ಸಂಗೀತವು ಸನಾತನ ಧರ್ಮದಲ್ಲಿ ಹಾಸು ಹೊಕ್ಕಾಗಿದೆ.

ನಿಮಗಿಷ್ಟವಾಗಬಹುದಾದ : ಅಬ್ಬಾ ಎಷ್ಟು ವಿಶೇಷ ಈ ಕೊಟ್ಟಿಯೂರು ಉತ್ಸವ!

ಇಂದು ಭಾರತದಲ್ಲಿ ಜನಪದ ಸಂಗೀತದಿಂದ ಹಿಡಿದು ಶಾಸ್ತ್ರೀಯ ಹಾಗೂ ಆಧುನಿಕ ಸಂಗೀತದವೆರೆಗೆ ಎಲ್ಲ ಪ್ರಕಾರದ ಸಂಗೀತಗಳನ್ನು ಆಸ್ವಾದಿಸಬಹುದಾಗಿದೆ. ಇದಕ್ಕೆಂದೆ ಸಾಕಷ್ಟು ಸಂಗೀತ ಕಲಾಕಾರರ ತಂಡಗಳ ರಚನೆಯಾಗಿದ್ದು ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ.

ಜೂನ್ 21, ವರ್ಷದ ಒಂದು ವಿಶಿಷ್ಟ ದಿನವಾಗಿದ್ದು ಅಂದು ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ಸಂಗೀತ ದಿನವನ್ನು ಒಟ್ಟಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇವೆರಡು ಒಂದಕ್ಕೊಂದು ಪೂರಕವಾಗಿರುವುದೂ ವಿಶೇಷ. ಏಕೆಂದರೆ ನಮ್ಮಿಷ್ಟದ ಸಂಗೀತ ಕೇಳುವುದು ಹಾಗೂ ಯೋಗ ಮಾಡುವುದು ಎರಡೂ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನುಕೂಲಕರವಾಗಿದೆ.

ನಿಮಗಿಷ್ಟವಾಗಬಹುದಾದ : ಭಾರತದಲ್ಲಿರುವ ಅತ್ಯುತ್ತಮ ಯೋಗ ಕೇಂದ್ರಗಳು

ಭಾರತದ ವಿವಿಧ ಸ್ಥಳಗಳಲ್ಲಿ ಶಾಸ್ತ್ರೀಯದಿಂದ ಹಿಡಿದು ರಾಕ್ ನಂತಹ ಆಧುನಿಕ ಸಂಗೀತ ಉತ್ಸವಗಳನ್ನು ವರ್ಷದ ಆಯಾ ಸಮಯಗಳಲ್ಲಿ ಆಯೋಜಿಸಲಾಗುತ್ತದೆ. ಅಂತಹ ಕೆಲವು ಪ್ರಮುಖ ಉತ್ಸವಗಳು ಯಾವ್ಯಾವ ಸ್ಥಳಗಳಲ್ಲಿ ಆಯೋಜಿಸಲ್ಪಡುತ್ತದೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಆ ಸ್ಥಳಗಳಿಗೆ ತೆರಳಿ ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸಿ ಆನಂದಿಸಿ.

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸನ್ ಬರ್ನ್ : ಇದೊಂದು ಆಧುನಿಕ ರಾಕ್ ಸಂಗೀತ ಉತ್ಸವ. ಪ್ರತಿ ವರ್ಷ ನವಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಗೋವಾದ ವಾಗಾಟೋರ್ ಕಡಲ ತೀರದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಏಷಿಯಾದ ಅತಿ ದೊಡ್ಡ ಸಂಗೀತ ಉತ್ಸವ ಎಂಬ ಮನ್ನಣೆಗಳಿಸಿರುವ ನಾಲ್ಕು ದಿನಗಳ ಈ ಆಚರಣೆಯು ಸಂಗೀತ, ರುಚಿಕರವಾದ ಖಾದ್ಯ ಹಾಗೂ ಶಾಪಿಂಗ್ ಚಟುವಟಿಕೆಗಳ ಸಮಾಗಮವಾಗಿದೆ.

ಚಿತ್ರಕೃಪೆ: Pdmsunburn

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಗೋವಾದ ಕಡಲ ತೀರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಈ ಸಂಗೀತ ಉತ್ಸವದಲ್ಲಿ ದೇಶ ವಿದೇಶಗಳ ವಿವಿಧ ಡಿಜೆಗಳು, ಸಂಗೀತ ಕಲಾಕಾರರು ಹಾಗೂ ಸಂಗೀತ ಪ್ರೀಯ ಪ್ರವಾಸಿಗರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಚಿತ್ರಕೃಪೆ: Ridhiin Pancchmatia

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸ್ಟ್ರಾವ್ಬೆರಿ ಫೀಲ್ಡ್ಸ್ : ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯ (ನ್ಯಾಷನಲ್ ಸ್ಕೂಲ್ ಆಫ್ ಲಾ) ದ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿ ವರ್ಷ ಈ ಸಂಗೀತೋತ್ಸವವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಿಂದಲೆ ಆಯೋಜಿಸಲಾಗುವ ಈ ಸಂಗೀತ ಉತ್ಸವ ಭಾರತದ ವಿದ್ಯಾರ್ಥಿವಲಯದಲ್ಲಿ ಹೆಸರುವಾಸಿಯಾಗಿದ್ದು ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿಗಳು, ಕಲಾ ತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Sonara Arnav

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸ್ವಾತಿ ಸಂಗೀತೋತ್ಸವಂ : ಕೇರಳದ ತಿರುವನಂತಪುರಂನ ತಿರುವಾಂಕೂರು ಅರಮನೆಯ ಕುಟಿರ ಮಲಿಕಾದಲ್ಲಿ ಪ್ರತಿವರ್ಷ ಜನವರಿ 4 ರಿಂದ 13 ರವರೆಗೆ ಹತ್ತು ದಿನಗಳ ಕಾಲ 19 ನೇಯ ಶತಮಾನದ ಆರಮ್ಭದಲ್ಲಿ ತಿರುವಾಂಕೂರಿನ ರಾಜನಾಗಿದ್ದ ಸ್ವಾತಿ ತಿರುನಾಲ್ ರಾಮ ವರ್ಮರವರ ನೆನಪಿನಾರ್ಥವಾಗಿ ಈ ಶಾಸ್ತ್ರೀಯ ಸಂಗೀತೋತ್ಸವವನ್ನು ತಿರುವಾಂಕೂರು ಟ್ರಸ್ಟ್ ವತಿಯಿಂದ ಆಚರಿಸಲಾಗುತ್ತದೆ. ಸ್ವಾತಿ ತಿರುನಾಲ್ ಅವರು ಒಬ್ಬ ಅದ್ಭುತ ಸಂಗೀತಗಾರರಾಗಿದ್ದು 500 ಕ್ಕೂ ಶಾಸ್ತ್ರೀಯ ಸಂಗೀತಗಳನ್ನು ರಚಿಸಿ ನಿರ್ಮಿಸಿದ್ದಾರೆ.

ಚಿತ್ರಕೃಪೆ: Satlaj

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸಂತ ಹಾಗೂ ಕರ್ನಾಟಿಕ್ ಶೈಲಿಯ ಸಂಗೀತ ರಚನೆಕಾರರಾದ ಶ್ರೀ ತ್ಯಾಗರಾಜರ ವಾರ್ಷಿಕ ಪುಣ್ಯಸ್ಮರಣೆಯದಿನದಂದು ಶ್ರೀ ತ್ಯಾಗಬ್ರಹ್ಮ ಮಹೋತ್ಸವ ಸಭೆಯವತಿಯಿಂದ ಅವರ ಸಮಾಧಿ ಮಂದಿರವಿರುವ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವೈಯಾರು ಗ್ರಾಮದಲ್ಲಿ ನಡೆಸಲಾಗುತ್ತದೆ.

ಚಿತ್ರಕೃಪೆ: Msvamsi

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ತ್ಯಾಗರಾಜರು ಪುಶ್ಯ ಮಾಸದಲ್ಲಿ ದೇಹ ತ್ಯಜಿಸಿದ ಕಾರಣ ಪುಶ್ಯ ಬಹುಳ ಪಂಚಮಿ ದಿನದಂದು ಕಾವೇರಿ ನದಿ ತಟದಲ್ಲಿರುವ ಅವರ ಸಮಾಧಿಯ ಸ್ಥಳದಲ್ಲಿ ಈ ಸಂಗೀತೋತ್ಸವವನ್ನು ಆಚರಿಸಲಾಗುತ್ತದೆ. ದೇಶ ವಿದೇಶಗಳಲ್ಲಿರುವ ಕರ್ನಾಟಿಕ್ ಶೈಲಿಯ ಸಂಗೀತಗಾರರು ಹಾಗೂ ಸಂಗೀತಾಸಕ್ತರು ಈ ಉತ್ಸವದಲ್ಲಿ ಪಾಲ್ಗೊಂಡು ತ್ಯಾಗರಾಜರಿಗೆ ಗೌರವ ಸಮರ್ಪಿಸುತ್ತಾರೆ.

ಚಿತ್ರಕೃಪೆ: Msvamsi

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ತಾನ್ಸೇನ್ ಉತ್ಸವ : ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ಪಟ್ಟಣದ ಬೆಹತ್ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ಡಿಸೆಂಬರ್ ಸಮಯದಲ್ಲಿ ಆಯೋಜಿಸಲಾಗುವ ತಾನ್ಸೇನ್ ಸಂಗೀತ ಸಮಾರಂಭ ಉತ್ಸವವು ನಾಲ್ಕು ದಿನಗಳ ಅದ್ಭುತ ಸಂಗೀತಾಚರಣೆಯ ಉತ್ಸವವಾಗಿದೆ. ಭಾರತದ ಪ್ರಖ್ಯಾತ ಹಾಗೂ ಶ್ರೇಷ್ಠ ಸಂಗೀತಗಾರನಾದ ತಾನ್ಸೇನ್ ಅವರಿಗೆ ಗೌರವಾರ್ಥವಾಗಿ ದೇಶ ವಿದೇಶಗಳ ಸಂಗೀತಾಸಕ್ತರು ಹಾಗೂ ಸಂಗೀತಗಾರರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Tinkubasu

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಈಶಾನ್ಯ ಭಾರತದಲ್ಲಿ ಕಾಲೇಜು ಮಟ್ಟದಲ್ಲಿ ಪ್ರಖ್ಯಾತಿಗಳಿಸಿದ ಥಂಡರ್ ಮಾರ್ಚ್ ರಾಕ್ ಸಂಗೀತ ಉತ್ಸವವು ಸಾಕಷ್ಟು ಜನಪ್ರೀಯತೆಗಳಿಸಿದೆ. ಅಸ್ಸಾಂ ರಾಜ್ಯದ ಎರಡನೇಯ ದೊಡ್ಡ ಪಟ್ಟಣವಾದ ಸಿಲ್ಚರ್ ನಲ್ಲಿ ಈ ಸಂಗೀತೋತ್ಸವವು ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಸಿಲ್ಚರ್ ವತಿಯಿಂದ ನಡೆಸಲಾಗುತ್ತದೆ.

ಚಿತ್ರಕೃಪೆ: Gauranga.p

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಚೆಂಬೈ ಸಂಗೀತೋತ್ಸವ : ಕೇರಳದ ಗುರುವಾಯೂರಿನಲ್ಲಿ ಕರ್ನಾಟಿಕ್ ಶೈಲಿಯ ಸಂಗೀತದ ವಿದ್ವಾನರಾದ ಚೆಂಬೈ ಅವರ ನೆನಪಿನಾರ್ಥವಾಗಿ ಪ್ರತಿ ವರ್ಷ ಗುರುವಾಯೂರು ದೇವಸ್ಥಾನದ ವತಿಯಿಂದ ಗುರುವಾಯೂರು ಏಕಾದಶಿ (ವೃಶ್ಚಿಕ ಏಕಾದಶಿ) ನಡೆಯುವ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ಮೊದ ಮೊದಲು ಎರಡರಿಂದ ಮೂರ್ನಾಲ್ಕು ದಿನಗಳವರೆಗೆ ನಡೆಯುತ್ತಿದ್ದ ಈ ಉತ್ಸವ ಇತ್ತೀಚಿನ ಕೆಲ ಸಮಯದಿಂದ ಸಾಕಷ್ಟು ಜನಪ್ರೀಯಗೊಂಡು 12 ರಿಂದ 15 ದಿನಗಳವರೆಗೆ ಅದ್ದೂರಿಯಾಗಿ ನಡೆಯುತ್ತದೆ.

ಚಿತ್ರಕೃಪೆ: RanjithSiji

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವ : ಪುಣೆಯ ರಮಣ ಬಾಗ್ ನಲ್ಲಿರುವ ನಿವ್ ಇಂಗ್ಲೀಷ್ ಶಾಲೆಯಲ್ಲಿ ಪ್ರತಿ ವರ್ಷ ಡಿಸೆಂಬರ್ ಸಮಯದಲ್ಲಿ ಶಾಸ್ತ್ರೀಯ ಸಂಗೀತದ ರಸದೌತಣ ಉಣಬಡಿಸುವ ಈ ಉತ್ಸವ ನಡೆಯುತ್ತದೆ. ಭಾರತ ಕಂಡ ಅದ್ಭುತ ಸಂಗೀತಗಾರರಲ್ಲೊಬ್ಬರಾದ ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಸ್ಥಾಪಿತ ಆರ್ಯ ಸಂಗೀತ ಪ್ರಸಾರಕ ಮಂಡಳಿಯಿಂದ ಆಯೋಜಿಸಲಾಗುತ್ತದೆ. ನೀವು ಹಿಂದುಸ್ತಾನಿ ಸಂಗೀತದ ಅಭಿಮಾನಿಯಾಗಿದ್ದರೆ ಪುಣೆಗೊಮ್ಮೆ ತೆರಳಲೇಬೇಕು ಹಾಗೂ ಇದರಲ್ಲಿ ಪಾಲ್ಗೊಳ್ಳಲೇಬೇಕು. ಹೆಚ್ಚಿನ ಮಾಹಿತಿ.

ಚಿತ್ರಕೃಪೆ: Tinkubasu

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಸ್ವಾಮಿ ಹರಿದಾಸ್ ಸಂಗೀತ ಸಮ್ಮೇಳನ : ಸುರ್ ಸಿಂಗಾರ್ ಸಂಸದ್ ವತಿಯಿಂದ ಪ್ರತಿ ವರ್ಷ ಮುಂಬೈನಲ್ಲಿ ಈ ಅದ್ಭುತ ಉತ್ಸವವನ್ನು ಆಯೋಜಿಸಲಾಗುತ್ತದೆ. 16 ನೇಯ ಶತಮಾನದ ಸಂತ ಹಾಗೂ ಸಂಗೀತಗಾರ ಸ್ವಾಮಿ ಹರಿದಾಸರ ಗೌರವಾರ್ಥವಾಗಿ ಈ ಸಮ್ಮೇಳನವು 1952 ರಿಂದ ಆಯೋಜಿಸಲ್ಪಡುತ್ತಿದೆ. ಕೇವಲ ಹಿಂದುಸ್ತಾನಿ ಸಂಗೀತವಲ್ಲದೆ, ವಾದ್ಯ ನುಡಿತ ಹಾಗೂ ನೃತ್ಯಗಳೂ ಸಹ ಜರುಗುತ್ತವೆ.

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಮದ್ರಾಸ್ ಮ್ಯೂಸಿಕ್ ಸೀಸನ್ : ಮದ್ರಾಸ್ ಸಂಗೀತ ಸಮಯ ಎಂದು ಅರ್ಥೈಸಿಕೊಳ್ಳಬಹುದಾದ ಈ ಸಂಗೀತ ಉತ್ಸವವು ಇಂದಿನ ಚೆನ್ನೈನಲ್ಲಿ ಡಿಸೆಂಬರ್-ಜನವರಿ ಸಂದರ್ಭದಲ್ಲಿ ಒಂದುವರೆ ತಿಂಗಳ ಕಾಲ ಆಯೋಜಿಸಲ್ಪಡುತ್ತದೆ. ಇದನ್ನು ಕೆಲವರು ಜಗತ್ತಿನ ಅತಿ ದೊಡ್ಡ ಸಂಗೀತೋತ್ಸವ ಎಂದು ಹೇಳುತ್ತಾರೆ. ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ಕಲಾಕಾರರು ತಮ್ಮ ಪ್ರತಿಭೆಯನ್ನು ಇಲ್ಲಿ ತೋರಿಸುತ್ತಾರೆ. ದೇಶ ವಿದೇಶಗಳಿಂದ ಸಂಗೀತಾಸಕ್ತರು ಇದರಲ್ಲಿ ಪಾಲ್ಗೊಳ್ಳಲು ಬರುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Balaji Photography

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಕಲಾಸಾಗರಂ ವಾರ್ಷಿಕ ಸಂಗೀತ, ನೃತ್ಯ ಹಾಗೂ ನಾಟಕಗಳ ಸಾಂಸ್ಕೃತಿಕ ಉತ್ಸವ : ತೆಲಂಗಾಣ ರಾಜ್ಯದ ಅವಳಿ ನಗರಗಳಲ್ಲೊಂದಾದ ಸಿಕಂದರಾಬಾದ್ ನಲ್ಲಿ ಈ ಅದ್ಭುತ ಸಂಗೀತೋತ್ಸವ ನಡೆಯುತ್ತದೆ. ಹೈದರಾಬಾದ್ ನಗರಕ್ಕೆ ಹೊಸ ಹೊಸ ಸಂಗೀತ ಪ್ರತಿಭೆ ನೀಡಿರುವ ಖ್ಯಾತಿ ಹೊಂದಿದೆ ಈ ಉತ್ಸವ. ಸಾಮಾನ್ಯವಾಗಿ ಡಿಸೆಂಬರ್ ಸಮಯದಲ್ಲಿ ಇದು ಆಯೋಜಿಸಲ್ಪಡುತ್ತದೆ. ಕೇವಲ ಹಿಂದುಸ್ತಾನಿ ಸಂಗೀತವಲ್ಲದೆ ನಾಟ್ಯ ನೃತ್ಯಗಳನ್ನೂ ಇಲ್ಲಿ ಆಸ್ವಾದಿಸಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: sheetal saini

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಉರ್ಸ್ ಉತ್ಸವ : ರಾಜಸ್ಥಾನದ ಅಜ್ಮೇರ್ ನಲ್ಲಿ ಸೂಫಿ ಸಮುದಾಯದ ಸಂಗೀತಗಾರ, ಗಾಯಕ ಹಾಗೂ ಸೂಫಿ ಸಂತ ಮೋಯಿನುದ್ದಿನ್ ಚಿಶ್ತಿ ಅವರ ಗೌರವಾರ್ಥವಾಗಿ ಒಂದು ವಾರದ ಕಾಲ ಈ ಉತ್ಸವವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಬಂದ ಕವ್ವಾಲಿ ಗಾಯಕರು ಕವ್ವಾಲಿ ಸಂಗೀತದ ರುಚಿಯನ್ನು ಕೇಳುಗರಿಗೆ ಉಣಬಡಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ ಏಳನೆಯ ತಿಂಗಳಿನಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Joshua Singh

ಸಂಗೀತ ಸ್ಥಳಗಳು:

ಸಂಗೀತ ಸ್ಥಳಗಳು:

ಹರಬಲ್ಲಭ ಸಂಗೀತ ಸಮ್ಮೇಳನ : ಸಂತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಬಾಬಾ ಹರಬಲ್ಲಭ ಅವರ ಗೌರವಾರ್ಥವಾಗಿ ಪ್ರತಿ ವರ್ಷ ಪಂಜಾಬ್ ರಾಜ್ಯದ ಜಲಂಧರ್ ಪಟ್ಟಣದಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿರುವ ದೇವಿ ತಲಾಬ್ ನ ಶ್ರೀ ಸಿದ್ಧ ಪೀಠದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ನುರಿತ ಗಾಯಕರಲ್ಲದೆ ಈಗಷ್ಟೆ ಅರಳುತ್ತಿರುವ ಪ್ರತಿಭೆಗಳಿಗೂ ಸಹ ಇದು ವೇದಿಕೆಯಾಗಿದೆ.

ಚಿತ್ರಕೃಪೆ: Tinkubasu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X