Search
  • Follow NativePlanet
Share
» »ಪಶ್ಚಿಮ ಘಟ್ಟದಲ್ಲಿ ನಂಬಲಸಾಧ್ಯವಾದ ಸ್ಥಳಗಳು

ಪಶ್ಚಿಮ ಘಟ್ಟದಲ್ಲಿ ನಂಬಲಸಾಧ್ಯವಾದ ಸ್ಥಳಗಳು

By Manjula Balaraj Tantry

ಪಶ್ಚಿಮ ಘಟ್ಟವನ್ನು ಸಹ್ಯಾದ್ರಿ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಎಂಟು ಜೈವಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಸುಂದರವಾದ ಪರ್ವತ ಶ್ರೇಣಿಯು ದಕ್ಷಿಣ ಭಾರತದ 1600 ಕಿ.ಮೀ. ವ್ಯಾಪ್ತಿಯಲ್ಲಿದೆ ಮತ್ತು ವಿಶ್ವ ಪರಂಪರೆಯ ತಾಣವೆಂಬ ಹೆಸರನ್ನು ಹೊಂದಿದೆ.

ಈ ಘಟ್ಟವು 50 ಮಿಲಿಯನ್ ಜನರಿಗೆ ಆಶ್ರಯವಾಗಿರುವುದಲ್ಲದೆ ಇದು ಸುಮಾರು 400ಕ್ಕಿಂತಲೂ ಹೆಚ್ಚಿನ ವಿವಿಧ ಜಾತಿಯ ಹೂವಿನ ಗಿಡಗಳು, 645 ನಿತ್ಯಹರಿದ್ವರ್ಣ ಮರಗಳು, 120ಕ್ಕಿಂತಲೂ ಹೆಚ್ಚಿನ ಪ್ರಾಣಿಗಳ ಸಸ್ತನಿಗಳು,500 ಜಾತಿಯ ಪಕ್ಷಿಗಳು ಮತ್ತು ಅನೇಕ ಸರೀಸೃಪಗಳು, ಚಿಟ್ಟೆಗಳು ಮತ್ತು ಮೀನುಗಳು. ಈ ಶ್ರೇಣಿಯು ಉತ್ತರದಿಂದ ದಕ್ಷಿಣಕ್ಕೆ ಡೆಕ್ಕನ್ ಪ್ರಸ್ಥಭೂಮಿಯ ಪಶ್ಚಿಮ ಅಂಚಿನಲ್ಲಿದೆ ಮತ್ತು ಕೊಂಕಣದ ಕಿರಿದಾದ ಕರಾವಳಿ ಬಯಲು ಪ್ರದೇಶದಿಂದ ಅರೇಬಿಯನ್ ಸಮುದ್ರದಲ್ಲಿ ವಿಭಜನೆಗೊಳ್ಳುತ್ತದೆ.

PC: Muhammed Suhail

ನಂಬಲಸಾಧ್ಯವಾದ ಸ್ಥಳಗಳು ಪಶ್ಚಿಮ ಘಟ್ಟ

ಇಲ್ಲಿ ಸುಮಾರು 39 ಕೇಂದ್ರಗಳಿವೆ ಇವುಗಳಲ್ಲಿ ರಾಷ್ಟ್ರೀಯ ಉದ್ಯಾನವನಗಳೂ ಸೇರಿವೆ. ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಅರಣ್ಯಗಳನ್ನು ವಿಶ್ವ ಪರಂಪರೆ ತಾಣಗಳಾಗಿ ಪರಿಗಣಿಸಲಾಗಿದೆ.

ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಕೇರಳ ರಾಜ್ಯದ ಪೊನ್ಮುಡಿ ಕೂಡಾ ಒಂದು. ಇತರ ಗಿರಿಧಾಮಗಳಂತೆ ಇದು ಸದ್ದು ಗದ್ದಲಗಳಿಂದ ಕೂಡಿಲ್ಲ ಮತ್ತು ಪ್ರಶಾಂತವಾದ ಮತ್ತು ಶಾಂತ ರೀತಿಯ ವಾತಾವರಣವನ್ನು ಹೊಂದಿದೆ. ಈ ಬೆಟ್ಟದ ಏಕಾಂತ ಸ್ಥಳಕ್ಕೆ ನೀವು ಹೋಗುವುದಾದರೆ, ಬಂಡೆಗಳಲ್ಲಿ ಹಾದುಹೋಗಬೇಕು ಮತ್ತು ವಿಶಾಲವಾದ ತೆರೆದ ಪ್ರದೇಶಗಳಲ್ಲಿ ಮತ್ತು ಕೆಳಗಿರುವ ಜಮೀನು ಪ್ರದೇಶಗಳಲ್ಲಿ ನಿಂತುಕೊಳ್ಳಬಹುದು.

ಕ್ಕುಕ್ಕೆ ಸುಬ್ರಮಣ್ಯ

PC: karthick siva

ನಂಬಲಸಾಧ್ಯವಾದ ಸ್ಥಳಗಳು ಪಶ್ಚಿಮ ಘಟ್ಟ

ಇದು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿದ್ದು ಈ ದೇವಾಲಯವು ಕುಮಾರ ಪರ್ವತದ ಪ್ರಸಿದ್ಧ ಪರ್ವತ ಶ್ರೇಣಿಯನ್ನು ಒಳಗೊಂಡಿದೆ. ಇದು ದಕ್ಷಿಣ ಭಾರತದ ಉದ್ದಗಲಕ್ಕೂ ಚಾರಣಿಗರಿಗೆ ಅತ್ಯಂತ ಜನಪ್ರಿಯ ಯಾತ್ರಾ ಸ್ಥಳವಾಗಿದೆ.

ದೇವಾಲಯದ ಹಿಂಬಾಗದಲ್ಲಿ ಕುಮಾರ ಪರ್ವತವಿರುವುದರಿಂದ ದೇವಾಲಯದ ಪ್ರವೇಶ ದ್ವಾರದಿಂದ ನೋಡುವಾಗ ಒಂದು ಸುಂದರವಾದ ನೋಟವನ್ನು ಸೃಷ್ಟಿಸುತ್ತದೆ ಮತ್ತು ಸುಬ್ರಹ್ಮಣ್ಯ ದೇವಸ್ಥಾನವನ್ನು ರಕ್ಷಿಸುವಂತೆ ಅದರ ಪಕ್ಕದ ಶೇಷ ಪರ್ವತ ತನ್ನ ತೆರೆದ ಹೊರನೋಟದಿಂದ ಒಂದು ಸರ್ಪವನ್ನು ಹೋಲುವಂತಿದೆ.

ಕಾರ್ಕಳ

PC: Dr Murali Mohan Gurram

ನಂಬಲಸಾಧ್ಯವಾದ ಸ್ಥಳಗಳು ಪಶ್ಚಿಮ ಘಟ್ಟ

ಜೈನರ ಆಳ್ವಿಕೆಯ ಕಾಲದಲ್ಲಿ ಈ ನಗರವು ಪಾಂಡ್ಯ ನಗರಿ ಎಂದು ಕರೆಯಲ್ಪಡುತ್ತಿತ್ತು. ನಂತರ ಇದು ಕರಿಕಲ್ಲು ಎಂದು ಪುನ: ನಾಮಕರಣಗೊಂಡಿತು ಇದು ನಂತರ ಪರಿವರ್ತನೆಗೊಂಡು ಕಾರ್ಕಲ್ ಮತ್ತು ಕಡೆಗೆ ಕಾರ್ಕಳ ಎಂದು ಕರೆಯಲಾಯಿತು.

ಈ ಸ್ಥಳದಲ್ಲಿ ಅನೇಕ ಸಂಖ್ಯೆಯ ನೈಸರ್ಗಿಕ ಮತ್ತು ಐತಿಹಾಸಿಕ ಮಹತ್ವವನ್ನು ಒಳಗೊಂಡ ಜಾಗಗಳನ್ನು ಹೊಂದಿದೆ. ಮತ್ತು ಇದು ಪಶ್ಚಿಮ ಘಟ್ಟಗಳ ತಪ್ಪಲಲ್ಲಿದೆ ಈ ಜಾಗವು ವರ್ಷ ಪೂರ್ತಿ ಹಸಿರುಮಯವಾಗಿರುತ್ತದೆ. ಈ ಪಟ್ಟಣದಿಂದ ಶೃಂಗೇರಿ, ಹೊರನಾಡು, ಉಡುಪಿ, ಕೊಲ್ಲೂರು ಮತ್ತು ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸಲಾಗಿದೆ

ಕಕ್ಕಬೆ

PC: Siddarth.P.Raj

ನಂಬಲಸಾಧ್ಯವಾದ ಸ್ಥಳಗಳು ಪಶ್ಚಿಮ ಘಟ್ಟ

ಕಕ್ಕಬೆ ಚಾರುಣಿಗರಿಗೆ ಒಂದು ಸ್ವರ್ಗವಾಗಿದ್ದು ಇದು ಶಾಂತಿ ಬಯಸಿ ಬರುವವರನ್ನು ಕೂಡಾ ಆಕರ್ಷಿಸುತ್ತದೆ. ಇಲ್ಲಿ ಹಲವಾರು ತೊಂದರೆಗಳನ್ನು ಹೊಂದಿರುವುದರಿಂದ ಚಾರಣಕ್ಕೆ ಚಾಲೆಂಜ್ ಆಗಬಹುದಾದ ಸ್ಥಳವೆನಿಸಿದೆ.

ಕಕ್ಕಬೆ ಕೂಡ ಹೆಚ್ಚು ಪ್ರಚಲಿತವಿರುವ ಥ್ಯಾಡಿಂಡ ಮೋಲ್ಗೆ ಉತ್ತಮವಾದ ಟ್ರೆಕ್ಕಿಂಗ್ ಟ್ರೇಲ್ ಗಳನ್ನು ಪ್ರದರ್ಶಿಸುತ್ತದೆ ಇದು ಅತ್ಯಂತ ಸಾಹಸಮಯ ಮತ್ತು ಮೋಜಿನಿಂದ ಕೂಡಿದುದಾಗಿದೆ. ಇಲ್ಲಿನ ಗಾಳಿಯುಕ್ತ ಶಿಖರಗಳು, ಕೂರ್ಗ್ ಮತ್ತು ನೆರೆಯ ಪ್ರದೇಶಗಳ ಪರ್ವತ ಶ್ರೇಣಿಗಳು ಮತ್ತು ಕಣಿವೆಗಳು ಸಾಟಿಯಿಲ್ಲದ ವೀಕ್ಷಣೆಗಳನ್ನು ನೀಡುತ್ತವೆ

ಇಗತಪುರಿ

PC: Tejas Itraj

ನಂಬಲಸಾಧ್ಯವಾದ ಸ್ಥಳಗಳು ಪಶ್ಚಿಮ ಘಟ್ಟ

ಮಹಾರಾಷ್ಟ್ರದ ಪ್ರಶಾಂತ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಇಗತಪುರಿ ನಾಸಿಕ್ ಜಿಲ್ಲೆಯ ಮತ್ತೊಂದು ರತ್ನವಾಗಿದೆ.ಈ ಸ್ಥಳವು ಸಹ್ಯಾದ್ರಿ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯ ಟ್ರೆಕ್ಕಿಂಗ್ ಗಳು ಪ್ರಾರಂಭದ ಸ್ಥಳವಾಗಿದೆ ಮತ್ತು ಇದು ಕಲ್ಸುಬಾಯ್ ಪೀಕ್ ನ ಆರಂಭಿಕ ಹಂತವಾಗಿದೆ.

ಈ ಸ್ಥಳವು ಅಸಂಖ್ಯಾತ ಜಲಪಾತಗಳು ಮತ್ತು ಹಸಿರು ಪರ್ವತಗಳಿಂದ ನಂಬಲ ಸಾಧ್ಯವಾದ ಸೌಂದರ್ಯತೆಯನ್ನು ಹೊಂದಿದೆ, ಅದರಲ್ಲೂ ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಇಲ್ಲಿಯ ಸೌಂದರ್ಯಕ್ಕೆ ಪ್ರವಾಸಿಗರು ಮೋಡಿಗೊಳಗಾಗುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more