Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ- ಸರ್ಪಗಳ ದೇವತೆಯ ನಿವಾಸ ತಾಣ

32

ಕರ್ನಾಟಕ ರಾಜ್ಯದ  ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮಂಗಳೂರು ಸಮೀಪದ ಸುಳ್ಯದಲ್ಲಿದೆ. ಈ ದೇವಾಲಯವು ಸರ್ಪಗಳ ದೇವತೆಯಾದ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಗೆ ಪ್ರಸಿದ್ಧವಾಗಿದೆ. ಈ ದೇವಾಲಯದ ಕುರಿತಾದ ದಂತಕಥೆಗಳಿಂದಾಗಿ ಇದು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಹಲವು ಪೂಜಾ ಕೈಂಕರ್ಯಗಳಿಗಾಗಿ ಭಕ್ತರು ಎಲ್ಲೆಡೆಯಿಂದ ಈ ದೇವಾಲಯಕ್ಕೆ ಆಗಮಿಸುತ್ತಾರೆ.

 

ಪ್ರಾಚೀನ ಸಿದ್ದಾಂತದತ್ತ ಒಂದು ನೋಟ

ಒಂದು ಪ್ರಾಚೀನ ಸಿದ್ದಾಂತವೊಂದರ ಪ್ರಕಾರ, ಈಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿರುವ ಸ್ಥಳದಲ್ಲಿ ಸರ್ಪಗಳ ರಾಜನಾದ ವಾಸುಕಿಯು, ಗರುಡನ ಕೋಪದಿಂದ ಸರ್ಪ ಸಂಕುಲವನ್ನು ಕಾಪಾಡುವಂತೆ ಕೋರಿ ಪರಶಿವನನ್ನು ಕುರಿತು ತಪಸ್ಸು ಕೈಗೊಂಡನಂತೆ. ತಪಸ್ಸಿಗೆ ಮೆಚ್ಚಿದ ಶಿವನು ಸುಬ್ರಹ್ಮಣ್ಯನನ್ನು ಸರ್ಪಗಳನ್ನು ರಕ್ಷಿಸುವಂತೆ ಹೇಳಿ ಕಳುಹಿಸದನಂತೆ. ಹಾಗಾಗಿ ಸುಬ್ರಹ್ಮಣ್ಯನನ್ನು ಸರ್ಪಗಳ ರಕ್ಷಕನೆಂದು ಪೂಜಿಸಿ ಕೊಂಡು ಬರಲಾಗುತ್ತಿದೆ.

ಮತ್ತೊಂದು ಕುತೂಹಲದಾಯಕ ವಿಚಾರವೆಂದರೆ, ವಾಸುಕಿಯು ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಇಲ್ಲಿ ಒಂದು ಗರುಡಗಂಬವನ್ನು ನಿಲ್ಲಿಸಲಾಗಿದೆ. ಇದು ಬೆಳ್ಳಿಯಿಂದ ಮಾಡಲಾಗಿದ್ದು, ವಾಸುಕಿಯ ಉಸಿರಾಟದಿಂದ ಹೊರಬರುವ ವಿಷದ ಧೂಮದಿಂದ ಭಕ್ತಾದಿಗಳನ್ನು ಇದು ರಕ್ಷಿಸುತ್ತದೆಯಂತೆ. ಆಶ್ಲೇಷ ಬಲಿ ಮತ್ತು ಸರ್ಪ ಸಂಸ್ಕಾರ ಎಂಬ ಎರಡು ಪ್ರಮುಖ ಪೂಜೆಗಳನ್ನು ಈ ದೇವಾಲಯದಲ್ಲಿ ಕೈಗೊಳ್ಳಲಾಗುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ವಾಯು, ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ತಲುಪಬಹುದು. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವು ಮಂಗಳೂರಿನಲ್ಲಿದೆ. ರೈಲ್ವೇ ನಿಲ್ದಾಣವು ದೇವಾಲಯದಿಂದ 7 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮತ್ತು ಮಂಗಳೂರಿನಿಂದ ಹಲವಾರು ಬಸ್ಸುಗಳು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೊರಡುತ್ತವೆ.

ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧವಾಗಿದೆ

ಕುಕ್ಕೆ ಸುಬ್ರಹ್ಮಣ್ಯ ಹವಾಮಾನ

ಉತ್ತಮ ಸಮಯ ಕುಕ್ಕೆ ಸುಬ್ರಹ್ಮಣ್ಯ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಕ್ಕೆ ಸುಬ್ರಹ್ಮಣ್ಯ

  • ರಸ್ತೆಯ ಮೂಲಕ
    ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರಂತರವಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ( ಕೆ ಎಸ್ ಆರ್ ಟಿ ಸಿ) ಮತ್ತು ಖಾಸಗಿ ಬಸ್ಸುಗಳು ದಿನವಿಡೀ ಬೆಂಗಳೂರು ಮತ್ತು ಮಂಗಳೂರಿನಿಂದ ಹೋಗಿ ಬರುತ್ತಿರುತ್ತವೆ. ಈ ಬಸ್ಸುಗಳು ಮಿತವ್ಯಯಿ ಮತ್ತು ಸುರಕ್ಷಿತವಾಗಿವೆ. ಈ ಖಾಸಗಿ ಬಸ್ಸುಗಳ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಂಗಳೂರು ಮತ್ತು ಮಂಗಳೂರಿನಿಂದ ಹವಾನಿಯಂತ್ರಿತ, ಹವಾನಿಯಂತ್ರಿತವಲ್ಲದ ವೊಲ್ವೋ ಬಸ್ಸುಗಳ ಸೇವೆಯು ಸಹ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸುಬ್ರಹ್ಮಣ್ಯ ರಸ್ತೆ ರೈಲ್ವೆನಿಲ್ದಾಣವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತಿ ಸಮೀಪದ ರೈಲ್ವೆ ಜಂಕ್ಷನ್ ಆಗಿದೆ. ಅದು ಕುಕ್ಕೆ ಸುಬ್ರಹ್ಮಣ್ಯದಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಆಟೋ ರಿಕ್ಷಾ ಅಥವಾ ಟ್ಯಾಕ್ಸಿಗಳಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅದು ಇಲ್ಲಿಂದ 115 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಯೂರೋಪ್, ಏಶಿಯಾ, ಅಮೆರಿಕಾ, ಮಧ್ಯ ಪ್ರಾಚ್ಯ ಅಥವಾ ವಿಶ್ವದ ಇತರ ಸ್ಥಳಗಳಿಂದ ಬಂದು ಹೋಗುವವರಿಗೆ ಅತ್ಯಂತ ಅನುಕೂಲಕರ ವಿಮಾನ ನಿಲ್ದಾಣವಾಗಿದೆ. ಇದು ಕುಕ್ಕೆ ಸುಬ್ರಹ್ಮಣ್ಯದಿಂದ 340 ಕಿ.ಮೀ ದೂರದಲ್ಲಿ ನೆಲೆಸಿದ್ದು ಭಾರತದ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಂತಹ ನಗರಗಳ ಜೊತೆಗೆ ಸಹಾ ಉತ್ತಮ ವಿಮಾನ ಸಂಪರ್ಕ ಸೇವೆ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri