Search
  • Follow NativePlanet
Share
» »ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ

ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ

By Manjula Balaraj Tantry

ಭಾರತವು ವೈವಿಧ್ಯಮಯವಾದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಭಾರತದ ಪ್ರತೀ ರಾಜ್ಯದಲ್ಲೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪದ್ದತಿಗಳು ಮತ್ತು ಶೈಲಿಗಳು ವಿಭಿನ್ನ ರೀತಿಯಲ್ಲಿ ಇದ್ದು ಇದು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ವಿವಿಧ ರಾಜ್ಯಗಳಲ್ಲಿಯೂ ತನ್ನದೇ ಆದ ವಿಭಿನ್ನ ಶೈಲಿಯ ನೃತ್ಯಗಳನ್ನೂ ಹೊಂದಿವೆ. ಇದು ಸಾಮಾನ್ಯವಾಗಿ ಆಯಾ ರಾಜ್ಯದ ಸಾಂಪ್ರದಾಯಿಕ ಅಥವಾ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ.

ಇವುಗಳಲ್ಲಿ ಕೆಲವು ಜಾನಪದ ನೃತ್ಯಗಳನ್ನು ಕೆಲವು ಹಬ್ಬದ ಸಮಯದಲ್ಲಿ ಪೂಜಿಸಲು ಅಥವಾ ಆಚರಿಸುವ ಸಲುವಾಗಿ ಪ್ರಾಚೀನ ಯುಗದಿಂದಲೂ ನಡೆದುಕೊಂಡು ಬಂದಿರುವುದಾಗಿದೆ. ಆದುದರಿಂದ ನೀವು ಈ ಕೆಳಗಿನ ಭಾರತದ ಐದು ರಾಜ್ಯಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸಂಬಂಧ ಪಟ್ಟ ರಾಜ್ಯಗಳಲ್ಲಿಯ ಸಾಂಸ್ಕೃತಿಕ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುವ ಈ ಜಾನಪದ ನೃತ್ಯಗಳನ್ನು ವೀಕ್ಷಿಸುವುದನ್ನು ಮರೆಯದಿರಿ.

ಅಸ್ಸಾಂ

ಅಸ್ಸಾಂ

PC:Diganta Talukdar

ಅಸ್ಸಾಂ ತನ್ನಲ್ಲಿಯ ಜಾನಪದ ನೃತ್ಯವಾದ ಬಿಹು ನೃತ್ಯಕ್ಕೆ ಹೆಸರುವಾಸಿಯಾಗಿದೆ. ಈ ನೃತ್ಯವನ್ನು ಹೆಚ್ಚಾಗಿ ಬಿಹು ಹಬ್ಬದ ಆಚರಣೆಯ ಸಂದರ್ಭದಲ್ಲಿ ಮಾಡಲಾಗುತ್ತದೆ. ಪ್ರೀತಿಯು ಈ ಶಕ್ತಿಯುತವಾದ ಜಾನಪದ ನೃತ್ಯದ ಮುಖ್ಯ ವಿಷಯವಾಗಿದೆ ಎಂದು ಹೇಳಲಾಗುತ್ತದೆ.

ಪುರುಷರು ಮತ್ತು ಮಹಿಳೆಯರು ಬಿಹು ಹಬ್ಬದ ಸಂದರ್ಭದ ಸಮಯದಲ್ಲಿ ಸಮವಾದ ಸಾಲುಗಳು ಅಥವಾ ವೃತ್ತಾಕಾರ ಮಾಡಿಕೊಂಡು ಡ್ರಮ್ ಗಳು, ಪೈಪ್ ಗಳಂತಹ ಕೆಲವು ಸಂಗೀತ ಸಾಧನಗಳನ್ನು ಬಳಸಿ ಈ ನೃತ್ಯ ಮಾಡಲಾಗುತ್ತದೆ . ಈ ನೃತ್ಯವನ್ನು ಮಾಡುವಾಗ ಅಸ್ಸಾಂನ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಮಾಡಲಾಗುತ್ತದೆ ಇದರಿಂದ ಈ ನೃತ್ಯಕ್ಕೆ ಇನ್ನಷ್ಟು ಕಳೆ ಬರುತ್ತದೆ. ನೀವು ಅಸ್ಸಾಂ ಗೆ ಭೇಟಿ ಕೊಡುವ ಯೋಜನೆ ಹಾಕಿದ್ದಲ್ಲಿ, ಇಲ್ಲಿಯ ಸಾಂಪ್ರದಾಯಿಕ ನೃತ್ಯವನ್ನು ಆನಂದಿಸಿ.

ಲಾವಣಿ, ಮಹಾರಾಷ್ಟ್ರ

ಲಾವಣಿ, ಮಹಾರಾಷ್ಟ್ರ

PC:Devendra Makkar

ಲಾವಾಣಿ ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ನೃತ್ಯವಾಗಿದೆ ಮತ್ತು ಇದು ರಾಜ್ಯದ ಜನಪದ ರಂಗಭೂಮಿಯ ಅಭಿವೃದ್ಧಿಯ ಒಂದು ಭಾಗವಾಗಿದೆ. ಈ ಶಕ್ತಿಶಾಲಿಯಾದ ನೃತ್ಯ ರೂಪವು ಡೋಲ್ಕಿಯ ತಾಳಕ್ಕೆ ಸರಿಯಾಗಿ ನೃತ್ಯವನ್ನು ಮಾಡಲಾಗುತ್ತದೆ.ಈ ನೃತ್ಯವು ಸಾಮಾನ್ಯವಾಗಿ ಪ್ರೀತಿ ಮತ್ತು ಸಂಬಂಧಗಳ ವಿವರಣೆ ನೀಡುತ್ತದೆ. ಲಾವಣಿಯಲ್ಲಿ ಎರಡು ವಿಧಗಳಿವೆ ಅವು ಯಾವುವೆಂದರೆ ಫಡಾಚಿ ಮತ್ತು ಬೈತಾಕಿಚಿ. ಲಾವಣಿ ನೃತ್ಯ ಮಾಡುವವರು ಬಿಳಿ ಬಣ್ಣದ ಸಾಂಪ್ರದಾಯಿಕ ನುವಾರಿ ಸೀರೆಗಳನ್ನು ನೃತ್ಯ ಮಾಡುವಾಗ ಧರಿಸುತ್ತಾರೆ. ಮಹಾರಾಷ್ಟ್ರವಲ್ಲದೆ, ಈ ನೃತ್ಯ ರೂಪವು ಕರ್ನಾಟಕ, ತಮಿಳುನಾಡು ಮತ್ತು ಮಧ್ಯಪ್ರದೇಶಲ್ಲಿಯೂ ಸಾಕಷ್ಟು ಜನಪ್ರಿಯವಾಗಿದೆ.

ಭಾಂಗ್ರಾ , ಪಂಜಾಬ್

ಭಾಂಗ್ರಾ , ಪಂಜಾಬ್

PC:Onef9day

ಭಾರತವು ಅನೇಕ ಜಾನಪದ ನೃತ್ಯಗಳನ್ನು ತನ್ನಲ್ಲಿ ಹೊಂದಿದೆ. ಆದರೆ ಅವುಗಳೆಲ್ಲವುಗಳಿಗಿಂತಲೂ ಭಾಂಗ್ರವು ಅತ್ಯಂತ ಜನಪ್ರಿಯ ಮತ್ತು ವರ್ಣಮಯ ಜಾನಪದ ನೃತ್ಯವಾಗಿದೆ. ಇದರ ಮೂಲವು ಪಂಜಾಬಿನ ಪ್ರದೇಶದಿಂದ ಬಂದುದಾಗಿದ್ದು ಇದನ್ನು ಮಾಝಾ ಎಂದು ಕರೆಯಲ್ಪಡುತ್ತದೆ. ಈ ನೃತ್ಯವನ್ನು ಬೈಸಾಕಿ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ ಬೈಸಾಕಿ ಪಂಜಾಬಿನ ಸುಗ್ಗಿಯ ಹಬ್ಬವಾಗಿದೆ. ಭಾಂಗ್ರಾ ವನ್ನು ಹೆಚ್ಚಾಗಿ ಪುರುಷರು ಪ್ರದರ್ಶಿಸುತ್ತಾರೆ ಆದರೆ ಕೆಲವೊಮ್ಮೆ ಮಹಿಳೆಯರೂ ಕೂಡಾ ಈ ಉತ್ಸಾಹಿ ಹಾಗೂ ಶಕ್ತಿಯುತ ಜಾನಪದ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಈ ನೃತ್ಯ ಪ್ರಕಾರದಲ್ಲಿ ಬಹಳಷ್ಟು ಪಾದಗಳ ಚಲನೆಯನ್ನು ಹೊಂದಿದೆ. ಇದನ್ನು ಡ್ರಮ್ ಗಳ ಲಯಕ್ಕೆ ಸರಿಯಾಗಿ ಮಾಡಲಾಗುತ್ತದೆ.

ಘೂಮರ್ , ರಾಜಸ್ಥಾನ್

ಘೂಮರ್ , ರಾಜಸ್ಥಾನ್

PC: Daniel Villafruela

ರಾಜಸ್ಥಾನವು ಘೂಮರ್ ನೃತ್ಯಕ್ಕೆ ಹೆಸರುವಾಸಿಯಾಗಿದೆ. ಇದನ್ನು ಮಹಿಳೆಯರಿಂದ ವರ್ಣಮಯ ಲೆಹೆಂಗಾ ಬಟ್ಟೆಯನ್ನು ಧರಿಸಿ ನರ್ತಿಸಲಾಗುತ್ತದೆ. ಈ ನೃತ್ಯವನ್ನು ಘೂಮ್ನಾ ಎಂಬ ಶಬ್ದದಿಂದ ಆರಿಸಲಾಗಿದ್ದು ಇದರ ಅರ್ಥ ವೃತ್ತಾಕಾರದ ಚಲನೆಯಲ್ಲಿ ನರ್ತಿಸುವುದು ಎಂಬುದಾಗಿದೆ.ಘೂಮರ್ ನೃತ್ಯ ಮಾಡುವಾಗ ತಮ್ಮ ಬೆರಳುಗಳಿಂದ ಚಪ್ಪಾಳೆ ಹೊಡೆಯುತ್ತಾರೆ ಮತ್ತು ಸುಂದರವಾದ ರಾಜಸ್ಥಾನಿ ಹಾಡುಗಳೊಂದಿಗೆ ಪೈರೋಲೆಟ್ ಜೊತೆಗೆ ವರ್ಣರಂಜಿತವಾಗಿ ಮತ್ತು ರೋಮಾಂಚಕವಾಗಿ ನೃತ್ಯ ಮಾಡಲಾಗುತ್ತದೆ.ಈ ನೃತ್ಯ ಪ್ರಕಾರವನ್ನು ರಾಜಸ್ಥಾನದ ಭಿಲ್ ಬುಡಕಟ್ಟು ಜನಾಂಗದವರಿಂದ ವ್ಯಾಪಕವಾಗಿ ನಿರ್ವಹಿಸಲಾಗುತ್ತದೆ.

ಚಾವು ಪಶ್ಚಿಮ ಬಂಗಾಳ

ಚಾವು ಪಶ್ಚಿಮ ಬಂಗಾಳ

PC:Suyash Dwivedi

ಭಾರತದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಜಾರ್ಖಂಡ್ ನಲ್ಲಿ ಚಾವು ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಈ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ದೇಹ ಚಲನೆ ಮತ್ತು ನಮ್ಯತೆಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ. ಚಾವು ನೃತ್ಯವನ್ನು ಚೈತ್ರ ಪರ್ವದ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಹಬ್ಬವು 13-ದಿನಗಳ ದೀರ್ಘ ವಸಂತ ಹಬ್ಬವಾಗಿದೆ.ಈ ನೃತ್ಯ ಶೈಲಿಯು ದೇಶೀಯ ಚೋರ್ ಚಲನೆಗಳು, ಸಮರ ಕಲೆಗಳು ಮತ್ತು ಹಲವಾರು ಇತರ ಯುದ್ಧ ತಂತ್ರಗಳನ್ನು ಪ್ರದರ್ಶಿಸುತ್ತದೆ.ಭಾರತದಲ್ಲಿನ ಅತ್ಯಂತ ಕಠಿಣ ಮತ್ತು ವಿಶಿಷ್ಟ ಜಾನಪದ ನೃತ್ಯಗಳಲ್ಲಿ ಚಾವು ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more