Search
  • Follow NativePlanet
Share
» »ನಾಸಿಕ್ ಸಮೀಪದಲ್ಲಿರುವ ರಮಣೀಯ ತಾಣಗಳಿವು

ನಾಸಿಕ್ ಸಮೀಪದಲ್ಲಿರುವ ರಮಣೀಯ ತಾಣಗಳಿವು

By Manjula Balaraj Tantry

ನಾಸಿಕ್ ಮಹಾರಾಷ್ಟ್ರದಲ್ಲಿರುವ ಒಂದು ಅದ್ಬುತವಾದ ಸ್ಥಳವಾಗಿದೆ ಮತ್ತು ಇದರ ಸುಂದರವಾದ ಯಾತ್ರಾಸ್ಥಳಗಳು ಮತ್ತು ದ್ರಾಕ್ಷಿ ತೋಟಗಳಿಂದಾಗಿ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿರುವ ವೈನ್ ಗಳು ನಾಸಿಕ್ ನ ಗಡಿಯಲ್ಲಿಯೇ ಕಂಡುಬರುವುದರಿಂದ ಭಾರತದ ವೈನ್ ರಾಜಧಾನಿಯೆಂದು ಈ ನಗರವನ್ನು ಕರೆಯಲಾಗುತ್ತದೆ.

ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ನಾಸಿಕ್ ನ ವೈಭವಗಳನ್ನು ನೋಡಿ ಬೇಜಾರಾಗಿದ್ದಲ್ಲಿ ಮತ್ತು ಇಲ್ಲಿಯ ಸ್ವರ್ಗ ಸದೃಶ್ಯವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಸೆರೆಹಿಡಿಯಲು ನೋಡುತ್ತಿದ್ದಲ್ಲಿ, ನೀವು ಈ ಕೆಳಗಿನ ಸುಂದರವಾದ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವಂತಹ ಸ್ಥಳಗಳನ್ನು ನಾಸಿಕ್ ನಿಂದ 200 ಕಿ.ಮೀ ಅಂತರದಲ್ಲಿರುವ ಭೇಟಿ ಕೊಡಬಹುದಾದಂತಹ ಹಾಗೂ ರಸ್ತೆ ಮೂಲಕ ತಲುಪಬಹುದಾದಂತಹ ಸ್ಥಳಗಳ ಬಗ್ಗೆ ತಿಳಿಯಿರಿ.

ಮಲ್ಶೇಜ್ ಘಾಟ್

ಮಲ್ಶೇಜ್ ಘಾಟ್

PC: Siddhanth R. Menon

ನಾಸಿಕ್ ನಿಂದ ಅಂತರ - 130ಕಿ.ಮೀ ನಿಸ್ಸಂದೇಹವಾಗಿಯೂ ಸ್ವರ್ಗ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಲ್ಶೇಜ್ ಘಾಟ್ ಒಂದು ಸುಂದರವಾದ ಪರ್ವತ ಶ್ರೇಣಿಯಾಗಿದ್ದು ಇದು ಇದರ ಶ್ರೀಮಂತ ದಟ್ಟವಾದ ಸಸ್ಯವರ್ಗಕ್ಕೆ ಹಾಗೂ ವೈವಿಧ್ಯಮಯ ವನ್ಯಜೀವಿಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ವಿಸ್ತರಿಸಿರುವ, ಈ ತಾಣವು ಪ್ರಕೃತಿ ಪ್ರೇಮಿಗಳಿಂದ ಹಿಡಿದು ಸಾಹಸವನ್ನು ಇಷ್ಟಪಡುವ ಪ್ರತೀ ಪ್ರವಾಸಿಗರಿಗೂ ಬೇಕಾದುದನ್ನು ಒದಗಿಸುತ್ತದೆ. ಇನ್ನೊಂದೆಡೆ ನೀವು ಇಲ್ಲಿಯ ಪರ್ವತ ಶ್ರೇಣಿಗಳ ಸೌಂದರ್ಯಗಳನ್ನು ಮತ್ತು ವರ್ಣಮಯ ಪಕ್ಷಿಗಳನ್ನುಈ ಪ್ರದೇಶಗಳಲ್ಲಿ ಕಾಣಬಹುದು ಮತ್ತು ಇನ್ನೊಂದೆಡೆ ನಿಮ್ಮ ಕೆಲವು ಕ್ಷಣಗಳನ್ನು ಟ್ರಕ್ಕಿಂಗ್ ನ ಹಾದಿಗಳಲ್ಲಿಯೂ ಕಳೆಯಬಹುದಾಗಿದೆ.

ಸ್ವರ್ಗದಂತಿರುವ ಸೌಂದರ್ಯ

ಸ್ವರ್ಗದಂತಿರುವ ಸೌಂದರ್ಯ

PC: KartikMistry

ಈ ಪ್ರದೇಶವು ತೊರೆಗಳು, ಜಲಪಾತಗಳಿಂದ ಆಶೀರ್ವದಿಸಲ್ಪಟ್ಟಿದ್ದು, ಬೆಟ್ಟಗಳು, ಜಲಪಾತಗಳು,ಹುಲ್ಲುಗಾವಲುಗಳು ಮತ್ತು ವನ್ಯಜೀವಿಗಳು ಇವೆಲ್ಲವನ್ನೂ ಹೊಂದಿರುವ ಇದು ಮಹಾರಾಷ್ಟ್ರದ ಒಂದು ಸುಂದರವಾದ ಛಾಯಾಗ್ರಹಣಕ್ಕೆ ಯೋಗ್ಯವಾದ ಸ್ಥಳವೆನಿಸಿದೆ.

ನೀವು ಈ ಸ್ವರ್ಗದಂತಿರುವ ಸೌಂದರ್ಯವನ್ನು ನೋಡಲು ತಪ್ಪಿಸಿಕೊಳ್ಳಲೇಬಾರದು. ಪ್ರಕೃತಿಯ ಕಚ್ಚಾ ರೂಪವನ್ನು ಹತ್ತಿರದಿಂದ ಅನುಭವಿಸಬೇಕೆಂದಿದ್ದಲ್ಲಿ ಅದೂ ಸಾಮಾನ್ಯ ಪ್ರವಾಸಿಗರ ಯಾವುದೇ ತೊಂದರೆಯೂ ಇಲ್ಲದೇ ಇರುವ ಸ್ಥಳಕ್ಕೆ ಭೇಟಿ ಕೊಡಲು ನೋಡುತ್ತಿದ್ದಲ್ಲಿ ಈ ಋತುವಿನಲ್ಲಿ ಮಲ್ಶೇಜ್ ಘಾಟ್ ಗೆ ಏಕೆ ಹೋಗಬಾರದು?

ಸಪುತಾರ

ಸಪುತಾರ

PC: Mayur.thakare

ನಾಸಿಕ್ ನಿಂದ -85 ಕಿ.ಮೀ ಅಂತರ

ಸಪುತಾರ ಗುಜರಾತ್ ರಾಜ್ಯದಲ್ಲಿದೆ ಮತ್ತು ವಾರಾಂತ್ಯವನ್ನು ದಟ್ಟವಾದ ಪ್ರಕೃತಿಯ ಮಧ್ಯೆ ಕಳೆಯ ಬಯಸುವಿರಾದಲ್ಲಿ ಈ ಸ್ಥಳವು ಒಂದು ಅತ್ಯಂತ ಸೂಕ್ತವಾದ ಸ್ಥಳವೆನಿಸಿದೆ. ಕುಟುಂಬದವರು ಅಥವಾ ಸ್ನೇಹಿತರೊಡನೆ ಭೇಟಿ ಕೊಡಲು ಈ ಸ್ಥಳವು ಉತ್ತಮವಾದುದಾಗಿದೆ.

ಆಹ್ಲಾದಕರವಾದ ವಾತಾವರಣ, ಸೊಂಪಾದ ಕಾಡುಗಳು, ಸ್ಮರಣೆಯಲ್ಲಿರಿಕೊಳ್ಳಬೇಕೆನಿಸುವಂತಹ ನೀರಿನ ಜಲಪಾತಗಳು, ಮತ್ತು ತೇವಭರಿತ ಹುಲ್ಲುಗಾವಲುಗಳು ಇವೆಲ್ಲವನ್ನೂ ವರ್ಷವಿಡೀ ಕಾಣಬಹುದು ಅಲ್ಲದೆ ಈ ಊಹೆಗೂ ನಿಲುಕದಂತಿರುವ ಸೌಂದರ್ಯವನ್ನು ಹೊಂದಿರುವ ಗಿರಿಧಾಮದ ಸುಂದರವಾದ ಹಿನ್ನೆಲೆಯು ನಿಮ್ಮ ಮೈ ಮನಸ್ಸನ್ನು ಆಹ್ಲಾದಗೊಳಿಸುತ್ತದೆ.

ಗಿರಿಧಾಮವೂ ಆಗಿದೆ

ಗಿರಿಧಾಮವೂ ಆಗಿದೆ

PC:Mikulkp

ದಾಂಗ್ ಜಿಲ್ಲೆಯಲ್ಲಿರುವ ಸಪುತಾರ ಗುಜರಾತಿನ ಜನಪ್ರಿಯ ಗಿರಿಧಾಮಗಳಲ್ಲೊಂದಾಗಿದೆ ಮತ್ತು ಇದು ಸುಸಜ್ಜಿತವಾದ ನಿರ್ವಹಿಸಲ್ಪಟ್ಟ ವಾತಾವರಣಕ್ಕೂ ಹೆಸರುವಾಸಿಯಾಗಿದೆ. ಕೇಬಲ್ ಕಾರಿನ ಸವಾರಿಯಿಂದ ದೋಣಿ ವಿಹಾರದ ಮೂಲಕ ಮಾಡಿ ಆನಂದಿಸಬಹುದಾಗಿದೆ ಅಲ್ಲದೆ ಸಪುತಾರ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನೂ ಅನೇಕ ವಿಷಯಗಳನ್ನು ಮಾಡಬಹುದಾಗಿದೆ.

ಇಗತ್ಪುರಿ

ಇಗತ್ಪುರಿ

PC: Superfast1111

ನಾಸಿಕ್ ನಿಂದ 45 ಕಿ.ಮೀ ಅಂತರ

ಇಗತ್ಪುರಿ ಮಹಾರಾಷ್ಟ್ರದಲ್ಲಿರುವ ಹೆಸರಾಂತ ಗಿರಿಧಾಮವಾಗಿದೆ ಮತ್ತು ಪಶ್ಚಿಮ ಘಟ್ಟಗಳಿಂದ ಸುತ್ತುವರಿಯಲ್ಪಟ್ಟಿದ್ದು, ಇದರಿಂದಾಗಿ ಈ ಸ್ಥಳವು ಇನ್ನೂ ಸುಂದರವಾಗಿ ಕಾಣುವಂತೆ ಮೆರುಗನ್ನು ನೀಡುತ್ತದೆ. ಈ ಸ್ಥಳವು ಧ್ಯಾನ ಮಾಡಲು ಹೇಳಿ ಮಾಡಿಸಿರುವುದರಿಂದಾಗಿ ದೇಶದಾದ್ಯಂತದ ಸಾವಿರಾರು ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ.

ಇಲ್ಲಿ ದೇವಾಲಯಗಳಿಂದ ಹಿಡಿದು ಸರೋವರಗಳವರೆಗೆ ಮತ್ತು ಕೋಟೆಗಳಿಂದ ಹಿಡಿದು ಹತ್ತಾರು ಸ್ಥಳಗಳನ್ನು ಕಾಣಬಹುದಾಗಿದೆ. ದಟ್ಟವಾದ ಹಸಿರು ಮತ್ತು ನೀಲಿ ಆಕಾಶದ ಹಿನ್ನಲೆಯಲ್ಲಿರುವ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳು ನಯನ ಮನೋಹರ ದೃಶ್ಯವನ್ನು ಒದಗಿಸಿಕೊಡುವುದಲ್ಲದೆ ನಿಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲು ಉತ್ತಮವಾದ ದೃಶ್ಯಗಳನ್ನು ಒದಗಿಸಿಕೊಡುತ್ತದೆ.

ಇಲ್ಲಿಯ ಮುಖ್ಯವಾದ ಸ್ಥಳಗಳಲ್ಲಿ ಅರ್ತೂರ್ ಸರೋವರಗಳು, ಅಮೃತೇಶ್ವರ್ ದೇವಾಲಯ, ಭಟ್ಸಾ ನದಿಕಣಿವೆ, ತ್ರಿಂಗಾಲ್ವಾಡಿ ಕೋಟೆ ಮತ್ತು ಧಮ್ಮಾ ಗಿರಿ ಧ್ಯಾನ ಕೇಂದ್ರ ಇತ್ಯಾದಿಗಳನ್ನು ಒಳಗೊಂಡಿದೆ.

ಲೋನಾವಾಲ ಮತ್ತು ಖಂಡಾಲ

ಲೋನಾವಾಲ ಮತ್ತು ಖಂಡಾಲ

PC:Acewings

ನಾಸಿಕ್ ನಿಂದ ದೂರ - 198 ಕಿ.ಮೀ

ನಿಮ್ಮ ವಾರಾಂತ್ಯವನ್ನು ಪ್ರಶಾಂತವಾದ ಮತ್ತು ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ಆರಾಮವಾಗಿ ಕಳೆಯಲು ಬಯಸುವಿರಿ ಎಂದಾದಲ್ಲಿ ಈ ಅವಳಿ ಗಿರಿಧಾಮಗಳಾದ ಲೋನಾವಾಲ ಮತ್ತು ಖಂಡಾಲಗಳಿಗೆ ಈ ಋತುವಿನಲ್ಲಿ ಭೇಟಿ ಕೊಡಿ.

ಇದು ಹಿಂದಿನಿಂದಲೂ ಜನಪ್ರಿಯ ಸ್ಥಳವಾಗಿದ್ದರೂ ಬೇಸಿಗೆ ಕಾಲದಲ್ಲಿ ಸಾವಿರಾರು ಜನ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಇನ್ನೂ ಕೆಲವು ಗಮನಕ್ಕೆ ಬರದ ಹಾಗೂ ಅನ್ವೇಷಣೆಗೊಳಬೇಕಾದ ಅನೇಕ ಸ್ಥಳಗಳು ತಮ್ಮ ಭವ್ಯತೆಗಳಿಂದ ನಿಮ್ಮನ್ನು ಅಚ್ಚರಿಗೊಳಿಸುತ್ತವೆ.

ಅವಳಿ ಗಿರಿಧಾಮ

ಅವಳಿ ಗಿರಿಧಾಮ

PC: Sheetal patel17

ಇಲ್ಲಿ ಬಂಡೆಗಳಿಂದ ಹಿಡಿದು ದೃಶ್ಯಗಳನ್ನು ನೋಡಬಹುದಾದ ಸ್ಥಳಗಳವರೆಗೆ ಮತ್ತು ಚಾರಣ ಮಾಡುವ ಸ್ಥಳದಿಂದ ಕ್ಯಾಂಪಿಂಗ್ ತಾಣಗಳವರೆಗೆ ಈ ಅವಳಿ ಗಿರಿಧಾಮಗಳಾದ ಲೋನಾವಾಲ ಮತ್ತು ಖಂಡಾಲ ತಮ್ಮಲ್ಲಿಗೆ ಬರುವ ಸಂದರ್ಶಕರನ್ನು ತಮ್ಮ ಭವ್ಯತೆಗಳಿಂದ ತಮ್ಮ ಆಸೆಗಳನ್ನು ಪೂರೈಸಲು ಸಹಾಯ ಮಾಡುತ್ತವೆ.

ಇಲ್ಲಿಯ ನಿರ್ಮಲ ಸೌಂದರ್ಯವನ್ನು ಹೊಂದಿರುವ ಗಿರಿಧಾಮವು ಭೂಮಿಯಲ್ಲಿ ಸ್ವರ್ಗವೇ ಇಳಿದು ಬಂದಂತೆ ಕಾಣುತ್ತದೆ. ಪ್ರಕೃತಿಯ ಈ ಸುಂದರವಾದ ಸ್ಥಳವನ್ನು ನೀವು ಪ್ರೀತಿಸದೇ ಇರಲು ಸಾಧ್ಯವೆ ?

ಮಥೆರಾನ್

ಮಥೆರಾನ್

PC:Sanjay gorivale

ನಾಸಿಕ್ ನಿಂದ 165 ಕಿ.ಮೀ ಅಂತರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಮಥೆರಾನ್ ಹೊಸದಾಗಿ ಜನಪ್ರಿಯತೆ ಗಳಿಸುತ್ತಿರುವ ಗಿರಿಧಾಮವಾಗಿದೆ ಮತ್ತು ಇದು ಇದರ ಸುಂದರವಾದ ದೃಶ್ಯಾವಳಿಗಳು, ಸರೋವರಗಳು ವರ್ಣಮಯ ಉದ್ಯಾನವನಗಳು ಮತ್ತು ವಿಶ್ರಾಂತಿ ಪಡೆಯುವ ಹುಲ್ಲಿನ ನೆಲಗಳನ್ನು ಹೊಂದಿದ್ದು ಜನಪ್ರಿಯತೆಗೆ ಕಾರಣವಾಗಿದೆ. ಇದೊಂದು ಪ್ರಕೃತಿ ಯ ಹಾಗೂ ಎಲ್ಲದರ ಸಮ್ಮಿಲನವಾಗಿರುವ ಒಂದು ಸೂಕ್ತವಾದ ಚಿತ್ರಣವನ್ನು ನೀಡುತ್ತದೆ.

ಆದುದರಿಂದ ನೀವು ನಿಮ್ಮ ಸ್ನೇಹಿತರ ಜೊತೆಗೆ ಸೇರಿಕೊಂಡು ಹೊರಗೆ ಹೋಗಲು ಮತ್ತು ಪ್ರಕೃತಿಯ ಭವ್ಯತೆಯನ್ನು ನೋಡಲು ಸುಂದರವಾದ ಸ್ಥಳವನ್ನು ನೀವು ಹುಡುಕುತ್ತಿದ್ದಲ್ಲಿ ಮಾಥೆರಾನ್ ನಿಮಗೆ ಸೂಕ್ತವಾದಂತಹ ಸ್ಥಳವಾಗಿದೆ. ಇಲ್ಲಿಯ ಶಾಂತಿಯುತ ವಾತಾವರಣದಲ್ಲಿ ನೀವು ಕ್ಯಾಂಪಿಂಗ್ ಅಥವಾ ಟ್ರಕ್ಕಿಂಗ್ ಕೂಡಾ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more