Search
  • Follow NativePlanet
Share
» »ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

By Manjula Balaraj

ಮುಂಬೈನಂತೆ ಇನ್ನೊಂದು ಸ್ಥಳವಿರಲು ಸಾಧ್ಯವಿಲ್ಲ. ಇದು ಕನಸುಗಾರರ , ಆಹಾರಪ್ರಿಯರ, ವ್ಯಾಪಾರಸ್ಥರ, ನಟರ, ಹೊಸಬರು , ಮಾಧ್ಯಮದ ಕಚೇರಿಗಳು ಮತ್ತು ಇತ್ಯಾದಿ ಪಟ್ಟಿ ಮಾಡಲು ಸಾಧ್ಯವಿಲ್ಲದಷ್ಟು ವಿಷಯಗಳನ್ನು ತನ್ನಲ್ಲಿ ಹೊಂದಿರುವ ನಗರವಾಗಿದೆ. ಈ ಕನಸಿನ ನಗರದಲ್ಲಿ ಪ್ರತಿಯೊಬ್ಬರಿಗೂ ಏನನ್ನಾದರೂ ಒದಗಿಸುವಂತಹ ನಗರವಾಗಿದೆ ಈ ಮುಂಬೈ ಮಹಾನಗರಿ. ಕೆಲವರು ಇದನ್ನು ನಿರಂತರವಾಗಿ ಚಾಲನೆಯಲ್ಲಿರುವ ನಗರವೆಂದರೆ ಇನ್ನುಕೆಲವರು ಅತ್ಯಂತ ತ್ವರಿತಗತಿಯಲ್ಲಿ ಮತ್ತು ಚುರುಕಾಗಿರುವ ಮತ್ತು ಒಬ್ಬರ ಕನಸನ್ನು ನನಸಾಗಿಸುವ ನಗರ ಎಂದೆಲ್ಲಾ ಹೇಳುವುದು ಸುಳ್ಳಲ್ಲ.

ಇದರ ಗುಣಗಾನ ಎಷ್ಟು ಮಾಡಿದರೂ ಕಡಿಮೆಯೇ ಎಂದು ಹೇಳಬಹುದು. ಹೀಗೆ ಮುಂಬೈ ತನ್ನ ಮೂಲೆ ಮೂಲೆಗಳನ್ನೂ ಭೇಟಿ ಮಾಡುವಂತೆ ನಿಮ್ಮನ್ನು ಆಕರ್ಷಿಸುತ್ತದೆ. ಆದುದರಿಂದಲೇ ಈ ಬೃಹತ್ ನಗರವು ಲಕ್ಷಾಂತರ ಪ್ರವಾಸಿಗರನ್ನು, ಪ್ರಯಾಣಿಕರನ್ನು ಹವ್ಯಾಸಿ ಪ್ರವಾಸಿಗರನ್ನು ಮತ್ತು ಜಗತ್ತಿನಾದ್ಯಂತದ ಐಷಾರಾಮಿ ಪ್ರವಾಸಿಗರನ್ನೂ ತನ್ನಲ್ಲಿಗೆ ಸೆಳೆಯುತ್ತದೆ.

ಮುಂಬೈನಲ್ಲಿ ಎಲ್ಲವೂ ಇದೆ, ಸ್ಟ್ರೀಟ್ ಆಹಾರದಿಂದ ಹಿಡಿದು ಬೀದಿಯಲ್ಲಿ ಕಲೆಗಳವರೆಗೆ ಅಲ್ಲಿಂದ ಕಲಾವಿದರ ಗುಂಪಿನಿಂದ ಹಿಡಿದು ಥಿಯೇಟರ್ ಪ್ರದರ್ಶನಗಳವರೆಗೆ ಎಲ್ಲವೂ ಇಲ್ಲಿದೆ. ಈ ನಗರಕ್ಕೆ ಭೇಟಿ ನೀಡಿದಾಗ ನಿಖರವಾಗಿ ನೀವು ಯಾವುದನ್ನೂ ತಪ್ಪಿಸಿಕೊಳ್ಳಬಾರದು ಆದರೆ ನಿಮ್ಮ ಪ್ರವಾಸದಲ್ಲಿ ಯಾವುದು ಭೇಟಿ ನೀಡಲ್ಪಟ್ಟಿದೆ ಅಥವಾ ಭೇಟಿ ನೀಡಿಲ್ಲ ಎಂಬುದನ್ನು ಲೆಕ್ಕ ಹಾಕುವುದು ಸ್ವಲ್ಪ ಕಷ್ಟಕರ . ನೀವು ಮುಂಬೈಯಲ್ಲಿ ಕೇವಲ 24 ಗಂಟೆಗಳ ಕಾಲ ಮಾತ್ರ ಇದ್ದು ಈ ಸಮಯದಲ್ಲಿ ಮುಂಬೈನ ಎಲ್ಲಾ ಭಾಗಗಗಳನ್ನು ನೋಡುವುದು ಸ್ವಲ್ಪ ಕಷ್ಟವೇ ಸರಿ .

ದಕ್ಷಿಣ ಮುಂಬೈನ ಕಲೋನಿಯಲ್ ಸೈಡ್( ವಸಾಹತುಶಾಹಿಯ ಭಾಗ) ನ ಅನ್ವೇಷಣೆ ಮಾಡಿ

ದಕ್ಷಿಣ ಮುಂಬೈನ ಕಲೋನಿಯಲ್ ಸೈಡ್( ವಸಾಹತುಶಾಹಿಯ ಭಾಗ) ನ ಅನ್ವೇಷಣೆ ಮಾಡಿ

ಇದು ಬ್ರಿಟಿಷರ ಪ್ರಾಬಲ್ಯತೆ ಇರುವ ಮುಂಬೈನ ಒಂದು ಪ್ರಮುಖ ಭಾಗವಾಗಿದೆ. ವಸಾಹತು ಯುಗದ ಕಾಲದಲ್ಲಿ ಇದು ವಾಣಿಜ್ಯ ಕೇಂದ್ರವಾಗಿದ್ದು ಈಗ ಇದು ಹಣಕಾಸು ಬಂಡವಾಳದ ಕೇಂದ್ರವಾಗಿದೆ. ನೀವು ಬಾಂಬೆಯ ದಕ್ಷಿಣ ಭಾಗದಲ್ಲಿ ಸುತ್ತಾಡುತ್ತಿದ್ದರೆ ನಿಮಗೆ ಸಮಯ ಕಳೆದಿರುವುದೇ ಗೊತ್ತಾಗುವುದಿಲ್ಲ. ಇಲ್ಲಿ ವಸಾಹತು ಮುದ್ರೆಗಳು, ಬ್ರಿಟಿಷರ ಶ್ರೀಮಂತ ವಾಸ್ತುಶಿಲ್ಪ, ವಿಕ್ಟೋರಿಯಾ ಯುಗದ ವಿಶಿಷ್ಟ ವಿನ್ಯಾಸದ ಮಾದರಿಗಳು, ಮೇಲ್ಚಾವಣಿಗಳು, ಗುಮ್ಮಟಗಳು, ಇಂಗ್ಲೀಷರ ಕೆಲವು ಪ್ರಮುಖರ ಪ್ರತಿಮೆಗಳು, ನಿಮಗೆ ಹಿಂದಿನ ಇತಿಹಾಸವನ್ನು ನೆನಪಿಸುತ್ತದೆ. ಪಟ್ಟಣದ ಈ ಭಾಗವು ಉಳಿದ ಭಾಗಗಳಿಗೆ ಹೋಲಿಸಿದರೆ ಅತ್ಯಂಟ ಸ್ವಚ್ಚವಾಗಿ ಇರಿಸಲಾಗಿದೆ.

ಮರಗಳ ಸಾಲುಗಳನ್ನು ಹೊಂದಿರುವ ಕಟ್ಟಡಗಳ ಜೋಡಣೆ, ಈಗ ಸರಕಾರಿ ಕಚೇರಿಗಳಾಗಿ ಮಾರ್ಪಟ್ಟಿರುವ ಹಳೆಯದಾದ ವಸಾಹತುಶಾಹಿ ಕಟ್ಟಡಗಳು ಮತ್ತು ಇನ್ನೂ ಕೆಲವು ಐತಿಹಾಸಿಕ ನೋಟಗಳು ನಿಮ್ಮನ್ನು ಅಚ್ಚರಿಗೊಳಿಸುವುದಲ್ಲದೆ ನಿಮ್ಮ ಅನ್ವೇಷಣೆಯ ಸಮಯವನ್ನು ಮತ್ತು ಈ ಸ್ಥಳದ ಇತಿಹಾಸವನ್ನು ತಿಳಿಯುವಲ್ಲಿ ಸಹಾಯ ಮಾಡುವುದರಲ್ಲಿ ಸಂಶಯವೇ ಇಲ್ಲ. ಗೇಟ್ ವೇ ಆಫ್ ಇಂಡಿಯಾವನ್ನು ನೋಡಲು ಮರೆಯದಿರಿ.

ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...<br /> ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಡಬಲ್ ಡೆಕರ್- ಸವಾರಿ

ಡಬಲ್ ಡೆಕರ್- ಸವಾರಿ

ನಮ್ಮ 24 ಗಂಟೆಗಳ ಪಟ್ಟಿಯಲ್ಲಿ ಡಬಲ್ ಡೆಕ್ಕರ್ ಸವಾರಿ ಇದೆ. ಇಲ್ಲಿಯ ಟ್ರ್ಯಾಮ್ - ರೈಲು ಸವಾರಿಯು ನೀವು ಲಂಡನ್ ನಲ್ಲಿ ಇದ್ದೀರಿ ಎನ್ನುವ ಅನುಭವವನ್ನು ನೀಡುತ್ತದೆ. ಮುಂಬೈನ ಹೆಚ್ಚಿನ ಜನರು ಮೆಟ್ರೋ ಮತ್ತು ಸ್ಥಳೀಯ ಸಾರಿಗೆಯ ಸೌಲಭ್ಯಗಳನ್ನು ಬಳಸುತ್ತಾರೆ. ಇಲ್ಲಿಯ ಬಸ್ಸುಗಳ ಉತ್ತಮವಾದ ಹಾಗೂ ನಿರಂತರ ಸೌಕರ್ಯವನ್ನು ಹೊಂದಿದೆ ಮತ್ತು ಕೆಲವು ಪ್ರಮುಖ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ.

ಆದುದರಿಂದ ಇಂತಹ ಪ್ರಮುಖ ಪ್ರದೇಶಗಳಿಗೆ ಹೋಗುವ ಬಸ್ಸಿನಲ್ಲಿ ತುಂಬಾ ಜನರು ಕಿಕ್ಕಿರಿದು ತುಂಬಿರುತ್ತಾರೆ. ಆದುದರಿಂದ ಬೆವರು ಸಹಿತ ಹಾಗೂ ಸಪೋರ್ಟಿಗೆ ಹಿಡಿಯಲೂ ಜಾಗ ಇಲ್ಲದ ಈ ಬಸ್ಸುಗಳಲ್ಲಿ ಜನ ತುಂಬಿರುವುದರಿಂದ ಕೆಲವು ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವುದು ಒಳಿತು. ಆದುದರಿಂದ ಖಾಲಿ ಇರುವ ಡಬಲ್ ಡಕರ್ ಬಸ್ಸು ಏಕೆ ಹಿಡಿಯಬಾರದು? ಇದರ ಮೇಲಿನ ಭಾಗಕ್ಕೆ ಹೋಗಿ ಕುಳಿತು ಮುಂಬೈ ಹೇಗೆ ಕಾಣುತ್ತದೆ ಎಂಬುವುದನ್ನು ಅನುಭವಿಸಿ.

ಅಂಬಾಸಿಡರ್ ಕಾರಿನಲ್ಲಿ ಒಂದು ಸವಾರಿ ನಡೆಸಿ

ಅಂಬಾಸಿಡರ್ ಕಾರಿನಲ್ಲಿ ಒಂದು ಸವಾರಿ ನಡೆಸಿ

ನಮ್ಮ ಪಟ್ಟಿಯಲ್ಲಿರುವ ನಂತರದ ಸವಾರಿ ಎಂದರೆ ಅಂಬಾಸಿಡರ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದು. ಇಲ್ಲಿಯ ಹಳದಿ - ಕಪ್ಪು ಮಿಶ್ರಿತ ಟ್ಯಾಕ್ಸಿ ಯಲ್ಲಿ ಎಂದಾದರೂ ನೀವು ಮುಂಬೈ ನಲ್ಲಿ ಪ್ರಯಾಣ ಮಾಡಿರುವಿರಾ? ಇದರಲ್ಲಿ ಪ್ರಯಾಣ ಮಾಡುವುದರ ಜೊತೆಗೆ ಸಾಕಷ್ಟು ಸೆಲ್ಪಿಗಳನ್ನು ಗುರುತಿಗಾಗಿ ತೆಗೆದುಕೊಳ್ಳುವುದು ಮರೆಯದಿರಿ. ಈ ಟ್ಯಾಕ್ಸಿಗಳು ದಕ್ಷಿಣ ಮುಂಬೈ ನಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ ಮತ್ತು ಇಲ್ಲಿ ರಿಕ್ಷಾಗಳು ಕಾಣ ಸಿಗುವುದಿಲ್ಲ.

ಆಳವಾದ ನೀಲಿ ಸಮುದ್ರ ಮೆರೈನ್ ಸಾಗರದ ದಡಗಳಲ್ಲಿ ಆನಂದಿಸಿ.

ಆಳವಾದ ನೀಲಿ ಸಮುದ್ರ ಮೆರೈನ್ ಸಾಗರದ ದಡಗಳಲ್ಲಿ ಆನಂದಿಸಿ.

ನಿಮ್ಮ ಸವಾರಿಯ ಯಾತ್ರೆಯನ್ನು ಮತ್ತು ಇತಿಹಾಸದ ಪಾಠವನ್ನು ಮುಂದುವರೆಸಿ ನೀವು ಮೆರೇನ್ ಡ್ರೈವ್ ನಲ್ಲಿ ವಿರಾಮ ಪಡೆಯಬಹುದು. ಇದು ಇಲ್ಲಿಯ ಸ್ಥಳೀಯರ, ಮಾರಾಟಗಾರರು ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಸ್ಥಳವಾಗಿದೆ.ಇಲ್ಲಿ ಜನರು ತಮ್ಮ ಸಮಯವನ್ನು ಅಲೆಗಳನ್ನು ನೋಡುತ್ತಾ, ನಗರದಲ್ಲಿಯ ಬೆಳಕು ಇಲ್ಲಿ ನೆಕ್ಲ್ ಸ ರೂಪದಲ್ಲಿ ಮಾರ್ಪಾಡುವುದನ್ನು ಕಾಣಬಹುದಾಗಿದೆ. ಇಲ್ಲಿ ವಿಶ್ರಾಂತಿ ಮತ್ತು ಪುನಶ್ಚೇತನ ಗೊಳಿಸಿಕೊಳ್ಳಬಹುದಾಗಿದೆ. ಇಲ್ಲಿ ಕೆಲವು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯುವುದನ್ನು ಮರೆಯದಿರಿ. ನೀವು ಅದೃಷ್ಟವಂತರಾಗಿದ್ದಲ್ಲಿ ಇಲ್ಲಿ ಚಲನಚಿತ್ರದ ಶೂಟಿಂಗ್ ನಡೆವುದನ್ನು ನೋಡಬಹುದಾಗಿದೆ.

ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ಬಡೇಮಿಯಾದಲ್ಲಿನ ರುಚಿಕರ ಆಹಾರವನ್ನು ಒಮ್ಮೆ ಸವಿಯಿರಿ

ಬಡೇಮಿಯಾದಲ್ಲಿನ ರುಚಿಕರ ಆಹಾರವನ್ನು ಒಮ್ಮೆ ಸವಿಯಿರಿ

ಬಡೇಮಿಯಾ ಒಂದು ಮಾಂಸಾಹಾರಿ ಆಹಾರಕ್ಕೆ ಪ್ರಸಿದ್ದವಾದುದಾಗಿದೆ. ಇಲ್ಲಿ ಶವರ್ಮಾಸ್ ನಿಂದ ರೋಲ್ ಗಳವರೆಗೆ ನಿಮ್ಮ ಆಯ್ಕೆಯ ಮಾಂಸಾಹಾರಿ ಖಾದ್ಯಗಳನ್ನು ಸವಿಯಬಹುದಾಗಿದೆ. ಮುಂಬೈ ದುಬಾರಿ ಎನ್ನುವ ಒಂದು ಮಾತಿಗೆ ಹೋಲಿಸಿದರೆ ಇಲ್ಲಿಯ ಆಹಾರವು ಕಡಿಮೆ ವೆಚ್ಚದ್ದಾಗಿರುತ್ತದೆ.ಈ ಜಾಗದಲ್ಲಿ ಕೆಲವು ಉತ್ತಮ ಶಾಖಾಹಾರಿ ರೋಲ್ ಗಳು ಸಿಗುತ್ತವೆ.

ಇಲ್ಲಿಯ ಜನಪ್ರಿಯತೆ ಮತ್ತು ಇಲ್ಲಿ ಸಿಗುವ ಉತ್ತಮ ಗುಣಮಟ್ಟದ ಆಹಾರಗಳಿಂದದಾಗಿ ಈ ಸ್ಥಳವು ಸದಾ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಆದುದರಿಂದ ಇಲ್ಲಿಗೆ ಬೇಗ ಹೋಗುವುದು ಒಳಿತು ಇಲ್ಲವಾದಲ್ಲಿ ಕುಳಿತುಕೊಳ್ಳಲು ಟೇಬಲ್ ಗಾಗಿ ಕಾಯಬೇಕಾಗಬಹುದು.

ಹಾಜೀ ಅಲಿಯಲ್ಲಿನ ಪಾನೀಯವನ್ನು ಒಮ್ಮೆ ರುಚಿನೋಡಿ

ಹಾಜೀ ಅಲಿಯಲ್ಲಿನ ಪಾನೀಯವನ್ನು ಒಮ್ಮೆ ರುಚಿನೋಡಿ

ಹಾಜೀ ಅಲಿ ರುಚಿಕರವಾದ ಜ್ಯೂಸ್ ಗಳಿಗೆಗಾಗಿ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ಕೆಲವು ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳು ಮಾತ್ರವಲ್ಲದೆ ಕೆಲವು ಅಪರೂಪದ ಹಣ್ಣುಗಳನ್ನೂ ಇಟ್ಟಿರುತ್ತಾರೆ. ಇಲ್ಲಿ ತಯಾರಿಸಲಾಗುವ ಖರ್ಜೂರದ ಮಿಲ್ಕ್ ಶೇಖ್ ಸವಿಯಲು ಮರೆಯದಿರಿ.

ಇಲ್ಲಿಯ ಚಾಕೋಲೇಟ್ ಶೇಕ್ ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದೊಂದು ಜನಪ್ರಿಯ ತಾಣವಾದುದರಿಂದ, ಇಲ್ಲಿ ಜನರ ಸಾಲುಗಳನ್ನು ನೋಡಬಹುದಾಗಿದೆ ಆದರೆ ಯೋಚಿಸಬೇಡಿ ಇಲ್ಲಿಯ ಪಾನೀಯಗಳು ಉತ್ತಮವಾಗಿ ಇರುವುದರಿಂದ ಇಲ್ಲಿ ಇದಕ್ಕಾಗಿ ಕಾಯುವುದೂ ಹೆಚ್ಚೆನಿಸುವುದಿಲ್ಲ.

ಹಾಜಿ ಅಲಿಗೆ ಭೇಟಿ ಕೊಡಿ

ಹಾಜಿ ಅಲಿಗೆ ಭೇಟಿ ಕೊಡಿ

ಇಲ್ಲಿಯ ತಂಪು ಪಾನೀಯದ ಅಂಗಡಿಯ ನಂತರ ಸಿಗುವುದೇ ಹಾಜೀ ಅಲಿ ಅವರ ದರ್ಗಾ. ನೀವು ಧಾರ್ಮಿಕ ಮನೋಭಾವದವರಾಗಿದ್ದು ಅಥವಾ ಈ ಮಸೀದಿಯ ವಾಸ್ತುಶಿಲ್ಪವನ್ನು ಪ್ರಶಂಸಿಸಬೇಕೆನ್ನುವ ಇಚ್ಚೆ ಇದ್ದಲ್ಲಿ ಸಮುದ್ರದ ಮಧ್ಯೆ ಇರುವ ನೂರಾರು ವರ್ಷಗಳಿಂದಲೂ ಎತ್ತರಕ್ಕೆ ನಿಂತಿರುವ ಈ ಮಸೀದಿಯನ್ನು ಭೇಟಿ ಕೊಡಲೇಬೇಕಾದ ಸ್ಥಳವಾಗಿದೆ.

ಸೀ ಲಿಂಕ್ ನಲ್ಲಿ ಸವಾರಿ ನಡೆಸಿ

ಸೀ ಲಿಂಕ್ ನಲ್ಲಿ ಸವಾರಿ ನಡೆಸಿ

ನಿಮ್ಮ ದಕ್ಷಿಣ ಮುಂಬೈನ ಪ್ರಯಾಣದ ನಂತರ ಬಾಂದ್ರಾ-ವರ್ಲಿಯ ಸೀ ಲಿಂಕ್ ಕಡೆಗೆ ಪ್ರಯಾಣ ಬೆಳೆಸಿ ಸೀ ಲಿಂಕ್ ಮೂಲಕ ಒಂದು ಡ್ರೈವ್ ಮಾಡುವುದು ಒಂದು ಅವಿಸ್ಮರಣೀಯ ಕ್ಷಣವಾಗಿದೆ. ಇಲ್ಲಿ ನೀವು ಸವಾರಿ ಮಾಡುವಾಗ ಗಾಳಿಯಲ್ಲಿ ತೇಲುವ ಅನುಭವವನ್ನು ಕೊಡುತ್ತದೆ.

ಜುಹು ಬೀಚ್ ನಲ್ಲಿ ಸ್ಟ್ರೀಟ್ ಪುಡ್ ಅನ್ನು ಸವಿಯಿರಿ

ಜುಹು ಬೀಚ್ ನಲ್ಲಿ ಸ್ಟ್ರೀಟ್ ಪುಡ್ ಅನ್ನು ಸವಿಯಿರಿ

ನೀವು ಮುಂಬೈನ ಅದ್ಬುತವಾದ ಸ್ಟ್ರೀಟ್ ಪುಡ್ ಅನ್ನು ಸವಿಯಲು ತಪ್ಪಿಸಲೇಬಾರದು. ನಿಮ್ಮನ್ನು ನೀವು ಇಲ್ಲಿಯ ಜುಹು ಬೀಚ್ ನ ಅಂಗಡಿಗಳಲ್ಲಿ ಆಹಾರ ಸವಿಯುವ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಇಲ್ಲಿ ಪಾವ್ ಬಾಜಿಯಿಂದ ಚೋಲೆ, ಸೇವ್ ಪುರಿಯವರೆಗೆ ಕೊನೆಯಿಲ್ಲದ ಆಯ್ಕೆಗಳು ಇಲ್ಲಿ ಸಿಗುತ್ತವೆ.
ಇಲ್ಲಿ ನಿಮ್ಮ ಪ್ರತಿಯೊಂದು ಇಷ್ಟದ ಆಹಾರಗಳನ್ನು ಸವಿಯಬಹುದಾಗಿದೆ ನಂತರ ಕಾಲಾ ಕಟ್ಟ ಸೋಡಾದ ಪಾನೀಯದಲ್ಲಿ ಕೊನೆಗೊಳಿಸಿ. ನಿಮ್ಮ ಉಪಾಹಾರ ಸೇವಿಸಿದ ಬಳಿಕ ಇಲ್ಲಿಯ ಬೀಚ್ ನಲ್ಲಿ ಒಮ್ಮೆ ಅಡ್ಡಾಡಲು ಮರೆಯದಿರಿ ಮತ್ತು ಸೂರ್ಯಾಸ್ತದ ಸುಂದರವಾದ ನೋಟವನ್ನು ಆಸ್ವಾದಿಸಿ. ಅಲ್ಲದೆ ಇಲ್ಲಿ ಜನರು ಜೀವನದಲ್ಲಿಯ ಸಣ್ಣ ಸಣ್ಣ ವಿಷಯಕ್ಕಾಗಿ ಗುಂಪುಗೂಡಿಕೊಂಡು ಆನಂದಿಸುವುದನ್ನು ಕಾಣಬಹುದಾಗಿದೆ.

ಸ್ಥಳೀಯ ರೈಲಿನಲ್ಲಿ ಪ್ರಯಾಣ ಮಾಡಿ

ಸ್ಥಳೀಯ ರೈಲಿನಲ್ಲಿ ಪ್ರಯಾಣ ಮಾಡಿ

ನಿಮ್ಮ 24 ಗಂಟೆಗಳ ಪ್ರಯಾಣವನ್ನು ಸ್ಥಳೀಯ ರೈಲಿನಲ್ಲಿ ಪ್ರಯಾಣ ಮಾಡಿ ನಿಮ್ಮ ಗಮ್ಯ ಸ್ಥಾನವನ್ನು ತಲುಪುವುದರ ಮೂಲಕ ಕೊನೆಗೊಳಿಸಿ. ಜನ ಹೆಚ್ಚಾಗಿರುವ ಸಮಯದಲ್ಲಿ ನೀವು ರೈಲು ಹತ್ತುವುದನ್ನು ಆದಷ್ಟು ತಪ್ಪಿಸಿ. ನೀವು ಸಾಹಸಿಗಳೆ? ಹಾಗಿದ್ದಲ್ಲಿ ಇಲ್ಲಿ ಸ್ಥಳೀಯ ರೈಲಿನಲ್ಲಿ ಪ್ರಯಾಣ ಮಾಡುವುದೇ ಒಂದು ಸಾಹಸವಾಗಿದೆ.
ಇಲ್ಲಿ ನೀವು ವಿಧವಿಧದ ಜನರನ್ನು ನೋಡಬಹುದು ಕೆಲವರು ಮಾತುಗಾರರಾಗಿದ್ದರೆ ಇನ್ನುಕೆಲವರು ಸಹಾಯ ಮಾಡುವವರು, ಇನ್ನು ಕೆಲವರು ಉತ್ಸಾಹಿಗಳು ಆದರೆ ಎಲ್ಲರೂ ತಮ್ಮದೇ ಆದ ಶೈಲಿಯಲ್ಲಿ ಸುಂದರವಾಗಿ ಕಾಣ ಸಿಗುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X