Search
  • Follow NativePlanet
Share
» » ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್ ಸಿಗಬೇಕಾದ್ರೆ ಹೀಗೆ ಮಾಡಿ

ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್ ಸಿಗಬೇಕಾದ್ರೆ ಹೀಗೆ ಮಾಡಿ

ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ವಿಮಾನದ ಟಿಕೇಟ್ ದರ ಯಾವಾಗ ಕಡಿಮೆಯಾಗುತ್ತದೋ ಆವಾಗ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡಾ ಹೆಚ್ಚು ಇರುತ್ತದೆ.ಆದರೆ ನೀವು ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸಲು ಟಿಕೇಟ್‌ಗಾಗಿ ಇಂಟರ್ನೆಟ್‌ನಲ್ಲಿ ನೋಡುವಾಗ ಟಿಕೇಟ್ ದರ ಹೆಚ್ಚು ಇರುತ್ತದೆ. ಆದರೆ ನಾವೀಗ ನಿಮಗೆ ಕೆಲವು ಟಿಪ್ಸ್ ಹೇಳಲಿದ್ದೇವೆ ಅದನ್ನು ಪಾಲಿಸಿದರೆ ನಿಮಗೆ ಕಡಿಮೆ ದರದಲ್ಲಿ ವಿಮಾನದ ಟಿಕೇಟ್ ದೊರೆಯುತ್ತದೆ.

ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನನ್ನು ಭೀಮ ಸಂಹರಿಸಿದ್ದು ಇಲ್ಲೇ

ವಿಮಾನದ ಟಿಕೇಟ್ ಬುಕ್ ಮಾಡೊದು ಹೇಗೆ?

ವಿಮಾನದ ಟಿಕೇಟ್ ಬುಕ್ ಮಾಡೊದು ಹೇಗೆ?

PC:Timothy Dauber

ನೀವು ವಿಮಾನದ ಟಿಕೇಟ್ ಬುಕ್ ಮಾಡುವುದಾದರೆ ನೀವು ಪ್ರಯಾಣಿಸ ಬೇಕಾಗಿರುವ ದಿನಕ್ಕಿಂತ ಸುಮಾರು 60 ದಿನಗಳ ಮೊದಲೇ ಟಿಕೇಟ್ ಬುಕ್ ಮಾಡಬೇಕು. ಆಗ ನಿಮಗೆ ಟಿಕೇಟ್ ಕಡಿಮೆ ದರದಲ್ಲಿ ದೊರೆಯುತ್ತದೆ. ಈಗ ಬೇಸಿಗೆ ರಜಾ ಶುರುವಾಗಿದೆ. ಹಾಗಾಗಿ ಈ ಸೀಸನ್‌ನಲ್ಲಿ ಟಿಕೇಟ್ ದರ ಕೂಡಾ ಜಾಸ್ತಿನೇ ಇರುತ್ತದೆ. ಮೇ ಯಲ್ಲಿ ಪ್ರಯಾಣಿಸಬೇಕಾದರೆ ಟಿಕೇಟನ್ನು ನೀವು ಫೆಬ್ರವರಿಯಲ್ಲೇ ಬುಕ್ ಮಾಡಿದ್ರೆ ಕಡಿಮೆಯಲ್ಲಿ ಟಿಕೇಟ್ ದೊರೆಯುವ ಸಾಧ್ಯತೆ ಇದೆ.

ಯಾವ ದಿನ ಟಿಕೇಟ್ ದರ ಕಡಿಮೆ ಇರುತ್ತದೆ?

ಯಾವ ದಿನ ಟಿಕೇಟ್ ದರ ಕಡಿಮೆ ಇರುತ್ತದೆ?

ಸಾಮಾನ್ಯವಾಗಿ ವಿಮಾನದ ಟಿಕೇಟ್ ಬುಕ್ ಮಾಡುವ ಸಂದರ್ಭದಲ್ಲಿ ನೀವು ಗಮನಿಸಿರಬಹುದು. ಶುಕ್ರವಾರದಂದು ಟಿಕೇಟ್ ದರ ಹೆಚ್ಚಾಗುತ್ತದೆ. ನಂತರ ಸೋಮವಾರ , ಮಂಗಳವಾರ ಟಿಕೇಟ್‌ ದರದಲ್ಲಿ ಇಳಿಕೆ ಕಂಡು ಬರುತ್ತದೆ. ಹಾಗಾಗಿ ಬುಧವಾರ ಹಾಗೂ ಗುರುವಾರ ಟಿಕೇಟ್ ಬುಕ್ ಮಾಡಲು ಉತ್ತಮವಾಗಿದೆ.

ಎಷ್ಟು ಗಂಟೆಯೊಳಗೆ ಬುಕ್ ಮಾಡಬೇಕು?

ಎಷ್ಟು ಗಂಟೆಯೊಳಗೆ ಬುಕ್ ಮಾಡಬೇಕು?

ಸಂಜೆ 6 ಗಂಟೆಯಿಂದ ರಾತ್ರಿ12 ಗಂಟೆಯೊಳಗೆ ನೀವು ವಿಮಾನದ ಟಿಕೇಟ್ ಬುಕ್ ಮಾಡೋದಾದ್ರೆ ಟಿಕೇಟ್ ಕಡಿಮೆಗೆ ಸಿಗುತ್ತದೆ. ಉಳಿದ ಸಮಯದಲ್ಲಿ ಟಿಕೇಟ್ ಬುಕ್ಕಿಂಗ್ ಮಾಡುವವರ ಸಂಖ್ಯೆ ಜಾಸ್ತಿ ಇರುತ್ತದೆ.

ಗೂಗಲ್ ವಿಂಡೋ

ಗೂಗಲ್ ವಿಂಡೋ

ನೀವು ಗಮನಿಸಿರಬಹುದು. ನೀವು ಯಾವಾಗಾದರೂ ಫ್ಲೈಟ್‌ನ ಟಿಕೇಟ್ ದರ ಚೆಕ್ ಮಾಡಲು ಹೋದಾಗ ಯಾವಾಗಲೂ ನಿಮಗೆ ಹೆಚ್ಚಿನ ಟಿಕೇಟ್ ದರವೇ ಕಾಣಿಸುತ್ತದೆ. ಇದಕ್ಕೆ ಕಾರಣ ನಿಮ್ಮ ಸರ್ವರ್ ವಿವರಣೆ. ಇದು ಈ ವೆಬ್‌ಸೈಟ್‌ಗಳ ಜೊತೆಗೆ ಸ್ವಚಾಲಿತವಾಗಿ ರೆಕಾರ್ಡ್ ಆಗಿರುತ್ತದೆ. ಹಾಗಾಗಿ ನೀವು ಆ ವೆಬ್‌ಸೈಟ್‌ಗೆ ಹೋದಾಗ ನಿಮಗೆ ಹೆಚ್ಚಿನ ಟಿಕೇಟ್ ದರವನ್ನು ತೋರಿಸುತ್ತದೆ. ಹಾಗಾಗಿ ನೀವು ಮೊದಲು ಸರ್ವರ್‌ನ್ನು ಕ್ಲೀನ್ ಮಾಡಬೇಕು. ನಂತರ ಹೊಸ ಬ್ರೋಸರ್‌ನಿಂದ ವೆಬ್‌ಸೈಟ್ ಓಪನ್ ಮಾಡಬೇಕು.

ಏರ್‌ಲೈನ್ಸ್‌ನ ಅಧೀಕೃತ ವೆಬ್‌ಸೈಟ್‌ ನಿಂದಲೇ ಬುಕ್ ಮಾಡಿ

ಏರ್‌ಲೈನ್ಸ್‌ನ ಅಧೀಕೃತ ವೆಬ್‌ಸೈಟ್‌ ನಿಂದಲೇ ಬುಕ್ ಮಾಡಿ

PC: Debarka Banik

ಮೇಕ್‌ಮೈ ಟ್ರಿಪ್ ಅಥವಾ ಗೋಯಿಬೋಬೋದಲ್ಲಿ ವಿಮಾನದ ಟಿಕೇಟ್ ಬುಕ್ ಮಾಡುವುದು ಸುಲಭವಾಗುತ್ತದೆ. ಆದರೆ ಕೆಲವೊಮ್ಮೆ ನಿಮಗೆ ಟಿಕೇಟ್ ದರ ಒಂದು ತೋರಿಸಿದರೆ ನೀವು ಬುಕ್ ಮಾಡಿದ ನಂತರ ಬಿಲ್ ಪೇ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಟಿಕೇಟ್ ದರ ತೋರಿಸುತ್ತದೆ. ಯಾಕೆಂದರೆ ತನ್ನ ಸೇವಾ ಶುಲ್ಕವನ್ನು ಕೂಡಾ ಅದರಲ್ಲಿ ಸೇರಿಸಿಬಿಡುತ್ತಾರೆ. ಹಾಗಾಗಿ ನೀವು ವಿಮಾನದ ಟಿಕೇಟ್ ಬುಕ್ ಮಾಡುವಾಗ ಏರ್‌ಲೈನ್ಸ್‌ನ ಅಧೀಕೃತ ವೆಬ್‌ಸೈಟ್‌ಗೆ ಹೋಗಿ ಟಿಕೇಟ್ ದರವನ್ನು ಪರಿಶೀಲಿಸುವುದು ಒಳ್ಳೆಯದು.

Read more about: india travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X