Search
  • Follow NativePlanet
Share
» »ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ಪಾರ್ಟಿ ಪ್ರೀಯರಿಗೆ ಇಷ್ಟವಾಗೋ ಸ್ಥಳ ಅಂದ್ರೆ ಅದು ಗೋವಾ. ಈ ನಗರ ಮಲಗೋದೆ ಇಲ್ಲ ಎನ್ನಬಹುದು.ಯಾಕೆಂದ್ರೆ ಇಲ್ಲಿ ಹಗಲು ರಾತ್ರಿ ಎನ್ನದೇ ಜನರ ಓಡಾಟ ಇದ್ದೇ ಇರುತ್ತದೆ. ಇನ್ನು ರಜಾ ದಿನಗಳನ್ನು ಕಳೆಯಲು ಬರುವವರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದು ಗೋವಾವನ್ನು. ಇನ್ನು ವೀಕೆಂಡ್ ಪಾರ್ಟಿಗಂತೂ ಇದು ಸಖತ್ ಫೇಮಸ್.

ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?

9 ಬಾರ್

9 ಬಾರ್

PC:Irtiza Haider

ವಾಗೆಟರ್ ಬಂಡೆಯ ಮೇಲಿರುವ ಈ ಸ್ಥಳವು ಗೋವಾದ ವರ್ಣರಂಜಿತ ನೈಟ್‌ಲೈಫ್‌ನ ವಿಶೇಷ ಸ್ಥಳವಾಗಿದೆ. ಅಂತರಾಷ್ಟ್ರೀಯ ಮಟ್ಟದ ಟ್ರಾನ್ಸ್ ಸಂಗೀತ ಮತ್ತು ಹಾರ್ಡ್ಕೋರ್ ಪಾರ್ಟಿಗಾಗಿ ಒಂದು ಸಾಂಪ್ರದಾಯಿಕ ಸ್ಥಳ, 9 ಬಾರ್ ಮೂಲತಃ ಭಾರಿ ಹೊರಾಂಗಣ ನೃತ್ಯ ಮಹಡಿಯಾಗಿದೆ! ಇದು ಸಂಪೂರ್ಣ ಧ್ವನಿ-ನಿರೋಧಕ ಒಳಾಂಗಣ ನೈಟ್ಕ್ಲಬ್ ಅನ್ನು ಸಹ ಹೊಂದಿದೆ.

ಜಂಜಿಬಾರ್

ಜಂಜಿಬಾರ್

PC:Nicolai Schäfer

ಕಡಲ ತೀರದಲ್ಲಿರುವ ಈ ಬಾರ್‌ ದಿನದಲ್ಲಿ ನೋಡಲು ಬಹಳ ಬೋರಿಂಗ್ ಸ್ಥಳ ಇದ್ದ ಹಾಗೇ ಕಾಣುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ಇದು ತನ್ನ ಲುಕ್‌ನ್ನು ಬದಲಾಯಿಸುತ್ತದೆ. ಇಲ್ಲಿಗೆ ಬರುವವರಿಗೆ ಮನರಂಜನೆಯನ್ನು ನೀಡುವ ಮೂಲಕ ಪಾರ್ಟಿ ಮೂಡ್‌ ಬರಿಸುತ್ತದೆ. ಕಡಲ ತೀರದಲ್ಲಿರುವುದರಿಂದ ಮ್ಯೂಸಿಕ್ ಜೊತೆಗೆ ತಂಪಾದ ಗಾಳಿ, ಮರಳಿನ ಅನುಭೂತಿ ಖುಷಿ ನೀಡಿತ್ತದೆ.

ಕೆಫೆ ಮೊಜೊ ಪಬ್ & ಬಿಸ್ಟ್ರೋ

ಕೆಫೆ ಮೊಜೊ ಪಬ್ & ಬಿಸ್ಟ್ರೋ

PC: Emna Mizouni

ಇ-ಬೀರ್ ಎಂಬ ಪರಿಕಲ್ಪನೆಯನ್ನು ತಂದ ಗೋವಾದಲ್ಲಿನ ಮೊದಲ ಇಂಗ್ಲಿಷ್ ಪಬ್ ಇದಾಗಿದೆ. ಕೆಫೆ ಮೊಜೊ ಪಬ್ & ಬಿಸ್ಟ್ರೋ ಪಬ್‌ಗೆ ಭೇಟಿ ನೀಡಿ ನೀಡಿ ನೀವು ನಿಮ್ಮ ಪಾರ್ಟಿ ಕನಸನ್ನು ನನಸಾಗಿಸಬಹುದು. ಇಲ್ಲಿ ಪ್ರತಿ ಟೇಬಲ್ ತನ್ನದೇ ಬಿಯರ್ ಟ್ಯಾಪ್ ಮತ್ತು ಎಲ್ಸಿಡಿ ಪರದೆಯನ್ನು ಹೊಂದಿದೆ. ಇಲ್ಲಿ ದಿನದ 24ಗಂಟೆಯೂ ನಿಮಗೆ ಕಾಕ್‌ಟೆಲ್, ಮೋಕ್‌ಟೇಲ್ , ಕಾಫಿ, ಸ್ನಾಕ್ಸ್ ದೊರೆಯುತ್ತದೆ.

ಹಿಲ್ ಟಾಪ್

ಹಿಲ್ ಟಾಪ್

PC:Drewfarr

ಮ್ಯೂಸಿಕ್ ಹಾಗೂ ಡ್ಯಾನ್ಸ್ ಹಿಲ್‌ಟಾಪ್‌ನ ವಿಶೇಷತೆ. ಇಲ್ಲಿ ಸಾಕಷ್ಟು ಯುವಕ ಯುವತಿಯರು ಡಿಜೆ ಮ್ಯೂಸಿಕ್‌ಗೆ ಡ್ಯಾನ್ಸ್‌ ಮಾಡಲೆಂದೇ ಬರುತ್ತಾರೆ. ಹಿಲ್‌ಟಾಪ್ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ. ಗೋವಾದ ಕಾನೂನು ಪ್ರಕಾರ 10 ಗಂಟೆಯ ನಂತರ ಜೋರಾಗಿ ಮ್ಯೂಸಿಕ್ ಇಡುವಂತಿಲ್ಲ. ಆ ನಿಯಮವನ್ನೇ ಪಾಲಿಸುವ ಸಲುವಾಗಿ ಇದು 10 ಗಂಟೆಗೆ ಮುಚ್ಚಲಾಗುತ್ತದೆ.

ಕೆಫೇ ಮಾಂಬೋ

ಕೆಫೇ ಮಾಂಬೋ

PC: Careyjamesbalboa

ಬಾಗಾ ಬೀಚ್‌ ಬಳಿ ಇರುವ ಈ ಸ್ಥಳವು ಸ್ನೇಹಿತರ ಜೊತೆ ಹ್ಯಾಂಗ್‌ಔಟ್‌ಗೆ ಉತ್ತಮವಾಗಿದೆ. ಇದು ಗೋವಾದ ಬೆಸ್ಟ್‌ ಬಾರ್‌ಗಳಲ್ಲಿ ಒಂದಾಗಿದೆ. ಮಾಂಬೋ ಅಲ್ಲಿನ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಬಹಳ ಪ್ರಸಿದ್ಧವಾದ ಬಾರ್‌ ಆಗಿದೆ.

Read more about: india goa travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X