Search
  • Follow NativePlanet
Share
» »ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..

ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..

ಪ್ರಪಂಚ ಪ್ರಸಿದ್ಧಿಯನ್ನು ಪಡೆದ ಪುಣ್ಯಕ್ಷೇತ್ರ ತಿರುಮಲ ತಿರುಪತಿ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಗೋವಿಂದ ಸ್ವಾಮಿ, ಕೊದಂಡಸ್ವಾಮಿ ದೇವಾಲಯಗಳು ಕೂಡ ಇವೆ. ದೊಡ್ಡ ವೈಷ್ಣವ ಕ್ಷೇತ್ರವಾದ ತಿರುಪತಿಯಲ್ಲಿ ಒಂದು ವೈಷ್ಣವ ಕ್ಷೇತ್ರ ಕೂಡ ಇದೆ. ಅದೇ ಕಪಿಲ ತೀರ್ಥ. ತಿರುಪತಿ ಉತ್ತರ ಮುಖವಾಗಿ, ತಿರುಪತಿ ಬೆಟ್ಟದ ಸಮೀಪದಲ್ಲಿ ಅಲಿಪಿರಿಗೆ ತೆರಳುವ ಸಮಯದಲ್ಲಿ ಮನೋಹರವಾದ ಈ ತೀರ್ಥವು ಕಾಣಿಸುತ್ತದೆ. ಮುಖ್ಯವಾಗಿ, ಮಳೆಗಾಲದಲ್ಲಿ ಈ ಸ್ಥಳಕ್ಕೆ ಬಂದರೆ ಪ್ರಕೃತಿಯು ಸುಂದರವಾದ ಜಲಪಾತದ ದೃಶ್ಯಗಳನ್ನು ಕಣ್ಣಾರೆ ಕಂಡು ಆನಂದಿಸಬಹುದು. ಇಲ್ಲಿನ ಪ್ರಶಾಂತವಾದ ವಾತಾವರಣವು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ.

ತಿರುಮಲ ಎಂದರೆ ಶ್ರೀ ವೆಂಕಟರಮಣ ಸ್ವಾಮಿ. ತಮಿಳುನಾಡಿನಲ್ಲಿ ತಿರು ಎಂದರೆ ಶ್ರೀ ಎಂದು, ಮಲ ಎಂದರೆ ಶೈಲಂ (ಬೆಟ್ಟ) ಎಂಬ ಅರ್ಥ ಕೂಡ ಇದೆ. ಅಂದರೆ ತಿರುಮಲ ಶ್ರೀಶೈಲ ಎಂಬುದಾಗಿದೆ. ಶಿವಕೇಶವರಿಗೆ ಭೇದವಿಲ್ಲ. ಹಾಗಿರುವಾಗ ತಿರುಪತಿಯಲ್ಲಿ ಶಿವಾಲಯವಿರುವುದು ಆಶ್ಚರ್ಯವೇ ಸರಿ. ಹಾಗೆ ತಿರುಪತಿಯಲ್ಲಿ ನೆಲೆಸಿರುವ ಪವಿತ್ರವಾದ ತೀರ್ಥವೇ ಕಪಿಲ ತೀರ್ಥ.

ಈ ತೀರ್ಥದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

1.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Bhaskaranaidu

ಶೇಷಾದ್ರಿಬೆಟ್ಟ ಸಮೀಪದಲ್ಲಿ 7 ಬೆಟ್ಟಗಳಿಗೆ (ಏಡುಕೊಂಡಲ)ಕ್ಕೆ ತೆರಳುವ ದಾರಿಯಲ್ಲಿರುತ್ತದೆ. ಕಪಿಲ ತೀರ್ಥವನ್ನು ಚಕ್ರತೀರ್ಥ ಅಥವಾ ಆಳ್ವಾರ್ ತೀರ್ಥ ಎಂದು ಕೂಡ ಕರೆಯುತ್ತಾರೆ. ಕೃತಯುಗದಲ್ಲಿ ಪಾತಾಳಕಾಲದಲ್ಲಿ ಕಪಿಲಮಹರ್ಷಿಯು ಪೂಜೆ ಮಾಡಿದ ಕಪಿಲೇಶ್ವರಸ್ವಾಮಿ, ಯಾವುದೋ ಕಾರಣದಿಂದಾಗಿ ಭೂಮಿಯನ್ನು ಬಗೆದುಕೊಂಡು ಇಲ್ಲಿ ನೆಲೆಸಿರುವುದಾಗಿ ಹೇಳುತ್ತಾರೆ. ಅದರಲ್ಲಿ ಇದು ಕಪಿಲತೀರ್ಥವಾಗಿ ಹೆಸರುವಾಸಿಯಾಗಿದೆ.

2.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

2.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Bhaskaranaidu

ತ್ರೇತಾಯುಗದಲ್ಲಿ ಅಗ್ನಿ ಪೂಜಿಸಿದ ಕಾರಣವಾಗಿ "ಆಗ್ನೇಯಲಿಂಗ" ಆಯಿತು. ಪ್ರಸ್ತುತ ಕಲಿಯುಗದಲ್ಲಿ ಕಪಿಲ ಗೋವು ಪೂಜೆಗಳನ್ನು ಮಾಡಿಕೊಳ್ಳುತ್ತಿದೆ. ಸಕಲ ತೀರ್ಥಗಳಲ್ಲಿ ಮೂರು ಕೋಟಿ ದೇವತೆಗಳು ಹುಣ್ಣಿಮೆಯಂದು ಮಧ್ಯಾಹ್ನದ ಸಮಯದಲ್ಲಿ 10 ಗಂಟೆಗಳ ಕಾಲ ಕಪಿಲತೀರ್ಥದಲ್ಲಿ ನೆಲೆಸುತ್ತಾರಂತೆ.

3.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

3.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Bhaskaranaidu

ಅ ಸಮಯದಲ್ಲಿ ಅಲ್ಲಿ ಸ್ನಾನ ಮಾಡಿದರೆ ಹಾಗೆಯೇ ಕನಿಷ್ಟ ಬಂಗಾರವನ್ನು ದಾನ ಮಾಡಿದರೆ, ಅದು ಮೆರುಪರ್ವತಕ್ಕೆ ಸಮಾನ ದಾನವಾಗಿ ಪರಿಗಣನೆ ಮಾಡಲಾಗುತ್ತದೆ ಎಂದು ಭಕ್ತರ ಗಾಢವಾದ ನಂಬಿಕೆಯಾಗಿದೆ.

5.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

5.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC: Bhaskaranaidu

11 ನೇ ಶತನಮಾದಲ್ಲಿ ಈ ಪ್ರದೇಶವನ್ನು ಆಳ್ವಿಕೆ ಮಾಡಿದ ಮೊದಲ ರಾಜೇಂದ್ರ ಚೋಳನ ಕಾಲದಲ್ಲಿ ಈ ದೇವಾಲಯದ ನಿರ್ಮಾಣ ನಡೆಯಿತು ಎಂಬುದು ಚಾರಿತ್ರಿಕ ಆಧಾರ ಮೂಲಕ ತಿಳಿಯುತ್ತದೆ. ಚೊಳರು ಮಹಾನ್ ಶಿವಭಕ್ತರಾದ್ದರಿಂದ ಅದನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನಿರ್ಮಾಣ ಮಾಡಿದರು. ಆಹ್ಲಾದಕರವಾದ ಕಪಿಲ ತೀರ್ಥವನ್ನು ಚೋಳರು ಅಭಿವೃದ್ಧಿಗೊಳಿಸಿದರೆ. ಅಚ್ಯುತ ದೇವರಾಯ ಕಾಲದಲ್ಲಿ ವೈಷ್ಣವರು ಆಳ್ವರ್ ತೀರ್ಥವಾಗಿ ಮಾರ್ಪಾಟು ಮಾಡಿದರು.

6.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

6.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC: Bhaskaranaidu

ಆಳ್ವಾರ್ ದೇವಾಲಯವು ಮೊದಲು ಒಂದು ಪಾಳುಬಿದ್ದ ದೇವಾಲಯವಾಗಿತ್ತು. ಅದು ನಮ್ಮಾಳ್ವಾರ್ ಎಂಬ ಆಳ್ವಾರ್ ದೇವಾಲಯವಾಗಿ ಹೇಳುತ್ತಾರೆ. 12 ನೇ ಶತಮಾನದಿಂದ 18 ನೇ ಶತಮಾನದವರೆಗೆ ಇದನ್ನು ಆಳ್ವಾರ್ ತೀರ್ಥವಾಗಿ ವ್ಯವಹಾರ ಮಾಡುತ್ತಿದ್ದರು.

7.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

7.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Agasthyathepirate

16 ನೇ ಶತಮಾನದಲ್ಲಿ ವಿಜಯನಗರದಿಂದ ಬಂದ ಸೆವ್ವುಸಾನಿ ಎಂಬ ದೇವದಾಸಿಯು ಈ ದೇವಾಲಯವನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಸೇವೆಯನ್ನು ಮಾಡಿದಳು. ದೇವಾಲಯವನ್ನು ವಿನಾಯಕಕುಣ್ಣಿಯು ಪ್ರತಿಷ್ಟಾಪಿಸಿದಳು. ಕಪಿಲತೀರ್ಥದಲ್ಲಿ ಕಪಿಲೇಶ್ವರ ಸ್ವಾಮಿಯ ಜೊತೆ ಜೊತೆಗೆ ಕಾಶಿವಿಶ್ವೇಶ್ವರ, ಸಹಸ್ರಲಿಂಗೇಶ್ವರ, ಲಕ್ಷ್ಮೀನಾರಾಯಣ, ಶ್ರೀ ಕೃಷ್ಣ, ಅಗಸ್ತ್ಯ ಮಹಾಮುನಿ, ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಕೂಡ ಇದೆ.

8.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

8.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Venugopal

ವಿಜಯನಗರ ಚಕ್ರವರ್ತಿ, ಅಚುತ್ಯ ರಾಯರ ಈ ತೀರ್ಥದ ಸುತ್ತಲೂ ಕಲ್ಲಿನ ಮೆಟ್ಟಿಲುಗಳು, ಮಂಟಪಗಳು ನಿರ್ಮಾಣ ಮಾಡಿದ್ದಾರೆ. 1830 ರಲ್ಲಿ ಈ ಪ್ರದೇಶದ ಸುತ್ತ ವಿಶಾಲವಾದ ಮಂಟಪ ಇತ್ತು ಎಂದು ಹಲವಾರು ರಮ್ಯವಾದ ಪ್ರದೇಶವನ್ನು ಯಾತ್ರಿಕರು ಭೇಟಿ ನೀಡುತ್ತಿದ್ದರು ಎಂದು ಹೇಳಲಾಗುತ್ತದೆ.

9.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

9.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Bhaskaranaidu

ಬ್ರಾಹ್ಮಣ ಸಮಾರಂಭಗಳಿಗೆ ಇಲ್ಲಿಯೇ ನಿರ್ಮಾಣ ಮಾಡಲಾದ ವಿಶಾಲವಾದ ಮಂಟಪ ಅನುಕೂಲವಾಗಿ ಇತ್ತು. ಆ ಸುತ್ತಮುತ್ತ ಸ್ಥಳದಲ್ಲಿ ಹೈದ್ರಾಬಾದ್ ರಾಜ್ಯದ ಈ ಸ್ಥಳದಲ್ಲಿ ಹಲವಾರು ದಾನ ಧರ್ಮಗಳು ನಡೆದವು ಎಂದು ಹೇಳಲಾಗುತ್ತದೆ.

10.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

10.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Agasthyathepirate

ಇಲ್ಲಿ ಕಪಿಲೇಶ್ವರನು ಕಾಮಾಕ್ಷಿ ದೇವಿ ಸಮೇತವಾಗಿ ನೆಲೆಸಿದ್ದಾನೆ. ಈ ದೇವಾಲಯಕ್ಕೆ ಉನ್ನತ ಶಿಖರ ಎಂಬಂತೆ ಇರುತ್ತದೆ ತಿರುಮಲ ಬೆಟ್ಟ. ಆ ಬೆಟ್ಟದ ಮೇಲಿಂದ ಅದ್ಭುತವಾದ ಜಲ, 20 ಅಡಿ ಎತ್ತರದಿಂದ ಪುಷ್ಕರಣಿಗೆ ಆಕಾಶಗಂಗೆ ಧುಮುಕುತ್ತದೆ. ಈ ಪುಷ್ಕರಣಿಯನ್ನೇ ಕಪಿಲತೀರ್ಥ ಎಂದು ಕರೆಯುತ್ತಾರೆ.

11.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

11.ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು....

PC:Adityamadhav83

ಈ ತೀರ್ಥವನ್ನು ಶೈವರು ಕಪಿಲ ತೀರ್ಥ ಎಂದೂ, ವೈಷ್ಣವರು ಆಳ್ವಾರ್ ತೀರ್ಥವೆಂದೂ ಕರೆಯುತ್ತಾರೆ. ವೈಷ್ಣವರು ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಸುದರ್ಶನ ಕಲ್ಲು ಶಿಲೆಗಳನ್ನು ಸ್ಥಾಪಿಸಿದ್ದಾರೆ. ಕಲ್ಲಿನ ಮೆಟ್ಟಿಲು, ಸಂಧ್ಯಾವಂದನೆ ದೀಪಗಳನ್ನು ಏರ್ಪಾಟು ಮಾಡಿದ್ದಾರೆ. ಹಾಗಾಗಿಯೇ ಅಂದಿನಿಂದ ಇದನ್ನು ಚಕ್ರತೀರ್ಥ ಎಂದು ವೈಷ್ಣವರು ಕರೆಯುತ್ತಾರೆ.

12.ಹೇಗೆ ತಲುಪಬೇಕು?

12.ಹೇಗೆ ತಲುಪಬೇಕು?

PC: Agasthyathepirate

ತಿರುಪತಿ ಬಸ್ ನಿಲ್ದಾಣದಿಂದ ಸುಮಾರು 3.3 ಕಿ.ಮೀ ದೂರದಲ್ಲಿರುವ ಕಪಿಲತೀರ್ಥವನ್ನು ಟಿಟಿಡಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಇದರಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಕಪಿಲತೀರ್ಥಕ್ಕೆ ರೈಲ್ವೆ ನಿಲ್ದಾಣವು 4 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಕೂಡ ಟಿಟಿಡಿ ಬಸ್ಸುಗಳು ಉಚಿತವಾಗಿ ಪ್ರಯಾಣಿಸಬಹುದು. ಅಥವಾ ಖಾಸಗಿ ಬಸ್ಸುಗಳ ಉಪಯೋಗವೂ ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X