Search
  • Follow NativePlanet
Share
» »350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಮುಕ್ತೇಶ್ವರ, ಭಾರತ ದೇಶದಲ್ಲಿಯೇ 2 ನೇ ಎತ್ತರವಾದ ಪರ್ವತವಾಗಿ ಪ್ರಸಿದ್ಧಿಗಳಿಸಿದ ನಂದಾ ದೇವಿ ಪರ್ವತವನ್ನು ನೋಡಿ ಆನಂದಿಸಬಹುದು. ಈ ಪ್ರದೇಶಕ್ಕೆ ಸಂದರ್ಶನ ಮಾಡುವ ಪ್ರವಾಸಿಗರು ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ. ವಿಭಿನ್ನವಾಗಿ ಕಾಣುವ ಹಿಮಾಲಯದ ಬೆಟ್ಟಗಳು, ತಂಪಾದ ವಾತಾವರಣ ಯಾರಿಗೆ ಇಷ್ಟ ಆಗಲ್ಲ. ಅದರಲ್ಲೂ ಯುವರಿಗೆ ಸಾಹಸ ಮಾಡಲು ಹೇಳಿ ಮಾಡಿಸಿದ ಸ್ಥಳವೆಂಬಂತೆ ಇರುತ್ತದೆ.

ಇಲ್ಲಿ ಇನ್ನೂ ಹಲವಾರು ಆಕರ್ಷಣೆಗಳನ್ನು ಗಮನಿಸಿದರೆ ಮುಕ್ತೇಶ್ವರ ಉತ್ತರಭಾರತದಲ್ಲಿಯೇ ನೈನಿತಾಲ್ ಜಿಲ್ಲಾಯಲ್ಲಿಯೇ ಪ್ರಸಿದ್ಧಿ ಹೊಂದಿದ ಗಿರಿಧಾಮವಾಗಿದೆ. ಇದು ಸಮುದ್ರ ಮಟ್ಟಕ್ಕೆ ಸುಮಾರು 2286 ಮೀಟರ್ ಎತ್ತರದಲ್ಲಿದೆ. ಸುಮಾರು 350 ವರ್ಷಗಳ ಹಿಂದಿನ ಅದ್ಭುತ ಶಿವಾಲಯವಾದ ಮುಕ್ತೇಶ್ವರ ಧಾಮ ಎಂಬ ಹೆಸರಿನ ಮೇಲೆ ಈ ಪ್ರದೇಶಕ್ಕೆ ಮುಕ್ತೇಶ್ವರ ಎಂಬ ಹೆಸರು ಬಂದಿತು ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಸ್ತುತ ಲೇಖನದಲ್ಲಿ ಮುಕ್ತೇಶ್ವರ ದೇವಾಲಯದ ಬಗ್ಗೆ ತಿಳಿಯೋಣ.

ಮುಕ್ತೇಶ್ವರ

ಮುಕ್ತೇಶ್ವರ

ಮುಕ್ತೇಶ್ವರ ದೇವಾಲಯವು ಶಿವನಿಗೆ ಅಂಕಿತವಾದ ಪ್ರಾಚೀನವಾದ ದೇವಾಲಯವಾಗಿದೆ. ಇದು ಭುವನೇಶ್ವರದಲ್ಲಿದೆ. ಈ ದೇವಾಲಯದಲ್ಲಿ ಹಾಲಿನಂತಹ ಬಿಳಿ ಶಿವ ಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ. ಬ್ರಹ್ಮ, ವಿಷ್ಣು, ಪಾರ್ವತಿ, ಹನುಮಾನ್, ಗಣಪತಿ ವಿಗ್ರಹಗಳ ಜೊತೆ ಜೊತೆಗೆ ನಂದಿ ವಿಗ್ರಹವನ್ನು ಕೂಡ ಈ ದೇವಾಲಯದಲ್ಲಿ ಕಾಣಬಹುದು. ಈ ದೇವಾಲಯಕ್ಕೆ ಕಲ್ಲಿನ ಮೆಟ್ಟಿಲು ಏರುವ ಮೂಲಕ ಸೇರಿಕೊಳ್ಳಬಹುದು.

ಮುಕ್ತೇಶ್ವರ

ಮುಕ್ತೇಶ್ವರ

ಮುಕ್ತೇಶ್ವರ ಸಮೀಪದಲ್ಲಿರುವ ಪ್ರವಾಸಿ ತಾಣವೆಂದರೆ ಅದು ಮಜಿಲಿ. ಇದು ಸಮುದ್ರ ಮಟ್ಟಕ್ಕೆ ಸುಮಾರು 6000 ಅಡಿ ಎತ್ತರದಲ್ಲಿದೆ. ಪರ್ವತದ ಪ್ರದೇಶವು ಸುಮಾರು 36 ಎಕರೆ ವಿಸ್ತಾರವಾಗಿದೆ. ಇಲ್ಲಿಂದ ಹಿಮಾಲಯ ಪರ್ವತದ ಸುಂದರವಾದ ಸೂರ್ಯಾಸ್ತ ದೃಶ್ಯವನ್ನು ಕಂಡು ಆನಂದಿಸಬಹುದು. ಓಕ್ ಹಾಗು ಪೈನ್ ಮರಗಳಿಂದ ಅವೃತ್ತವಾಗಿರುತ್ತದೆ.

ಮುಕ್ತೇಶ್ವರ

ಮುಕ್ತೇಶ್ವರ

ಚಾತಿ ಜಾಲಿಯ ಹಿಂದೆ ಒಂದು ಸುಂದರವಾದ ಪುರಾಣವಿದೆ. ಅದೆನೆಂದರೆ ದೇವತೆಗಳಿಗೆ ಹಾಗು ರಾಕ್ಷಸರ ಮಧ್ಯೆ ಯುದ್ಧ ಇಲ್ಲಿಯೇ ನಡೆಯಿತು ಎಂದು ಒಂದು ಕಥೆ ಕೂಡ ಇದೆ. ಅದಕ್ಕೆ ಆಧಾರವಾಗಿಯೇ ಕತ್ತಿಯ ಗುರುತು, ಆನೆಗಳ ಹೆಜ್ಜೆಯ ಗುರುತು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಮತ್ತೊಂದು ಪ್ರಧಾನವಾದ ಆಕರ್ಷಣೆ ಏನೆಂದರೆ ಕ್ರಿ. ಶ 11 ನೇ ಶತಮಾನಕ್ಕೆ ಸಂಬಂದಿಸಿದ ರಾಜ ರಾಣಿ ದೇವಾಲಯ. ಇದರಲ್ಲಿ ಸುಂದರವಾದ ಕಲ್ಲಿನ ವಿಗ್ರಹವನ್ನು ಕಾಣಬಹುದಾಗಿದೆ.

ಮುಕ್ತೇಶ್ವರ

ಮುಕ್ತೇಶ್ವರ

ಬ್ರಹೇಶ್ವರ ದೇವಾಲಯ ಕ್ರಿ.ಶ 1050 ರಲ್ಲಿ ನಿರ್ಮಾಣ ಮಾಡಿದ್ದಾರೆ ಎಂಬುದಕ್ಕೆ ಅಲ್ಲಿನ ಶಾಸನಗಳಿಂದ ತಿಳಿಯಬಹುದು. ಸುಂದರವಾದ ಶಿಲ್ಪಗಳಿಂದ ಅದ್ಭುತವಾಗಿ ಕೆತ್ತನೆ ಮಾಡಿದ ಪ್ರಾಂಗಣದಲ್ಲಿ ಮತ್ತೇ 4 ದೇವಾಲಯಗಳನ್ನು ಕೂಡ ಕಾಣಬಹುದಾಗಿದೆ.

ಮುಕ್ತೇಶ್ವರ

ಮುಕ್ತೇಶ್ವರ

ಮುಕ್ತೇಶ್ವರದಿಂದ 14 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಕುಗ್ರಾಮವಿದೆ. ಅಲ್ಲಿ ಅದ್ಭುತವಾದ ಹಿಮಾಲಯ ಪರ್ವತ ಶ್ರೇಣಿಗಳ ಸೌಂದರ್ಯವನ್ನು ಅಸ್ವಾಧಿಸಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಹೆಚ್ಚಾಗಿ ಓಕ್, ಪೈನ್, ಬಿರ್ಫ್ ಕಫಲ್ ವೃಕ್ಷಗಳನ್ನು ಈ ಪ್ರಾಂತ್ಯದಲ್ಲಿ ಕಾಣಬಹುದು. ಟ್ರೆಕ್ಕಿಂಗ್ ಮಾಡಲು ಬಯಸುವವರು ಕೂಡ ಒಮ್ಮೆ ಈ ಪ್ರದೇಶದಲ್ಲಿ ಪ್ರಯತ್ನ ಮಾಡಬಹುದು.

ಮುಕ್ತೇಶ್ವರ

ಮುಕ್ತೇಶ್ವರ

ಪಿಯಾರ್ ಪ್ರದೇಶವು ದಟ್ಟವಾದ ಅರಣ್ಯವನ್ನು ಹೊಂದಿದೆ. ಇಲ್ಲಿ ಬಾರ್ಕಿಂಗ್ ಡಿರ್ಸ್, ವೈಟ್ ಕ್ಯಾಟ್, ಚಿರುತೆ ಇನ್ನೂ ಹಲವಾರು ವಿವಿಧ ಪ್ರಾಣಿಗಳು ಹಾಗು ಪಕ್ಷಿಗಳನ್ನು ಕಾಣಬಹುದಾಗಿದೆ. ಪಿಯರ್ ಅರಣ್ಯವು ಪ್ರಾಣಿ ಸಂಕುಲಕ್ಕೆ ಅವಾಸ ಸ್ಥಾನವಾಗಿದೆ.

ಮುಕ್ತೇಶ್ವರ

ಮುಕ್ತೇಶ್ವರ

ಮಕ್ತೇಶ್ವರ ದೇವಾಲಯಕ್ಕೆ ಸಮೀಪದಲ್ಲಿ ಒಂದು ಸುಂದರವಾದ ಬಂಗಲೆ ಇದೆ. ಇದನ್ನು "ಮುಕ್ತೇಶ್ವರ ಇನ್ಸ್ಪೆಕ್ಷನ್ ಬಂಗ್ಲಾ" ಎಂದು ಕರೆಯುತ್ತಾರೆ. ಇದು ಪೂರ್ವದಲ್ಲಿನ ಸರ್ಕಾರದ ಗೆಸ್ಟ್ ಹೌಸ್ ಆಗಿತ್ತು. ಪ್ರಖ್ಯಾತ ಬ್ರಿಟಿಷ್ ಅಧಿಕಾರಿ ಇಲ್ಲಿನ ಹುಲಿಗಳನ್ನು ಭೇಟೆಯಾಡುತ್ತಾ ಈ ಬಂಗ್ಲಾದಲ್ಲಿ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ.

ಮುಕ್ತೇಶ್ವರಕ್ಕೆ ಹೇಗೆ ಸೇರಿಕೊಳ್ಳಬೇಕು?

ಮುಕ್ತೇಶ್ವರಕ್ಕೆ ಹೇಗೆ ಸೇರಿಕೊಳ್ಳಬೇಕು?

ಮುಕ್ತೇಶ್ವರಕ್ಕೆ ಸಮೀಪದಲ್ಲಿ 86 ಕಿ.ಮೀ ದೂರದಲ್ಲಿ ಪಟ್ನನಗರದಲ್ಲಿ ವಿಮಾನ ನಿಲ್ದಾಣವಿದೆ. ಅಲ್ಲಿಂದ 54 ಕಿ.ಮೀ ದೂರದಲ್ಲಿ ಕಥೋಡಂ ಎಂಬ ರೈಲ್ವೆ ನಿಲ್ದಾಣವಿದೆ. ದೇಶದ ಎಲ್ಲಾ ಪ್ರದೇಶದಿಂದಲೂ ಮುಕ್ತೇಶ್ವರಕ್ಕೆ ಸರ್ಕಾರಿ ಬಸ್ಸುಗಳು ಬರುತ್ತವೆ ಹೋಗುತ್ತವೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more