Search
  • Follow NativePlanet
Share
» »ವೆಂಕಟೇಶ್ವರನ ಮೂಲ ವಿಗ್ರಹವು ಗರ್ಭಗುಡಿಯಲ್ಲಿ 110 ಡಿಗ್ರಿಯ ಉಷ್ಣಗ್ರತೆಯಲ್ಲಿರುತ್ತದೆಯಂತೆ......

ವೆಂಕಟೇಶ್ವರನ ಮೂಲ ವಿಗ್ರಹವು ಗರ್ಭಗುಡಿಯಲ್ಲಿ 110 ಡಿಗ್ರಿಯ ಉಷ್ಣಗ್ರತೆಯಲ್ಲಿರುತ್ತದೆಯಂತೆ......

ಇಲ್ಲಿನ ಸಾಂಪ್ರದಾಯದ ಪ್ರಕಾರ ಮೊದಲು ವರಹಾ ಲಕ್ಷ್ಮೀ ನರಸಿಂಹಸ್ವಾಮಿಯನ್ನು ದರ್ಶಸಿದ ನಂತರವೇ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಬೇಕು ಎಂದುಹೇಳುತ್ತಾರೆ. ಈ ಸ್ವಾಮಿಯ ದೇವಾಲಯದ ಬಗ್ಗೆ ಅನೇಕ ರಹಸ್ಯಗಳನ್ನು ಕಾಣಬಹುದು. ಅದರಲ್ಲಿಕೆಲವು ಬೆಳ

By Sowmyabhai

ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧ ಹಾಗು ಪುರಾತನವಾದುದು. ಯಾತ್ರಿಕರಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಕ್ಷೇತ್ರ ಎಂದೇ ಹೇಳಬಹುದು. ಆ ದೇವಾಲಯವು 7 ಬೆಟ್ಟಗಳ ಮೇಲೆ ಇದ್ದು, ಸ್ವಾಮಿಯ ಪುಷ್ಕರಣಿ ನದಿ ದಕ್ಷಿಣ ದಿಕ್ಕಿಗೆ ಇದೆ. ಈ ಅದ್ಭುತವಾದ ದೇವಾಲಯವು ದ್ರಾವಿಡ ಸಾಂಪ್ರದಾಯದ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸುಮಾರು 22 ಎಕರೆಗಳಷ್ಟು ವಿಶಾಲವಾಗಿ ನಿರ್ಮಾಣ ಮಾಡಿರುವ ಈ ದೇವಾಲಯದಲ್ಲಿ 8 ಅಡಿ ಎತ್ತರದ ವೆಂಕಟೇಶ್ವರ ಸ್ವಾಮಿಯ ವಿಗ್ರಹವಿದೆ. ಆ ವಿಗ್ರಹವನ್ನು ಆನಂದ ನಿಲಯ ದಿವ್ಯ ಶಿಖರವಾಗಿ ಕರೆಯುತ್ತಾರೆ.

ಆ ಸ್ವಾಮಿಯ ದರ್ಶನವನ್ನು ಪಡೆಯಲು ದೇಶ-ವಿದೇಶದಿಂದ ಪ್ರವಾಸಿಗರು ಹಾಗು ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ. ಸ್ವಾಮಿಯನ್ನು ಕಲಿಯುಗ ವೈಕುಂಠಾಧಿಪತಿ ಎಂದೇ ಭಕ್ತರು ಕರೆಯುತ್ತಾರೆ. ಸ್ವಯಂ ಭೂವಾಗಿ ನೆಲೆಸಿರುವ ಸ್ವಾಮಿಯನ್ನು ಕಾಣುವುದಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತ ಜನಸಾಗರ ಸೇರಿರುತ್ತಾರೆ. ತಿರುಪತಿಯಲ್ಲಿ ಕೇವಲ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವೇ ಅಲ್ಲದೇ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಕೂಡ ಕಾಣಬಹುದು.

ಇಲ್ಲಿನ ಸಾಂಪ್ರದಾಯದ ಪ್ರಕಾರ ಮೊದಲು ವರಹಾ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ದರ್ಶಸಿದ ನಂತರವೇ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಬೇಕು ಎಂದು ಹೇಳುತ್ತಾರೆ. ಈ ಸ್ವಾಮಿಯ ದೇವಾಲಯದ ಬಗ್ಗೆ ಅನೇಕ ರಹಸ್ಯಗಳನ್ನು ಕಾಣಬಹುದು. ಅದರಲ್ಲಿ ಕೆಲವು ಬೆಳಕಿಗೆ ಬಂದರೆ, ಇನ್ನು ಕೆಲವು ಹಾಗೆಯೇ ನಿಗೂಢವಾಗಿಯೇ ಉಳಿದಿದೆ.

1.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

1.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ವೆಂಕಟೇಶ್ವರ ಸ್ವಾಮಿಯ ಮೂಲ ವಿರಾಟ 110 ಡಿಗ್ರಿಗಳು ಉಷ್ಣಗ್ರತೆಯಲ್ಲಿ ಇರುತ್ತದೆಯಂತೆ. ಶ್ರೀ ವೆಂಕಟೇಶ್ವರ ದೇವಾಲಯದಲ್ಲಿನ ಮೂಲ ವಿರಾಟ ಎಷ್ಟು ಉಷ್ಣಗ್ರತೆಯಲ್ಲಿ ಇರುತ್ತದೆ ಎಂಬುದು ನಿಮಗೆ ಗೊತ್ತ? ಸ್ವಾಮಿಯ ವಿಗ್ರಹವು ಸುಮಾರು 110 ಡಿಗ್ರಿ ಉಷ್ಣಗ್ರತೆಯಲ್ಲಿ ಇರುತ್ತದೆಯಂತೆ. ಅಷ್ಟೇ ಅಲ್ಲ ಯಾವಾಗಲೂ ಸ್ವಾಮಿಗೆ ಬೆವರು ಕೂಡ ಬರುತ್ತಿರುತ್ತದೆಯಂತೆ.

2.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

2.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ತಿರುಮಲ ಬೆಟ್ಟವು 3000 ಅಡಿ ಎತ್ತರದಲ್ಲಿದೆ. ತಿರುಮಲ ಬೆಟ್ಟವು ಯಾವಾಗಲೂ ಶೀತದಿಂದ ಕೂಡಿರುವ ಪ್ರದೇಶ. ಮುಂಜಾನೆಯೇ 4:30 ಗಂಟೆಗೆ ತಂಪಾದ ನೀರು, ಹಾಲು, ಸುಗಂಧ ದ್ರವ್ಯಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕವನ್ನು ಮಾಡುತ್ತಾರೆ. ಅದ್ಭುತವಾದ ವಸ್ತ್ರದಿಂದ ಸ್ವಾಮಿಯ ಮೂಲ ವಿರಾಟನಿಗೆ ಅಲಂಕರಿಸುತ್ತಾರೆ. ಗುರುವಾರ ಅಭಿಷೇಕಕ್ಕಿಂತ ಮುಂಚೆ ಅಭರಣಗಳನ್ನು ತೆಗೆದು ಹಾಕುತ್ತಾರೆ.

3.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

3.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ಆ ಆಭರಣವನ್ನು ತೆಗೆಯುವಾಗ ಅತ್ಯಂತ ಬಿಸಿಯಿಂದ ಕೂಡಿರುತ್ತದೆ ಎಂದು ಪುರೋಹಿತರು ಹೇಳುತ್ತಾರೆ. ಮೂಲ ವಿರಾಟ ಯಾವಾಗಲೂ 110 ಡಿಗ್ರಿ ಉಷ್ಣಗ್ರತೆಯನ್ನು ಹೊಂದಿರುವುದೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ. ಶ್ರೀ ವೆಂಕಟಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಪ್ರತಿಯೊಂದು ಅದ್ಭುತವೇ.

4.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

4.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ಹುಂಡಿ, ಅಭಿಷೇಕಗಳು, ಪೂಜೆಯ ಕೊಠಡಿಗಳು ವಿಶೇಷವಾದುದು. ಶ್ರೀ ವೆಂಕಟೇಶ್ವರ ಶ್ರೀವಾರಿ ಅಡುಗೆ ಕೊಠಡಿಯು ಅತ್ಯಂತ ವಿಶಾಲವಾದುದು. ಅಲ್ಲಿ ಶ್ರೀ ವಾರಿ ಪೊಂಗಲಿ, ಮೊಸರನ್ನ, ಪುಳಿಯೊಗ್ಗರೆ, ವಡೆ, ಜಿಲೇಬಿ, ಪಾಯಸ, ದೋಸೆ, ಕೇಸರಿ ರವೆ, ಬಾದಾಮಿ ಕೇಸರಿ, ಗೋಡಂಬಿಯಿಂದ ತಯಾರಿಸಿದ ಸ್ವಾಧಿಷ್ಟವಾದ ಆಹಾರ ಪ್ರತಿದಿನವು ಮಾಡುತ್ತಾರೆ.

5.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

5.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ಆದರೆ ಶ್ರೀ ವೆಂಕಟೇಶ್ವರ ಸ್ವಾಮಿಯು ಪ್ರತಿಯೊಂದು ದಿನವು ಮಣ್ಣಿನ ಪಾತ್ರೆಯಲ್ಲಿ ಮೊಸರನ್ನ ಮಾತ್ರವೇ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಸ್ವಾಮಿಗೆ ನೈವೇದ್ಯವಾಗಿ ಸಮರ್ಪಿಸುವ ಮೊಸರನ್ನ ಮಾತ್ರವೇ ಭಕ್ತರಿಗೆ ಪ್ರಸಾದವಾಗಿ ಲಭಿಸಿದರೆ ಅದು ಮಹಾಭಾಗ್ಯ ಎಂದು ಪುರೋಹಿತರು ಹೇಳುತ್ತಿರುತ್ತಾರೆ.

6.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

6.110 ಡಿಗ್ರಿಯ ಉಷ್ಣಗ್ರತೆಯಲ್ಲಿ ಮೂಲ ವಿರಾಟ

ಇನ್ನು ಸ್ವಾಮಿಯ ವಸ್ತ್ರಗಳ ಸಂಗತಿಗೆ ಬಂದರೆ ಸ್ವಾಮಿಗೆ ಧರಿಸುವ ಪಿತಾಂಬರಂ 21 ಅಡಿ ದೊಡ್ಡದು ಇದ್ದು, 6 ಕೆ.ಜಿ ಭಾರವಿರುತ್ತದೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ ಶುಕ್ರವಾರದಂದು ಬಿಲ್ವಪತ್ರೆಗಳಿಂದ ಅರ್ಚನೆ ಮಾಡುತ್ತಾರೆ. ಹಬ್ಬದ ದಿನದಂದು ಅನೇಕ ಬಿಲ್ವ ಪತ್ರೆ ದಳಗಳಿಂದ ಸ್ವಾಮಿಗೆ ಅರ್ಚನೆ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಸ್ವಾಮಿಯ ಉತ್ಸವ ಮೂರ್ತಿಗೆ ಬಂಗಾರದಿಂದ ಅಲಂಕಾರ ಮಾಡಿ ಉತ್ಸವಕ್ಕೆ ಕರೆದುಕೊಂಡು ಹೋಗುತ್ತಾರೆ.

7.ಇಲ್ಲಿ ನೋಡಬೇಕಾಗಿರುವ ಪ್ರದೇಶಗಳು

7.ಇಲ್ಲಿ ನೋಡಬೇಕಾಗಿರುವ ಪ್ರದೇಶಗಳು

ಅಲಮೇಲು ಮಂಗಮ್ಮ ದೇವಾಲಯ, ತಿರುಪತಿ ಅಲುಮೇಲು ಮಂಗಮ್ಮ ದೇವಾಲಯವು ಅಲಮೇಲು ಮಂಗಾಪುರದ ದೇವಾಲಯದಲ್ಲಿದೆ. ಇದನ್ನು ತಿರುಚಾನೂರು ಎಂದು ಕೂಡ ಕರೆಯುತ್ತಾರೆ. ಈ ದೇವಾಲಯದಲ್ಲೆ ವೆಂಕಟೇಶ್ವರಸ್ವಾಮಿ ಪತ್ನಿ ಅಲುಮೇಲು ಮಂಗಮ್ಮ ಅಥವಾ ಶ್ರೀ ಪದ್ಮಾವತಿ ದೇವಿ ವಿಗ್ರಹವಿದೆ. ಪುಷ್ಕರಣಿ ನದಿಯಲ್ಲಿ ಈ ದೇವತೆ ಹುಟ್ಟಿದಳು ಎಂದು ನಂಬಿಕೆ ಇದೆ. ಈ ದೇವಾಲಯಕ್ಕೆ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು.

8.ಗೋವಿಂದ ರಾಜ ಸ್ವಾಮಿ ದೇವಾಲಯ

8.ಗೋವಿಂದ ರಾಜ ಸ್ವಾಮಿ ದೇವಾಲಯ

ತಿರುಪತಿಯಲ್ಲಿನ ಪ್ರಧಾನವಾದ ಕ್ಷೇತ್ರಗಳಲ್ಲಿ ಗೋವಿಂದರಾಜ ಸ್ವಾಮಿ ದೇವಾಲಯವು ಕೂಡ ಒಂದು. ವೈಷ್ಣವ ಸಾಂಪ್ರದಾಯದ ಪ್ರಕಾರ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. 1235 ರಲ್ಲಿ ನಿರ್ಮಾಣ ಮಾಡಿದ ಈ ದೇವಾಲಯವನ್ನು ವೈಷ್ಣವ ಗುರುವಾದ ಶ್ರೀಮದ್ರಾಮಾನುಜಾಚಾರ್ಯರು ಶಂಖುಸ್ಥಾಪನೆ ಮಾಡಿದರು.

9.ಇತರ ದೇವಾಲಯಗಳು

9.ಇತರ ದೇವಾಲಯಗಳು

ದಕ್ಷಿಣದ ದಿಕ್ಕಿನ ಮತ್ತೊಂದು ಭಾಗದಲ್ಲಿ ಪಾರ್ಥಸಾರಥಿ ವಿಗ್ರಹ ಇದ್ದರೆ, ಉತ್ತರ ಭಾಗದಲ್ಲಿ ಗೋವಿಂದ ರಾಜ ಸ್ವಾಮಿ ದೇವಾಲಯವಿದೆ. ಹಾಗೆಯೇ ಇಲ್ಲಿ ಮನವಾಲ ಮಾಮುನಿ, ಶ್ರೀ ಚಕ್ರತಾಳ್ವಾರ್, ಸಲಾಯಿ ನಾಚಿಯಾರ್ ಅಮ್ಮ, ಶ್ರೀ ಮಚುರಕವಿ ಆಳ್ವಾರ್, ಶ್ರೀ ವ್ಯಾಸರಾಜ ಆಂಜನೇಯ ಸ್ವಾಮಿ, ಶ್ರೀ ತಿರುಮಂಗಾಯಿ ಆಳ್ವಾರ್, ಶ್ರೀ ವೆದಾಂತ ದೇಶಿಕರ್ ನಂತಹ ಚಿಕ್ಕ ಚಿಕ್ಕ ದೇವಾಲಯಗಳು ಕೂಡ ಇಲ್ಲಿವೆ.

10.ಪದ್ಮಾವತಿ ದೇವಿ ದೇವಾಲಯ, ತಿರುಪತಿ

10.ಪದ್ಮಾವತಿ ದೇವಿ ದೇವಾಲಯ, ತಿರುಪತಿ

ತಿರುಮಲ ಬೆಟ್ಟದಿಂದ ಶ್ರೀ ಪದ್ಮಾವತಿ ದೇವಿ ದೇವಾಲಯವು 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪತ್ನಿ ಪದ್ಮಾವತಿ ದೇವಿ ನೆಲೆಸಿದ್ದಾಳೆ. ತೊಂಡಮಾನ್ ಚಕ್ರವರ್ತಿ ನಿರ್ಮಾಣ ಮಾಡಿದ ಈ ದೇವಾಲಯವನ್ನು ಮೊದಲು ದರ್ಶಿಸಿದ ನಂತರವೇ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕು ಎಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಪದ್ಮಾವತಿ ದೇವಿಯ ಜನನದ ಬಗ್ಗೆ ಹಾಗು ವೆಂಕಟೇಶ್ವರ ಪದ್ಮಾವತಿಯ ಪರಿಣಯದ ಪ್ರಸಂಗದ ಕುರಿತು ಹೇಳುತ್ತಾರೆ.

11.ಪಾರ್ಕ್

11.ಪಾರ್ಕ್

ಶ್ರೀ ವೆಂಕಟೇಶ್ವರ ಜುಲಾಜಿಕಲ್ ಪಾರ್ಕ್ 1987 ಸೆಪ್ಟೆಂಬರ್ 29 ರಂದು ಸ್ಥಾಪಿಸಿದರು. 5,532 ಎಕರೆಗಳ ವಿಶಾಲ ಸ್ಥಳದಲ್ಲಿರುವ ಈ ಪಾರ್ಕ್‍ನಲ್ಲಿ ಅನೇಕ ವನ್ಯ ಮೃಗಗಳಿವೆ. ಚಿರುತೆ, ಪಕ್ಷಿಗಳು, ಅರಣ್ಯದ ಆನೆಗಳು ಇನ್ನು ಹಲವಾರು ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಮಾಂಸಹಾರಿ ಹಾಗು ಸಸ್ಯಹಾರಿ ಪ್ರಾಣಿಗಳು, ಹಚ್ಚ ಹಸಿರಿನಿಂದ ಕೂಡಿದ ಮೈದಾನಗಳು ಇಲ್ಲಿ ಅತಿ ದೊಡ್ಡ ಆಕರ್ಷಣೆಯಾಗಿದೆ.

12.ತಲುಪುವ ಬಗೆ ಹೇಗೆ?

12.ತಲುಪುವ ಬಗೆ ಹೇಗೆ?

ತಿರುಪತಿಗೆ ಅನೇಕ ರೈಲ್ವೆ, ವಿಮಾನ, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು. ಬೆಂಗಳೂರಿನಿಂದ ತಿರುಪತಿಗೆ ನೇರವಾದ ರೈಲುಗಳು ಹಾಗು ವಿಮಾನಗಳು ಸಂಪರ್ಕ ಸಾಧಿಸುತ್ತವೆ. ಅಷ್ಟೇ ಅಲ್ಲ ರಸ್ತೆ ಮಾರ್ಗದ ಮೂಲಕವು ಕೂಡ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X