Search
  • Follow NativePlanet
Share
» »ವಿಸ್ಮಯಕರ ಹಿನ್ನಿಲೆಯ ಎರಡು ದೇವಾಲಯಗಳು

ವಿಸ್ಮಯಕರ ಹಿನ್ನಿಲೆಯ ಎರಡು ದೇವಾಲಯಗಳು

By Vijay

ನಮ್ಮ ಸನಾತನ ಧರ್ಮದಲ್ಲಿ ವೇದ, ಉಪನಿಷತ್ತುಗಳು, ಕಾವ್ಯಗಳು, ಗ್ರಂಥಗಳು ಹೀಗೆ ಹಲವಾರು ಸಾಹಿತ್ಯಗಳನ್ನು ಓದಿದಾಗ ಸಾಕಷ್ಟು ವಿಸ್ಮಯಕರ, ಆಸಕ್ತಿ ಹುಟ್ಟಿಸುವ ಕಥೆಗಳು ಕಂಡುಬರುತ್ತವೆ. ರಾಮಾಯಣವೆ ಆಗಲಿ, ಮಹಾಭಾರತವೆ ಆಗಲಿ ಓದಿದಾಗ ಕೆಲವು ಅದ್ಭುತ ಕಥೆಗಳ ಕುರಿತು ತಿಳಿಯಬಹುದು.

ಇನ್ನೂ ಈ ಕಥೆಗಳಿಗೆ ತಕ್ಕಂತೆ ಅದಕ್ಕೆ ಪೂರಕವೆಂಬುವಂತೆ ಕೆಲವು ತಾಣಗಳು ಭಾರತದಾದ್ಯಂತ ಕಂಡುಬರುತ್ತವೆ. ಈ ಸ್ಥಳಗಳು ಧಾರ್ಮಿಕ ಪ್ರವಾಸಿ ಆಕರ್ಷಣೆಗಳಾಗಿ ಮಾತ್ರವಲ್ಲದೆ ಒಂದು ರೀತಿಯ ಆಸಕ್ತಿ ಹುಟ್ಟಿಸುವಂತಹ ತಾಣಗಳಾಗಿಯೂ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ನಿಮಗಿಷ್ಟವಾಗಬಹುದಾದ : ವಿರಭದ್ರನ ಎರಡು ವಿಶಿಷ್ಟ ದೇವಾಲಯಗಳು

ಸನಾತನ ಧರ್ಮದ ಪೌರಾಣಿಕ ಕಥೆಗಳಲ್ಲಿ ಬರುವ ಅದೆಷ್ಟೊ ಪಾತ್ರಗಳು ಚಿತ್ರ ವಿಚಿತ್ರವಾಗಿವೆ. ಇಂತಹ ಪಾತ್ರಗಳ ಕುರಿತು ಅವಲೋಕಿಸುವಾಗ ಕಂಡುಬರುವ ಒಂದು ಪಾತ್ರವೆಂದರೆ ಹಿಡಿಂಬಾ ಅಥವಾ ಹಿಡಿಂಬಿ. ಮೂಲತಃ ಹಿಡಿಂಬಿ ರಕ್ಕಸಿಯಾದರೂ ಸಹ ಮಹಾಭಾರತದೊಂದಿಗೆ ಸಾಕಷ್ಟು ನಂಟನ್ನು ಹೊಂದಿದ್ದಾಳೆ.

ಅಲ್ಲದೆ, ಹಿಡಿಂಬೆಯನ್ನೆ ಒಬ್ಬ ಶಕ್ತಿ ದೇವತೆಯಾಗಿ ಆರಾಧಿಸುವ ಒಂದು ವಿಸ್ಮಯಕರ ದೇವಾಲಯವೂ ಸಹ ಭಾರತದಲ್ಲಿದೆ. ಇನ್ನೂ ಎರಡನೆಯದಾಗಿ ಈ ಲೇಖನದಲ್ಲಿ ತಿಳಿಸಲಾಗಿರುವ ಇನ್ನೊಂದು ದೇವಾಲಯದ ನಂಟು ರಾಮಾಯಣದ ಕುತೂಹಲಕರ ಪಾತ್ರಧಾರಿಯಾದ ಕುಂಭಕರ್ಣನ ಮಗನೊಂದಿಗೆ ಸೇರಿಕೊಂಡಿದೆ. ಸ್ಲೈಡುಗಳನ್ನು ಕ್ಲಿಕ್ಕಿಸಿ ಈ ದೇವಸ್ಥಾನಗಳ ಕುರಿತು ತಿಳಿಯಿರಿ. ಸಾಧ್ಯವಾದರೆ ಭೇಟಿ ನಿಡಿ.

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಮನಾಲಿ ಗಿರಿಧಾಮವು ದೇಶದಲ್ಲೆ ಪ್ರವಾಸಿ ಆಕರ್ಷಣೆಯಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿನ ಸೃಷ್ಟಿ ಸೌಂದರ್ಯ, ನಯನ ಮನೋಹರ ಕಣಿವೆ-ಪರ್ವತಗಳು, ದಟ್ಟ ಹಸಿರಿನಿಂದ ಕೂಡಿದ ಕಾಡು ಅದರಲ್ಲಿ ದೈತ್ಯವಾಗಿ ಬೆಳೆದಿರುವ ದೇವದಾರು ಮರಗಳು, ಹಿತಕರವಾದ ತಂಪು ತಂಪಾದ ಹವಾಮಾನ, ಕಲ್ಮಶರಹಿತ ಪರಿಸರ ಎಂಥವರನ್ನೂ ಬೆರುಗುಗೊಳಿಸುತ್ತದೆ.

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಸಾಮಾನ್ಯವಾಗಿ ನವದಂಪತಿಗಳಿಗೆ ಮಧುಚಂದ್ರಕ್ಕೆ ಆದರ್ಶಮಯ ತಾಣವಾಗಿರುವ ಮನಾಲಿಯಲ್ಲಿ ಸಾಮಾನ್ಯವಾಗಿ ಎಲ್ಲೂ ಕೇಳರಿಯದ ಅಸಾಮಾನ್ಯ ದೇವಾಲಯವೊಂದಿದೆ.

ಚಿತ್ರಕೃಪೆ: Wordsmith86

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಆ ದೇವಾಲಯವೆ ಹಿಡಿಂಬಾ ದೇವಾಲಯ. ಅಂದರೆ ಮಹಾಭಾರತದಲ್ಲಿ ಬರುವ ಹಿಡಿಂಬೆ ಅಥವಾ ಹಿಡಿಂಬಾ ರಕ್ಕಸಿಯನ್ನು ದೇವಿ ರೂಪದಲ್ಲಿ ಆರಾಧಿಸಲಾಗುವ ದೇವಾಲಯ.

ಚಿತ್ರಕೃಪೆ: Bhadviya

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ದಟ್ಟವಾದ ಅಭಯಾರಣ್ಯದಲ್ಲಿ ಗಾಢವಾಗಿ ಬೆಳೆದು ನಿಂತಿರುವ ದೈತ್ಯ ದೇವದಾರು ಮರಗಳ ಮಧ್ಯದಲ್ಲಿ ಸ್ಥಿತವಾಗಿರುವ ಈ ಹಿಡಿಂಬಾ ದೇವಾಲಯ ಕಟ್ಟಿಗೆಯಿಂದ ತಯಾರಿಸಲಾದ ವಿಶಿಷ್ಟ ರೀತಿಯ ಒಂದರ ಮೇಲೊಂದರಂತೆ ಇಡಲಾಗಿರುವ ಮೂರು ಸ್ತರಗಳ ಗೋಪುರದಿಂದ ಅನನ್ಯವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Pdhang

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಈ ದೇವಾಲಯ ಆವರಣದಲ್ಲಿ ನೆಡಲಾಗಿರುವ ಶಾಸನದ ಪ್ರಕಾರ, ಈ ದೇವಾಲಯವು 1553 ರಲ್ಲಿ ರಾಜಾ ಬಹಾದ್ದೂರ್ ಸಿಂಗ್ ಎಂಬಾತನಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: John Hill

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಮುಖ್ಯ ದೇವತೆಯಾಗಿ ಹಿಡಿಂಬೆಯನ್ನು ಆರಾಧಿಸಲಾದರೂ ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿ, ನವಗೃಹ, ಗಣೇಶ, ದುರ್ಗೆಯರ ವಿಗ್ರಹಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Ashish3724

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಇನ್ನೂ ಹಿಡಿಂಬಾ ಕುರಿತು ಹೇಳುವುದಾದರೆ, ಪಾಂಡವರು ಅರಕಿನ ಮನೆಯಿಂದ ತಪ್ಪಿಸಿಕೊಂಡು ಬಂದು ಕಾಡಿನಲ್ಲಿ ಅಲೆಯುತ್ತಿರುವಾಗ ಅಣ್ಣ ತಂಗಿಯರಾದ ಹಿಡಿಂಬ ಹಾಗೂ ಹಿಡಿಂಬಿಯರ ಕಣ್ಣಿಗೆ ಬೀಳುತ್ತಾರೆ. ಹಿಡಿಂಬ ಮಾಯಾಶಕ್ತಿಯುಳ್ಳ ನರಭಕ್ಷಕ ರಕ್ಕಸನಾಗಿದ್ದರಿಂದ ಪಾಂಡವರಲ್ಲಿ ಬಲಶಾಲಿಯಾಗಿದ್ದ ಭೀಮನನ್ನು ತಿನ್ನಲು ಬಯಸುತ್ತಾನೆ.

ಚಿತ್ರಕೃಪೆ: Srini0823

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ರಾತ್ರಿ ಕಾಡಿನ ಒಂದು ಸ್ಥಳದಲ್ಲಿ ಎಲ್ಲರೂ ಮಲಗಿರುವಾಗ ಭೀಮನೊಬ್ಬ ಮಾತ್ರ ಎಚ್ಚರದಿಂದಿದ್ದು ಕಾಯುತ್ತಿರುತ್ತಾನೆ. ಈ ಸಮಯದಲ್ಲಿ ಅಣ್ಣನ ಆದೇಶದಂತೆ ಮೋಹಕ ಸ್ತ್ರೀಯ ವೇಷ ತೊಟ್ಟು ಬಂದ ಹಿಡಿಂಬಾ ಭೀಮನ ರೂಪಕ್ಕೆ ಸೋತು ಪ್ರೀತಿಯಲ್ಲಿ ಬೀಳುತ್ತಾಳೆ.

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ತದನಂತರ ಭಿಮನನ್ನು ಸಮೀಪಿಸಿ ನಡೆದ ಎಲ್ಲ ವಿವರಗಳನ್ನು ನೀಡುತ್ತಾಳೆ. ಭೀಮನು ಹಿಡಿಂಬನೊಂದಿಗೆ ಭಯಂಕರ ಯುದ್ಧ ಮಾಡಿ ಅವನನ್ನು ಸಂಹರಿಸಿ ಹಿಡಿಂಬೆಯನ್ನು ಹತ್ಯೆಗೈಯ್ಯಲು ಮುಂದಾಗುತ್ತಾನೆ. ಆದರೆ ತಾಯಿ ಕುಂತಿಯು ಆತನನ್ನು ತಡೆದು ಬದಲಾವಣೆಯಾದ ಅವಳನ್ನು ಮದುವೆ ಮಾಡಿಕೊಳ್ಳಲು ಹೇಳುತ್ತಾಳೆ.

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಅದಕ್ಕೆ ಭೀಮನು ಸಮ್ಮತಿಸಿ ಕೇವಲ ಒಂದು ಮಗು ಆಗುವವರೆಗೆ ಮಾತ್ರ ಆಕೆಯೊಂದಿಗೆ ಸಂಸಾರ ಮಾಡುವುದಾಗಿ ಶರತ್ತು ವಿಧಿಸಿ ಮದುವೆಯಾಗುತ್ತಾನೆ. ನಂತರ ಆಕೆಗೆ ಘಟೋದ್ಗಜನೆಂಬ ಮಗ ಹುಟ್ಟಿ ತದನಂತರ ಹಿಡಿಂಬಾ ಘೋರ ತಪಸ್ಸಿನಲ್ಲಿ ಮಗ್ನಳಾಗಿ ಕೊನೆಯದಾಗಿ ಹಿಡಿಂಬಾ ದೇವಿಯ ಸ್ಥಾನಮಾನ ಪಡೆಯುತ್ತಾಳೆ. ಹೀಗೆ ಹಿಡಿಂಬೆಯ ನೆನಪಿಗಾಗಿ ಆಕೆಯನ್ನು ದೇವಿಯ ಅವತಾರವನ್ನಾಗಿ ಆರಾಧಿಸುತ್ತಾರೆ ಮನಾಲಿ ಜನರು.

ಚಿತ್ರಕೃಪೆ: Shriniwas Deshmukh

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ದೇವಾಲಯದಲ್ಲಿ ದೊಡ್ಡದಾದ ಬಂಡೆಯೊಂದಿದ್ದು ಅದರ ಮೇಲೆ ಚಿಕ್ಕ ಗಾತ್ರದ ಹಿಡಿಂಬೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆ ಬಂಡೆಯ ಮುಂದೆ ಹಗ್ಗವೊಂದು ಜೋತು ಬಿಡಲಾಗಿದ್ದು, ಹಿಂದೆ ರಾಜರ ಸಮಯದಲ್ಲಿ ತಪ್ಪು ಮಾಡಿದವರ ಕೈಗಳನ್ನು ಹಗ್ಗಕ್ಕೆ ಕಟ್ಟಿ ಆ ಬಂಡೆಗೆ ಜೋರಾಗಿ ನೂಕುತ್ತಿದ್ದರಂತೆ!

ಚಿತ್ರಕೃಪೆ: Sayantan07

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಪ್ರಸ್ತುತ, ಹಿಡಿಂಬಾ ದೇವಾಲಯವು ತನ್ನ ಸುತ್ತಮುತ್ತಲು ರಮಣೀಯ ಪ್ರಕೃತಿಯ ದೃಶ್ಯಾವಳಿಗಳನ್ನು ಹೊಂದಿದ್ದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರ ಮನ ಸೆಳೆಯುತ್ತದೆ. ಮುಂದಿನ ಸ್ಲೈಡುಗಳಲ್ಲಿ ಎರಡನೆಯ ಆಸಕ್ತಿಕರ ದೇವಾಲಯದ ಕುರಿತು ತಿಳಿಯಿರಿ.

ಚಿತ್ರಕೃಪೆ: Biswarup Ganguly

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ರಾಮಾಯಣದಲ್ಲಿ ಬರುವ ಒಂದು ಆಸಕ್ತಿಕರ ಪಾತ್ರವೆಂದರೆ ಕುಂಭಕರ್ಣ. ಆತನಿಗೆ ಅಣ್ಣ ಮಾಡಿದ್ದು ತಪ್ಪೆಂದು ಗೊತ್ತಿದ್ದರೂ ಸಹ ತನ್ನ ಕರ್ತವ್ಯಕ್ಕೆ ಮಣಿದು ರಾಮ ಲಕ್ಷ್ಮಣರ ಜೊತೆ ಯುದ್ಧ ಮಾಡಿ ಇಹ ಲೋಕ ತ್ಯಜಿಸಿದಾತ. ಆದರೆ ನಿಮಗಿದು ಗೊತ್ತೆ, ಆತನಿಗೆ ಕರ್ಕತಿಯಿಂದ ಭೀಮ (ಪಾಂಡವ ಭೀಮ ಅಲ್ಲ) ಎಂಬ ಹೆಸರಿನ ಒಬ್ಬ ಮಗನಿದ್ದ. ಆ ಭೀಮನಿಂದಾಗಿಯೆ ಈ ಮುಂದೆ ಹೇಳಲಾದ ದೇವಾಲಯದ ಹಿನ್ನಿಲೆಯಿದೆ.

ಚಿತ್ರಕೃಪೆ: ganuullu

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಶಿವ ಪುರಾಣದ ಪ್ರಕಾರ, ಕುಂಭಕರ್ಣನ ಮಗನಾದ ಭೀಮನು ತನ್ನ ತಂದೆಯ ಸಾವಿನ ಪ್ರತಿಕಾರ ತೆಗೆದುಕೊಳ್ಳುವ ಉದ್ದೇಶದಿಂದ ತನ್ನ ತಾಯಿಯೊಂದಿಗೆ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿರುವ ಡಾಕಿಣಿಗೆ ತೆರಳಿ ತನಗಿದ್ದ ವರದ ಫಲವಾಗಿ ಅಲ್ಲಿ ಭಯದ ವಾತಾವರಣ ಸೃಷ್ಟಿಸಿದ.

ಚಿತ್ರಕೃಪೆ: ganuullu

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಅವನ ಮೂಲ ಉದ್ದೇಶ ವಿಷ್ಣುವನ್ನು ಸೋಲಿಸುವುದಾಗಿತ್ತು, ಕಾರಣ ತಪಸ್ಸನ್ನಾಚರಿಸುತ್ತಿದ್ದವರನ್ನು ಬಗೆ ಬಗೆಯಾಗಿ ಹಿಂಸಿಸುತ್ತಿದ್ದ. ಅವನನ್ನು ಎದುರು ಹಾಕಿಕೊಳ್ಳುವುದಾಗಲಿ, ಸೋಲಿಸುವುದಾಗಲಿ ಯಾರಿಂದಲೂ ಆಗುತ್ತಿರಲಿಲ್ಲ, ಸ್ವತಃ ದೇವತೆಗಳೂ ಸಹ ಅಸಹಾಯಕರಾಗಿದ್ದರು.

ಚಿತ್ರಕೃಪೆ: ganuullu

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಹೀಗಿರುವಾಗ ಒಮ್ಮೆ ಪರಮ ಶಿವಭಕ್ತನೊಬ್ಬನು ಶಿವನನ್ನು ಕುರಿತು ತಪಸ್ಸು ಮಾಡುವಾಗ ಭೀಮನು ಅವನಿಗೆ ಹಿಂಸೆ ನೀಡಿ ತಪಸ್ಸು ಭಂಗಗೊಳಿಸಿದ. ಇದರಿಂದ ಉಗ್ರನಾದ ಶಿವನು ಸ್ವತಃ ಪ್ರತ್ಯಕ್ಷನಾಗಿ ಭೀಮನನ್ನು ಸಂಹರಿಸಿ ಆ ಕ್ಷೇತ್ರದಲ್ಲಿ ಭಕ್ತನ ಅಪೇಕ್ಷೆಯಂತೆ ನೆಲೆಸಿದ. ಆ ಸ್ಥಳದಲ್ಲಿ ಶಿವನು ಭೀಮಾಶಂಕರನಾಗಿ ಭಕ್ತರಿಗೆ ಹರಸುತ್ತಿದ್ದಾನೆ.

ಚಿತ್ರಕೃಪೆ: Pratik Kadam

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಹೌದು, ಆ ಕ್ಷೇತ್ರವೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ, 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಭೀಮಾಶಂಕರ.

ಚಿತ್ರಕೃಪೆ: solarisgirl

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಸಹ್ಯಾದ್ರಿ ಪರ್ವತ ಶ್ರೇಣಿಗಳ ದಟ್ಟ ಕಾನನದಲ್ಲಿ ನೆಲೆಸಿರುವ ಭೀಮಾಶಂಕರ ನಗರದ ಗೌಜುಗದ್ದಲಗಳಿಂದ ದೂರವಿದ್ದು ಪ್ರಶಾಂತತೆಯ ಅನಂತ ಆನಂದವನ್ನು ಭೇಟಿ ನೀಡುವ ಪ್ರವಾಸಿಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: solarisgirl

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಭೀಮಾ ನದಿ ಮಹಾರಾಷ್ಟ್ರದ ಪ್ರಮುಖ ನದಿಗಳ ಪೈಕಿ ಒಂದಾಗಿದ್ದು ಭೀಮಾಶಂಕರದಲ್ಲೆ ಹುಟ್ಟುತ್ತದೆ. ಹೀಗಾಗಿ ಈ ನದಿಯ ಮೂಲ, ಗುಪ್ತ ಭೀಮಾಶಂಕರದಂತಹ ತಾಣಗಳಿಗೆ ಚಾರಣದ ಮೂಲಕ ಭೇಟಿ ನೀಡಬಹುದು.

ಚಿತ್ರಕೃಪೆ: siddhesh712

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಭೀಮಾಶಂಕರ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಕಲ್ಮಜಾ ದೇವಿಯ ದೇವಾಲಯ, ಹನುಮಾನ್ ಕೊಳ, ನಾಗ ಫಣಿ, ಬಾಂಬೆ ಪಾಯಿಂಟ್, ಸಾಕ್ಷಿ ವಿನಾಯಕ ಮುಂತಾದ ಆಕರ್ಷಣೆಗಳಿಗೆ ಭೇಟಿ ನೀಡಬಹುದು. ಅಲ್ಲದೆ ಭೀಮಾಶಂಕರ ದೇವಾಲಯದ ಅದ್ಭುತ ಘಂಟೆ ಹಾಗೂ ಹಿಂಬದಿಯಲ್ಲಿರುವ ಋಷಿ ಕೌಶಿಕರಿಗೆ ಸಂಬಂಧಿಸಿದ ಮೋಕ್ಷಕುಂಡವು ವಿಶೇಷ ಸ್ಥಳಗಳಾಗಿವೆ. ಹನುಮಾನ್ ಕೊಳ, ಇದನ್ನು ಚಾರಣ ಮಾಡುತ್ತ ತಲುಪಬಹುದು.

ಚಿತ್ರಕೃಪೆ: Nagraj Salian

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಭೀಮಾಶಂಕರದಲ್ಲಿರುವ ಚಾರಣ ಮಾಡುತ್ತ ಸೃಷ್ಟಿ ಸೌಂದರ್ಯ ಸವಿಯುತ್ತ ತಲುಪ್ಬಹುದಾದ ಗುಪ್ತ್ ಭೀಮಾಶಂಕರ.

ಚಿತ್ರಕೃಪೆ: Kushal Ghosh

ಕುತೂಹಲ ಹುಟ್ಟಿಸುವ ದೇವಾಲಯಗಳು:

ಕುತೂಹಲ ಹುಟ್ಟಿಸುವ ದೇವಾಲಯಗಳು:

ಭೀಮಾಶಂಕರದಲ್ಲಿರುವ ಪ್ರಮುಖವಾಗಿ ಗೋಚರಿಸುವ ಘಂಟೆ. ಇದನ್ನು ನಾನಾ ಫಡ್ನವಿಸ್ ಎಂಬುವವರು ಹೇಮದ್ಪಂಥಿ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಇದನ್ನು ಪೋರ್ಚುಗೀಸ್ ಘಂಟೆ ಎಂತಲೂ ಕರೆಯುತ್ತಾರೆ. ಇದರ ಹಿಂದೆ ಚಿಕ್ಕದಾದ ಶನಿ ದೇಗುಲವಿದೆ.

ಚಿತ್ರಕೃಪೆ: Nagraj Salian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X