Search
  • Follow NativePlanet
Share
» »ಮೈ ಜುಮ್ಮೆನಿಸುವ ಕಣಿವೆಗಳನ್ನು ಸುತ್ತೋಣವೆ?

ಮೈ ಜುಮ್ಮೆನಿಸುವ ಕಣಿವೆಗಳನ್ನು ಸುತ್ತೋಣವೆ?

ಎರಡು ಬೆಟ್ಟ ಅಥವಾ ಗುಡ್ಡಗಳ ಮಧ್ಯದ ಭಾಗವನ್ನು ಸಾಮಾನ್ಯವಾಗಿ ಕಣಿವೆ ಎಂದು ಕರೆಯಲಾಗುತ್ತದೆ. ಮತ್ತೊಂದು ಸಾಮಾನ್ಯ ಅಂಶವೆಂದರೆ ಈ ಮಧ್ಯದ ಭಾಗದಲ್ಲಿ ನದಿ ಹರಿಯುವುದು. ಆದರೆ ನದಿ ಇರಲೇಬೇಕಂತೇನಿಲ್ಲ. ಇಂತಹ ಕಣಿವೆಗಳು ಸಾಕಷ್ಟು ಸಂಖ್ಯೆಯಲ್ಲಿ ಭಾರತದಲ್ಲಿಯೂ ಸಹ ಕಂಡುಬರುತ್ತವೆ. ಕಣಿವೆ ಪ್ರವಾಸೋದ್ಯಮದಿಂದಾಗಿ ಇತ್ತೀಚಿನ ಕಳೆದ ಕೆಲವು ವರ್ಷಗಳಿಂದ ಕಣಿವೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ವಿಶೇಷ ಲೇಖನ : ರೋಮಾಂಚನಗೊಳಿಸುವ ಹಿಮಾಲಯ ಪರ್ವತ ಶ್ರೇಣಿಗಳು

ಎರಡು ಬದಿಗಳಲ್ಲಿ ಎತ್ತರದ ಬೆಟ್ಟ ಗುಡ್ಡಗಳು, ಮಧ್ಯದಲ್ಲಿ ಉದ್ದನೆಯ ಬಯಲು ಪ್ರದೇಶ, ಜುಳು ಜುಳು ಹರಿಯುವ ನದಿ, ನದಿಯಗುಂಟ ಮಕ್ಕಳು ಕೈ ಕೈ ಹಿಡಿದು ನಿಂತಿರುವಂತೆ ಅನಿಸುವ ಗಿಡ ಮರಗಳು ಮುಂತಾದವು ಸಂತಸ ನೀಡುವ ಅಂಶಗಳಾಗಿದ್ದು ಕಣಿವೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲವನ್ನು ತಂದಿದೆ. ಭೌಗೋಳಿಕವಾಗಿ ಕಣಿವೆಗಳನ್ನು ಹಲವಾರು ಭಾಗಗಳಲ್ಲಿ ವಿಂಗಡಿಸಲಾಗಿದೆ. ರಚನೆಗೆ ತಕ್ಕಂತೆ ಯಾವ ರೀತಿಯ ಕಣಿವೆಗಳೇ ಇರಲಿ, ಅವುಗಳಿಗೊಮ್ಮೆ ಭೇಟಿ ನೀಡುವುದು ಮಾತ್ರ ಎಂದಿಗೂ ಮರೆಯಲಾಗದ ಅನುಭವ.

ಉಪಯುಕ್ತ ಕೊಂಡಿಗಳು: ಉತ್ತರಾಖಂಡದ ಸಮಗ್ರ ಆಕರ್ಷಣೆಗಳು ಹಿಮಾಚಲದ ಸುಂದರ ಸ್ಥಳಗಳ ಪಟ್ಟಿ

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಂತಹ ರಾಜ್ಯಗಳಲ್ಲಿ ಅತ್ಯದ್ಭುತವಾದ, ಮೈಮನ ರೋಮಾಂಚನಗೊಳಿಸುವಂತಹ ಸಾಕಷ್ಟು ಕಣಿವೆಗಳನ್ನು ಕಾಣಬಹುದು. ಇದಕ್ಕೊಂದು ಕಾರಣ ಎಂದರೆ ಸಾಮಾನ್ಯವಾಗಿ ಈ ಪ್ರದೇಶಗಳು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿರುವುದು ಹಾಗೂ ಹಿಮಾಲಯ ಪರ್ವತಗಳಿಗೆ ಸಾಕಷ್ಟು ಹತ್ತಿರದಲ್ಲಿರುವುದು. ಇಂತಹ ಕಣಿವೆಗಳಿಗೆ ತೆರಳುವುದೂ ಸಹ ಒಂದು ಸಾಹಸ ಪ್ರಧಾನ ಪ್ರವಾಸವೆ ಆಗಿದೆ. ನೀವೂ ಕೂಡ ಕಣಿವೆಗಳಿಗೆ ಭೇಟಿ ನೀಡುವ ಬಯಕೆ ಹೊತ್ತಿದ್ದರೆ, ಈ ಲೇಖವನ್ನೊಮ್ಮೆ ಓದಿ ಹಾಗೂ ಯೋಜನೆ ರೂಪಿಸಿಕೊಳ್ಳಿ.

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಬೇತಾಬ್ ಕಣಿವೆ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಬೇತಾಬ್ ಕಣಿವೆ ನೋಡಲು ಮನಮೋಹಕವಾದ ಪ್ರವಾಸಿ ಆಕರ್ಷಣೆಯಾಗಿದೆ. 1983 ರಲ್ಲಿ ಬಿಡುಗಡೆಗೊಂಡಿದ್ದ ಬೇತಾಬ್ ಎಂಬ ಹಿಂದಿ ಚಿತ್ರವನ್ನು ಈ ಸುಂದರವಾದ ಕಣಿವೆ ಪ್ರದೇಶದಲ್ಲಿ ಚಿತ್ರೀಕರಿಸಿದ್ದರಿಂದ ಈ ಕಣಿವೆಗೆ ಬೇತಾಬ್ ಎಂಬ ಹೆಸರು ಬಂದಿತು. ಈ ಚಿತ್ರದ ಮೂಲಕ ಧರ್ಮೇಂದ್ರರ ಮೊದಲ ಪುತ್ರ ಸನ್ನಿ ಡಿಯೋಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಹಾಗೂ ಚಿತ್ರ ಯಶಸ್ವಿಯೂ ಆಗಿತ್ತು.

ಚಿತ್ರಕೃಪೆ: Nandanupadhyay

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಬೆತಾಬ್ ಕಣಿವೆಯು ಸುಂದರ ಪ್ರವಾಸಿ ಆಕರ್ಷಣೆಯಾಗಿದ್ದು ಪ್ರವಾಸಿಗರ ಮನಸೆಳೆಯುತ್ತದೆ. ಕಣಿವೆಯ ಮಧ್ಯದಲ್ಲಿ ಪ್ರಶಾಂತವಾಗಿ ಹರಿಯುವ ಲಿಡ್ಡರ್ ನದಿ ಹಾಗೂ ಅದರ ಸುತ್ತಮುತ್ತಲಿನ ಸ್ವಚ್ಛ ಹಾಗೂ ರಮಣೀಯ ದೃಶ್ಯಾವಳಿಗಳು ಮತ್ತೆ ಮತ್ತೆ ಭೇಟಿ ನೀಡಲು ಪ್ರೇರೆಪಿಸುವಂತಿವೆ.

ಚಿತ್ರಕೃಪೆ: Nandanupadhyay

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಉತ್ತರಾಖಂಡದ ಗಂಗೋತ್ರಿ ಬಳಿಯಿರುವ ಭಾಗೀರತಿ ಕಣಿವೆಯು ಆಕರ್ಷಕ ಬೆಟ್ಟ ಪರ್ವತಗಳ ಮಧ್ಯದಲ್ಲಿ ಹರಿದಿರುವ ಭಾಗೀರತಿ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಹಿಂದೂ ಧರ್ಮದಲ್ಲಿ ಭಾಗಿರತಿ ನದಿಯನ್ನು ಗಂಗೆಯ ಮೂಲ ಎಂದು ತಿಳಿಯಲಾಗಿದೆ.

ಚಿತ್ರಕೃಪೆ: Atarax42

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಕುಲ್ಲು ಕಣಿವೆ: ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿರುವ ಕುಲ್ಲು ಕಣಿವೆಯು ಒಂದು ರೋಮಾಂಚಕ ಪ್ರವಾಸಿ ಆಕರ್ಷಣೆಯಾಗಿದೆ. ಬಯಾಸ್ ನದಿಯು ಸೊಗಸಾಗಿ ಹರಿಯುವ ಈ ಕಣಿವೆಯಲ್ಲಿ ರಾಫ್ಟಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ನಡೆಯುತ್ತಿರುತ್ತವೆ.

ಚಿತ್ರಕೃಪೆ: Balaji Photography

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಮರ್ಖಾ ಕಣಿವೆ: ಜಮ್ಮು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿರುವ ಮರ್ಖಾ ನದಿ ಹರಿದಿರುವ ಮರ್ಖಾ ಕಣಿವೆಯು ಲಡಾಖ್ ನ ಅತ್ಯುತ್ತಮ ಹಾಗೂ ಹೆಚ್ಚು ಜನಪ್ರೀಯ ಚಾರಣ ಮಾರ್ಗವಾಗಿದೆ. ಸ್ಪಿತುಕ್ ನ ಗಂಗ್ ಲಾ ಪಾಸ್ ಹಾಗೂ ಹೆಮಿಸ್ ನ ಗೊಂಗ್ಮಾರುಲಾ ಪಾಸ್ ನಿಂದ ಈ ಕಣಿವೆಗೆ ಟ್ರೆಕ್ ಮಾಡಬಹುದಾಗಿದೆ.

ಚಿತ್ರಕೃಪೆ: SlartibErtfass der bertige

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ನರ್ಮದಾ ಕಣಿವೆ: ಮಧ್ಯ ಪ್ರದೇಶ ರಾಜ್ಯದ ಅನುಪ್ಪುರ ಜಿಲ್ಲೆಯ ತೀರ್ಥ ಸ್ಥಳ ಅಮರಕಂಟಕ ಎಂಬ ಬೆಟ್ಟವೊಂದರಲ್ಲಿರುವ ನರ್ಮದಾ ಕುಂಡದಿಂದ ಉಗಮಗೊಳ್ಳುವ ನರ್ಮದಾ ನದಿಯು ಮಧ್ಯ ಪ್ರದೇಶ ರಾಜ್ಯದ ಜೀವ ನದಿಯಾಗಿದೆ. ನರ್ಮದಾ ಕಣಿವೆಯು ಸುಂದರ ಪ್ರವಾಸಿ ಆಕರ್ಷಣೆಯಾಗಿದ್ದು ಸಾಕಷ್ಟು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಮಧ್ಯಪ್ರದೇಶದ ಜಬಲ್ಪುರ್ ನಲ್ಲಿರುವ ಬೇಡಾಘಾಟ್ ನಲ್ಲಿರುವ ನರ್ಮದಾ ನದಿಯ ಕಣಿವೆ ಪ್ರದೇಶವು ಧುವಾಧರ್ ಜಲಪಾತ ನಿರ್ಮಿಸಿದ್ದು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Hariya1234

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಜಿಲ್ಲೆಯ ಕಾಲಿಂಪಾಂಗ್ ಪ್ರದೇಶದಲ್ಲಿರುವ ನ್ಯೊರಾ ಕಣಿವೆ, ತನ್ನ ನ್ಯೊರಾ ರಾಷ್ಟ್ರೀಯ ಉದ್ಯಾನಕ್ಕೂ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Anirban Biswas

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಮೈ ಜುಮ್ಮೆನ್ನಿಸುವ ನುಬ್ರಾ ಕಣಿವೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಂಡುಬರುವ ಹಲವು ಕಣಿವೆಗಳ ಪೈಕಿ ಒಂದು. ಈ ಕಣಿವೆಯನ್ನು ಜಗತ್ತಿನ ಅತಿ ಎತ್ತರದ ರಸ್ತೆಗಳ ಪೈಕಿ ಒಂದಾಗಿರುವ ಖರದುಂಗ್ ಲಾ ಪಾಸ್ (ರಹದಾರಿ) ನಿಂದ ಸಾಗುವ ಮೂಲಕ ತಲುಪಬಹುದಾಗಿದೆ

ಚಿತ್ರಕೃಪೆ: KennyOMG

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಹಿಮಾಚಲ ಪ್ರದೇಶ ರಾಜ್ಯದ ಚಂಬಾ ಜಿಲ್ಲೆಯಲ್ಲಿರುವ ಪಂಗಿ ಕಣಿವೆಯು ಅಷ್ಟೊಂದು ಜನವಸತಿಯಿರದ ಸುಂದರ ಕಣಿವೆ ಪ್ರದೇಶವಾಗಿದೆ. ಕಣಿವೆಯಲ್ಲಿ ಚಂದ್ರಭಾಗ ನದಿ ಹರಿದಿದ್ದು ಇದನ್ನು ಹೂಡಾನ್ ಬತೋರಿ ಹಾಗೂ ಸುರಲ್ ಬತೋರಿ ಎಂದು ವಿಂಗಡಿಸಲಾಗಿದೆ.

ಚಿತ್ರಕೃಪೆ: Nvvchar

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಉತ್ತರಾಖಂಡ ರಾಜ್ಯದ ಬಾಗೇಶ್ವರದಲ್ಲಿರುವ ಪಿಂಡರ್ ನದಿ ಹರಿದಿರುವ ಪಿಂಡರ್ ಕಣಿವೆಯು ನೋಡಲು ಬಲು ಮನಮೋಹಕವಾದ ಕಣಿವೆ ಪ್ರದೇಶವಾಗಿದೆ.

ಚಿತ್ರಕೃಪೆ: Yann

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಬಸ್ಪಾ/ಸಾಂಗ್ಲಾ ಕಣಿವೆ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಪಟ್ಟಣದಲ್ಲಿ ಈ ಕಣಿವೆಯಿದೆ. ಇದನ್ನು ಸಂಗ್ಲಾ ಅಥವಾ ಬಸ್ಪಾ ಕಣಿವೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಣಿವೆಯು ಎರಡು ಬದಿಗಳಲ್ಲೂ ಕಾಡುಗಳಿಂದ ಆವೃತವಾಗಿದ್ದು ಎತ್ತರದ ಪರ್ವತಗಳ ಹಿನ್ನಿಲೆಯು ಇದರ ಅಂದ ಚೆಂದವನ್ನು ಹೆಚ್ಚಿಸಿದೆ.

ಚಿತ್ರಕೃಪೆ: Travelling Slacker

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಸೋರ್ ಕಣಿವೆ: ಉತ್ತರಾಖಂಡದ ಪಿತೋರ್ಗಡ್ ಜಿಲ್ಲೆಯಲ್ಲಿ ಈ ಸುಂದರ ಕಣಿವೆಯಿದೆ. ಈ ಒಂದು ಕಣಿವೆಯಲ್ಲೆ ಪಿತೋರ್ಗಡ್ ಪಟ್ಟಣವಿದೆ. ಇಲ್ಲಿಂದ ಪಂಚುಲಿ, ಮುನ್ಶಿಯಾರಿ ಮುಂತಾದ ಸ್ಥಳಗಳ ಹಿಮಚ್ಛಾದಿತ ಪರ್ವತಗಳ ಅಮೂಲ್ಯ ನೋಟಗಳನ್ನು ಸವಿಯಬಹುದು.

ಚಿತ್ರಕೃಪೆ: Ekabhishek

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಸಿಂಧ್ ಕಣಿವೆ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ದೊಡ್ಡ ಕಣಿವೆ ಪ್ರದೇಶ ಇದಾಗಿದೆ. ರಾಜ್ಯದ ರಾಜಧಾನಿ ಶ್ರೀನಗರದ ಈಶಾನ್ಯಕ್ಕೆ ಸುಮಾರು 33 ಕಿ.ಮೀ ಗಳಷ್ಟು ದೂರದಲ್ಲಿ ಈ ಕಣಿವೆಯು ಆರಂಭಗೊಳ್ಳುತ್ತದೆ. ಈ ಕಣಿವೆ ಕಂದಕವು ಸರಾಸರಿ ಅಗಲ ಒಂದು ಕಿ.ಮೀ ಹೊಂದಿದ್ದು ಸುಮಾರು 65 ಕಿ.ಮೀ ಗಳಷ್ಟು ಉದ್ದವಿದೆ.

ಚಿತ್ರಕೃಪೆ: Mehrajmir13

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಹಿಮಾಚಲದಲ್ಲಿ ಕಂಡು ಬರುವ ಸ್ಪಿತಿ ಕಣಿವೆ ಪಟ್ಟಣ. ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ಬಹುದೂರದಲ್ಲಿರುವ ಹಿಮಾಲಯ ಕಣಿವೆ ಪ್ರದೇಶದಲ್ಲಿ ಸ್ಪಿತಿಯು ನೆಲೆಸಿದೆ. ಸಾಮಾನ್ಯವಾಗಿ ಈ ಪ್ರದೇಶವು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವುದರಿಂದ ಹವಾಮಾನದ ಸ್ಥಿತಿಗತಿಗಳು ವಿಪರೀತ ಎಂದೆ ಹೇಳಬಹುದು. ಆದ್ದರಿಂದ ಈ ಕಣಿವೆ ಪ್ರದೇಶಕ್ಕೆ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡು ಭೇಟಿ ನೀಡುವುದು ಉತ್ತಮ. ಆದರೆ ಒಂದೊಮ್ಮೆ ಸಾಹಸದಿಂದ, ಕಷ್ಟಪಟ್ಟು ಭೇಟಿ ನೀಡಿದರೆ ಸಾಕು....ಬಂದ ಸಾರ್ಥಕತೆ ಮನದಲ್ಲಿ ಗಟ್ಟಿಯಾಗಿ ಮೂಡಿಬರುತ್ತದೆ.

ಚಿತ್ರಕೃಪೆ: 4ocima

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಕಣಿವೆಗಳ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸುರು ಕಣಿವೆಯನ್ನು ಕಾಣಬಹುದು. ಈ ಕಣಿವೆ ಪ್ರದೇಶದ ಪ್ರಮುಖ ಪಟ್ಟಣವೆ ಕಾರ್ಗಿಲ್. ಸುರು ನದಿಯಿಂದೊಮ್ಮೆ ತುಂಬಿದ್ದ ಈ ಕಣಿವೆ ಇಂದು ಬತ್ತಿ ಹೋಗಿದೆಯಾದರೂ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ.

ಚಿತ್ರಕೃಪೆ: Narender9

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಸಟ್ಲೆಜ್ ಕಣಿವೆ: ಹಿಮಾಚಲದ ಕಿನ್ನೌರ್ ಜಿಲ್ಲೆಯಲ್ಲಿರುವ ಸಟ್ಲೆಜ್ ಕಣಿವೆಯು ಒಂದು ಆಕರ್ಷಕ ಸ್ಥಳವಾಗಿದೆ.

ಚಿತ್ರಕೃಪೆ: Sanyam Bahga

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಟೊನ್ಸ್ ಕಣಿವೆ: ಉತ್ತರಾಖಂಡದ ಗಡ್ವಾಲ್ ಪ್ರದೇಶದಲ್ಲಿ ಹರಿದು ಹಿಮಾಚಲವನ್ನು ಮುಟ್ಟುವ ಟೊನ್ಸ್ ನದಿಯು ಯಮುನಾ ನದಿಯ ಉಪನದಿಯಾಗಿದೆ. ಇದು ಉಪನದಿಯಾದರೂ ಶ ಯಮುನೆಗಿಂತಲೂ ಹೆಚ್ಚಿನ ಪ್ರಮಾಣದ ನೀರನ್ನು ಒಯ್ಯುತ್ತದೆ. ಟೊನ್ಸ್ ಕಣಿವೆಯು ಡೆಹ್ರಾಡೂನ್ ಪಟ್ಟಣದ ಬಳಿಯಿದೆ. ಟೊನ್ಸ್ ನದಿಗೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿದ್ದು ಅದು ಉತ್ತರಾಖಂಡದ ಡೆಹ್ರಾಡೂನ್ ಅನ್ನು ಹಿಮಾಚಲದ ಪೌಂಟಾ ಸಾಹಿಬ್ ನೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: Shivanjan

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಸಿಕ್ಕಿಂ ರಾಜ್ಯದ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ಯುಮ್ಥಾಂಗ್ ಕಣಿವೆಯು ಸುತ್ತಲೂ ಹಿಮಾಲಯದ ಭವ್ಯ ಪರ್ವತ ಶ್ರೇಣಿಗಳಿಂದ ಆವರಿಸಿದ್ದು ನೋಡಲು ಆಕರ್ಷಕವಾಗಿ ಕಂಡುಬರುತ್ತದೆ. ಇದು ರಾಜಧಾನಿ ನಗರವಾದ ಗ್ಯಾಂಗ್ಟಕ್ ನಿಂದ 150 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Lisa.davis

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿರುವ ಝನ್ಸ್ಕಾರ್ ಕಣಿವೆಯು ಒಂದು ಅದ್ಭುತವಾದ ಪರ್ವತಗಳ ಶ್ರೇಣಿಯಾಗಿದೆ.

ಚಿತ್ರಕೃಪೆ: commonswiki

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಹೂವುಗಳ ಕಣಿವೆ ರಾಷ್ಟ್ರೀಯ ಉದ್ಯಾನ : ಉತ್ತರಾಖಂಡದ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಈ ಸುಂದರವಾದ ಹೂವುಗಳ ಕಣಿವೆಯಿದೆ. ಸ್ಥಳೀಯ ಕೆಲವು ವಿಶಿಷ್ಟ ಹಾಗೂ ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿರುವ ಈ ಕಣಿವೆಯ ತುಂಬೆಲ್ಲ ಹೂವುಗಳು ಇರುವುದರಿಂದ ಇದನ್ನು ಹೂವುಗಳ ಕಣಿವೆ ಎನ್ನಲಾಗುತ್ತದೆ.

ಚಿತ್ರಕೃಪೆ: Araghu

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ : ಇದು ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ನೀಲ್ಗಿರಿ ಕಾಡುಗಳಲ್ಲಿ ಪ್ರಶಾಂತವಾಗಿ ನೆಲೆಸಿದೆ. ಕಣಿವೆಯು ದಟ್ಟವಾದ ಹಸಿರಿನಿಂದ ಕೂಡಿದ ಗಿಡ ಮರಗಳಿಂದ ಆವೃತವಾಗಿದ್ದು ಭವ್ಯವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: NIHAL JABIN

ಅದ್ಭುತ ಕಣಿವೆಗಳ ಪ್ರವಾಸ:

ಅದ್ಭುತ ಕಣಿವೆಗಳ ಪ್ರವಾಸ:

ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು ಕಣಿವೆ ವಿವಿಧ ಬುಡಕಟ್ಟು ಜನಾಂಗಗಳ ಆಶ್ರಯ ತಾಣವಾಗಿದೆ. ಅಲ್ಪ ವಾಣಿಜ್ಯೀಕರಣಗೊಂಡ ಪ್ರವಾಸಿ ಸ್ಥಳ ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಅರಕು ಕಣಿವೆ ತನ್ನಲ್ಲಿರುವ ಬೊರ್‍ರಾ ಎಂಬ ಗುಹೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Raj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X