Search
  • Follow NativePlanet
Share
» »ತಮಿಳುನಾಡಿನ ಕುತೂಹಲಕಾರಿ ಶಿಲಾ ರಚನೆಗಳು!

ತಮಿಳುನಾಡಿನ ಕುತೂಹಲಕಾರಿ ಶಿಲಾ ರಚನೆಗಳು!

ದಕ್ಷಿಣ ಭಾರತದಲ್ಲಿರುವ ಧಾರ್ಮಿಕ ಮಹತ್ವ ಪಡೆದ ತಮಿಳುನಾಡು ರಾಜ್ಯವು ಕೇವಲ ದೇವಾಲಯಗಳಿಂದಾಗಿ ಮಾತ್ರವಲ್ಲದೆ ತನ್ನಲ್ಲಿರುವ ಕೆಲವು ಕುತೂಹಲಕ ಶಿಲಾ ರಚನೆಗಳಿಂದಾಗಿಯೂ ಗಮನಸೆಳೆಯುತ್ತದೆ

By Vijay

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡು ಸಾಕಷ್ಟು ಪ್ರವಾಸಿ ವಿಶೇಷತೆಯುಳ್ಳ ರಾಜ್ಯವಾಗಿದೆ. ಪ್ರಾಕೃತಿಕ ತಾಣಗಳಿಂದ ಹಿಡಿದು ಧಾರ್ಮಿಕ ತಾಣಗಳವರೆಗೂ ಅನೇಕ ಸ್ಥಳಗಳು ಈ ರಾಜ್ಯದೆಲ್ಲೆಡೆ ಕಂಡುಬರುತ್ತವೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವ ಪಡೆದ ರಾಜ್ಯವಾಗಿ ಗಮನಸೆಳೆಯುತ್ತದೆ ತಮಿಳುನಾಡು.

ಇನ್ನೊಂದು ವಿಶೇಷವೆಂದರೆ ಇದು ದಕ್ಷಿಣ ಭಾರತದ ದೇವಾಲಯಗಳ ರಾಜ್ಯ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಸಾಕಷ್ಟು ಸಂಖ್ಯೆಯಲ್ಲಿ ದೇವಾಲಯಾಗಳನ್ನು ಇಲ್ಲಿ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಗಿ ದೇಶದಲ್ಲೆ ಸಾಕಷ್ಟು ಜನಪ್ರೀಯವಾಗಿರುವ ಹಲವಾರು ತೀರ್ಥ ಕ್ಷೇತ್ರಗಳು ಹಾಗೂ ಪುಣ್ಯ ಕ್ಷೇತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ!

ರಾಮೇಶ್ವರಂ ಆಗಲಿ ಮದುರೈ ಆಗಲಿ ಅಥವಾ ಕಾಮಾಕ್ಷಿ ದೇವಿ ನೆಲೆಸಿರುವ ಕಂಚೀಪುರಂ ಆಗಲಿ ಇಲ್ಲವೆ ಶ್ರೀರಂಗನು ನೆಲೆಸಿರುವ ಶ್ರೀರಂಗಂ ಆಗಲಿ ಹೀಗೆ ಹತ್ತುಅ ಹಲವು ಧಾರ್ಮಿಕ ಮಹತ್ವವುಳ್ಳ ಅನೇಕ ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳನ್ನು ಹೊರತು ಪಡಿಸಿಯೂ ಕೆಲವು ವಿಶಿಷ್ಟ ತಾಣಗಳು ತಮ್ಮ ವಿಶಿಷ್ಟ ರಚನೆಗಳಿಂದ ಗಮನಸೆಳೆಯುತ್ತವೆ.

ಅವೆ ಅದ್ಭುತವಾಗಿ ರೂಪಿತಗೊಂಡಿರುವ ಶಿಲಾ ರಚನೆಗಳು. ಬೆಟ್ಟ ಗುಡ್ಡಗಳಾಗಿರಬಹುದು ಅಥವಾ ಕೆಲವು ಕಡಿದ ಬಂಡೆ ಗುಹೆಗಳಾಗಿರಬಹುದು ಕೆಲವು ವಿಶೇಷವಾದ ರಚನೆಗಳನ್ನು ಈ ರಾಜ್ಯದ ಕೆಲವು ಭಾಗಗಳಲ್ಲಿ ನೋಡಬಹುದಾಗಿದ್ದು ಇವು ಪ್ರವಾಸಿ ವಿಶೇಷತೆಗಳಾಗಿಯೂ ಹೆಸರುವಾಸಿಯಾಗಿದ್ದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

ಕೊಡೈಕೆನಲ್

ಕೊಡೈಕೆನಲ್

ಒಂದೊಮ್ಮೆ ಈ ಕಲ್ಲು ಬೆಟ್ಟವನ್ನು ನೋಡಿ. ಸಾಕಷ್ಟು ಅನನ್ಯವಾಗಿ ಕಂಡುಬರುತ್ತದಲ್ಲವೆ? ಅಲ್ಲದೆ ಸುತ್ತಲಿನ ಅದ್ಭುತ ಪ್ರಕೃತಿ ಸೌಂದರ್ಯವು ಇದರ ಕಳೆಯನ್ನು ಮತ್ತಷ್ಟು ಹೆಚ್ಚಿಸಿರುವಂತಿದೆ. ತಮಿಳುನಾಡಿನ ಅದ್ಭುತ ಗಿರಿಧಾಮ ಕೊಡೈಕೆನಲ್ ನಲ್ಲಿ ಇದನ್ನು ಕಾಣಬಹುದು.

ಚಿತ್ರಕೃಪೆ: Dhanil K

ಮರೀನಾ ತೀರ

ಮರೀನಾ ತೀರ

ಚೆನ್ನೈನ ನಗರದ ಪ್ರಸಿದ್ಧ ಕಡಲ ತೀರವಾದ ಮರೀನಾ ಕಡಲ ತೀರದ ಒಂದು ಭಾಗದಲ್ಲಿ ಕೃತಕವಾಗಿ ನಿರ್ಮಿಸಲಾದ ಶಿಲಾ ರಚನೆಯಾದರೂ ಪ್ರವಾಸಿಗರ ಗಮನ ಸೆಳೆಯುತ್ತದೆ ಈ ರಚನೆ.

ಚಿತ್ರಕೃಪೆ: Aravind Sivaraj

ವಿಲ್ಲುಪ್ಪುರಂ ಜಿಲ್ಲೆ

ವಿಲ್ಲುಪ್ಪುರಂ ಜಿಲ್ಲೆ

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುಕೊಯಿಲೂರಿನ ಪೊನ್ನೈಯಾರ್ ನದಿಯ ತಟದಲ್ಲಿರುವ ಬಂಡೆಯೊಂದರ ಮೇಲೆ ನಿರ್ಮಿತವಾಗಿರುವ ಸ್ಮಾರಕವೊಂದರಿಂದಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Nandhini csekar

ಏನು ಮಾಡಿದ್ದ?

ಏನು ಮಾಡಿದ್ದ?

ಕಬಿಲಾರ್ ಮುಲತಃ ಒಬ್ಬ ತಮಿಳು ಕವಿ. ಇವನಿಗೆ ಪ್ರಾಣ ಸ್ನೇಹಿತನೊಬ್ಬನಿದ್ದ. ದುರದೃಷ್ಟವಶಾತ್ ಆ ಸ್ನೇಹಿತ ಯುದ್ಧವೊಂದರಲ್ಲಿ ಹತನಾದ. ಅದರಿಂದ ಬೇಸರಗೊಂಡ ಕಬಿಲಾರ್ ಈ ಬಂಡೆಯ ಮೇಲೆ ಕುಳಿತು ತನ್ನ ಪ್ರಾಣ ಸ್ನೇಹಿತನ ಅಗಲಿಕೆಗಾಗಿ ಆಮರಣಾಂತ್ಯ ಉಪವಾಸ ಮಾಡಿ ತನ್ನ ಪ್ರಾಣ ತ್ಯಾಗ ಮಾಡಿದ.

ಚಿತ್ರಕೃಪೆ: Nandhini csekar

ಅದ್ಭುತ ಸಮತೋಲನ

ಅದ್ಭುತ ಸಮತೋಲನ

ಇದೊಂದು ಕುತೂಹಲಕರ ಪ್ರವಾಸಿ ಆಕರ್ಷಣೆಯಾಗಿದ್ದು ಕ್ರಿಷ್ಣಾ'ಸ್ ಬಟರ್ ಬಾಲ್ ಎಂದೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮೂಲತಃ ಇದೊಂದು ಹೆಚ್ಚು ಕಮ್ಮಿ ಅಂಡಾಕಾರದ ಬೃಹತ್ ಬಂಡೆಯೊಂದಾಗಿದ್ದು ಇಳಿ ಜಾರಿನಲ್ಲೂ ಸಹ ಜಾರದೆ ಸಮತೋಲನ ಕಾಯ್ದುಕೊಂಡು ನೂರಾರು ವರ್ಷಗಳಿಂದ ಹಾಗೆ ನಿಂತಿರುವುದೆ ಇದರ ವಿಶೇಷತೆ.

ಚಿತ್ರಕೃಪೆ: commonswiki

ಅಷ್ಟೆ ಅಗಲ

ಅಷ್ಟೆ ಅಗಲ

ಈ ಬಂಡೆಯು ಆರು (20 ಅಡಿಗೂ ಹೆಚ್ಚು) ಮೀ. ಎತ್ತರ ಹಾಗೂ ಐದು ಮೀ ಅಗಲವಿದ್ದು ಸುಮಾರು 250 ಟನ್ ಗಳಷ್ಟು ತೂಗುತ್ತದೆ. ಇದು ಕೇವಲ ನಾಲ್ಕು ಅಡಿಗಳಷ್ಟು ಜಾಗದ ಕಲ್ಲು ಹಾಸಿನ ಮೇಲೆ ನಿಂತಿದ್ದು ಈ ರೀತಿಯಾಗಿ ಕಳೆದ 1200 ವರ್ಷಗಳಿಂದ ನಿಂತಿದೆ ಎನ್ನಲಾಗಿದೆ.

ಚಿತ್ರಕೃಪೆ: Manbalaji

ಮಹಾಬಲಿಪುರಂ

ಮಹಾಬಲಿಪುರಂ

ಕಡಲ ತಡಿ ಪಟ್ಟಣ ಹಾಗೂ ಪ್ರವಾಸಿ ತಾಣವಾದ ಮಹಾಬಲಿಪುರಂನಲ್ಲಿರುವ ಈ ಬಂಡೆಯನ್ನು 1908 ರಲ್ಲಿ ಅಂದಿನ ಆಂಗ್ಲ ಗವರ್ನರ್ ಅರ್ಥರ್ ಹ್ಯಾವ್ಲಾಕ್ ಎಂಬಾತನು ಭದ್ರತೆಯ ಕಾರಣಕ್ಕೆ ಸಂಬಂಧಿಸಿದಂತೆ ಏಳು ಅನೆಗಳನ್ನು ಬಳಸಿಕೊಂಡು ಸರಿಸಲು ಪ್ರಯತ್ನಿಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ!

ಚಿತ್ರಕೃಪೆ: Amritamitraghosh

ಕೀಲವಲುವು

ಕೀಲವಲುವು

ಮದುರೈ ನಗರದಿಂದ 43 ಕಿ.ಮೀ ಗಳಷ್ಟು ದೂರದಲ್ಲಿರುವ ಕೀಲವಲುವು ಎಂಬಲ್ಲಿ ಪುರಾತನ ಪಾಂಡವರ ಗುಡ್ಡವನ್ನು ಕಾಣಬಹುದು. ಸಾಕಷ್ಟು ವಿಶಿಷ್ಟ ಬಗೆಯಲ್ಲಿ ಕಲ್ಲಿನ ಚಿಕ್ಕ ಪುಟ್ಟ ಕಲ್ಲುಗಳು ವಿಶಿಷ್ಟ ರೀತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಗಮನಿಸಬಹುದು. ಒಂಭತ್ತನೇಯ ಶತಮಾನದಲ್ಲಿ ಜೈನ ಸನ್ಯಾಸಿಗಳು ತಮ್ಮ ವಿಶ್ರಾಂತಿ ಸ್ಥಳವನ್ನಾಗಿ ಮಾಡಿಕೊಂಡಿದ್ದರು ಹಾಗೂ ಜೈನ ಶಾಸನಗಳು ಇಲ್ಲಿ ದೊರೆತಿವೆ.

ಚಿತ್ರಕೃಪೆ: Ramavchandran

ಜಲಪಾತ ಬಂಡೆಗಳು

ಜಲಪಾತ ಬಂಡೆಗಳು

ಕನ್ನಡದ ಹೊಗೆ ಹಾಗೂ ಕಲ್ಲು ಶಬ್ದಗಳಿಂದ ವ್ಯುತ್ಪತ್ತಿಯಾದ ಹೊಗೆನಕಲ್ ಜಲಪಾತ ಕೇಂದ್ರವು ಒಂದು ಸುಂದರ ಪ್ರವಾಸಿ ತಾಣವಾಗಿ ಪ್ರವಾಸಿಗರ ಗಮನ ಸೆಳೆಯುತ್ತದೆ. ತಮಿಳುನಾಡಿನ ಧರ್ಮಪುರಿಯ ಜಿಲ್ಲೆಯಲ್ಲಿ ಹರಿದಿರುವ ಕಾವೇರಿ ನದಿಯಿಂದ ಒಡಮೂಡಿರುವ ಈ ಜಲಪಾತದ ಸುತ್ತಲಿನ ಶಿಲಾ ರಚನೆಗಳು ನೋಡಲು ಬಲು ವಿಶಿಷ್ಟವಾಗಿವೆ.

ಚಿತ್ರಕೃಪೆ: Ashwin Kumar

ನಯಾಗ್ರಾ ಜಲಪಾತ

ನಯಾಗ್ರಾ ಜಲಪಾತ

ಒಮ್ಮೊಮ್ಮೆ ನಯಾಗ್ರಾ ಜಲಪಾತ ಎಂತಲೂ ಕರೆಯಲ್ಪಡುವ ಈ ತಾಣವು ಔಷಧಿಯ ಗುಣವುಳ್ಳ ನೀರಿನ ಸ್ನಾನಕ್ಕಾಗಿ ಹಾಗೂ ಅದ್ಭುತ ಅನುಭವ ನೀಡುವ ತೆಪ್ಪ ಸ್ವಾರಿಗಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಈ ತಾಣದ ಕಾರ್ಬನಟೈಟ್ ಕಲ್ಲುಗಳು ಜಗತ್ತಿ ಅತ್ಯಂತ ಪುರಾತನ ಶಿಲೆಗಳ ಪೈಕಿ ಒಂದಾಗಿ ಗುರುತಿಸಲ್ಪಟ್ಟಿದೆ.

ಚಿತ್ರಕೃಪೆ: Ashwin Kumar

ಕುಣ್ಣೂರು

ಕುಣ್ಣೂರು

ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಗಿರಿಧಾಮವಾದ ಕುಣ್ಣೂರಿನಲ್ಲಿರುವ ವೀಕ್ಷಣಾ ಕೇಂದ್ರವೊಂದ ಹೆಸರು ಡಾಲ್ಫಿನ್'ಸ್ ನೋಸ್. ಮೊನಚಾದ ಬಂಡೆಯುಳ್ಳ ಈ ರಚನೆ ನಿರ್ದಿಷ್ಟ ಜಾಗವೊಂದರಿಂದ ನೋಡಿದಾಗ ಡಾಲ್ಫಿನ್ ಮೀನಿ ಮೂಗಿನ ರೀತಿಯಲ್ಲಿ ರೂಪಗೊಂಡಿರುವುದು ಕಂಡುಬರುತ್ತದೆ.

ಚಿತ್ರಕೃಪೆ: Marcus334

ತೆಂಕಾಶಿ

ತೆಂಕಾಶಿ

ಕುತುಕಲವಲಸೈ ಎಂಬುದು ತಿರುನೆಲ್ವೇಲಿ ಜಿಲ್ಲೆಯ ತೆಂಕಾಶಿ (ತೆನ್ ಕಾಸಿ) ಯಲ್ಲಿರುವ ಹಳ್ಳಿಯಾಗಿದೆ. ಇಲ್ಲಿರುವ ಕುತುಕಲ್ ಬಂಡೆಯು ನೋಡಲು ವಿಶೇಷ ರೀತಿಯಲ್ಲಿ ನಿಂತಿದ್ದು ಗಮನ ಸೆಳೆಯುತ್ತದೆ.

ಚಿತ್ರಕೃಪೆ: தென்காசி சுப்பிரமணியன்

ಪುದುಕೊಟ್ಟೈ

ಪುದುಕೊಟ್ಟೈ

ಪುದುಕೊಟ್ಟೈ ಜಿಲ್ಲೆಯ ಮಲಯಾಡಿಪಟ್ಟಿ ಗ್ರಾಮದ ಸರಹದ್ದಿನಲ್ಲಿ ನೈಸರ್ಗಿಕವಾಗಿ ಸಮತೋಲನ ಕಾಯ್ದುಕೊಂಡಿರುವ ಬಂಡೆಯ ರಚನೆ.

ಚಿತ್ರಕೃಪೆ: Thamizhpparithi Maari

ಆಕರ್ಷಕ

ಆಕರ್ಷಕ

ಚೆನ್ನೈಗೆ ಹತ್ತಿರದಲ್ಲಿರುವ ಮಹಾಬಲಿಪುರಂ ಒಂದು ವಿಶೇಷ ಪ್ರವಾಸಿ ಪಟ್ಟಣ. ಇದು ಕಡಲ ತಡಿಯ ದೇವಾಲಯ, ಬಂಡೆಯಲ್ಲಿ ಕಡೆಯಲಾದ ಗುಹೆಗಳಿಗಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಅಂತೆಯೆ ಇಲ್ಲಿ ಕೆಲವು ವಿಶೇಷ ಶಿಲಾ ರಚನೆಗಳನ್ನೂ ಸಹ ಕಾಣಬಹುದು. ಅಂತಹ ಒಂದು ಬೆರುಗುಗೊಳಿಸುವ ಶಿಲಾ ರಚನೆ.

ಚಿತ್ರಕೃಪೆ: FlickreviewR

ಎರಡನೇಯ ಶತಮಾನದ

ಎರಡನೇಯ ಶತಮಾನದ

ಪುದುಕೊಟ್ಟೈ ಜಿಲ್ಲೆಯ ಸಿತ್ತನವಸಲ್ ಗ್ರಾಮದಲ್ಲಿರುವ ಈ ಬೆಟ್ಟ ಗುಹೆಯು ಸಾಕಷ್ಟು ಗಮನಸೆಳೆವ ಐತಿಹಾಸಿಕ ತಾಣವಾಗಿದೆ. ಎರಡನೇಯ ಶತಮಾನದಲ್ಲಿ ನಿರ್ಮಿಸಿದ್ದಾರೆನ್ನಲಾದ ಜೈನ ಗುಹೆಗಳು ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Ilasun

ಕಲ್ಲಿನ ಕೋಟೆ

ಕಲ್ಲಿನ ಕೋಟೆ

ಇದೊಂದು ದೈತ್ಯ ಶಿಲಾ ಬೆಟ್ಟ. ಶಿಲಾ ಬೆಟ್ಟಗಳು ಸಾಮಾನ್ಯವಾದರೂ ಈ ಶಿಲಾ ಬೆಟ್ಟದ ವಿಶಿಷ್ಟತೆಯೆ ಬೇರೆ. ಏಕೆಂದರೆ ಎತ್ತರ ಈ ಬೆಟ್ಟದ ಮೇಲೆ ಅದ್ಭುತವಾಗಿ ಕ್ಕೋಟೆಯೊಂದನ್ನು ನಿರ್ಮಿಸಲಾಗಿದ್ದು ಪ್ರವಾಸಿಗರ ಸಾಕಷ್ಟು ಗಮನಸೆಳೆಯುತ್ತದೆ ಇದು. ಇದೆ ತಿರುಚ್ಚಿ ಅಥವಾ ತಿರುಚಿರಾಪಳ್ಳಿ ಕಲ್ಲಿನ ಕೋಟೆ. ಸಾಕಷ್ಟು ಐತಿಹಾಸಿಕ ಮಹತ್ವ ಪಡೆದ ಪ್ರವಾಸಿ ತಾಣ ಇದಾಗಿದೆ.

ಚಿತ್ರಕೃಪೆ: commons.wikimedia

ಕನ್ಯಾಕುಮಾರಿ

ಕನ್ಯಾಕುಮಾರಿ

ಸಮುದ್ರದಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಬೃಹತ್ ಶಿಲಾ ಬಂಡೆಯೊಂದರ ಮೇಲೆ ಆಕರ್ಷಕವಾಗಿ ನಿರ್ಮಿಸಲಾಗಿರುವ ಈ ಶಿಲಾ ಸ್ಮಾರಕವು ಇರುವುದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ. ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಕನ್ಯಾಕುಮಾರಿಯ ವಾವತುರೈ ಎಂಬ ಗ್ರಾಮದ ಕಡಲ ತೀರದಲ್ಲಿ ಈ ಸ್ಮಾರಕವನ್ನು ಕಾಣಬಹುದು.

ಚಿತ್ರಕೃಪೆ: Bhawani Gautam

ಜ್ಞಾನ ಪಡೆದಿದ್ದರು!

ಜ್ಞಾನ ಪಡೆದಿದ್ದರು!

ವಾವತುರೈನ ಕಡಲ ತೀರದಿಂದ ಪೂರ್ವಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಎರಡು ಬಂಡೆಗಳ ಪೈಕಿ ಒಂದರ ಮೇಲೆ ನಿರ್ಮಿಸಲಾಗಿರುವ ಈ ಸ್ಮಾರಕವು ಭಾರತದ ದಕ್ಷಿಣದ ತುತ್ತತುದಿಯನ್ನು ಪ್ರತಿನಿಧಿಸುತ್ತದೆ. 1970 ರಲ್ಲಿ ಈ ಬಂಡೆ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಈ ಬಂಡೆಯ ಮೇಲೆಯೆ ಸ್ವಾಮಿ ವಿವೇಕಾನಂದರು ಜ್ಞಾನೋದಯ ಹೊಂದಿದರು ಎಂದು ನಂಬಲಾಗಿದೆ.

ಚಿತ್ರಕೃಪೆ: ShankarVincent

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X