Search
  • Follow NativePlanet
Share
» »ಮೈಸೂರಿನ ಚುಂಚನಕಟ್ಟೆಗೆ ಎಂದಾದರೂ ಭೇಟಿ ನೀಡಿದ್ದೀರಾ?

ಮೈಸೂರಿನ ಚುಂಚನಕಟ್ಟೆಗೆ ಎಂದಾದರೂ ಭೇಟಿ ನೀಡಿದ್ದೀರಾ?

By Manjula Balaraj Tantry

ಕರ್ನಾಟಕದಲ್ಲಿರುವ ಅನೇಕ ಸ್ಥಳಗಳು ಸಾಮಾನ್ಯ ಪ್ರಯಾಣಿಕರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿಲ್ಲವಾದರೂ ಪ್ರವಾಸಿಗರಲ್ಲಿ ಇದು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಈ ಸ್ಥಳಗಳು ನಿರ್ದಿಷ್ಟ ಸ್ಥಳಗಳಾಗಿದ್ದು ಇಲ್ಲಿಗೆ ಬರುವ ಎಲ್ಲರನ್ನೂ ಮಂತ್ರಮುಗ್ದಗೊಳಿಸುವುದಲ್ಲದೆ ಇದರ ಸುತ್ತ ಮುತ್ತಮುತ್ತಲಿನ ಊಹಿಸಲಾಗದ ಸೌಂದರ್ಯತೆಯಿಂದ ಆಶ್ಚರ್ಯ ಚಕಿತರಾಗುವಂತೆ ಮಾಡುತ್ತದೆ.

ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಇಂತಹ ಪ್ರಶಾಂತವಾದ ಸ್ಥಳದಲ್ಲಿ ನಿಮ್ಮ ರಜೆಗಳನ್ನು ಕಳೆಯಬೇಕೆಂದಿದ್ದಲ್ಲಿ, ನಿಮ್ಮ ಪ್ರವಾಸವನ್ನು ಚುಂಚನ ಕಟ್ಟೆಗೆ ಹೋಗಲು ಆಯೋಜಿಸಿ. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ಇದೊಂದು ಸಣ್ಣ ಹಳ್ಳಿಯಾಗಿದೆ. ಇದು ತನ್ನಲ್ಲಿಯ ಆಹ್ಲಾದಕರ ಹವಾಮಾನ ಮತ್ತು ಸುಂದರವಾದ ಪ್ರವಾಸಿ ತಾಣಗಳಿಂದಾಗಿ ವಿಶೇಷವಾಗಿ ಹೆಸರುವಾಸಿಯಾಗಿದೆ.

ಈ ಗುಪ್ತವಾಗಿರುವ ಹಳ್ಳಿಯೊಳಗೆ ಒಮ್ಮೆ ನೀವು ಪ್ರವೇಶಿಸಿದಲ್ಲಿ ನೀವು ಖಚಿತವಾಗಿಯೂ ಸ್ವರ್ಗದಂತೆನಿಸುವ ಒಂದು ವಾತಾವರಣವನ್ನು ಪ್ರವೇಶಿಸಿದಂತಾಗುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ಕರ್ನಾಟಕದಲ್ಲಿರುವ ಚುಂಚನಕಟ್ಟೆಯ ಬಗ್ಗೆ ಹಾಗೂ ಅಲ್ಲಿಗೆ ತಲುಪುವ ಬಗ್ಗೆ ಇಲ್ಲಿ ಓದಿ ತಿಳಿಯಿರಿ.

1. ಚುಂಚನಕಟ್ಟೆಯ ಬಗ್ಗೆ ಸ್ವಲ್ಪ ತಿಳಿಯಿರಿ

1. ಚುಂಚನಕಟ್ಟೆಯ ಬಗ್ಗೆ ಸ್ವಲ್ಪ ತಿಳಿಯಿರಿ

ಪಶ್ಚಿಮ ಘಟ್ಟಗಳ ಹಸಿರುಮನೆ ನಡುವೆ ಶಾಂತಿಯುತವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತಿರುವ ಚುಂಚನಕಟ್ಟೆ ಹಳ್ಳಿಯು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಒಂದು ಒಂದು ರಸದೌತಣ ಇದ್ದಂತೆ. ಆಫ್ಬೀಟ್ ಪ್ರವಾಸಿಗರಿಗೆ ಇಂತಹ ರೋಮಾಂಚಕ ಮತ್ತು ಸೊಂಪಾದ ವಾತಾವರಣವನ್ನು ಹೊಂದಿರುವ ಇಂತಹ ಭವ್ಯವಾದ ಸೌಂದರ್ಯತೆಯ ಮಧ್ಯೆಯಲ್ಲಿ ತಮ್ಮ ಬೇಸಿಗೆಯನ್ನು ಕಳೆಯಲು ಒಂದು ಸೂಕ್ತವಾದ ಸ್ಥಳವೆನಿಸಿದೆ.

2. ರಾಮನಿಗೂ ಸಂಬಂಧವಿದೆ

2. ರಾಮನಿಗೂ ಸಂಬಂಧವಿದೆ

ಕಾವೇರಿ ನದಿಯ ದಡದಲ್ಲಿರುವ ಸಣ್ಣ ಹಳ್ಳಿಯಾದ ಚುಂಚನಕಟ್ಟೆಯು ನೈಸರ್ಗಿಕವಾಗಿ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ. ಈ ಸ್ಥಳದಲ್ಲಿ ಬುಡಕಟ್ಟು ಜನಾಂಗದ ದಂಪತಿಗಳಿಂದ ಶ್ರೀರಾಮ ದೇವರನ್ನು ಬರಮಾಡಿಕೊಂಡರು ಎಂದು ನಂಬಲಾಗುತ್ತದೆ. ಚುಂಚ ಮತ್ತು ಚುಂಚಿಯಲ್ಲಿ ರಾಮ ದೇವರು ತಮ್ಮ ಗಡಿಪಾರಿನ ಸಂಧರ್ಭದಲ್ಲಿ ಹೆಚ್ಚಿನ ಸಮಯವನ್ನು ಇಲ್ಲಿ ಕಳೆದಿದ್ದರು ಎನ್ನಲಾಗುತ್ತದೆ. ಈ ಸ್ಥಳದಲ್ಲಿ ಕಾಡುಗಳಿಂದ ಹಿಡಿದು ಜಲಪಾತಗಳವರೆಗೆ ಮತ್ತು ದೇವಾಲಯಗಳಿಂದ ಹಿಡಿದು ಬೆಟ್ಟಗುಡ್ಡಗಳವರೆಗೆ ಪ್ರವಾಸಿಗರನ್ನು ಸೆಳೆಯುವ ಎಲ್ಲಾ ಆಕರ್ಷಣೆಗಳೂ ಇವೆ.

3. ಚುಂಚನಕಟ್ಟೆಗೆ ನೀವು ಏಕೆ ಹೋಗಲೇ ಬೇಕು?

3. ಚುಂಚನಕಟ್ಟೆಗೆ ನೀವು ಏಕೆ ಹೋಗಲೇ ಬೇಕು?

Rks 80

ಬೇಸಿಗೆಯ ರಜಾದಿನಗಳನ್ನು ಕಳೆಯಲು ಚುಂಚನಕಟ್ಟೆಗೆ ಪ್ರವಾಸಕ್ಕೆ ಆಯೋಜಿಸದೇ ಇದ್ದರೂ ಇಲ್ಲಿ ನಿಮ್ಮನ್ನು ಅಚ್ಚರಿಗೊಳಿಸುವ ನೈಸರ್ಗಿಕ ಸೌಂದರ್ಯತೆಗಳು ಮತ್ತು ಐತಿಹಾಸಿಕ ಮಹತ್ವಗಳಿಂದಾಗಿ ನಿಮ್ಮನ್ನು ಭೇಟಿ ಕೊಡುವಂತೆ ಮಾಡುತ್ತವೆ ಇನ್ನೊಂದು ಕಡೆ, ನೀವು ಚುಂಚನಕಟ್ಟೆ ಜಲಪಾತಗಳ ಸೌಂದರ್ಯತೆಯನ್ನು ಸವಿಯಬಹುದಾಗಿದೆ.

4. ಕೋದಂಡರಾಮ ದೇವಾಲಯ

4. ಕೋದಂಡರಾಮ ದೇವಾಲಯ

Raghuveerbk

ಇದು ಸುಮಾರು 60ಅಡಿ ಎತ್ತರದಿಂದ ಧುಮುಕುತ್ತದೆ ಮತ್ತು ಕೆಳಗಿನ ಜಾಗದಲ್ಲಿ ದೊಡ್ಡ ಕೆರೆಯ ರೂಪದಲ್ಲಿ ಹರಿಯುತ್ತದೆ ನೀವು ಇಲ್ಲಿ ನಿಮ್ಮ ಮೈ , ಮನಸ್ಸು ಮತ್ತು ಆತ್ಮವನ್ನು ಸಂತುಷ್ಟಗೊಳಿಸಿಕೊಳಿಸಬೇಕಾದರೆ ಇನ್ನೊಂದು ಕಡೆ ನೀವು ಕೋದಂಡರಾಮ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಅನ್ವೇಷಣೆ ಮಾಡಬಹುದಾಗಿದೆ. ಈ ದೇವಾಲಯವು ಹಲವಾರು ಶತಮಾನಗಳ ಹಿಂದೆ ನಿರ್ಮಿತವಾಯಿತು ಎಂದು ನಂಬಲಾಗುತ್ತದೆ.

5. ಚುಂಚನಕಟ್ಟೆಗೆ ಭೇಟಿ ಕೊಡಲು ಸೂಕ್ತವಾದ ಸಮಯ

5. ಚುಂಚನಕಟ್ಟೆಗೆ ಭೇಟಿ ಕೊಡಲು ಸೂಕ್ತವಾದ ಸಮಯ

Prof tpms

ಚುಂಚನಕಟ್ಟೆಯ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪರಿಸರವು ವರ್ಷವಿಡೀ ಮಧ್ಯಮ ರೀತಿಯ ಹವಾಮಾನವನ್ನು ಅನುಭವಿಸುತ್ತದೆ ಆದುದರಿಂದ ಇಲ್ಲಿ ಬೇಸಿಗೆಯೂ ಕೂಡಾ ಹಿತಕರವಾಗಿಯೇ ಇರುತ್ತದೆ. ಆದುದರಿಂದ ಚುಂಚನಕಟ್ಟೆಗೆ ನೀವು ವರ್ಷದ ಯಾವುದೇ ಸಮಯದಲ್ಲೂ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ.

ನೀವು ಈ ಸುಪ್ತ ಹಳ್ಳಿಯಲ್ಲಿಯ ಸೌಂದರ್ಯವನ್ನು ಅದರ ತಪ್ಪಲಿನಲ್ಲಿಯೇ ಅನ್ವೇಷಿಸಬೇಕೆಂದಿದ್ದಲ್ಲಿ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವಾಗಿದೆ.

6. ಚುಂಚನಕಟ್ಟೆಯನ್ನು ತಲುಪುವುದು ಹೇಗೆ?

6. ಚುಂಚನಕಟ್ಟೆಯನ್ನು ತಲುಪುವುದು ಹೇಗೆ?

Shivam Setu

ವಾಯುಮಾರ್ಗ: ಚುಂಚನಕಟ್ಟೆಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣ ಇದು ಇಲ್ಲಿಂದ ಸುಮಾರು 70 ಕಿ.ಮೀ ಅಂತರದಲ್ಲಿದೆ. ವಿಮಾನ ನಿಲ್ದಾಣದಿಂದ ನೀವು ಚುಂಚನಕಟ್ಟೆ ಹಳ್ಳಿಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಿದಲ್ಲಿ ಗಮ್ಯಸ್ಥಾನವನ್ನು ತಲುಪಲು ಸುಮಾರು 1 ಗಂಟೆ 30ನಿಮಿಷಗಳು ಬೇಕಾಗುವುದು.

ರೈಲು ಮೂಲಕ: ಚುಂಚನಕಟ್ಟೆಗೆ ನೇರ ರೈಲುಗಳು ಲಭ್ಯವಿಲ್ಲ. ಆದುದರಿಂದ ನೀವು ಮೈಸೂರು ಜಂಕ್ಷನ್ ಗೆ ರೈಲು ಹಿಡಿಯಬಹುದು ಮತ್ತು ಅಲ್ಲಿಂದ ನೀವು ಹಳ್ಳಿಗೆ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಬಹುದು.

ರಸ್ತೆಯ ಮೂಲಕ: ರಾಜಧಾನಿ ನಗರದಿಂದ ಬೆಂಗಳೂರಿನಿಂದ ಸುಮಾರು 180 ಕಿ.ಮೀ ಮತ್ತು ಮೈಸೂರುನಿಂದ 70 ಕಿ.ಮೀ ದೂರದಲ್ಲಿರುವ, ಚುಂಚನಕಟ್ಟೆಯನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.

Read more about: india travel mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more