Search
  • Follow NativePlanet
Share
» »ಹಾಸನದ ಹಸನಾದ ಆಕರ್ಷಣೆಗಳು

ಹಾಸನದ ಹಸನಾದ ಆಕರ್ಷಣೆಗಳು

By Vijay

ಕರ್ನಾಟಕದ ಮೂವತ್ತು ಜಿಲ್ಲೆಗಳ ಪೈಕಿ ಒಂದಾಗಿರುವ ಹಾಸನ ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ತನ್ನದೆ ಆದ ಕೊಡುಗೆ ನೀಡಿದೆ. ಇಲ್ಲಿ ಕಂಡುಬರುವ ಅದ್ಭುತ ಪ್ರವಾಸಿ ಆಕರ್ಷಣೆಗಳು ಕುಟುಂಬದೊಡನೆ ಹೊರಡಬಹುದಾದ ಸುಂದರ ತಾಣಗಳಾಗಿವೆ.

ಥಾಮಸ್ ಕುಕ್ ವತಿಯಿಂದ ಫ್ಲೈಟ್ ಬುಕ್ಕಿಂಗ್ ಮೇಲೆ 2000 ರೂ. ಗಳಷ್ಟು ಕಡಿತ

ಐತಿಹಾಸಿಕವಾಗಿ ಕನ್ನಡದ ಮಣ್ಣಿನಲ್ಲಿ ಮೂಡಿ ಬಂದ ಅತ್ಯದ್ಭುತ ಶಿಲ್ಪ ಕಲಾಕೃತಿಗಳ, ಕೆತ್ತನೆಯುಳ್ಳ ಕಲೆಗೆ ತವರಾಗಿದೆ ಹಾಸನ ಜಿಲ್ಲೆ. ದೇವಿ ಹಾಸನಾಂಬೆಯು ನೆಲೆಸಿ, ಕಾಯುತ್ತಿರುವ ಈ ಜಿಲ್ಲೆಗೆ ಹಾಸನ ಎಂಬ ಹೆಸರು ಅವಳ ಗೌರವಾರ್ಥವಾಗಿ ಬಂದಿದೆ ಎಂದೂ ಸಹ ಹೇಳಲಾಗುತ್ತದೆ.

ವಿಶೇಷ ಲೇಖನ : ಹಾಸನಾಂಬೆಯ ದೇವಸ್ಥಾನ

ಕನ್ನಡದ ಮಣ್ಣಿನಲ್ಲಿ ಹೀಗೆ ನೆಲೆಯೂರಿರುವ ಇಂತಹ ಅನೇಕ ಐತಿಹಾಸಿಕ ಸ್ಥಳಗಳಾಗಲಿ, ಸ್ಮಾರಕಗಳಾಗಲಿ, ದೇವಾಲಯಗಳಾಗಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅಂತಹವುಗಳನ್ನು ಬಲು ಹೆಮ್ಮೆಯಿಂದ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೂ ಕೂಡ ಹೌದಲ್ಲವೆ?

ಹಾಸನದ ಬಳಿಯಿರುವ ವಾರಾಂತ್ಯದ ರಜೆಯ ಸ್ಥಳಗಳು

ಪ್ರಸ್ತುತ ಲೇಖನದ ಮೂಲಕ ಹಾಸನ ಜಿಲ್ಲೆಯಲ್ಲಿರುವ ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಾವುವು? ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರವಾಸಿ ದೃಷ್ಟಿಯಿಂದ ಏನೆಲ್ಲ ಚಟುವಟಿಕೆಗಳನ್ನು ಆನಂದಿಸಬಹುದೆಂಬುದರ ಕುರಿತು ಸಮಗ್ರವಾಗಿ ತಿಳಿಯಿರಿ.

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

11ನೇಯ ಶತಮಾನದಲ್ಲಿದ್ದ ಪಾಳೆಗಾರ ಚನ್ನ ಕೃಷ್ಣಪ್ಪ ನಾಯಕರಿಂದ ನಿರ್ಮಾಣವಾದ ಹಾಸನವು ಕರ್ನಾಟಕದ ಪ್ರಮುಖ ಜಿಲ್ಲೆ ಹಾಗು ಜಿಲ್ಲಾ ಕೇಂದ್ರವಾಗಿದೆ. ಈ ಊರಿಗೆ ಹಾಸನ ಎನ್ನುವ ಹೆಸರು ಇಲ್ಲಿನ ನಗರ ದೇವತೆಯಾದ ಹಾಸನಾಂಬ ದೇವಿಯಿಂದ ಬಂದಿತೆನ್ನಲಾಗುತ್ತದೆ.

ಚಿತ್ರಕೃಪೆ: Foliate08

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಾಸನವು ಐತಿಹಾಸಿಕವಾಗಿ ಮಹತ್ವ ಪಡೆದಿರುವ ನಗರವಾದರೂ ಸಹ ಇಂದು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.

ಚಿತ್ರಕೃಪೆ: mdemon

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಾಸನಕ್ಕೆ ರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.

ಚಿತ್ರಕೃಪೆ: Tukaram Hanumegowda

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಾಸನಾಂಬೆ ದೇವಸ್ಥಾನ : ಹಾಸನ ನಗರವು ತನ್ನಲ್ಲಿರುವ ಹಾಸನಾಂಬೆಯ ದೇವಸ್ಥಾನದಿಂದಾಗಿ ಖ್ಯಾತಿ ಪಡೆಯುತ್ತಿದೆ. ಅಲ್ಲದೆ, ಈ ನಗರಕ್ಕೆ ಹಾಸನವೆಂಬ ಹೆಸರೂ ಕೂಡ ಇಲ್ಲಿರುವ ಶಕ್ತಿಮಾತೆಯ ಸಂಕೇತವಾದ ಹಾಸನಾಂಬೆಯಿಂದಲೆ ಬಂದಿದುದಾಗಿದೆ. ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ತೆರೆಯುವ ಈ ದೇವಾಲಯವು ಭಕ್ತ ಸಮೂಹದಲ್ಲಿ ಅಪಾರವಾದ ಮಹತ್ವವನ್ನು ಪಡೆದಿದೆ. ಹೆಚ್ಚಿಗೆ ತಿಳಿಯಿರಿ.

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಸಕಲೇಶಪುರ : ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು ಚಾರಣ ಮಾರ್ಗಗಳಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Vinayak Shankar Rao

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಕೇರಳದಿಂದ ಗುಜರಾತ್ ರಾಜ್ಯದವರೆಗೂ ಹರಡಿರುವ ಅತ್ಯದ್ಭುತ ಪಶ್ಚಿಮ ಘಟ್ಟಗಳ ದಟ್ಟ ಛಾಯೆಯಲ್ಲಿ ನೆಲೆಸಿರುವ ಸಕಲೇಶಪುರವು ಬಿಸಿಲೆ ಮೀಸಲು ಅರಣ್ಯ ಪ್ರದೇಶಕ್ಕೂ ಸಹ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿಯೆ ಹೆಚ್ಚಿನ ವೈವಿಧ್ಯತೆಯ ಸಸ್ಯ ಸಂಪತ್ತು ಹಾಗೂ ಜೀವಸಂಪತ್ತುಗಳನ್ನು ಹೊಂದಿರುವ 18 ಬಗೆಯ ತಾಣಗಳಲ್ಲಿ ಸಕಲೇಶಪುರವೂ ಸಹ ಒಂದು.

ಚಿತ್ರಕೃಪೆ: Ashwin Kumar

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಸಕಲೇಶಪುರ ಪಟ್ಟಣವು ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿರುವುದರಿಂದ ಹಿತಕರವಾದ ವಾತಾವರಣವನ್ನು ಸಾಮಾನ್ಯವಾಗಿ ವರ್ಷಪೂರ್ತಿ ಇಲ್ಲಿ ಕಾಣಬಹುದು. ಇದು ಹಸಿರು ಬೆಟ್ಟಗಳ ನಡುವೆ ಕಾಫಿ, ಏಲಕ್ಕಿ, ಮೆಣಸು, ಅಡಕೆ, ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಇಲ್ಲಿನ ಸುತ್ತಾಟ ನಮ್ಮನ್ನು ಪ್ರಕೃತಿಯೊಂದಿಗೆ ಭಾವುಕವಾಗಿ ಬೆಸೆಯುತ್ತದೆ.

ಚಿತ್ರಕೃಪೆ: Ashwin Kumar

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಪ್ರವಾಸಿಗರ ಸ್ವರ್ಗ ಎಂತಲೂ ಸಹ ಕರೆಯಲ್ಪಡುವ ಹಸಿರು ಪಥವೂ (ಗ್ರೀನ್ ರೂಟ್) ಸಹ ಪ್ರಾರಂಭವಾಗುವುದು ಸಕಲೇಶಪುರದಿಂದಲೆ. ಈ ಪಥವು ರೈಲು ಕಂಬಿಗಳಾಗಿದ್ದು ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗಿದೆ. ರೈಲಿನಲ್ಲಿ ಸಾಗುವಾಗಲೂ ಸಹ ಈ ಅದ್ಭುತ ಮಾರ್ಗವು ಮೋಡಿ ಮಾಡದೆ ಇರಲಾರದು.

ಚಿತ್ರಕೃಪೆ: snapper san

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಚಾರಣದ ಪ್ರಾರಂಭಿಕ ತಾಣವಾಗಿ ಮೊದಲಿಗೆ ಸಕಲೇಶಪುರದಿಂದ ಸುಮಾರು ಎಂಟು ಕಿ.ಮೀ ಗಳಷ್ಟು ದೂರವಿರುವ ದೊಣಿಗಾಲ್ ರೈಲು ನಿಲ್ದಾಣಕ್ಕೆ ಆಗಮಿಸಬೇಕು. ಚಾರಣವನ್ನು ಸಾಮಾನ್ಯವಾಗಿ ದೊಣಿಗಾಲ್ ನಿಂದ ಪ್ರಾರಂಭಿಸಿ ಕುಕ್ಕೆ ರೈಲು ನಿಲ್ದಾಣದಲ್ಲಿ ಸಮಾಪ್ತಗೊಳಿಸಲಾಗುತ್ತದೆ. ಮುಖ್ಯವಾಗಿ ಈ ಪಥವು ಪಶ್ಚಿಮ ಘಟ್ಟಗಳ ಮಧ್ಯದಿಂದ ಸಾಗುವುದರಿಂದ ಇದಕ್ಕೆ ಹಸಿರು ಪಥ ಎಂದು ಕರೆಯಲಾಗಿದೆ.

ಚಿತ್ರಕೃಪೆ: Girish Sharma

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬಿಸಿಲೆ ಅರಣ್ಯ ವ್ಯಾಪ್ತಿಯ ಎಡಕುಮರಿ, ದೋಣಿಗಾಲ್, ಜೇನುಕಲ್ಲು ಬೆಟ್ಟ (ಕರ್ನಾಟಕದ ಮೂರನೆಯ ಅತಿ ಎತ್ತರದ ಶಿಖರ ಶೃಂಗ) ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾದುವುಗಳಾಗಿದ್ದು, ಸಾಹಸಪ್ರಧಾನವೂ ಸಹ ಆಗಿವೆ. ಸಾಮಾನ್ಯವಾಗಿ ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟು ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸುವ ಪರಿಪಾಠವಿದೆ. ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಿಗರಿಗೆ ಸವಾಲೊಡ್ಡುತ್ತದೆ.

ಚಿತ್ರಕೃಪೆ: Abhijeet Rane

ಜೇನುಕಲ್ಲು ಸಿದ್ಧೇಶ್ವರ ಬೆಟ್ಟ

ಜೇನುಕಲ್ಲು ಸಿದ್ಧೇಶ್ವರ ಬೆಟ್ಟ

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿ 1101 ಮೆಟ್ಟಿಲುಗಳ ಈ ಜನಪ್ರೀಯ ದೇವಸ್ಥಾನವಿದೆ. ಇಲ್ಲಿ ಶಿವನು ಸಿದ್ಧೇಶ್ವರ, ಅಜ್ಜಯ್ಯನಾಗಿ ಭಕ್ತರನ್ನು ಹರಸುತ್ತಿದ್ದಾನೆ ಪ್ರತಿ ಏಪ್ರಿಲ್-ಜೂನ್ ಗಳ ಸಂದರ್ಭದಲ್ಲಿ ಪವಿತ್ರ ಜೇನುಕಲ್ಲು ಸಿದ್ಧೇಶ್ವರ ಜಾತ್ರೆಯು ಇಲ್ಲಿ ಜರುಗುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಭಾವಿ ದೇವ, ಬಯಸಿದ್ದನ್ನು ಈಡೇರಿಸುವ ಸಿದ್ಧೇಶ್ವರ ಎಂದೆಲ್ಲ ಕರೆಸಿಕೊಳ್ಳುವ ಈ ಸಿದ್ಧೇಶ್ವರನ ದೇವಸ್ಥಾನವು ಹೀಗೂ ಉಂಟೆ ಕಾರ್ಯಕ್ರಮದಲ್ಲೂ ಸಹ ಬಿತ್ತರಗೊಂಡಿದೆ.

ಚಿತ್ರಕೃಪೆ: Karsolene

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಒಂಬತ್ತು ಗುಡ್ಡ : ಚಾರಣ ಮಾಡಲು ಬಯಸುವ ಪ್ರವಾಸಿಗರು ಇಲ್ಲಿನ ಒಂಭತ್ತುಗುಡ್ಡಕ್ಕೆ ಭೇಟಿ ಕೊಡಬಹುದು. ಹೆಸರೆ ಸೂಚಿಸುವಂತೆ ಇಲ್ಲಿ ಒಂಭತ್ತು ಗುಡ್ಡಗಳಿರುವ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಕಬ್ಬಿನಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಬೆಟ್ಟಕ್ಕೆ ಚಾರಣ ಮಾರ್ಗವು ಗುಂಡ್ಯಾ ಚೆಕ್ ಪೊಸ್ಟ್ ನಿಂದ ಪ್ರಾರಂಭವಾಗುತ್ತದೆ.

ಚಿತ್ರಕೃಪೆ: Ravi S. Ghosh

ಜೇನುಕಲ್ಲು ಬೆಟ್ಟ

ಜೇನುಕಲ್ಲು ಬೆಟ್ಟ

ಸಕಲೇಶಪುರದ ಬಳಿಯಿರುವ ಮತ್ತೊಂದು ಅದ್ಭುತ ಚಾರಣಯೋಗ್ಯ ಬೆಟ್ಟ ಜೇನುಕಲ್ಲು ಬೆಟ್ಟ. ಕರ್ನಾಟಕದ ಅತಿ ಎತ್ತರದ ಶಿಖರಗಳ ಪೈಕಿ ಒಂದಾಗಿರುವ ಈ ಬೆಟ್ಟವು ಹಸಿರಿನಿಂದ ತುಂಬಿದ್ದು, ಕಾಫಿ ಎಸ್ಟೇತುಗಳ ವಿಹಂಗಮ ನೋಟ ಕರುಣಿಸುತ್ತದೆ. ಶಿಖರದ ತುದಿಯಿಂದ ಮಂಗಳೂರಿನ ಅರಬ್ಬಿ ಸಮುದ್ರದ ಅತಿ ದೂರದ ನೋಟವನ್ನು ಅದ್ಭುತವಾಗಿ ಸವಿಯಬಹುದಾಗಿದೆ.

ಚಿತ್ರಕೃಪೆ: Vinayak Shankar Rao

ಶ್ರವಣಬೆಳಗೊಳ

ಶ್ರವಣಬೆಳಗೊಳ

ಹಾಸನ ಜಿಲ್ಲೆಯಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಶ್ರವಣಬೆಳಗೊಳ. ಶ್ರವಣಬೆಳಗೊಳವು ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣ. ಶ್ರವಣಬೆಳಗೊಳದಲ್ಲಿರುವ ವಿಶ್ವವಿಖ್ಯಾತ 58'8" ಅಡಿಗಳಷ್ಟು ಎತ್ತರದ ಏಕಶಿಲೆಯಲ್ಲಿ ಕೆತ್ತಲಾದ ಬಾಹುಬಲಿಯ ಮೂರ್ತಿಯಿರುವುದೆ ಈ ತಾಣದ ಪ್ರಮುಖ ಆಕರ್ಷಣೆ ಅಲ್ಲದೆ, ಜೈನರ ಪ್ರಮುಖ ಧಾರ್ಮಿಕ ಕೇಂದ್ರವೂ ಆಗಿದೆ. ಈ ಪ್ರತಿಮೆಯು ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಏಕಶಿಲಾ ಪ್ರತಿಮೆಗಳ ಪೈಕಿ ಒಂದಾಗಿದ್ದು ಸುಮಾರು 58 ಅಡಿಗಳಷ್ಟು ಎತ್ತರವಿದೆ. ಶ್ರವಣ ಬೆಳಗೊಳದಲ್ಲಿರುವ ವಿಂಧ್ಯಗಿರಿ ಎಂಬ ಬೆಟ್ಟದ ಮೇಲೆ ಗೊಮ್ಮಟನ ಈ ಪ್ರತಿಮೆಯನ್ನು ಗ್ರಾನೈಟು ಕಲ್ಲಿನಲ್ಲಿ ಕಡೆಯಲಾಗಿದ್ದು ನೋಡಲು ಆಕರ್ಷಕವಾಗಿದೆ. ಕೆತ್ತನೆಯ ಸೂಕ್ಷ್ಮತೆಯು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಕ್ರಿ.ಶ.973 ರಲ್ಲಿ ಚಾವುಂಡರಾಯನು ಅರಿಷ್ಟ ನೇಮಿ ಎಂಬ ಶಿಲ್ಪಿಯಿಂದ ಈ ಪ್ರತಿಮೆಯ ನಿರ್ಮಾಣ ಮಾಡಿದನೆನ್ನುತ್ತದೆ ಇತಿಹಾಸ.

ಚಿತ್ರಕೃಪೆ: romana klee

ವಿಂಧ್ಯಗಿರಿ ಬೆಟ್ಟ

ವಿಂಧ್ಯಗಿರಿ ಬೆಟ್ಟ

ಈ ಪ್ರತಿಮೆಯಿರುವ ವಿಂಧ್ಯಗಿರಿ ಬೆಟ್ಟ ತಲುಪಲು ಸುಮಾರು 700 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ವಿಶೇಷವೆಂದರೆ ಹತ್ತಲಾಗದವರಿಗೆ ಡೋಲಿ ಅಥವಾ ಪಲ್ಲಕ್ಕಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: cotaro70s

ಹಲ್ಮಿಡಿ ಶಾಸನ

ಹಲ್ಮಿಡಿ ಶಾಸನ

ಹಲ್ಮಿಡಿ : ಹಾಸನ ಜಿಲ್ಲೆಯಲ್ಲಿರುವ ಹಲ್ಮಿಡಿಯು ಒಂದು ಐತಿಹಾಸಿಕ ಕುತೂಹಲಕರ ತಾಣವಾಗಿದೆ. ವಿಶೇಷವೆಂದರೆ ಸುಮಾರು ಕ್ರಿ.ಶ 450 ರಲ್ಲಿ ರಚಿಸಿದೆನ್ನಲಾದ ಹಲ್ಮಿಡಿ ಶಾಸನ ದೊರೆತಿರುವುದು ಇಲ್ಲಿಯೆ. ಈ ಶಾಸನವು ಕನ್ನಡ ಲಿಪಿಯಲ್ಲಿದ್ದು ಕನ್ನಡವು ಆ ಸಮಯದಲ್ಲೆ ಬಳಸಲ್ಪಡುತ್ತಿತ್ತು ಎನ್ನುವುದಕ್ಕೆ ಉದಾಹರಣೆಯಾಗಿದೆ. ಇಂದು ಕರ್ನಾಟಕ ಸರ್ಕಾರವು ಅಲ್ಲಿ ದೊರೆತಿರುವ ಶಾಸನದ ಮಾದರಿಯನ್ನು ಪ್ರದರ್ಶಿಸಿದ್ದು, ಈ ಹಳ್ಳಿಯನ್ನು ಅಭಿವೃದ್ಧಿಗೊಳಿಸುತ್ತಿದೆ. ಹಲ್ಮಿಡಿ ಹಳ್ಳಿಯು ಹಾಸನದ ಬೇಲೂರು ಪಟ್ಟಣದ ಬಳಿ ಸ್ಥಿತವಿದೆ.

ಚಿತ್ರಕೃಪೆ: Dineshkannambadi

 ಲಕ್ಷ್ಮಿ ನರಸಿಂಹ ದೇವಸ್ಥಾನ

ಲಕ್ಷ್ಮಿ ನರಸಿಂಹ ದೇವಸ್ಥಾನ

ಹಾಸನ ನಗರದಿಂದ 50 ಕಿ.ಮೀ ದೂರದಲ್ಲಿರುವ ನುಗ್ಗೆಹಳ್ಳಿಯು ತನ್ನಲ್ಲಿರುವ ಸುಪ್ರಸಿದ್ಧ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಬಲು ಹೆಸರುವಾಸಿ. ಲಕ್ಷ್ಮಿ ನರಸಿಂಹ ದೇವಾಲಯವು 1246ರಲ್ಲಿ ನಿರ್ಮಾಣಗೊಂಡಿದ್ದು ತ್ರಿಕೂಟ(ಮೂರು ಗೋಪುರ) ಗಳನ್ನು ಹೊಂದಿದೆ. ಈ ದೇವಾಲಯದ ಗೋಡೆಗಳಲ್ಲಿ ಹಲವು ಕೆತ್ತನೆಗಳನ್ನು, ವಿಮಾನ(ಪ್ರಾರ್ಥನೆಯ ಭವನ), ಬೃಹದಾಕಾರದ ಮಂಟಪವನ್ನು ಈ ದೇವಾಲಯದ ನಿರ್ಮಾಣದ ನಂತರ ನಿರ್ಮಿಸಲಾಗಿದೆ. ಈ ದೇವಾಲಯದ ಮಂಟಪವು ಮೂರು ಗರ್ಭಗುಡಿಗಳನ್ನು ಮತ್ತು 9 ದ್ವಾರಗಳನ್ನು ಹೊಂದಿದೆ.

ಚಿತ್ರಕೃಪೆ: Dineshkannambadi

ಯಗಚಿ ಜಲಾಶಯ

ಯಗಚಿ ಜಲಾಶಯ

ಯಗಚಿ ಜಲಾಶಯವು ಹಾಸನ ಜಿಲ್ಲೆಯಿಂದ 45ಕಿ.ಮೀ ದೂರದಲ್ಲಿದ್ದು ಬೇಲೂರು ಬಳಿಯಲ್ಲಿದೆ. ಈ ಪ್ರದೇಶದಲ್ಲಿ ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯೂ ಹೌದು. ಈ ಜಲಾಶಯವು 2004 ರಲ್ಲಿ ಹಾಸನ, ಚಿಕ್ಕ ಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ನಿರ್ಮಾಣಗೊಂಡಿದೆ.

ಚಿತ್ರಕೃಪೆ: Harijibhv

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಿಂದೆ ಇಲ್ಲಿನ ಪ್ರದೇಶದಲ್ಲಿ ನಕ್ಸಲ್ ಹಾವಳಿ ಇದ್ದುದರಿಂದ ಇಂದು ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಜಲಾಶಯವನ್ನು ಪೊಲೀಸರು ಕಾಯುತ್ತಿರುತ್ತಾರೆ. ಇತ್ತೀಚೆಗೆ ಈ ಜಲಾಶಯದ ಹಿನ್ನೀರಿನಲ್ಲಿ ಯಗಚಿ ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್ ಸೆಂಟರ್ ಎಂಬ ಸಾಹಸ ಕ್ರೀಡಾ ಕೇಂದ್ರವು ತಲೆ ಎತ್ತಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುತ್ತಿದೆ.

ಚಿತ್ರಕೃಪೆ: Harijibhv

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಾಗಾಗಿ ಇಲ್ಲಿ ಪ್ರವಾಸಿಗರು ಬನಾನ ಬೋಟ್ ರೈಡ್, ಕ್ರೂಸ್ ಬೋಟ್, ಸ್ಪೀಡ್ ಬೋಟ್ , ಜೆಟ್ ಸ್ಕೈಯಿಂಗ್ ಮತ್ತು ಬಂಪರ್ ರೈಡ್ಸ್ ನಂತಹ ಸಾಹಸ ದೋಣಿ ಯಾನಗಳನ್ನು ಇಲ್ಲಿ ಮಾಡಬಹುದು. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಪ್ರವಾಸಿಗರು ಪ್ರಶಾಂತವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ಚಿತ್ರಕೃಪೆ: Harijibhv

ಅಗ್ರಹಾರ ಬೆಳಗುಲಿ

ಅಗ್ರಹಾರ ಬೆಳಗುಲಿ

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಿಂದ ಸುಮಾರು 25 ಕಿ.ಮೀ ದೂರದಲ್ಲಿ ಸ್ಥಿತವಿದೆ ಈ ಒಂದು ಆಸಕ್ತಿಕರ ಸ್ಥಳ. ಇದು ಮೊದಲಿಗೆ ಅಧ್ಯಯನ-ಅಧ್ಯಾಪನ, ಯಜ್ಞ-ಹವನ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ಮಾಡುವ ಬ್ರಾಹ್ಮಣ ಕುಟುಂಬಗಳಿಂದ ತುಂಬಿತ್ತು. ಇಂದು ಕೇವಲ ಬೆರಳಣಿಕೆಯಷ್ಟು ಮಾತ್ರವೆ ಅಂತಹ ಕುಟುಂಬಗಳನ್ನು ನೋಡಬಹುದಾಗಿದೆ. ಹಸಿರು ಹಸಿರಾದ ಮನಸ್ಸಿಗೆ ಮುದ ನೀಡುವ ಬೆಳಗುಲಿ ಗ್ರಾಮದ ಸುಂದರ ಪರಿಸರ.

ಚಿತ್ರಕೃಪೆ: Sbblr0803

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬೆಳಗುಲಿ ಹಳ್ಳಿಯು ತನ್ನಲ್ಲಿರುವ ಐತಿಹಾಸಿಕ ಮಹತ್ವವುಳ್ಳ ದೇವಾಲಯದಿಂದಾಗಿ ಗಮನ ಸೆಳೆಯುತ್ತದೆ. ಹಿಂದೆ ಈ ದೇವಾಲಯವು ಕೇಶವೇಶ್ವರ ಎಂದು ಪ್ರಸಿದ್ಧವಾಗಿತ್ತಾದರೂ ಇಂದು ಇದನ್ನು ಬೆಟ್ಟೇಶ್ವರ ದೇವಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬೆಟ್ಟೇಶ್ವರ ದೇವಾಲಯ.

ಚಿತ್ರಕೃಪೆ: Gani0087

ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯ

ಈ ಗ್ರಾಮದಲ್ಲಿ ಪ್ರಾಚೀನ ಬೆಟ್ಟೇಶ್ವರ ದೇವಾಲಯದ ಜೊತೆಗೆ ಕಟ್ಟಪ್ಪಾ ದೇವಾಲಯ, ಹೊನ್ನಾದೇವಿ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳನ್ನೂ ಸಹ ನೋಡಬಹುದು. ವರ್ಷದ ವಸಂತ ಋತುವಿನಲ್ಲಿ ಗ್ರಾಮ ದೇವತೆ ಹೊನ್ನಾ ದೇವಿಯ ಜಾತ್ರೆ ಇಲ್ಲಿ ಜರುಗುತ್ತದೆ.

ಚಿತ್ರಕೃಪೆ: Sbblr0803

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಗ್ರಾಮದ ಎರಡು ವಿರುದ್ಧ ಬದಿಗಳಲ್ಲಿ ನಿರ್ಮಿತಗೊಂಡಿರುವ ಎರಡು ಕೆರೆಗಳು ಗ್ರಾಮಕ್ಕೆ ವಿಶೇಷವಾದ ಮೆರುಗನ್ನು ನೀಡಿದ್ದು, ಐತಿಹಾಸಿಕ ಮಹತ್ವನ್ನೂ ಸಹ ಕೆರೆಗಳು ಪಡೆದಿವೆ. ಒಂದು ಹೊನ್ನಮ್ಮನ ಕೆರೆ ಎಂದು ಕರೆಯಲ್ಪಟ್ಟರೆ ಇನ್ನೊಂದು ನಚ್ಚನಹಳ್ಳಿ ಕೆರೆ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹೊನ್ನಮ್ಮನ ಕೆರೆ.

ಚಿತ್ರಕೃಪೆ: Sbblr0803

ಹೊನ್ನಮ್ಮನ ಕೆರೆ

ಹೊನ್ನಮ್ಮನ ಕೆರೆ

ಹೊನ್ನಮ್ಮನ ಕೆರೆಯ ಇನ್ನೊಂದು ಬದಿಯಲ್ಲಿರುವ ನಚ್ಚನಹಳ್ಳಿ ಕೆರೆ.

ಚಿತ್ರಕೃಪೆ: Sbblr0803

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಮೊಸಳೆ : ಹಾಸನ ನಗರದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಮೊಸಳೆ ಎಂಬ ಗ್ರಾಮವು ಐತಿಹಾಸಿಕ ಹಾಗೂ ಶಿಲ್ಪಕಲೆಯ ದೃಷ್ಟಿಯಿಂದ ಮಹತ್ವ ಪಡೆದ ಸ್ಥಳವಾಗಿದೆ. ಕಾರಣ ಇಲ್ಲಿರುವ ಹೊಯ್ಸಳ ದೊರೆ ಎರಡನೇಯ ವೀರ ಬಲ್ಲಾಳನಿಂದ ನಿರ್ಮಿತವಾದ, ಹೊಯ್ಸಳ ವಾಸ್ತು ಶೈಲಿಯ ನಾಗೇಶ್ವರ ಹಾಗೂ ಚೆನ್ನಕೇಶ್ವರ ಅವಳಿ ದೇವಾಲಯಗಳು.

ಚಿತ್ರಕೃಪೆ: Dineshkannambadi

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

12 ನೇಯ ಶತಮಾನದಲ್ಲಿ ನಿರ್ಮಿತಗೊಂಡಿರುವ ಈ ಅವಳಿ ದೇಗುಲಗಳು ಇಂದು ರಾಷ್ಟ್ರೀಯ ಮಹತ್ವ ಪಡೆದ ನಮ್ಮ ನಾಡಿನ ಹೆಮ್ಮೆಯ ಸ್ಮಾರಕ ದೇವಾಲಯಗಳಾಗಿವೆ.

ಚಿತ್ರಕೃಪೆ: Dineshkannambadi

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಅದ್ಭುತ ವಾಸ್ತುಶೈಲಿ ಹೊಂದಿರುವ ಈ ದೇಗುಲಗಳ ಒಳಾಂಗಣವು ಸೂಕ್ಷ್ಮವಾದ ಹಾಗೂ ಅಷ್ಟೆ ಆಕರ್ಷಕವಾದ ಕೆತ್ತನೆಗಳಿಂದ ಕೂಡಿದ್ದು ಅಂದಿನ ಕಾಲದ ಶಿಲ್ಪಿಗಳ ನೈಪುಣ್ಯತೆಯನ್ನು ಪ್ರಚುರ ಪಡಿಸುತ್ತವೆ.

ಚಿತ್ರಕೃಪೆ: Dineshkannambadi

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬೇಲೂರು : ಪ್ರಾಚೀನ ಹಿನ್ನೆಲೆಯುಳ್ಳ, ಐತಿಹಾಸಿಕ ಹಾಗೂ ಶೈಕ್ಷಣಿಕ ಪ್ರವಾಸಿ ಆಕರ್ಷಣೆಯಾಗಿರುವ, ಹೊಯ್ಸಳ ಸಾಮ್ರಾಜ್ಯದ ಕುರುಹಾಗಿರುವ ಹಾಸನ ಜಿಲ್ಲೆಯಲ್ಲಿರುವ ಬೇಲೂರ ಪಟ್ಟಣವು ಇತಿಹಾಸ ಪ್ರಿಯ ಪ್ರವಾಸಿಗರಿಗೆ ಹಾಗೂ ಕುಟುಂಬಸಮೇತ ತೆರಳ ಬಯಸುವವರಿಗೆ ಉತ್ತಮ ಸ್ಥಳವಾಗಿದೆ. ಪ್ರಾಚೀನ ದೇವಸ್ಥಾನದ ನಗರವೆಂದೇ ಹೆಸರಾಗಿರುವ ಬೇಲೂರು ನಗರಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬರುತ್ತಾರೆ.

ಚಿತ್ರಕೃಪೆ: Riju K

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಯಗಚಿ ನದಿಯ ದಂಡೆಯ ಸುಂದರ ಪರಿಸರದಲ್ಲಿರುವ ಬೇಲೂರು ನಗರವು ಪ್ರಾಚೀನ ಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿತ್ತು. ಬೇಲೂರು ನಗರದಾದ್ಯಂತ ಹಲವಾರು ದೇವಸ್ಥಾನಗಳು ಹೊಯ್ಸಳರ ಕೊಡುಗೆ ಎನ್ನಬಹುದು. ಬೇಲೂರುನಿಂದ 16 ಕೀ.ಮೀ. ದೂರದಲ್ಲಿರುವ ಹಳೇಬೀಡು ಕೂಡ ಪ್ರಾಚೀನ ದೇವಾಲಯಗಳ ನಗರವೆಂದೇ ಪ್ರಸಿದ್ಧಿಯಾಗಿದೆ. ಹಳೇಬೀಡು ಕೂಡ ಹೊಯ್ಸಳರ ರಾಜಧಾನಿಯಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಪ್ರವೇಶ ಸ್ಥಳದಲಿರುವ ಅದ್ಭುತ ಗಣಪನ ಮೂರ್ತಿ.

ಚಿತ್ರಕೃಪೆ: Premnath Thirumalaisamy

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ನಿಜವಾಗಿಯೂ ಹೆಮ್ಮೆ ಪಡಬೇಕಾದ, ಭಾರತದ ಶಿಲ್ಪ ಕಲೆಯ ವೈಭವವನ್ನು ಜಗತ್ತಿಗೆ ಸಾರುವಂತಹ, ನೈಪುಣ್ಯತೆಯಿಂದ ಕೂಡಿದ ಬೇಲೂರು-ಹಳೆಬೀಡಿನ ಶಿಲ್ಪ ಕಲೆಗಳು. ಬೇಲೂರಿನಲ್ಲಿರುವ ಲಕ್ಷ್ಮಿ ದೇವಿಯ ದೇವಾಲಯ.

ಚಿತ್ರಕೃಪೆ: Ankur P

ಚೆನ್ನಕೇಶವ ದೇವಸ್ಥಾನ

ಚೆನ್ನಕೇಶವ ದೇವಸ್ಥಾನ

ಬೇಲೂರಿನ ಚೆನ್ನಕೇಶವ ದೇವಸ್ಥಾನದ ಬೃಹತ್ ಪ್ರಾಂಗಣ. ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಬೆಲೂರು-ಹಳೆಬೀಡು ದೇವಸ್ಥಾನಗಳಿಗೆ ಸಾಮಾನ್ಯವಾಗಿ ಕರ್ನಾಟಕದ ವಿವಿಧ ಸ್ಥಳಗಳಿಂದ ಶಾಲಾ ಬಾಲಕ ಬಾಲಕಿಯರು ಶಾಲೆಗಳ ವತಿಯಿಂದ ಪ್ರವಾಸಕ್ಕೆ ಬರುತ್ತಿರುತ್ತಾರೆ.

ಚಿತ್ರಕೃಪೆ: Abhijeet Rane

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಿಂದೂ ಪೌರಾಣಿಕದಲ್ಲಿ ಒಂದೊಮ್ಮೆ ವಿಷ್ಣು ಭಗವಂತನು ಅಸುರನೊಬ್ಬನ ನಾಶಕ್ಕೆಂದು ಮೋಹಿನಿ ಎಂಬ ಮೋಹಕ ಸ್ತ್ರೀಯ ರೂಪ ತಳೆದಿರುವ ಪ್ರಸಂಗ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವ ವಿಚಾರವೆ. ಆ ಒಂದು ಮೋಹಿನಿಯ ಅವತಾರದಲ್ಲಿ ವಿಷ್ಣುವಿನ ರೂಪದ ಸುಂದರ ಕೆತ್ತನೆ. ಬೇಲೂರಿನ ದೇವಾಲಯದಲ್ಲಿ.

ಚಿತ್ರಕೃಪೆ: Ankur P

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಅಬ್ಬಾ...ಮೂಕವಿಸ್ಮಿತರನ್ನಾಗಿಸುವ ಅದ್ಭುತ ಚಿತ್ತಾರ. ಬೇಲೂರಿನ ದೇವಾಲಯದ ಗೋಡೆಯೊಂದು ಅತ್ಯದ್ಭುತ ಶಿಲ್ಪಕಲೆಗೆ ಸಾಕ್ಷಿಯಾಗಿ ಸೂಕ್ಷ್ಮ ಕೆತ್ತನೆಗಳಿಂದ ಸಿಂಗರಿಸಿಕೊಂಡಿರುವ ರೀತಿ.

ಚಿತ್ರಕೃಪೆ: Ankur P

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬೇಟೆಗಾರ್ತಿ ಹಾಗೂ ಆಕೆಯ ಸಹಾಯಕರನ್ನು ಪರಿಚಯಿಸುವ ಹಾಗೂ ಬೇಟೆ ಮಾಡಲಾದ ಪ್ರಾಣಿಗಳ ಪ್ರಸಂಗ ಅನಾವರಣಗೊಳಿಸುವ ಒಂದು ಸುಂದರ ಕೆತ್ತನೆ. ಬೇಲೂರು ದೇವಾಲಯ.

ಚಿತ್ರಕೃಪೆ: Premnath Thirumalaisamy

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಕಾಳಿ ದೇವಿ ಹಾಗೂ ಇತರೆ ದೇವೆತೆಗಳನ್ನು ಸುಂದರವಾಗಿ, ಆಕರ್ಷಕವಾಗಿ ಕೆತ್ತಿದ ಅದ್ಭುತ ಕಲೆ. ಹಳೆಬೀಡಿನ ದೇವಾಲಯದ ಗೋಡೆ.

ಚಿತ್ರಕೃಪೆ: Premnath Thirumalaisamy

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಹಳೆಬೀಡಿನ ದೇವಾಲಯದ ಹೊರ ಭಾಗದ ಗೋಡೆಗಳ ಮೇಲೆ ಮೂಡಿ ಬಂದ ಅದ್ಭುತ ಶಿಲ್ಪ ಕಲೆಯ ಸೂಕ್ಷ್ಮ ಕೆತ್ತನೆಗಳು.

ಚಿತ್ರಕೃಪೆ: Vijay S

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬೇಲೂರು ದೇವಾಲಯದ ಒಳಾಂಗಣ ಮೇಲ್ಗೋಡೆಯಲ್ಲಿ ಕಂಡು ಬರುವ ಅದ್ಭುತ ಹಾಗೂ ಆಕರ್ಷಕ ಕೆತ್ತನೆ.

ಚಿತ್ರಕೃಪೆ: Kamal Venkit

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ವಿಶಿಷ್ಟ ಪರಿಕಲ್ಪನೆಯನ್ನು ಅದ್ಭುತವಾಗಿ ಅನಾವರಣಗೊಳಿಸುವ ಸ್ತ್ರೀ-ಪ್ರಾಣಿ ಭಾವಗಳ ಸುಂದರ ಶಿಲ್ಪ ಕಲೆಯ ರಚನೆಗಳು.

ಚಿತ್ರಕೃಪೆ: Kamal Venkit

ಹಾಸನ ಜಿಲ್ಲೆ:

ಹಾಸನ ಜಿಲ್ಲೆ:

ಬೇಲೂರು ದೇವಾಲಯದ ಜನಪ್ರೀಯ ಹಾಗೂ ಅತ್ಯಾಕರ್ಷಕ ಕನ್ಯೆ ದರ್ಪಣ ಸುಂದರಿಯ ಅದ್ಭುತ ಭಂಗಿ. ಮೋಹಕಗೊಳಿಸುವ ಭಂಗಿ.

ಚಿತ್ರಕೃಪೆ: Kamal Venkit

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X