Search
  • Follow NativePlanet
Share
» »ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

By Sowmyabhai

ಕೃಷ್ಣಾನದಿ ಸಾಗರದಲ್ಲಿ ಸೇರುವ ಪ್ರದೇಶವೇ ಹಂಸಲ ದೇವಿ. ಪುರಾಣ ಪ್ರಧಾನ್ಯತೆಯನ್ನು ಹೊಂದಿರುವ ಈ ಪ್ರದೇಶವನ್ನು ಹಿಂದೂಗಳು ಅತ್ಯಂತ ಪವಿತ್ರವಾದ ಸ್ಥಳವಾಗಿ ಭಾವಿಸುತ್ತಾರೆ. ಇನ್ನು ಇಲ್ಲಿರುವ ಸತ್ಯಭಾಮೆ ಸಮೇತ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ಒಂದೇ ರಾತ್ರಿಯಲ್ಲಿ ದೇವತೆಗಳು ನಿರ್ಮಾಣ ಮಾಡಿದರು ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಮಹರ್ಷಿಗಳು, ದೇವತೆಗಳಿಗೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಈ ಹಂಸಲ ದೇವಿ ಕೇಂದ್ರ ಬಿಂದು. ಈ ಹಂಸ ದೇವಿ ಪುರಾಣ ಪ್ರಧಾನ್ಯತೆ ಹೊಂದಿರುವ ಪ್ರದೇಶವೇ ಅಲ್ಲದೇ ಒಂದು ಪಿಕ್ನಿಕ್ ಸ್ಥಳ ಎಂದು ಕೂಡ ಹೆಸರುವಾಸಿಯಾಗಿದೆ. ಹೀಗಾಗಿಯೇ ವಾರಾಂತ್ಯದ ಸಮಯದಲ್ಲಿ ಇಲ್ಲಿಗೆ ಅನೇಕ ಮಂದಿ ಭೇಟಿ ನೀಡುತ್ತಿರುತ್ತಾರೆ.

ಈ ಸುಂದರವಾದ ಸ್ಥಳವು ವಿಜಯವಾಡದಿಂದ 110 ಕಿ.ಮೀ ದೂರದಲ್ಲಿರುವ ಈ ಹಂಸಲ ದೇವಿಗೆ ಸುಲಭವಾಗಿ ರಸ್ತೆ ಮಾರ್ಗದ ಮೂಲಕ ಕೂಡ ಸೇರಿಕೊಳ್ಳಬಹುದು. ಇಲ್ಲಿ ಸೌಕರ್ಯ ಸ್ವಲ್ಪ ಕಡಿಮೆ ಹಾಗಾಗಿಯೇ ನೀರಿನ ಜೊತೆ-ಜೊತೆಗೆ ಆಹಾರದ ಸಮೇತ ನಾವೇ ಅಲ್ಲಿಗೆ ತೆಗೆದುಕೊಂಡು ಹೋದರೆ ಒಳ್ಳೆಯದು.

1.ಪವಿತ್ರವಾದ ಗಂಗಾನದಿ

1.ಪವಿತ್ರವಾದ ಗಂಗಾನದಿ

PC:YOUTUBE

ಪಾಪಾತ್ಮರೆಲ್ಲಾ ಗಂಗಾನದಿಯಲ್ಲಿ ಸ್ನಾನವನ್ನು ಮಾಡಿ ಅವರ ಪಾಪಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಅವರ ಪಾಪಗಳನ್ನು ಗಂಗಾದೇವಿ ಸ್ವೀಕರಿಸುತ್ತಿದ್ದರಿಂದ ಆಕೆಯು ಅಪವಿತ್ರವಾಗುತ್ತಾ ಹೋದಳು. ಅಷ್ಟೇ ಅಲ್ಲದೇ ಆಕೆಯ ಬಣ್ಣವು ಕೂಡ ಕಪ್ಪಾಗಿ ಪರಿರ್ವತನೆಯಾಯಿತು.

2.ತನ್ನ ಪರಿಸ್ಥಿತಿಯನ್ನು ವಿಷ್ಣುವಿಗೆ ತಿಳಿಸಿದಳು

2.ತನ್ನ ಪರಿಸ್ಥಿತಿಯನ್ನು ವಿಷ್ಣುವಿಗೆ ತಿಳಿಸಿದಳು

PC:YOUTUBE

ಇದರಿಂದಾಗಿ ತನ್ನ ಬಾಧೆಯನ್ನು ಮಹಾವಿಷ್ಣುವಿನ ಹತ್ತಿರ ಹೋಗಿ ಹೇಳಿಕೊಂಡಳು ಗಂಗೆ. ವಿಷ್ಣುವಿನ ಸೂಚನೆಯ ಮೇರೆಗೆ ಗಂಗಾ ನದಿ ಕಾಗೆಯ ರೂಪದಲ್ಲಿ ದೇಶದಲ್ಲಿನ ಎಲ್ಲಾ ಪವಿತ್ರವಾದ ಸ್ಥಳಗಳಲ್ಲಿನ ತೀರ್ಥಗಳಲ್ಲಿ ಸ್ನಾನವನ್ನು ಮಾಡುತ್ತಾ ಬಂದಿತು.

3.ಕಪ್ಪು ಬಣ್ಣ ತೊಲಗಿತು..

3.ಕಪ್ಪು ಬಣ್ಣ ತೊಲಗಿತು..

PC:YOUTUBE

ಒಮ್ಮೆ ಕೃಷ್ಣಾನದಿ ಸಾಗರದ ಒಡಿಲಲ್ಲಿ ಸೇರುವ ಪ್ರದೇಶವೆಂದರೆ ಅದು ಪ್ರಸ್ತುತವಿರುವ ಹಂಸದೇವಿಯಲ್ಲಿ ಸ್ನಾನ ಮಾಡಿದ ತಕ್ಷಣವೇ ಕಪ್ಪಗಿನ ರೂಪವು ತೊಲಗಿ ಹಂಸವಾಗಿ ಮಾರ್ಪಾಟಾಯಿತು. ಅದ್ದರಿಂದಲೇ ಈ ಪ್ರದೇಶಗಳಿಗೆ ಹಂಸಲ ದೇವಿ ಎಂಬ ಹೆಸರು ಬಂದಿತು.

4.ಬ್ರಹ್ಮಾಂಡ ಪುರಾಣದಲ್ಲಿನ ಕಥೆಯ ಪ್ರಕಾರ

4.ಬ್ರಹ್ಮಾಂಡ ಪುರಾಣದಲ್ಲಿನ ಕಥೆಯ ಪ್ರಕಾರ

PC:YOUTUBE

ಬ್ರಹ್ಮಾಂಡ ಪುರಾಣದಲ್ಲಿನ ಕಥೆಯ ಪ್ರಕಾರ ಪೂರ್ವದಲ್ಲಿ ಇಲ್ಲಿ ಅನೇಕ ಮಂದಿ ಮಹಾಪುರುಷರು ತಪಸ್ಸು ಮಾಡುತ್ತಿದ್ದರಂತೆ. ಒಮ್ಮೆ ಅವರು ಒಂದು ದೊಡ್ಡ ಯಾಗವನ್ನು ಮಾಡಬೇಕು ಎಂದು ಭಾವಿಸಿದರು.

5.ಶೌನಕಾದಿ ಮಹರ್ಷಿಗಳನ್ನು ಕರೆದು..

5.ಶೌನಕಾದಿ ಮಹರ್ಷಿಗಳನ್ನು ಕರೆದು..

PC:YOUTUBE

ಇದಕ್ಕಾಗಿಯೇ ಶೌನಕಾದಿ ಮಹರ್ಷಿಗಳನ್ನು ಕರೆಸಿದರು. ಈ ಕ್ರಮದಲ್ಲಿಯೇ ಗೋದಾವರಿ ನದಿ ತೀರದಲ್ಲಿ ಕವಶ ಎಂಬ ಮಹರ್ಷಿ ಇದ್ದನು. ಆತನು ಬ್ರಾಹ್ಮಣ ಹಾಗೂ ಶೂದ್ರ ಜಾತಿಗೆ ಸೇರಿದ ಸ್ತ್ರೀಗೆ ಜನಿಸಿದವನು. ಆತನು ದೊಡ್ಡ ತಪಸ್ವಿ ಕೂಡ ಆಗಿದ್ದನು. ಆತನು ಕೆಲವು ಮಂದಿಗೆ ಮೋಕ್ಷ ಮಾರ್ಗವನ್ನು ಕೂಡ ಭೊದಿಸಿದ್ಧನು .

೬. ಕವಶ ಮಹರ್ಷಿ

೬. ಕವಶ ಮಹರ್ಷಿ

PC:YOUTUBE

ಈ ಕವಶ ಎಂಬ ಮಹರ್ಷಿ ಕೂಡ ಹಂಸಳ ದೇವಿಯ ಹತ್ತಿರ ನಡೆಯುವ ಯಾಗವನ್ನು ಕಾಣುವುದಕ್ಕಾಗಿ ತೆರಳಿದನು. ಅಲ್ಲಿರುವ ಕೆಲವು ಮಂದಿ ಋುಷಿಗಳು ಕವಶ ಮಹರ್ಷಿಯನ್ನು ಕಂಡು ಕೊಪಗೊoಡರು.

೭. ವೇಣುಗೋಪಾಲಸ್ವಾಮಿ ದೇವಾಲಯ

೭. ವೇಣುಗೋಪಾಲಸ್ವಾಮಿ ದೇವಾಲಯ

PC:YOUTUBE

ಕುಲ ಭ್ರಷ್ಟನಾದ ಕವಶ ನಿಂದಾಗಿ ಯಾಗವು ಅಪವಿತ್ರವಾಯಿತು ಎಂದು ಅನೇಕ ವಿಧವಾಗಿ ದೂಷಿಸಿದರು. ಕವಶ ಶಿಷ್ಯರು ಆ ಋುಷಿಗಳ ಮೇಲೆ ದಾಳಿ ಮಾಡಲು ಮುಂದಾದರು. ಆದರೆ ಶಾಂತ ಸ್ವರೂಪಿಯಾದ ಕವಶನು ಅಲ್ಲಿಯೇ ಸಮೀಪದಲ್ಲಿದ್ದ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ತೆರಳಿದನು.

೮.ಕೃಷ್ಣಾ ನದಿಯ ಪ್ರವಾಹ

೮.ಕೃಷ್ಣಾ ನದಿಯ ಪ್ರವಾಹ

PC:YOUTUBE

ತನಗೆ ನಡೆದ ಅವಮಾನವನ್ನು ಭರಿಸದ ಅವನು ಮನನೊಂದು ಕೊಳ್ಳುತ್ತಿರುವಾಗ ನಿರ್ಮಲವಾಗಿ ಪ್ರವಹಿಸುತ್ತಿರುವ ಕೃಷ್ಣಾ ನದಿಯು ಒಮ್ಮೆಯೇ ಪ್ರವಾಹವು ಉಕ್ಕಿ ಹರಿಯಿತು.

೯.ವೇಣುಗೋಪಾಲಸ್ವಾಮಿ

೯.ವೇಣುಗೋಪಾಲಸ್ವಾಮಿ

PC:YOUTUBE

ಆ ಪ್ರವಾಹವು ವೇಣುಗೋಪಾಲಸ್ವಾಮಿ ಪಾದವನ್ನು ತಾಕಿಸಿ ಮಹರ್ಷಿಯ ಸುತ್ತ ತಿರುಗಿ ಯಾಗ ಮಾಡುತ್ತಿದ್ದ ಸ್ಥಳಕ್ಕೆ ಹೋಯಿತು . ಯಾಗ ಕುಂಡವೆಲ್ಲ ನೀರಿನಲ್ಲಿ ಮುಳುಗಿ ಅವನಿಗೆ ನಿಂದಿಸಿದವರೆಲ್ಲ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು .

೧0. ಕೃಷ್ಣಾ ನದಿ ಶಾಂತಿ

೧0. ಕೃಷ್ಣಾ ನದಿ ಶಾಂತಿ

PC:YOUTUBE

ಕವಶ ಸೂಚನೆಯ ಮೇರೆಗೆ ವೇಣುಗೋಪಾಲ ಸ್ವಾಮಿಯನ್ನು ಬೇಡಿಕೊಂಡರು ಇದರ ಪರಿಣಾಮವಾಗಿ ಕೃಷ್ಣಾ ನದಿಯು ಶಾಂತಿಯಾಗಿ ಪ್ರವಹಿಸಲು ಪ್ರಾರಂಭವಾಯಿತು. ಇದರಿಂದಾಗಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆಯೇ ಯಾಗವು ಮುಂದುವರಿಯಿತು ಎಂಬುದು ಇಲ್ಲಿನ ಸ್ಥಳ ಪುರಾಣ.

೧೧.ಈ ಪ್ರದೇಶವು ಅತ್ಯಂತ ಪವಿತ್ರವಾದದ್ದು

೧೧.ಈ ಪ್ರದೇಶವು ಅತ್ಯಂತ ಪವಿತ್ರವಾದದ್ದು

PC:YOUTUBE

ಕವಶ ಮಹರ್ಷಿಯ ಈ ಘಟನೆ ನಡೆದ ನಂತರ ಈ ಪ್ರಾಂತ್ಯವು ಅತ್ಯಂತ ಪವಿತ್ರವಾದದ್ದು ಎಂದು ಪುರಾಣದಲ್ಲಿ ಲಿಖಿತವಾಗಿದೆ. ಇಲ್ಲಿ ಸ್ನಾನವನ್ನು ಆಚರಿಸಿ ವೇಣುಗೋಪಾಲ ಸ್ವಾಮಿಗೆ ಅರ್ಚನೆಯನ್ನು ಮಾಡಿದರೆ ಸಕಲ ಪಾಪಗಳು ತೊಲಗಿ ಹೋಗುತ್ತದೆ ಎಂಬುದು ಜನರ ಪ್ರಕಾರವಾದ ನಂಬಿಕೆ.

೧೨.ದೇವತೆಗಳು ನಿರ್ಮಿಸಿದ ದೇವಾಲಯ

೧೨.ದೇವತೆಗಳು ನಿರ್ಮಿಸಿದ ದೇವಾಲಯ

PC:YOUTUBE

ಇನ್ನು ಇಲ್ಲಿ ನೆಲೆಸಿರುವ ವೇಣುಗೋಪಾಲಸ್ವಾಮಿ ದೇವಾಲಯವನ್ನು ಸ್ವತಃ ದೇವತೆಗಳೇ ಒಂದೇ ರಾತ್ರಿಯಲ್ಲಿ ನಿರ್ಮಿಸಿದರು ಎಂದು ನಂಬಲಾಗಿದೆ. ಸೂರ್ಯೋದಯ ವಾಗುತ್ತಿದೆ ಎಂದು ತಿಳಿದ ದೇವತೆಗಳು ಸ್ಥಾನಿಕ ಪ್ರಜೆಗಳು ಕಾಣುತ್ತಾರೆ ಎಂಬ ಭಯದಿಂದ ಅಲ್ಲಿಂದ ಹೊರಟು ಹೋದರು. ಹೀಗಾಗಿಯೇ ವೇಣುಗೋಪಾಲಸ್ವಾಮಿ ದೇವಾಲಯದ ರಾಜಗೋಪುರ ಅಸಂ ಪೂರ್ತಿಯಾಗಿ ಉಳಿಯಿತು .

೧೩.ನೀಲಿ ಮೇಘದ ಛಾಯೆ

೧೩.ನೀಲಿ ಮೇಘದ ಛಾಯೆ

PC:YOUTUBE

ಸಾಧಾರಣವಾಗಿ ಯಾವ ದೇವಾಲಯದಲ್ಲಿ ನೋಡಿದರೂ ವಿಗ್ರಹವು ಕಪ್ಪು ಬಣ್ಣದಲ್ಲಿರುತ್ತದೆ. ಆದರೆ ಈ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿರುವ ವಿಗ್ರಹವು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ವಿಗ್ರಹ ನೀಲ ಮೇಘ ಬಣ್ಣದಲ್ಲಿ ಕಂಗೊಳಿಸುತ್ತಿದೆ.

೧೦. ಕ್ಷಮೆಯನ್ನೂ ಯಾಚಿಸಿದರು

೧೦. ಕ್ಷಮೆಯನ್ನೂ ಯಾಚಿಸಿದರು

PC:YOUTUBE

ಇದರ ಪರಿಣಾಮ ಶೌನಕಾದಿ ಮಹರ್ಷಿ ತಮ್ಮ ದಿವ್ಯ ದೃಷ್ಟಿಯಿಂದಾಗಿ ಕಾರಣವನ್ನು ತಿಳಿದುಕೊಂಡು ಕವಚ ಮಹರ್ಷಿಯ ಸಮೀಪಕ್ಕೆ ತೆರಳಿದರು. ಅವಶ್ಯ ನನ್ನು ಕಂಡು ತಮ್ಮನ್ನು ಕ್ಷಮಿಸು ಎಂದು ಬೇಡಿಕೊಂಡರು ಅದಕ್ಕೆ ಕವಶನು ನಿಮ್ಮನ್ನು ಕ್ಷಮಿಸುವಷ್ಟು ದೊಡ್ಡವನು ತಾನು ಅಲ್ಲವೆಂದು ಆ ದೇವನಾದ ವೇಣುಗೋಪಾಲ ಸ್ವಾಮಿಯನ್ನು ಬೇಡಿಕೊಳ್ಳಿ ಎಂದು ಸೂಚಿಸಿದರು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more