Search
  • Follow NativePlanet
Share
» »ಅಟಲ್‌ ಬಿಹಾರಿ ವಾಜಪೇಯಿಯವರ ಹುಟ್ಟೂರಿನ ವಿಶೇಷತೆ ಏನು ತಿಳಿಯಿರಿ

ಅಟಲ್‌ ಬಿಹಾರಿ ವಾಜಪೇಯಿಯವರ ಹುಟ್ಟೂರಿನ ವಿಶೇಷತೆ ಏನು ತಿಳಿಯಿರಿ

ಭಾರತ ದೇಶ ಕಂಡ ಅದ್ಭುತ ರಾಜಕಾರಣಿಯರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡಾ ಒಬ್ಬರು. ಇವರು ಒಬ್ಬ ಬಲಿಷ್ಠ ರಾಜಕಾರಣಿ ಜೊತೆಗೆ, ಕವಿ, ಪತ್ರಕರ್ತರೂ ಆಗಿದ್ದರು. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಎಲ್ಲರಿಗೂ ಮಾದರಿಯಾಗಿದ್ದ ವ್ಯಕ್ತಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?

ಹುಟ್ಟಿದ್ದು ಎಲ್ಲಿ?

ಹುಟ್ಟಿದ್ದು ಎಲ್ಲಿ?

PC: YashiWong

ವಾಜಪೇಯಿ ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಹಲವು ಪುರಾತನವಾದ ದೇವಾಲಯಗಳು, ಪುರಾತನವಾದ ರಾಜಮನೆತನಗಳು. ಉತ್ತರ ಭಾರತದ ಸಾಮ್ರಾಜ್ಯಗಳ ಪ್ರಸಿದ್ಧವಾದ ಆಡಳಿತ ಕೇಂದ್ರವಾಗಿದ್ದ ದಟ್ಟವಾದ ಗ್ವಾಲಿಯರ್ ಕೋಟೆ ಇಲ್ಲಿದೆ.

ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?

ಆಕರ್ಷಣೀಯ ಗ್ವಾಲಿಯರ್

ಆಕರ್ಷಣೀಯ ಗ್ವಾಲಿಯರ್

PC:Kausik.dr

ಗ್ವಾಲಿಯರ್‌ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಅವುಗಳಲ್ಲಿ, ಗ್ವಾಲಿಯರ್ ಕೋಟೆ, ಮನ್ಮಂದಿರ್ ರಾಜಮನೆತನ, ಜಾಯ್ ವಿಲಾಸ್ ಮಹಲ್ ಮುಂತಾದವುಗಳು ಸೇರಿವೆ.

ಗ್ವಾಲಿಯರ್ ಕೋಟೆ

ಗ್ವಾಲಿಯರ್ ಕೋಟೆ

PC: Gyanendrasinghchauha...

ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ನಗರದ ಕೇಂದ್ರದಲ್ಲಿ ಈ ಕೋಟೆ ಸ್ಥಾಪಿಸಲಾಗಿದೆ. ಎಂಟನೇ ಶತಮಾನದ ಇದು ಭಾರತದ ಅತ್ಯಂತ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಎತ್ತರವಾದ ವಿಗ್ರಹಗಳನ್ನು ಹೊಂದಿರುವ ಗೋಪುರಗಳು, ಸುಂದರವಾದ ಕೆತ್ತನೆಯ ವಿಗ್ರಹಗಳನ್ನು ಹೊಂದಿದೆ. ಕೋಟೆಯೊಳಗೆ ಒಳಗೆ 9 ನೇ ಶತಮಾನದ ದೇವಸ್ಥಾನವನ್ನು ಕಾಣಬಹುದು.

ಕಮಲ್‌ಘಡ್‌ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ

ಜಾಯ್ ವಿಲಾಸ್ ಮಹಲ್

ಜಾಯ್ ವಿಲಾಸ್ ಮಹಲ್

PC: Shobhit Gosain

ಜಾಯ್ ವಿಲಾಸ್ ಮಹಲ್ ಎಂಬ ರಾಜಮನೆತನವನ್ನು 1809 ರಲ್ಲಿ ಜಿಯಾಜಿ ರಾವ್ ಸಿಡಿಯದವರು ಕಟ್ಟಿಸಿದರು. ಇಟಲಿ ಮತ್ತು ಫ್ರಾನ್ಸ್‌ನಿಂದ ಬಂದಾಗಿದ್ದ ಕಲಾಕೃತಿಗಳು ಮಲಂ ಅನ್ನು ನಿರ್ಮಿಸಲಾಗಿದೆ. ಇನ್ನೂ ಈ ಕೋಟೆಯ ಒಂದು ಭಾಗದಲ್ಲಿ ಈ ವಸ್ತುಗಳ ಸಂಗ್ರಹ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ಹಾಥೀ ಪೂಲ್

ಹಾಥೀ ಪೂಲ್

ಹಾಥೀ ಪೂಲ್ ಗ್ವಾಲಿಯರ್ ಕೋಟೆಯ ಮುಖ್ಯ ಪ್ರವೇಶ ದ್ವಾರಗಳಲ್ಲಿ ಒಂದಾಗಿದೆ . ಇದು ಗ್ವಾಲಿಯರ್ ಕೋಟೆಯ ಏಳನೇ ಪ್ರವೇಶ ದ್ವಾರವಾಗಿದೆ. ಈ ಗೇಟ್‌ ಮೂಲಕ ಮನ್‌ ಮಂದಿರ್‌ ಪ್ಯಾಲೇಸ್‌ಗೆ ನೇರ ಪ್ರವೇಶಿಸಬಹುದು. ಹಿಂದೆ ಈ ಗೇಟ್‌ನ ಬಳಿ ಒಂದು ದೊಡ್ಡ ಆನೆಯಷ್ಟು ಗಾತ್ರದ ಕಲ್ಲಿನ ಆನೆಯ ಶಿಲ್ಪವಿತ್ತು. ಹಾಗಾಗಿ ಆ ಗೇಟ್‌ಗೆ ಹಾಥಿ ಪೂಲ್ ಎನ್ನುವ ಹೆಸರಿಟ್ಟಿರಬಹುದು ಎನ್ನಲಾಗುತ್ತದೆ.

ಥಿಗ್ರಾ ಅಣೆಕಟ್ಟು

ಥಿಗ್ರಾ ಅಣೆಕಟ್ಟು

PC:Ameybarve27

ಅಣೆಕಟ್ಟಿಗೆ ಪ್ರವಾಸಕ್ಕೆ ಹೋಗಬೇಕಾದರೆ ಥಿಗ್ರಾ ಅಣೆಕಟ್ಟು ಸೂಕ್ತವಾಗಿದೆ. ನಗರದಿಂದ ಸ್ವಲ್ಪ ದೂರದಲ್ಲಿದೆ ಇದು ಗ್ವಾಲಿಯರ್ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವುದು ಇಲ್ಲಿಂದಲೇ.

ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ಕೋಗರ್ ಮಹಲ್

ಕೋಗರ್ ಮಹಲ್

ದೇಶದಲ್ಲಿರುವ ಪುರಾತತ್ವ ಮ್ಯೂಸಿಯಂಗಳಲ್ಲಿ ಈ ಕೋಗರ್ ಮಹಲ್ ಕೂಡಾ ಒಂದಾಗಿದೆ. ಇಲ್ಲಿ, 9 ಸಾವಿರಕ್ಕೂ ಹೆಚ್ಚಿನ ಸಮಯದ ಆಯ್ಯ ವಸ್ತುಗಳು ಸಾರ್ವಜನಿಕರ ದೃಷ್ಟಿಕೋನಕ್ಕೆ ಇರಿಸಲಾಗಿದೆ. ಇವುಗಳಲ್ಲಿ, ಅಮೂಲ್ಯವಾದ ಮಣಿ ಬೆರಳುಗಳು, ಆಭರಣಗಳು, ಸುಡುಮಣ್ಣು ವಸ್ತುಗಳು, ಯುದ್ಧದ ಶಸ್ತ್ರಾಸ್ತ್ರಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more