Search
  • Follow NativePlanet
Share
» »ಗೋವರ್ಧನ ಪರ್ವತಕ್ಕೆ ಪರಿಕ್ರಮ ಹಾಕಿದ್ರೆ ಮನೋಕಾಮನೆ ಈಡೇರುತ್ತಂತೆ

ಗೋವರ್ಧನ ಪರ್ವತಕ್ಕೆ ಪರಿಕ್ರಮ ಹಾಕಿದ್ರೆ ಮನೋಕಾಮನೆ ಈಡೇರುತ್ತಂತೆ

PC: Shahadin

ಮಥುರಾದ ಹತ್ತಿರವಿರುವ ಗೋವರ್ಧನವು ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳವಾಗಿದೆ. ಇಲ್ಲಿನ ಗೋವರ್ಧನ ಪರ್ವತ ಹಾಗೂ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲಿ ಸ್ವರ್ಗದಿಂದ ಇಳಿದು ಬಂದ ಕೃಷ್ಣನ ಲೀಲೆಯೂ ಒಂದು.

ಇನ್ನೊಂದು ಕಥೆಯ ಪ್ರಕಾರ

ಇನ್ನೊಂದು ಕಥೆಯ ಪ್ರಕಾರ

PC:Ekabhishek
ಒಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಾಗ ವ್ರಜ ಗ್ರಾಮದ ಜನರನ್ನು ಮಳೆಯಿಂದ ರಕ್ಷಿಸಲು ತನ್ನ ಕೈಗಳಿಂದ ಪರ್ವತವನ್ನು ಏಳು ದಿನದವರೆಗೆ ಎತ್ತಿ ಹಿಡಿದಿದ್ದು. ಯಾರು ಗೋವರ್ಧನದ ಪರಿಕ್ರಮ ಮಾಡುತ್ತಾರೋ ಅವರ ಕಾಮನೆಗಳು ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಅದಲ್ಲದೇ, ಇಲ್ಲಿ ದೇವರ ದೊಡ್ಡ ವಿಗ್ರಹವಿದ್ದು ಆಸುಪಾಸಿನ ಭಾಗದ ಜನತೆಗೆ ಆಧ್ಯಾತ್ಮಿಕ ಭಾವನೆಯನ್ನು ಈ ಸ್ಥಳ ನೀಡುತ್ತದೆ.

ಗೋವರ್ಧನ್ ಪಕ್ಕವಿರುವ ಯಾತ್ರಾ ಸ್ಥಳಗಳು

ಗೋವರ್ಧನ್ ಪಕ್ಕವಿರುವ ಯಾತ್ರಾ ಸ್ಥಳಗಳು

PC: Gyanendra_Singh

ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಕೃಷ್ಣ ದೇವರಿಗೆ ಸಂಬಂಧಿಸಿದ ಹರ್ ದೇವಜಿ ದೇವಾಲಯ. ಇಲ್ಲಿ ಸುಂದರವಾದ ರಾಧಾ ಮತ್ತು ಕೃಷ್ಣನ ಮೂರ್ತಿಯಿದ್ದು ಅವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ರಾಧಾಕುಂಡ ಅಥವಾ ಸರೋವರ, ಇಲ್ಲಿ ರಾಧಾ ಮತ್ತು ಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ ಕುಸುಮ ಸರೋವರ ಎನ್ನುವ ಪವಿತ್ರವಾದ ಕೆರೆಯಿದೆ. ಅಲ್ಲಿ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣನಿಗಾಗಿ ಕಾಯುತ್ತಿದ್ದರು ಎನ್ನುವುದು ಪ್ರತೀತಿ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Gyanendra
ಇಲ್ಲಿಗೆ ಭೇಟಿ ನೀಡಲು ಯಾವ ಸಮಯ ಸೂಕ್ತ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಗೋವರ್ಧನಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯ. ಈ ತಿಂಗಳುಗಳಲ್ಲಿ ವಾತಾವರಣವು ಉತ್ತಮವಾಗಿರುತ್ತದೆ. ಈ ಜಾಗವು ಒಂದು ಯಾತ್ರಾ ಸ್ಥಳವಾದುದರಿಂದ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಗೋವರ್ಧನಕ್ಕೆ ತಲುಪುದು ಹೇಗೆ?

ಗೋವರ್ಧನಕ್ಕೆ ತಲುಪುದು ಹೇಗೆ?

PC: Anil Kaushik
ಗೋವರ್ಧನಕ್ಕೆ ರೈಲಿನ ಮೂಲಕ ತಲುಪಲು ಉತ್ತಮ ಸಂಪರ್ಕವಿದೆ. ವಿಮಾನ ನಿಲ್ದಾಣ ಇರುವ ದೆಹಲಿಯಿಂದ ಗೋವರ್ಧನ್ 150 ಕಿಲೋಮೀಟರ್ ದೂರದಲ್ಲಿದೆ. ರೈಲ್ವೆ ನಿಲ್ದಾಣವು ಮಥುರಾದಲ್ಲಿದೆ, ಅಲ್ಲಿ ಪಟ್ಟಣವನ್ನು ತಲುಪಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು, ಇದು ಸುಮಾರು 23 ಕಿಲೋಮೀಟರ್ ದೂರದಲ್ಲಿದೆ. ಪ್ರವಾಸಿ ಬಸ್ಸುಗಳು ಮತ್ತು ಮಥುರಾದಿಂದ ಪ್ರಯಾಣಿಸಲು ಒಂದೇ ಸಾಲಿನ ವಿದ್ಯುತ್ ರೈಲು ಸಹ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X