Search
  • Follow NativePlanet
Share
» »ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ

ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ

ಯಾರಿಗೆ ತಾನೇ ಹೊಸ ಹೊಸ ಪ್ರದೇಶಗಳನ್ನು ಸುತ್ತುವುದು ಇಷ್ಟ ಇರೋದಿಲ್ಲ. ಆದರೆ ಬಹುತೇಕರಿಗೆ ಪ್ರಯಾಣಿಸೋದು ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಇಷ್ಟವಿದ್ದರೂ ಹೋಗೋಕೆ ಆಗೋಲ್ಲ. ಅದಕ್ಕೆ ಅನೇಕ ಕಾರಣಗಳಿರಬಹುದು. ಕೆಲವರಿಗೆ ಬಜೆಟ್ ಕೊರತೆಯಾದರೆ ಇನ್ನೂ ಕೆಲವರಿಗೆ ಹಣವಿದ್ದರೂ ಹೋಗೋಕೆ ಆಗಲ್ಲ. ಕಾರಣ ವಾಂತಿಯ ಸಮಸ್ಯೆ. ನಮ್ಮಲ್ಲಿ ಅನೇಕರು ದೂರದ ರಾಜ್ಯಗಳಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಮಾಡುತ್ತಾರೆ. ಅದಕ್ಕಾಗಿ ಬಹುತೇಕರು ರೈಲನ್ನೇ ಪ್ರಯಾಣದ ಮಾಧ್ಯಮವನ್ನಾಗಿಸಿದ್ದಾರೆ.

ಕಠಿಣ ಪ್ರಯಾಣ

ಕಠಿಣ ಪ್ರಯಾಣ

PC: youtube

ಕರ್ನಾಟಕದ ಮಡಿಕೇರಿ, ಶಿವಮೊಗ್ಗ, ಮೂಡಿಗೆರೆ ಕಡೆ ಹೋಗುತ್ತೀರೆಂದಾದರೆ ನಿಮಗೆ ಹೋಗುತ್ತೀರೆಂದಾದರೆ ಅಲ್ಲಿ ನಿಮಗೆ ಘಾಟ್ ಸೆಕ್ಷನ್‌ ಸಿಗುತ್ತದೆ. ಈ ಘಾಟ್‌ ಸೆಕ್ಷನ್‌ ಹೇಗಿರುತ್ತದೆ ಅಂತಾ ನಿಮಗೆ ಗೊತ್ತೇ ಇದೆ. ಖಂಡಿತಾ ವಾಂತಿ ಮಾಡೇ ಮಾಡುತ್ತೀರಿ. ಹೆಚ್ಚಿನವರಿಗೆ ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣ ಬೆಳೆಸುವುದೆಂದರೆ ತುಂಬಾನೇ ಕಷ್ಟವಾಗುತ್ತದೆ. ಬಸ್‌ನಲ್ಲಾಗಲೀ, ಕಾರ್‌ನಲ್ಲಾಗಲೀ ಪ್ರಯಾಣಿಸುವುದು ಕಷ್ಟಕರವಾಗಿ ಬಿಡುತ್ತದೆ. ಕಾರ್‌ನಲ್ಲಿ ಹಿಂಬದಿ ಕುಳಿತುಕೊಂಡ ವ್ಯಕ್ತಿಗೆ ಪ್ರಯಾಣಿಸೋದು ಕಷ್ಟವಾಗಿರುವಾಗ ಇನ್ನು ಕಾರನ್ನು ಚಲಾಯಿಸುವವನ ಸ್ಥಿತಿ ಹೇಗಾಗಬೇಡ ಹೇಳಿ.

ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಘಾಟ್ ಸೆಕ್ಷನ್

ಘಾಟ್ ಸೆಕ್ಷನ್

ಚಿಕ್ಕಮಗಳೂರು, ಮಡಿಕೇರಿ, ಮೂಡಿಗೆರೆಯ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಹೋಗಲು ಮನಸಾಗುತ್ತದೆ. ಆದರೆ ಈ ಘಾಟ್‌ ಸೆಕ್ಷನ್‌ಗಳೇ ಮುಳುವಾಗಿ ಬಿಡುತ್ತವೆ. ಇಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿಕೊಂಡೇ ಪ್ರಯಾಣಿಸಬೇಕು. ಇಲ್ಲವಾದಲ್ಲಿ ಮಲಗಿರಬೇಕು ಆಗ ಮಾತ್ರ ಘಾಟ್ ಸೆಕ್ಷನ್ ಹೋದದ್ದೇ ಗೊತ್ತಾಗುವುದಿಲ್ಲ. ಇಲ್ಲವಾದಲ್ಲಿ ನಿಮ್ಮ ಆರೋಗ್ಯ ಹದಗೆಡುವುದರಲ್ಲಿ ಸಂಶಯವೇ ಇಲ್ಲ.

ಚಾರ್ಮಾಡಿ ಘಾಟ್‌

ಚಾರ್ಮಾಡಿ ಘಾಟ್‌

PC: Simple-man-everyday

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದುಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಹಾಗಾಗಿ ಈ ಘಟ್ಟಗಳಿಗೆ ಚಾರ್ಮಾಡಿ ಘಟ್ಟ ಎಂಬ ಹೆಸರು ಬಂದಿದೆ.

ಶಿರಾಡಿ ಘಾಟ್

ಶಿರಾಡಿ ಘಾಟ್

ಇದು ಒಂದು ಹಳ್ಳಿಯಾಗಿದ್ದು, ಮಂಗಳೂರುನಿಂದ ಬೆಂಗಳೂರಿಗೆ ಸಾಗುವ ರಸ್ತೆ ಮಧ್ಯ ಸಿಗುತ್ತದೆ. ಈ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ತಾಲ್ಲೂಕಿನಲ್ಲಿದೆ. ಸುಮಾರು 15 ಕಿ.ಮೀ ದೂರದಲ್ಲಿರುವ ನೀಲಿಯಾಡಿ ಹತ್ತಿರದ ಪಟ್ಟಣವಾಗಿದೆ. ಈಗಿನ NH-75 ಮೂಲಕ ಹಾದುಹೋಗುವ ಪಶ್ಚಿಮ ಘಟ್ಟಗಳ ಘಾಟ್ ವಿಭಾಗವನ್ನು ಶಿರಾಡಿ ಘಾಟ್ ಎಂದು ಕರೆಯಲಾಗುತ್ತದೆ .

ಈ ಸೀಸನ್‌ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು

ಬಿಸಿಲೆ ಘಾಟ್‌

ಬಿಸಿಲೆ ಘಾಟ್‌

PC: youtube

ಇದು ಸಕಲೇಶಪುರದಿಂದ ಸುಮಾರು 25ಕಿ.ಮೀ ದೂರವಿರುವ ಬಿಸಿಲೆ ಎಂಬ ಗ್ರಾಮದಿಂದ ಪ್ರಾರಂಭವಾಗಿ ಕುಕ್ಕೆ ಸುಬ್ರಮಣ್ಯ ಹತ್ತಿರದವರೆಗೆ ಇದೆ. ಇಲ್ಲಿ ಅರಣ್ಯ ಇಲಾಖೆಯವರು ಬಿಸಿಲೆ ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಈ ಗೋಪುರದಿಂದ ಕುಮಾರ ಪರ್ವತ, ಪುಷ್ಪಗಿರಿ ಬೆಟ್ಟ,ದೊಡ್ಡ ಬೆಟ್ಟ, ಪಟ್ಲ ಬೆಟ್ಟ, ಏಣಿಕಲ್ಲು ಬೆಟ್ಟ ಹಾಗು ಗಿರಿ ಹೊಳೆಯನ್ನು ನೋಡಬಹುದು.

ವಾಂತಿ ಬರದಂತೆ ಟಿಪ್ಸ್

ವಾಂತಿ ಬರದಂತೆ ಟಿಪ್ಸ್

ಘಾಟ್ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರಬಾರಾದ್ರೆ ಇಲ್ಲಿದೆ ಕೆಲವು ಟಿಪ್ಸ್..

ಶುಂಠಿಯಲ್ಲಿರುವ ಸತ್ವವು ನಿಮ್ಮನ್ನು ವಾಂತಿ ಬಾರದಂತೆ, ತಲೆ ಸುತ್ತು ಬಾರದಂತೆ ತಡೆಯುತ್ತದೆ. ಅದಕ್ಕಾಗಿ ಪ್ರಯಾಣಿಸುವ ಮೊದಲು ಶುಂಠಿ ಚಹಾ ಅಥವಾ ಶುಂಠಿಯ ಮಾತ್ರೆಯನ್ನು ತಿನ್ನಿ.

ವಾಂತಿ ಬರುವಂತಾಗುವುದಾದರೆ ಲವಂಗವನ್ನು ಬಾಯಿಗೆ ಹಾಕಿಕೊಳ್ಳಿ.

ಪ್ರಯಾಣಕ್ಕಿಂತ ಒಂದು ಗಂಟೆ ಮೊದಲು ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಶುಂಠಿ ರಸ ಹಾಕಿ ಸೇವಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X