Search
  • Follow NativePlanet
Share
» »ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...

ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...

ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದನು. ಅವರ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ದೇವಾಲಯಗಳು, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು. 15 ವರ್ಷ ಕಾಲ ನಿರಂತರ ಪರಿಶ್ರಮದಿಂದ 800 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಅತ್ಯಾಕರ್ಷಣೀಯ ಕೋಟೆ ನಿರ್ಮಿಸಲಾಗಿದೆ. ಗದಗ ಜಿಲ್ಲೆಯಲ್ಲಿರುವ ಈ ಕೋಟೆಯನ್ನು ನೀವು ಸಾಕಷ್ಟು ಸಿನಿಮಾಗಳಲ್ಲಿ ನೋಡಿರಬಹುದು. ಆ ಕೋಟೆಯೇ ಗಜೇಂದ್ರಗಡ.

ಎಲ್ಲಿದೆ ಈ ಗಜೇಂದ್ರಗಡ?

ಎಲ್ಲಿದೆ ಈ ಗಜೇಂದ್ರಗಡ?

PC:Manjunath Doddamani

ಗಜೇಂದ್ರಗಡ ಕೋಟೆಯು ಗದಗ ಜಿಲ್ಲೆಯಲ್ಲಿದೆ. ಬೆಟ್ಟ ಗುಡ್ಡಗಳಿಗಾಗಿಯೇ ಪ್ರಸಿದ್ಧವಾಗಿದೆ ಈ ಸ್ಥಳ. ಗದಗದಿಂದ ಸುಮಾರು 55 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿಯಿಂದ ಸುಮಾರು 110 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ 450 ಕಿ.ಮೀ ದೂರದಲ್ಲಿದೆ. ಆನೆಯಾಕಾರದಲ್ಲಿದೆ ಈ ನಗರ ಆನೆ ಹಾಗೂ ಕೋಟೆಯನ್ನು ಒಟಾಗಿ ಸೇರಿಸಿ ಗಜೇಂದ್ರಗಡ ಎನ್ನಲಾಗುತ್ತದೆ. ಯಾಕೆಂದರೆ ಈ ಸ್ಥಳವು ಮೇಲಿನಿಂದ ನೋಡಿದಾಗ ಅಂದರೆ ಪಕ್ಷಿನೋಟದಿಂದ ನೋಡಿದಾಗ ಆನೆಯಾಕಾರದಲ್ಲಿ ಕಾಣಿಸುತ್ತದೆ. ಗದಗ ಜಿಲ್ಲೆಯಲ್ಲಿನ ದೊಡ್ಡ ನಗರ ಇದಾಗಿದೆ.

ತೆಲುಗು ಸಿನಿಮಾಗಳ ಶೂಟಿಂಗ್ ಕೂಡಾ ನಡೆಯುತ್ತೆ

ತೆಲುಗು ಸಿನಿಮಾಗಳ ಶೂಟಿಂಗ್ ಕೂಡಾ ನಡೆಯುತ್ತೆ

PC: Manjunath Doddamani

ಈ ಕೋಟೆಯಲ್ಲಿ ಬರೀ ಕನ್ನಡ ಸಿನಿಮಾಗಳಷ್ಟೇ ಅಲ್ಲ ತೆಲುಗು ಸಿನಿಮಾಗಳ ಶೂಟಿಂಗ್ ಕೂಡಾ ನಡೆದಿದೆ. ಡಮರುಗಮ್, ಅಲ್ಲುಡು ಸೀನು, ಬೃಂದಾವನಮ್ , ಬಲುಪು ಭರ್ಜರಿ ಹಾಗೂ ಇನ್ನಿತರ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಕೋಟೆ ಪ್ರವೇಶಿಸುತ್ತಿದ್ದಂತೆ ಕುದುರೆ ಮೇಲೆ ಕುಳಿತು ಖಡ್ಗ ಬೀಸಿದ ಭಂಗಿಯ ಬಾಳಜಿ ಬಾಜಿರಾವ್ ಪೇಶ್ವೆಯರ ಚಿತ್ರ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ.

ಕಾಲಕೇಶ್ವರ ದೇವಸ್ಥಾನ

ಕಾಲಕೇಶ್ವರ ದೇವಸ್ಥಾನ

PC: Manjunath Doddamani

 ಇದನ್ನೂ ಓದಿ:ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ? ಇದನ್ನೂ ಓದಿ:ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಮದ್ದಿನ ಮನೆ ಹಾಗೂ ತೊಟ್ಟಿಲು ಹುಡೆ

ಮದ್ದಿನ ಮನೆ ಹಾಗೂ ತೊಟ್ಟಿಲು ಹುಡೆ

PC: Manjunath Doddamani

ವೈರಿ ಪಡೆ ದಾಳಿ ಎದುರಿಸಲು ಕೋಟೆಯ ಪ್ರವೇಶ ದ್ವಾರದ ಬಳಿ ಪಶ್ಚಿಮಕ್ಕೆ ಮದ್ದಿನ ಮನೆ ಹಾಗೂ ತೊಟ್ಟಿಲು ಹುಡೆ ನಿರ್ಮಿಸಲಾಗಿದೆ. ಕೋಟೆಯ ಒಳಗಿನಿಂದ ಪಿರಂಗಿ ಹಾರಿಸಿ ವೈರಿ ಗಳನ್ನು ಸೆದೆ ಬಡಿಯಲು ಮದ್ದು, ಗುಂಡುಗಳ ಸಂಗ್ರಹಕ್ಕಾಗಿ ಮದ್ದಿನ ಮನೆ ನಿರ್ಮಿಸಲಾಗಿದೆ. ವೈರಿ ಸೆನ್ಯ ಗಜೇಂದ್ರಗಡ ಪ್ರವೇಶಕ್ಕೆ ನಾಲ್ಕು ದಿಕ್ಕಿನಲ್ಲೂ 10 ರಿಂದ 15 ಕಿ.ಮೀ ದೂರವಿರುವಾಗ ನೋಡಲು ದಕ್ಷಿಣಕ್ಕೆ ತೊಟ್ಟಿಲು ಹುಡೆ ನಿರ್ಮಿಸಿದ್ದು, ಕಾವಲು ಪಡೆ ಸಿಬ್ಬಂದಿ ಇದರ ಮೇಲೆ ನಿಂತು ವೈರಿ ಪಡೆಯ ಪ್ರವೇಶ ಖಚಿತ ಪಡಿಸಿಕೊಳ್ಳುತ್ತಿದ್ದರು.

ಹುಲಿ ಹೊಂಡ

ಹುಲಿ ಹೊಂಡ

PC:Manjunath Doddamani

ತೊಟ್ಟಿಲು ಹುಡೆದ ಹಿಂಭಾಗದಲ್ಲಿ ಹುಲಿ ಹೊಂಡವಿದೆ. ಈ ಹೊಂಡದ ಪಶ್ಚಿಮ ದಿಕ್ಕಿಗೆ ಹುಲಿ, ಪೂರ್ವ ದಿಕ್ಕಿಗೆ ಬಸವಣ್ಣನ ಪ್ರತಿಮೆ ಇದೆ. ಹುಲಿಯ ಪ್ರತಿಮೆ ಪರಾಕ್ರಮದ ಸಂಕೇತವಾದರೆ, ನಂದಿ ಪೂಜ್ಯತೆ ಹಾಗೂ ನಮ್ರತೆಯ ಸಂಕೇತವಾಗಿದೆ. ಅಕ್ಕ-ತಂಗಿಯರ ಹೊಂಡಗಳಿವೆ. ಮಳೆಗಾಲದಲ್ಲಿ ಈ ಹೊಂಡಗಳ ಸೌಂದರ್ಯ ಇಂದಿಗೂ ಅಮೋಘ.

Read more about: fort india karnataka travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X