Search
  • Follow NativePlanet
Share
» »ರಸ್ತೆ ಪ್ರಯಾಣದ ಸಮಯದಲ್ಲಿ ಇವುಗಳನ್ನು ಸೇವಿಸದಿದ್ದರೆ ಪ್ರಯಾಣ ಸುಖಕರ

ರಸ್ತೆ ಪ್ರಯಾಣದ ಸಮಯದಲ್ಲಿ ಇವುಗಳನ್ನು ಸೇವಿಸದಿದ್ದರೆ ಪ್ರಯಾಣ ಸುಖಕರ

ರಸ್ತೆ ಪ್ರವಾಸಕ್ಕೆ ಹೋಗುವ ಮೊದಲು ಜೀರ್ಣಿಸಲು ಕಷ್ಟಕರವಾಗುವಂತಹ ಆಹಾರಗಳನ್ನು ಸೇವಿಸಬಾರದು. ಮೈದಾದಿಂದ ತಯಾರಿಸಿದಂತಹ ಆಹಾರವನ್ನು ಸೇವನೆ ಮಾಡದಿರುವುದು ಒಳ್ಳೆಯದು.

ಬಹಳಷ್ಟು ಜನರಿಗೆ ದೂರ ರಸ್ತೆ ಪ್ರಯಾಣ ಮಾಡುವಾಗ ತಲೆನೋವು, ಅಸಿಡಿಟಿ, ವಾಂತಿ, ಹೊಟ್ಟೆಯೊಳಗೆ ಏನೋ ಒಂದು ರೀತಿಯ ಅನುಭವವಾಗೋದು ಸಹಜ. ನಿಮಗೂ ಕೂಡಾ ಈ ರೀತಿಯೆಲ್ಲಾ ಆಗುತ್ತದೆ ಎಂದಾದರೆ , ಎಲ್ಲಾದರೂ ಪ್ರಯಾಣಕ್ಕೆ ಹೋಗುವ ಮೊದಲು ಈ ಕೆಲವು ವಸ್ತುಗಳಿಂದ ದೂರವಿರುವುದು ಒಳ್ಳೆಯದು. ಇದನ್ನು ನೀವು ಪಾಲಿಸಿದಿರೆಂದಾದಲ್ಲಿ ನಿಮ್ಮ ದೂರ ಪ್ರಯಾಣವು ಸುಖಕರವಾಗಿರುತ್ತದೆ.

ಜೀರ್ಣಿಸಲು ಕಷ್ಟವಾಗುವ ಆಹಾರ ಸೇವನೆಯಿಂದ ದೂರವಿರಿ

ರಸ್ತೆ ಪ್ರವಾಸಕ್ಕೆ ಹೋಗುವ ಮೊದಲು ಜೀರ್ಣಿಸಲು ಕಷ್ಟಕರವಾಗುವಂತಹ ಆಹಾರಗಳನ್ನು ಸೇವಿಸಬಾರದು. ಮೈದಾದಿಂದ ತಯಾರಿಸಿದಂತಹ ಆಹಾರವನ್ನು ಸೇವನೆ ಮಾಡದಿರುವುದು ಒಳ್ಳೆಯದು. ಬಹಳಷ್ಟು ಜನರು ರಸ್ತೆ ಪ್ರಯಾಣ ಮಾಡುವಾಗ ಲಘು ಉಪಹಾರವನ್ನು ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ನೂಡಲ್ಸ್, ಪಾಸ್ತಾ, ಬ್ರೆಡ್‌ನಂತಹ ಆಹಾರವನ್ನು ಸೇವಿಸುವುದನ್ನು ಇಷ್ಟಪಡುತ್ತಾರೆ. ಆದರೆ ಅದನ್ನು ಸೇವಿಸುವುದು ಒಳ್ಳೆಯದಲ್ಲ.

ಎಣ್ಣೆಯಲ್ಲಿ ಕರಿದ ತಿನಿಸುಗಳು ಬೇಡ

ಬಹಳಷ್ಟು ಜನರು ರಸ್ತೆ ಪ್ರಯಾಣದಲ್ಲಿ ಸೇವಿಸಲು ಪೂರಿ ಹಾಗೂ ಕಚೋರಿಯಂತಹ ಆಹಾರವನ್ನು ಬುತ್ತಿಯಲ್ಲಿಟ್ಟುಕೊಂಡು ಹೋಗುತ್ತಾರೆ. ನಿಮಗೆ ರಸ್ತೆ ಪ್ರಯಾಣದಲ್ಲಿ ವಾಕರಿಕೆ ಬರುವ ಅಭ್ಯಾಸವಿದ್ದರೆ ನೀವು ರಸ್ತೆ ಪ್ರಯಾಣದ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸಬಾರದು.

ಸಿಹಿ ತಿನಿಸಿನಿಂದ ದೂರವಿರಿ

ನಿಮಗೆ ಸಿಹಿ ತಿನಿಸು ಇಷ್ಟವೆಂದಾದರೆ ಬೇಕಾದಷ್ಟು ತಿನ್ನಿ ಆದರೆ ರಸ್ತೆ ಪ್ರಯಾಣದ ಸಮಯದಲ್ಲಿ ಸಿಹಿ ತಿನಿಸಿನಿಂದ ದೂರವಿರುವುದು ಆದಷ್ಟು ಒಳ್ಳೆಯದು. ಸಿಹಿ ತಿನಿಸುಗಳು ಜೀರ್ಣೀಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ರಸ್ತೆ ಪ್ರಯಾಣಕ್ಕೂ ಮೊದಲು ಹಾಗೂ ರಸ್ತೆ ಪ್ರಯಾಣದ ವೇಳೆ ಸಿಹಿ ತಿನಿಸಿನ ಸೇವನೆ ಮಾಡೋದು ಒಳ್ಳೆಯದಲ್ಲ.

ಮಧ್ಯ ಸೇವನೆ ಬೇಡ

ರಸ್ತೆ ಪ್ರಯಾಣ ಮಾಡುವ ಮೊದಲು ಅಥವಾ ಪ್ರಯಾಣದ ಹಿಂದಿನ ರಾತ್ರಿ ಮಧ್ಯಸೇವನೆ ಮಾಡಬೇಡಿ. ಬೆಳಗ್ಗೆ ಒಂದು ರೀತಿಯ ಸಂಕಟ ಉಂಟಾಗುತ್ತದೆ. ಶರೀರದಲ್ಲಿ ಭಾರವಾದ ಫೀಲ್ ಆಗುತ್ತದೆ. ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗೋದಿಲ್ಲ. ಅದಕ್ಕಿಂತ ಮಧ್ಯ ಸೇವನೆ ಮಾಡದೇ ಇರುವುದೇ ಒಳ್ಳೆಯದು. ಇದರ ಜೊತೆ ಹೆಚ್ಚು ಕಾರ್ಬೋಹೈಡ್ರೇಟ್ ಹೊಂದಿರುವ ಎನರ್ಜಿ ಡ್ರಿಂಕ್ಸ್‌ಗಳ ಸೇವನೆಯನ್ನೂ ಮಾಡಬೇಡಿ.

ಖಾರ ಪದಾರ್ಥ ಸೇವನೆ ಒಳ್ಳೆಯದಲ್ಲ

ರಸ್ತೆ ಪ್ರಯಾಣದ ಸಂದರ್ಭದಲ್ಲಿ ಖಾರದ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿ. ಯಾಕೆಂದರೆ ನೀವು ಹೆಚ್ಚು ಖಾರದ ಆಹಾರವನ್ನು ಸೇವಿಸಿದ ಕೆಲವೇ ನಿಮಿಷಗಳಲ್ಲಿ ರಸ್ತೆ ಪ್ರಯಾಣ ಮಾಡುವವರಿದ್ದರೆ ನಿಮ್ಮ ದೇಹದ ಮೇಲೆ ಖಾರದ ಪ್ರಭಾವ ಬೀರಲಾರಂಭಿಸುತ್ತದೆ. ಇದು ನಿಮ್ಮ ದೇಹದ ತಾಪಮಾನವನ್ನು ಹೆಚ್ಚಾಗಿಸುತ್ತದೆ. ಭೇದಿ ಉಂಟಾಗುವ ಅನುಭವವಾಗುತ್ತದೆ. ಹಾಗಾಗಿ ಖಾರದಿಂದ ದೂರವಿರಿ.

ಮಾಂಸಾಹಾರ ಸೇವನೆಯಿಂದ ದೂರವಿರಿ

ಸಾಮಾನ್ಯವಾಗಿ ದೂರ ರಸ್ತೆ ಪ್ರಯಾಣ ಮಾಡುವಾಗ ಊಟದ ಸಮಯಕ್ಕೆ, ಟೀ , ಕಾಫಿಯ ಸಮಯಕ್ಕೆ ಕಾಡನ್ನು ದಾರಿಮಧ್ಯೆ ನಿಲ್ಲಿಸಿ ಯಾವುದೋ ರೆಸ್ಟೋರೆಂಟ್‌, ಢಾಬಾದಲ್ಲಿ ಊಟ ಮಾಡುತ್ತಾತೆ. ಅದರೆ ಅದು ಪ್ರಯಾಣದ ಸಮಯದಲ್ಲಿ ಒಳ್ಳೆಯದಾ ಎನ್ನುವುದನ್ನು ಯೋಚಿಸುವುದಿಲ್ಲ. ಕೋಳೀ, ಮಾಂಸದಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬಿನಂಶಗಳಿರುತ್ತವೆ ಇದನ್ನು ಬೇರೆ ಸಮಯದಲ್ಲಿ ಸೇವಿಸುವುದು ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X