Search
  • Follow NativePlanet
Share
» »ರೈಲು ಪ್ರಯಾಣದಲ್ಲಿ ಡಬ್ಬದಲ್ಲಿ ಆಹಾರ ಕೊಂಡೊಯ್ಯುತ್ತೀರಾ ಹಾಗಾದ್ರೆ ಇದನ್ನ ಓದಿ

ರೈಲು ಪ್ರಯಾಣದಲ್ಲಿ ಡಬ್ಬದಲ್ಲಿ ಆಹಾರ ಕೊಂಡೊಯ್ಯುತ್ತೀರಾ ಹಾಗಾದ್ರೆ ಇದನ್ನ ಓದಿ

ಸಾಮಾನ್ಯವಾಗಿ ದೂರದ ಊರುಗಳಿಗೆ ಪ್ರವಾಸ ಹೋಗುವಾಗ ಹೆಚ್ಚಿನವರು ರೈಲು ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ, ಅದಕ್ಕೆ ಕಾರಣ, ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ, ಅತ್ತಿತ್ತ ಓಡಾಡಾಬಹುದು, ಶೌಚಾಲಯಕ್ಕೂ ಹೋಗಬಹುದು. ಆದರೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಎಲ್ಲಿ ದಾರಿ ಮಧ್ಯೆ ಮಲ, ಮೂತ್ರ ಬರುತ್ತದೋ ಎಂದು ಹೆದರಿ ನೀರು ಸಹ ಕುಡಿಯದೇ ಇರುವವರು ನಮ್ಮಲ್ಲಿ ಅನೇಕರಿದ್ದಾರೆ. ಅಂತಹವರಿಗೆ ಯಾವಾಗಲೂ ರೈಲು ಪ್ರಯಾಣವೇ ಸುಖಕರವಾಗಿರುತ್ತದೆ.

ಆರಾಮ ಪ್ರಯಾಣ

ರೈಲಿನಲ್ಲಿ ಟೀ, ಕಾಫೀ, ತಿಂಡಿ, ಊಟ ಹೀಗೆ ನಿಮಗೆ ಬೇಕಾದದ್ದೆಲ್ಲಾ ನಿಮ್ಮ ಬಳಿಗೆ ಬರುತ್ತದೆ. ಬಸ್‌ನಂತೆ ಊಟಕ್ಕೆ ಇಳಿದುಕೊಂಡು ಹೋಗಬೇಕೆಂದಿಲ್ಲ. ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ನೀವು ಗಮನಿಸಿರಬಹುದು, ಫ್ಯಾಮಿಲಿ ಜೊತೆಯಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ತಿಂಡಿ, ಊಟಕ್ಕೆ ಬೇಕಾದದ್ದನ್ನೆಲ್ಲಾ ತಮ್ಮೊಂದಿಗೆ ತಯಾರಿಸಿ ಕೊಂಡೊಯ್ಯುತ್ತಾರೆ. ರೈಲಿನಲ್ಲಿ ತಿನ್ನುತ್ತಾರೆ.

ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುತ್ತಾರೆ

ಬಹಳಷ್ಟು ಮಂದಿ ರೈಲಿನಲ್ಲಿ ಬರುವ ಆಹಾರವನ್ನು ತಿನ್ನಲು ಹಿಂಜರಿಯುತ್ತಾರೆ, ಕಾರಣ ಅದು ಆರೋಗ್ಯಕರವಾಗಿದೇಯೋ, ಇಲ್ಲವೋ, ಶುಚಿಯಾಗಿದೆಯೋ ಇಲ್ಲವೋ ಎನ್ನುವುದು. ಹಾಗಾಗಿ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಆದರೆ ಕೆಲವೊಮ್ಮೆ ಮನೆಯಿಂದ ಬುತ್ತಿ ಕಟ್ಟಿಕೊಂಡು ಬರುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಕೆಲವು ಆಹಾರಗಳನ್ನು ತರುತ್ತೇವೆ ಅದು ಬೇಗನೇ ಹಾಳಾಗಿ ಬಿಡುತ್ತದೆ. ಇಂದು ನಾವು ರೈಲಿನಲ್ಲಿ ಯಾವೆಲ್ಲಾ ಆಹಾರಗಳನ್ನು ಕೊಂಡೊಯ್ಯಬಾರದು ಎನ್ನುವುದರ ಬಗ್ಗೆ ತಿಳಿಸಲಿದ್ದೇವೆ.

ಹಾಲು

ನೀವು ರೈಲಿನಲ್ಲಿ ಟೀ , ಕಾಫೀ ಮಾರಾಟ ಮಾಡುವವರಿಂದ ಹಾಲು ಖರೀದಿಸಿರಬಹುದು. ಆದರೆ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಹಾಲನ್ನು ಕೊಂಡೊಯ್ಯಬೇಡಿ. ಮುಚ್ಚಿರುವುರಿಂದ ಹಾಗೂ ತಾಪಮಾನ ಬದಲಾಗುವ ಕಾರಣದಿಂದ ಹಾಲು ಬೇಗನೇ ಹಾಳಾಗುತ್ತದೆ. ಅದು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ಬೇಸಿಗೆಗಾಲದಲ್ಲಿ ಹಾಲನ್ನು ರೈಲು ಪ್ರಯಾಣದ ವೇಳೆ ಕೊಂಡೊಯ್ಯಬೇಡಿ.

ಅರ್ಧ ಗಣೇಶ, ಅರ್ಧ ಹನುಮ ಈ ವಿಶೇಷ ದೇವಸ್ಥಾನ ಎಲ್ಲಿದೆ ಗೊತ್ತಾ?ಅರ್ಧ ಗಣೇಶ, ಅರ್ಧ ಹನುಮ ಈ ವಿಶೇಷ ದೇವಸ್ಥಾನ ಎಲ್ಲಿದೆ ಗೊತ್ತಾ?

ಮೊಟ್ಟೆಯಿಂದ ತಯಾರಿಸಲಾದ ಆಮ್ಲೇಟ್

ಮೊಟ್ಟೆಯಿಂದ ತಯಾರಿಸಲಾದ ಯಾವುದೇ ತಿನಿಸುಗಳನ್ನು ರೈಲಿನಲ್ಲಿ ಕೊಂಡೊಯ್ಯದಿರಿ. ಮೊಟ್ಟೆಯಿಂದ ಒಂದು ರೀತಿಯ ವಾಸನೆ ಬರುತ್ತದೆ. ನೀವು ರೈಲಿನಲ್ಲಿ ಮೊಟ್ಟೆಯ ಆಮ್ಲೇಟ್ ತಿನ್ನಲು ಡಬ್ಬ ತೆರೆದಾಗ ನಿಮ್ಮ ಅಕ್ಕ ಪಕ್ಕದಲ್ಲಿ ಕುಳಿತಿರುವವರಿಗೆಲ್ಲಾ ಅದರ ವಾಸನೆ ಬರುತ್ತದೆ. ಅಲ್ಲದೆ ಆಮ್ಲೇಟ್ ಬಹು ಬೇಗನೆ ಹಾಳಾಗುತ್ತದೆ.

ಮಾಂಸಾಹಾರ

ಮಾಂಸಾಹಾರವನ್ನುಇಷ್ಟ ಪಡುವವರು ಅನೇಕರು ರೈಲಿನ ಪ್ರಯಾಣದಲ್ಲಿ ಊಟಕ್ಕೆ ಮಾಂಸಾಹಾರವನ್ನು ಡಬ್ಬದಲ್ಲಿ ಹಾಕಿಕೊಂಡು ತರುತ್ತಾರೆ. ರೈಲಿನಲ್ಲಿ ಮಾಂಸಾಹಾರ ಸೇವಿಸುವುದರಿಂದ ಫುಡ್‌ ಪಾಯಿಸನ್ ಉಂಟಾಗುತ್ತದೆ. ಲೂಸ್‌ ಮೋಶನ್ ಕೂಡಾ ಆಗಬಹುದು.

ನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವುನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವು

ಪ್ಯಾಕ್‌ಡ್‌ ಜ್ಯೂಸ್‌

ರೈಲಿನಲ್ಲಿ ಸಿಗುವ ಜ್ಯೂಸ್‌ನ್ನು ಐಸ್‌ನಲ್ಲಿ ಅಥವಾ ಫ್ರಿಡ್ಜ್‌ನಲ್ಲಿ ಇಟ್ಟಿರುತ್ತಾರೆ. ಆದರೆ ಪ್ಯಾಕ್‌ಡ್‌ ಜ್ಯೂಸ್‌ನ್ನು ತಂಪು ಹಾಗೂ ಬೆಚ್ಚಗಿನ ಜಾಗದಲ್ಲಿ ಇಡಲಾಗುತ್ತದೆ. ಜ್ಯೂಸ್ ರೈಲಿನ ಬೆಚ್ಚಗಿನ ಹವಾಮಾನಕ್ಕೆ ಬರುತ್ತಿದ್ದಂತೆ ಪ್ಯಾಕೆಟ್ ಒಳಗಿದ್ದ ಜ್ಯೂಸ್ ಹಾಳಾಗುವ ಸಾಧ್ಯತೆಗಳಿವೆ. ಹಾಗಾಗಿ ರೈಲು ಪ್ರಯಾಣದಲ್ಲಿ ಪ್ಯಾಕೆಟ್ ಜ್ಯೂಸ್‌ನ್ನು ಕೊಂಡೊಯ್ಯದಿರಿ.

ಬಾಳೆಹಣ್ಣು

ನಿಮಗೆಲ್ಲಾ ಗೊತ್ತೇ ಇರುವ ಹಾಗೇ ಬಾಳೆಹಣ್ಣು ಬಹುಬೇಗನೇ ಹಣ್ಣಾಗುತ್ತದೆ ಅಲ್ಲದೆ ಕೊಳೆತು ಹೋಗುತ್ತದೆ. ಇನ್ನು ರೈಲಿನ ಉಷ್ಣತೆಯಲ್ಲಿ ಬಾಳೆಹಣ್ಣೂ ಬೇಗನೇ ಹಣ್ಣಾಗಿಬಿಡುತ್ತದೆ. ಹಾಗಾಗಿ ನೀವು ಪ್ರಯಾಣ ಮಾಡುವಾಗ ಬಾಳೆಹಣ್ಣೂ ಕೊಂಡೊಯ್ಯುತ್ತಿದ್ದೀರೆಂದಾದರೆ ಕಾಯಿ ಇರುವ ಹಣ್ಣುಗಳನ್ನೇ ಕೊಂಡೊಯ್ಯಿರಿ. ಹಣ್ಣಾದ ಬಾಳೆಹಣ್ಣನ್ನು ಕಾಯಿ ಬಾಳೆಹಣ್ಣುಗಳ ಜೊತೆಯಲ್ಲಿ ಇಡಬೇಡಿ.

ಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆ

ಬೇಸಿಗೆಯಲ್ಲಂತೂ ಬೇಗನೆ ಕೆಡುತ್ತದೆ

ಅದರಲ್ಲೂ ಬೇಸಿಗೆಗಾಲದಲ್ಲಂತೂ ಆಹಾರಗಳು ಬೇಗನೇ ಹಾಳಾಗುತ್ತವೆ. ಹಾಗಾಗಿ ನೀವು ರೈಲು ಪ್ರಯಾಣದಲ್ಲಿ ಯಾವುದೇ ಆಹಾರವನ್ನು ಕೊಂಡೊಯ್ದರೆ ಅದನ್ನು ಬೇಗನೇ ಖಾಲಿ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಅನಾವಶ್ಯಕವಾಗಿ ಅದನ್ನು ಬಿಸಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X