Search
  • Follow NativePlanet
Share
» »ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು

ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು

By Vijay

ಜಗತ್ತಿಗೆ ನಾಥ ಅಂದರೆ ಒಡೆಯನಾದವನಿಗೆ ಜಗನ್ನಾಥ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಒಂದು ರೂಪವಾದ ಜಗನಾಥನನ್ನು ಪರಿಪಾಲಿಸುವ ಭಕ್ತರು ಲಕ್ಷ ಲಕ್ಷ. ಹಾಗಾಗಿ ಅವನಿಗೆ ಮುಡಿಪಾದ ದೇವಾಲಯಗಳು ಸದಾ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿಯೆ ಭಕ್ತಾದಿಗಳನ್ನು ಸೆಳೆಯುತ್ತದೆ. ಇಂದು ಭಾರತದ ಕೆಲವು ಸ್ಥಳಗಳಲ್ಲಿ ಜಗನ್ನಾಥನಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳನ್ನು ಕಾಣಬಹುದಾಗಿದೆ.

ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿರುವ ಕೆಲವು ಪ್ರಮುಖ ಜಗನ್ನಾಥನ ದೇವಾಲಯಗಳ ಯಾವುವು ಎಂಬುದರ ಕುರಿತು ತಿಳಿಯಿರಿ. ಮೂಲತಃ ಜಗನ್ನಾಥನನ್ನು ವಿಷ್ಣುವಾಗಿ ಆರಾಧಿಸಿದರೆ ಕೃಷ್ಣನ ಅವತಾರವಾಗಿಯೂ ಕೆಲವರು ಆರಾಧಿಸುತ್ತಾರೆ. ಉತ್ತರ ಭಾರತದ ಒಡಿಶಾ, ಬಿಹಾರ್, ಛತ್ತೀಸಗಡ್, ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳ ರಾಜಯಗಳಲ್ಲಿ ಜಗನ್ನಾಥನನ್ನು ಅತಿ ಹೆಚ್ಚಾಗಿ ಪೂಜಿಸಲಾಗುತ್ತದೆ.

ಮೈಮನ ಪುಳಕಿತಗೊಳ್ಳುವಂತೆ ಮಾಡುವ ವಿಷ್ಣು ದೇವಾಲಯಗಳು

ಸಾಮಾನ್ಯವಾಗಿ ಹಿಂದು ಪುರಾಣ ಗ್ರಂಥಗಳಲ್ಲಿ ಜಗನ್ನಾಥನ ಕುರಿತು ಯಾವುದೆ ವಿಷ್ಯಗಳಿಲ್ಲ. ಅಲ್ಲದೆ ಜಗನಾಥನ ವಿಗ್ರಹವೂ ಸಹ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ವಿಗ್ರಹಗಳಂತಿರುವುದಿಲ್ಲ. ಕಟ್ಟಿಗೆಯ ದೊಡ್ಡ ಹಲಗೆಯ ಮೇಲೆ ಎರಡು ದೊಡ್ಡ ಕಣ್ಣುಗಳು, ಕೈಗಳನ್ನು ಪ್ರತಿನಿಧಿಸಲು ಎರಡು ಕಟ್ಟಿಗೆಯ ಕೋಲುಗಳಿರುತ್ತವೆ. ಕಾಲಾಗಲಿ ದೇಹದ ರಚನೆಯಾಗಲಿ ಇರುವುದಿಲ್ಲ. ಕಟ್ಟಿಗೆಯಲ್ಲಿರುವುದೆ ಒಂದು ವಿಶೇಷವಾಗಿದೆ.

ಆದಾಗ್ಯೂ ಒರಿಯಾ ಭಾಷೆಯ ಕೆಲವು ಸಾಹಿತ್ಯ ಗ್ರಂಥಗಳಲ್ಲಿ ಜಗನ್ನಾಥನನ್ನು ವಿಷ್ಣುವಿನ ರೂಪ ಎನ್ನಲಾಗಿದೆ. ಅಲ್ಲದೆ ಕೆಲವರು ಜಗನ್ನಾಥ ವಿಷ್ಣುವಿನ ದಶಾವತಾರಗಳ ಪೈಕಿ ಒಂಭತ್ತನೇಯ ಅವತಾರ ಎಂದು ನಂಬುತ್ತಾರೆ. ಇನ್ನೂ ಜಗನ್ನಾಥ ದೇವಾಲಯಗಳು ಹಾಗೂ ಮುಹ್ಕ್ಯ ವಿಗ್ರಹ ಸಾಮಾನ್ಯವಾಗಿ ಒಂದೆ ರೀತಿಯಲ್ಲಿಯೆ ಮಾಡಲಾಗುತ್ತದೆ. ಇವು ಜಗನ್ನಾಥನ ಅತಿ ಮುಖ್ಯ ಸ್ಥಳವಾದ ಪುರಿಯ ಜಗನ್ನಾಥ ದೇವಾಲಯದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುತ್ತವೆ. ಪುರಿಯ ಜಗನ್ನಾಥ ಅತಿ ವಿಶೇಷ ಹಾಗೂ ಮಖ್ಯವಾಗಿದ್ದು ಪವಿತ್ರ ಚಾರ್ ಧಾಮ್ ಯಾತ್ರೆಗಳಲ್ಲಿ ಒಂದಾಗಿದೆ.

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಜಗನ್ನಾಥ ಪುರಿ : ಒಡಿಶಾ ರಾಜ್ಯದ ಪುರಿಯಲ್ಲಿರುವ ಜಗನ್ನಾಥನ ದೇವಾಲಯವು ದೇಶದಲ್ಲೆ ಜಗನ್ನಾಥನಿಗೆ ಮುಡಿಪಾದ ಅತಿ ಪ್ರಮುಖ ದೇವಾಲಯವಾಗಿದೆ. ಜಗನ್ನಾಥನಿಗೆ ನಡೆಯುವ ರಥ ಯಾತ್ರೆಯಂತೂ ಇನ್ನೂ ವಿಶೇಷವಾಗಿರುತ್ತದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Krupasindhu Muduli

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಈ ದೇವಾಲಯ ಎಷ್ಟೊಂದು ಪ್ರಸಿದ್ಧವಾಗಿದೆ ಎಂದರೆ ಪುರಿ ನಗರವನ್ನು ಜಗನ್ನಾಥ ಪುರಿ ಅಥವಾ ಪುರಿ ಜಗನ್ನಾಥ ಎಂತಲೆ ಕರೆಯುತ್ತಾರೆ. ಇದು ಒಡಿಶಾದ ರಾಜಧಾನಿ ಭುವನೇಶ್ವರದಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ಹಿಂದುಗಳು ನಡೆದುಕೊಳ್ಳುವ ನಾಲ್ಕು ಪವಿತ್ರ ಧಾಮಗಳಾದ ಚಾರ್ ಧಾಮ್ ಕ್ಷೇತ್ರಗಳ ಪೈಕಿ ಜಗನ್ನಾಥವೂ ಸಹ ಒಂದು. ನಂಬಿಕೆಯಂತೆ ಪುರಿಗೆ ಭೇಟಿ ನೀಡದಿದ್ದರೆ ಭಾರತದಲ್ಲಿ ತೀರ್ಥಯಾತ್ರೆ ಪೂರ್ಣಗೊಳ್ಳುವುದಿಲ್ಲವಂತೆ.

ಚಿತ್ರಕೃಪೆ: Kajal121

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಜಗನ್ನಾಥ ದೇವಾಲಯ, ಬೆಂಗಳೂರು : ಬೆಂಗಳೂರಿನ ಅಗರ ಬಡಾವಣೆಯ ಸರ್ಜಾಪುರ ರಸ್ತೆಯಲ್ಲಿ ಜಗನ್ನಾಥನಿಗೆ ಮುಡಿಪಾದ ದೇವಾಲಯವಿದೆ. ಪುರಿಯಲ್ಲಿರುವ ಜಗನ್ನಾಥ ದೇವಾಲಯದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವ ಈ ದೇವಾಲಯವು ಜಗನ್ನಾಥ ಹಾಗೂ ಸಹೋದರನಾದ ಬಾಲಭದ್ರ ಹಾಗೂ ಸಹೋದರಿಯಾದ ಸುಭದ್ರಳಿಗೆ ಮುಡಿಪಾಗಿದೆ.

ಚಿತ್ರಕೃಪೆ: Veera.sj

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಜಗನ್ನಾಥ ದೇವಾಲಯ, ಚೆನ್ನೈ : ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲೂ ಜಗನ್ನಾಥನಿಗೆ ಮುಡಿಪಾದ ಸುಂದರ ದೇವಾಲಯವಿರುವುದನ್ನು ಕಾಣಬಹುದು. ಕಾಳಿಂಗ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯವು ಈಸ್ಟ್ ಕೋಸ್ಟ್ ಹೆದ್ದಾರಿಗೆ ಹೊಂದಿಕೊಂಡಂತಿರುವ ಕನತ್ತೂರು ಎಂಬಲ್ಲಿದೆ.

ಚಿತ್ರಕೃಪೆ: Ranjan Kumar Panigrahi

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಒಡಿಶಾದ ಮಯೂರಭಂಜ್ ಜಿಲ್ಲೆಯ ಬಾರಿಪಾಡಾ ಪಟ್ಟಣದಲ್ಲಿರುವ ಜಗನ್ನಾಥನ ದೇವಾಲಯ. ಪಂಚರತ್ನ ಶಿಖರ ಹೊಂದಿರುವ ಈ ದೇವಾಲಯವು ಸಾಕಷ್ಟು ಪವಿತ್ರವಾಗಿದ್ದು ಈ ಕ್ಷೇತ್ರವನ್ನು ಒಡಿಶಾದ ಎರಡನೇಯ ಶ್ರೀಕ್ಷೇತ್ರ ಎಂದು ಕರೆಯುತ್ತಾರೆ.

ಚಿತ್ರಕೃಪೆ: Ansuman

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಒಡಿಶಾದ ಅತ್ಯಂತ ಪುರಾತನ ದೇವಾಲಯಗಳಲ್ಲೊಂದಾಗಿರುವ ಬಾರಿಪಾಡಾದ ಈ ಜಗನ್ನಾಥ ದೇವಾಲಯದಲ್ಲಿ ಜರುಗುವ ರಥಯಾತ್ರೆಯೂ ಸಹ ಪುರಿಯ ನಂತರ ಹೆಚ್ಚು ಪುರಾತನ ಹಾಗೂ ಜನಪ್ರೀಯವಾದ ರಥ ಯಾತ್ರೆಯಾಗಿದೆ.

ಚಿತ್ರಕೃಪೆ: Ansuman

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಪ್ರತಿಷ್ಠಿತ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿರುವ ಪುರಿಯ ಜಗನ್ನಾಥ ಮಂದಿರದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವ ಜಗನ್ನಾಥ ದೇವಾಲಯ.

ಚಿತ್ರಕೃಪೆ: Hpsatapathy

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಬಹು ಸಮಯದಿಂದಲೂ ಹೈದರಾಬಾದ್ ನಗರದಲ್ಲಿ ವಾಸಿಸುತ್ತಿರುವ ಒರಿಯಾ ಜನಾಂಗದವರಿಂದ ಈ ದೇವಾಲಯ ನಿರ್ಮಿಸಲಾಗಿದ್ದು ಇಲ್ಲಿಯೂ ಸಹ ಜಗನ್ನಾಥನ ರಥಯಾತ್ರೆಯನ್ನು ಸಾಕಷ್ಟು ವಿಶೇಷವಾಗಿಯೂ ಹಾಗೂ ಸಡಗರದಿಂದಲೂ ಆಚರಿಸಲಾಗುತ್ತದೆ.

ಚಿತ್ರಕೃಪೆ: Prudhvi.04cn006

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಇದು ಕೇರಳದಲ್ಲಿರುವ ಜಗನ್ನಾಥನ ಪ್ರಮುಖ ಹಾಗೂ ವಿಶೇಷವಾದ ದೇವಾಲಯವಾಗಿದೆ. ಕಣ್ಣೂರು ಜಿಲ್ಲೆಯ ತಲಚೇರಿ ಪಟ್ಟಣದಿಂದ ಸುಮಾರು ಒಂದು ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯ ಪ್ರಮುಖ ಧಾರ್ಮಿಕ ಸನ್ನಿಧಿಯಾಗಿದ್ದು ನಿತ್ಯವೂ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Prof tpms

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಒಡಿಶಾ ರಾಜ್ಯದ ಕೋರಾಪುಟ್ ಜಿಲ್ಲೆಯ ಕೋರಾಪುಟ್ ಪಟ್ಟಣದಲ್ಲಿರುವ ಜಗನ್ನಾಥನ ದೇವಾಲಯವಿದು. ಇದು ಕೇವಲ ಜಗನ್ನಾಥನನ್ನು ಆರಾಧಿಸುವ ಮಂದಿರವಾಗಿಲ್ಲ. ಬದಲು ಜಗನ್ನಾಥ ಎಂಬ ಅನಂತ ಶಕ್ತಿಯ ಕುರಿತು ಇಹ ಲೋಕದಲ್ಲೆ ಜ್ಞಾನ ಪಡೆಯುವ ಅಥವಾ ದಿವ್ಯ ಚೇತನವನ್ನು ಅನುಭವಿಸುವಲ್ಲಿ ನೆರವಾಗುವ ಆಧ್ಯಾತ್ಮಿಕ ಕೇಮ್ದ್ರವೂ ಸಹ ಆಗಿದೆ.

ಚಿತ್ರಕೃಪೆ: MKar

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಸರ್ವಂ ಏಕಂ, ಆ ಪರಬ್ರಹ್ಮವೊಂದೆ ಸತ್ಯ ಎಂಬ ತತ್ವಸಾರುವ ಈ ಜಗನ್ನಾಥ ಮಂದಿರಕ್ಕೆ ಪ್ರತಿಯೊಬ್ಬರಿಗೂ ಸ್ವಾಗತಿವೆ. ಯಾವುದೆ ಧರ್ಮದವರಾಗಲಿ, ಜಾತಿಯವರಾಗಲಿ ಈ ಜಗನ್ನಾಥನ ಮಂದಿರಕ್ಕೆ ಪ್ರವೇಶಿಸಬಹುದಾಗಿದೆ ಹಾಗೂ ಆ ಜಗದೊಡೆಯನ ಕುರಿತು ಜಾಗೃತ ಜ್ಞಾನವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Rajani3737

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಒಡಿಶಾದ ಜಗತ್ಸಿಂಘಪುರ್ ಜಿಲ್ಲೆಯಲ್ಲಿರುವ ಪಾರಾದೀಪ್ ಪಟ್ಟಣದಲ್ಲಿರುವ ಜಗನ್ನಾಥ ದೇವಾಲಯವಿದು. ಒಡಿಶಾದ ಪ್ರಮುಖ ಬಂದರು ಪಟ್ಟಣವಾಗಿರುವ ಪಾರಾದೀಪ್ ಬೆಳೆಯುತ್ತಿರುವ ಕೈಗಾರಿಕಾ ಪಟ್ಟಣವಾಗಿದ್ದು ತನ್ನಲ್ಲಿರುವ ಜಗನ್ನಾಥ ದೇವಾಲಯದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Subas Chandra Rout

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಕೇವಲ ಜಗನ್ನಾಥನ ದೇವಾಲಯವಲ್ಲದೆ ಆವರಣದಲ್ಲಿ ಇತರೆ ಪ್ರಮುಖ ದೇವ ದೇವತೆಯರ ಸನ್ನಿಧಿಗಳಿದ್ದು ಸಾಕಷ್ಟು ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Jnanaranjan sahu

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ರಾಜಸ್ಥಾನದ ಅಳ್ವಾರ್ ಜಿಲ್ಲೆಯ ಅಳ್ವಾರ್ ಪಟ್ಟಣದಲ್ಲಿರುವ ಜಗನ್ನಾಥನ ದೇವಾಲಯ ಇದಾಗಿದೆ. ಇಲ್ಲಿರುವ ವಿಗ್ರಹವು ಪುರಿ ಜಗನ್ನಾಥನ ಮಾನವರೂಪಿ ವಿಗ್ರಹವಾಗಿದ್ದು ಸಾಕಷ್ಟು ವಿಶೇಷವಾಗಿದೆ.

ಚಿತ್ರಕೃಪೆ: Nandita

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಜಗನ್ನಾಥ, ಬಾಲಭದ್ರ ಹಾಗೂ ಸುಭದ್ರಾ ನೆಲೆಸಿರುವ ಈ ಸುಂದರ ಜಗನ್ನಾಥ ದೇವಾಲಯವು ಒಡಿಶಾದ ರಾಯಗಡ ಜಿಲ್ಲೆಯ ರಾಯಗಡ ಪಟ್ಟಣದಲ್ಲಿದೆ.

ಚಿತ್ರಕೃಪೆ: Hpsatapathy

ಜಗನ್ನಾಥನ ದೇವಾಲಯಗಳು:

ಜಗನ್ನಾಥನ ದೇವಾಲಯಗಳು:

ಆಂಧ್ರದ ವೈಜಾಗ್ ಅಥವಾ ವಿಶಾಖಪಟ್ಟಣಂ ನಗರದಿಂದ ಇಪ್ಪತ್ತು ಕಿ.ಮೀ ದೂರದಲ್ಲಿರುವ ಸಿರಿಪುರಂ ಜಂಕ್ಷನ್ನಿನ ಚಿನ್ನಾರ್ ವಾಲ್ಟೇರ್ ಎಂಬಲ್ಲಿ ಜಗನ್ನಾಥನ ಈ ಸುಂದರ ದೇವಾಲಯವಿದೆ.

ಚಿತ್ರಕೃಪೆ: Dr Murali Mohan Gurram

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X