Search
  • Follow NativePlanet
Share
» »ರಾಷ್ಟ್ರೀಯ ಮಹತ್ವ ಪಡೆದ ನಮ್ಮ ಸ್ಮಾರಕಗಳು

ರಾಷ್ಟ್ರೀಯ ಮಹತ್ವ ಪಡೆದ ನಮ್ಮ ಸ್ಮಾರಕಗಳು

By Vijay

ಇಂದಿನ ಯುವ ಪಿಳಿಗೆಗೆ ಇತಿಹಾಸದಲ್ಲಿ ಆಸಕ್ತಿ ಇದೆ ಎಂದು ಹೇಳುವುದು ಬಲು ಕಷ್ಟ. ಈ ಆಧುನಿಕ ಯುಗದಲ್ಲಿ ಕೇವಲ ಬೆರಳಾಡಿಸಿ ಸಾಕಷ್ಟು ಮನರಂಜನೆ ಪಡೆಯಬಹುದಾದಾಗ, ಎಂದೋ ಆಗಿ ಹೋದ ಘಟನೆಗಳು, ಪ್ರಸಂಗಗಳು, ಯುದ್ಧಗಳು, ರಚನೆಗಳು, ಕೋಟೆಗಳ ಕುರಿತು ತಿಳಿಯುವುದು ಅಥವಾ ಓದುವುದೆಂದರೆ ಹೇಗೆ? ಅದು ಒಂದು ರೀತಿಯ ಹಿಂಸೆ ಎಂದೆ ತಿಳಿದುಬಿಡುತ್ತಾರೆ.

ಆದರೆ ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ನಮ್ಮ ಅಖಂಡ ಭಾರತದ ಸಂಸ್ಕೃತಿ-ಸಂಪ್ರದಾಯವು ಬಹಳ ವಿಶಿಷ್ಟವಾಗಿಯೂ, ಮಹತ್ವವುಳ್ಳದ್ದಾಗಿಯೂ ಇರುವುದರಿಂದ ಜಗತ್ತಿನಲ್ಲೆ ವೈವಿಧ್ಯಮಯ ಹಾಗೂ ಶ್ರೀಮಂತ ಸಾಂಸ್ಕೃತಿಕ ದೇಶವಾಗಿ ನಮ್ಮ ದೇಶ ಇಂದು ಕಂಗೊಳಿಸುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ವೈವಿಧ್ಯಮಯ, ಸಂಸ್ಕೃತಿ -ಸಂಪ್ರದಾಯಕ್ಕೆ ಸಂಬಂಧಪಟ್ಟ ಸಾಕಷ್ಟು ಐತಿಹಾಸಿಕ ರಚನೆಗಳು. ಇವು ನಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ವಲಯದಲ್ಲಿ ಸಾಕಷ್ಟು ಮಹತ್ವವನ್ನು ಒದಗಿಸಿವೆ.

ಈ ಸ್ಮಾರಕಗಳು ನಮ್ಮ ಹೆಮ್ಮೆಯ ಪ್ರತೀಕ. ಇವುಗಳನ್ನು ಸಂರಕ್ಷಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈ ಐತಿಹಾಸಿಕ ಸ್ಮಾರಕಗಳಿವೆ. ಪ್ರಸ್ತುತ ಲೇಖನವು ಕರ್ನಾಟಕದಲ್ಲಿರುವ, ರಾಷ್ಟ್ರೀಯ ಮಹತ್ವ ಪಡೆದಿರುವ ಕೆಲವು ಪ್ರಮುಖ ಸ್ಮಾರಕಗಳ ಕುರಿತು ಪರಿಚಯಿಸುತ್ತದೆ. ಅಲ್ಲದೆ ಈ ಲೇಖನದಿಂದ ನಿಮಗೂ ಕೂಡ ಗೊತ್ತಿರದ ಸಾಕಷ್ಟು ಸ್ಮಾರಕಗಳ ಪರಿಚಯವಾಗಬಹುದು. ಸಮಯ ಸಿಕ್ಕಾಗ ಈ ಸ್ಮಾರಕಗಳಿಗೆ ಭೇಟಿ ನೀಡಿ, ಸಾಧ್ಯವಾದರೆ ನಿಮ್ಮ ಬಂಧು ಬಾಂಧವರಿಗೂ ಕೂಡ ಇವುಗಳ ಕುರಿತು ತಿಳಿಸಿ.

ಭಾರತೀಯ ಪುರಾತತ್ವ ಇಲಾಖೆಯು ರಾಷ್ಟ್ರೀಯ ಸ್ಮಾರಕಗಳನ್ನು ಪಟ್ಟಿ ಮಾಡುವಾಗ ಕರ್ನಾಟಕವನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಿದೆ. ಅವುಗಳೆಂದರೆ ಬೆಂಗಳೂರು ವಿಭಾಗ ಮತ್ತು ಧಾರವಾಡ ವಿಭಾಗ. ಇದರಲ್ಲಿ ಧಾರವಾಡ ವಿಭಾಗವು ಸಾಕಷ್ಟು ದೀರ್ಘವಾಗಿರುವುದರಿಂದ ಮತ್ತೆ ಅದನ್ನು ಬೆಳಗಾವಿ, ಬೀದರ್, ಬಿಜಾಪುರ, ಧಾರವಾಡ, ಗುಲ್ಬರ್ಗ, ಉತ್ತರ ಕನ್ನಡ, ರಾಯಚೂರು, ಹಂಪಿ ಮತ್ತು ಮೈಸೂರು ವಲಯಗಳೆಂದು ವಿಂಗಡಿಸಲಾಗಿದೆ. ಹಂಪಿ ಹಾಗೂ ಮೈಸೂರುಗಳ ಕುರಿತು ಇಲ್ಲಿ ತಿಳಿಯಿರಿ.

ಇನ್ನು ಮಿಕ್ಕ ವಲಯಗಳ ಕೆಲ ಪ್ರಮುಖ ರಾಷ್ಟ್ರೀಯ ಮಹತ್ವ ಪಡೆದಿರುವ ಸ್ಮಾರಕಗಳ ಕುರಿತು ಒಂದೊಂದಾಗಿ ಸ್ಲೈಡುಗಳ ಮೂಲಕ ತಿಳಿಯಿರಿ.

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಟಿಪ್ಪು ಸುಲ್ತಾನ ಅರಮನೆ: ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕೃಷ್ಣರಜೇಂದ್ರ ಮಾರುಕಟ್ಟೆ ಪ್ರದೇಶದಲ್ಲಿ ಟಿಪ್ಪು ಸುಲ್ತಾನನ ಅರಮನೆಯು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವಾಗಿದೆ.

ಚಿತ್ರಕೃಪೆ: Pavithrah

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ದೇವನಹಳ್ಳಿ ಕೋಟೆ: ರಾಷ್ಟ್ರೀಯ ಹೆದ್ದಾರಿ ಏಳರ ಮೇಲೆ ಸಿಗುವ ಬೆಂಗಳೂರು ಬಳಿಯಿರುವ ದೇವನಹಳ್ಳಿಯ ಈ ಪುರಾತನ ಕೋಟೆಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Hitha Nanjappa

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಇತಿಹಾಸಪೂರ್ವ ಸ್ಥಳ : ಬೆಂಗಳೂರಿನ ಚಿಕ್ಕಜಾಲದಲ್ಲಿರುವ ಚೆನ್ನರಾಯಸ್ವಾಮಿ ದೇವಸ್ಥಾನವು ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದ್ದು, ಸುಮಾರು 950 ವರ್ಷಗಳಷ್ಟು ಪುರಾತನವಾಗಿದೆ. ಇದೊಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Ch4nd4nk

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬೆಂಗಳೂರು ಕೋಟೆ: ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆ ಪ್ರದೇಶದಲ್ಲಿರುವ ಬೆಂಗಳೂರು ಕೋಟೆಯು ಭಾರತೀಯ ಪುರಾತತ್ವ ಇಲಾಖೆ ಮಾನ್ಯ ಮಾಡಿದ ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Omshivaprakash H L

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಸಾವನದುರ್ಗ: ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಸಾವನದುರ್ಗವು ಒಂದು ಇತಿಹಾಸಪೂರ್ವ ತಾಣವಾಗಿದ್ದು ರಾಷ್ಟ್ರೀಯ ಸ್ಮಾರಕವಾಗಿ ಪರಿಗಣಿಸಲ್ಪಟ್ಟಿದೆ. ಈ ಬೆಟ್ಟದ ಟ್ರೆಕ್ಕಿಂಗ್ ಹೊರಡುವುದು ಒಂದು ಸುಪ್ರಸಿದ್ಧ ಚಟುವಟಿಕೆಯಾಗಿದೆ. ಅಲ್ಲದೆ ಏಷಿಯಾ ಖಂಡದಲ್ಲಿರುವ ಅತಿ ದೊಡ್ಡ ಏಕಶಿಲಾ ಬೆಟ್ಟಗಳ ಪೈಕಿ ಇದು ಕೂಡ ಒಂದಾಗಿದೆ.

ಚಿತ್ರಕೃಪೆ: Sudarshana

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಅಮೃತೇಶ್ವರ ದೇವಸ್ಥಾನ: ಚಿಕ್ಕಮಗಳೂರು ಪಟ್ಟಣದಿಂದ 67 ಕಿ.ಮೀ ದೂರದಲ್ಲಿರುವ ಅಮೃತಪುರ ಎಂಬ ಗ್ರಾಮದಲ್ಲಿರುವ ಅಮೃತೇಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಇದು 12 ನೇಯ ಶತಮಾನದ ದೇವಾಲಯವಾಗಿದ್ದು ಹೊಯ್ಸಳ ವಾಸ್ತುಶೈಲಿಯನ್ನು ಹೊಂದಿದೆ.

ಚಿತ್ರಕೃಪೆ: Dineshkannambadi

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ವೀರನಾರಾಯಣ ದೇವಸ್ಥಾನ: ಚಿಕ್ಕಮಗಳೂರು ಜಿಲ್ಲೆಯ ಬೆಳವಡಿ ಗ್ರಾಮದಲ್ಲಿರುವ ವೀರನಾರಾಯಣ ದೇವಸ್ಥಾನ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Santhoshbapu

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಚಂದ್ರವಳ್ಳಿ ತಾಣ: ಚಿತ್ರದುರ್ಗ ಜಿಲ್ಲೆಯಲ್ಲಿರುವ ಚಂದ್ರವಳ್ಳಿ ಎಂಬ ಪ್ರದೇಶವು ಇತಿಹಾಸಪೂರ್ವ ಪ್ರದೇಶವಾಗಿದ್ದು ರಾಷ್ಟ್ರೀಯ ಮಹತ್ವವನ್ನು ಪಡೆದಿದೆ. ಮೂಲತಃ ಇದೊಂದು ಕಣಿವೆ ಪ್ರದೇಶವಾಗಿದ್ದು ಚಿತ್ರದುರ್ಗ, ಕಿರಬನಕಲ್ಲು ಹಾಗೂ ಚೋಳದಗುಡ್ಡ ಬೆಟ್ಟಗಳಿಂದ ಸುತ್ತುವರೆದಿದೆ. ಇಲ್ಲಿ ಉತ್ಖನ ಮಾಡಿದಾಗ ಸಾಕಷ್ಟು ಐತಿಹಾಸಿಕ ಮಹತ್ವವುಳ್ಳ ವಸ್ತುಗಳು ಲಭ್ಯವಾಗಿವೆ.

ಚಿತ್ರಕೃಪೆ: Bhat.veeresh

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಚಿತ್ರದುರ್ಗದ ಕೋಟೆ ಹಾಗೂ ದೇವಾಲಯಗಳು: ಕರ್ನಾಟಕದ ಸುಪ್ರಸಿದ್ಧ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಹಾಗೂ ಅದರ ಪರೀಧಿಯಲ್ಲಿರುವ ದೇಗುಲಗಳು ರಾಷ್ಟ್ರೀಯ ಸ್ಮಾರಕವಾಗಿದೆ. ಚಿತ್ರದುರ್ಗದ ಕೋಟೆಯ ಕುರಿತು ತಿಳಿಯಿರಿ.

ಚಿತ್ರಕೃಪೆ: V.v

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಡಾಲ್ಮೆನ್ ವೃತ್ತ: ಡಾಲ್ಮೆನ್ ಎಂದರೆ ಮೂಲವಾಗಿ ಒಂದು ಸಮಾಧಿಯಾಗಿದ್ದು ಅದರಲ್ಲಿ ಒಂದಕ್ಕಿಂತ ಹೆಚ್ಚು ಕಲ್ಲುಗಳು ಚೌಕ ಅಥವಾ ಇತರೆ ಆಕಾರದಲ್ಲಿ ಜೋಡಿಸಲ್ಪಟ್ಟಿರುತ್ತವೆ. ಇವುಗಳಲ್ಲಿ ಬಹುತೇಕ ಡಾಲ್ಮೆನ್ ಗಳು ನವಶಿಲಾಯುಗಕ್ಕೆ ಸಂಬಂಧಪಟ್ಟವುಗಳಾಗಿವೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಳಿಮಳ್ತೆಯಲ್ಲಿರುವ ಈ ಡಾಲ್ಮೆನ್ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Spshreehari

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ರಾಜಾ ಸೀಟ್ : ಕೊಡಗಿನ ಮಡಿಕೇರಿ ಪಟ್ಟಣದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ "ರಾಜಾ ಸೀಟ್" ಒಂದು ರಾಷ್ಟ್ರೀಯ ಸ್ಮಾರಕವಗಿದೆ. ಇಲ್ಲಿಂದ ಅದ್ಭುತವಾದ ದೃಶ್ಯಾವಳಿಗಳನ್ನು ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Devaiahpa

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಸ್ವರ್ಣ ಮಂದಿರ: ಕೊಡಗಿನ ಕುಶಾಲನಗರದ ಬಳಿಯಿರುವ ಬೌದ್ಧರ ಈ ಸೂರ್ಯ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Chamu2009

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಕಲ್ಲೇಶ್ವರ ದೇವಸ್ಥಾನ: ದಾವಣಗೆರೆ ಜಿಲ್ಲೆಯ ಬಗಲಿ ಪಟ್ಟಣದಲ್ಲಿರುವ ಕಲ್ಲೇಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವಾಗಿದೆ. ಈ ದೇವಸ್ಥಾನದ ನಿರ್ಮಾಣವು ಎರಡು ಸಾಮ್ರಾಜ್ಯಗಳನ್ನು ಕಂಡಿದೆ. ಅವುಗಳೆಂದರೆ ಹತ್ತನೇಯ ಶತಮಾನದ ರಾಷ್ಟ್ರಕೂಟರು ಹಾಗೂ ಪಶ್ಚಿಮ ಚಾಲುಕ್ಯರು.

ಚಿತ್ರಕೃಪೆ: Arun Saakare

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಭೀಮೇಶ್ವರ ದೇವಸ್ಥಾನ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿರುವ ಭೀಮೇಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Arun Saakare

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಕೇಶವ ದೇವಸ್ಥಾನ ಹಾಗೂ ಶಾಸನಗಳು: ಹಾಸನ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ತಾಣ ಬೇಲೂರಿನಲ್ಲಿರುವ ಈ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದ್ದು, ಇತಿಹಾಸಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Pavithrah

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಆದಿನಾಥ ಬಸದಿ/ಬಸ್ತಿ: ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ಆದಿನಾಥನ ಬಸದಿಯು ನೋಡಲು ಆಕರ್ಷಕವಾಗಿರುವುದೂ ಅಲ್ಲದೆ ಒಂದು ರಾಷ್ಟ್ರೀಯ ಸ್ಮಾರಕವಾಗಿಯೂ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Ankush Manuja

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಕಲ್ಯಾಣಿ ತೀರ್ಥ: ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಕಲ್ಯಾಣಿ/ಕೊಳವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಈ ಪುಷ್ಕರಣಿಯು ಹಾಸನ ಜಿಲ್ಲೆಯ ಹುಲಿಕೆರೆಯಲ್ಲಿದೆ.

ಚಿತ್ರಕೃಪೆ: Shriram Swaminathan

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬುಚೇಶ್ವರ ದೇವಸ್ಥಾನ: ಹಾಸನ ಜಿಲ್ಲೆಯ ಕೊರವಂಗಲ ಗ್ರಾಮದಲ್ಲಿರುವ ಬುಚೇಶ್ವರ ದೇವಸ್ಥಾನವು ಆಕರ್ಷಕ ಶಿಲ್ಪಕಲೆಯಿಂದ ಕೂಡಿದ್ದು, ಒಂದು ರಾಷ್ಟ್ರೀಯ ಸ್ಮಾರಕವಾಗಿ ಕಂಗೊಳಿಸುತ್ತದೆ.

ಚಿತ್ರಕೃಪೆ: HoysalaPhotos

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಗೊಮ್ಮಟೇಶ್ವರ ಮೂರ್ತಿ: ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿರುವ ಗೊಮ್ಮಟೇಶ್ವರನ ಮೂರ್ತಿಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Gagan.G.C

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಕೋಲಾರಮ್ಮ ದೇವಸ್ಥಾನ: ಕೋಲಾರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿರುವ ಕೋಲಾರಮ್ಮನ ದೇವಸ್ಥಾನವು ಒಂದು ಪ್ರಸಿದ್ಧ ಕ್ಷೇತ್ರವಾಗಿದ್ದು, ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ. ಈ ದೇವಸ್ಥಾನವು ಭಾರತೀಯ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Hariharan Arunachalam ( NIC )

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಭೋಗನಂದೀಶ್ವರ ದೇವಸ್ಥಾನ: ಕೋಲಾರ ಜಿಲ್ಲೆಯ ನಂದಿ ಬೆಟ್ಟ ಪ್ರದೇಶದಲ್ಲಿರುವ ಭೋಗನಂದೀಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ನಂದಿ ಬೆಟ್ಟದಲ್ಲೊಂದು ಪಯಣ.

ಚಿತ್ರಕೃಪೆ: Peter Rivera

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಪಂಚಲಿಂಗೇಶ್ವರ ದೇವಸ್ಥಾನ: ಮಂಡ್ಯ ಜಿಲ್ಲೆಯ ಗೋವಿಂದನಹಳ್ಳಿ ಗ್ರಾಮದಲ್ಲಿರುವ ಶಿವನಿಗೆ ಮುಡಿಪಾದ ಪಂಚಲಿಂಗೇಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: HoysalaPhotos

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ: ಮಂಡ್ಯ ಜಿಲ್ಲೆಯ ಮಾರೇಹಳ್ಳಿ ಗ್ರಾಮದಲ್ಲಿರುವ ಪುರಾತನ ಲಕ್ಷ್ಮಿನರಸಿಂಹಸ್ವಾಮಿಯ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Pavithrah

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಾರಾಯಣಸ್ವಾಮಿ ದೇವಾಲಯ: ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ನಾರಾಯಣಸ್ವಾಮಿ ದೇವಸ್ಥಾನವು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿದೆ. ಈ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Ranganatha C

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ದರಿಯಾ ದೌಲತ್ ಬಾಗ್: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ದರಿಯಾ ದೌಲತ್ ಬಾಗ್ ಒಂದು ರಾಷ್ಟ್ರಿಯ ಸ್ಮಾರಕವಾಗಿರುವುದು ಅಲ್ಲದೆ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Jimmyeager

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಶ್ರೀ ಶ್ರೀಕಂಠೇಶ್ವರ ದೇವಸ್ಥಾನ: ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರನ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ನಂಜನಗೂಡಿನ ಕುರಿತು ತಿಳಿಯಿರಿ.

ಚಿತ್ರಕೃಪೆ: Pavithrah

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಚೆನ್ನಕೇಶವ ದೇವಸ್ಥಾನ: ಮೈಸೂರು ಬಳಿಯಿರುವ ಸೋಮನಾಥಪುರದ ಈ ಕೇಶವನ ದೇವಸ್ಥಾನವು ಒಂದು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವಾಗಿದೆ. ಈ ದೇವಸ್ಥಾನದ ಶಿಲ್ಪಕಲೆಯು ಅದ್ಭುತವಾಗಿದ್ದು ಬೇಲೂರಿನ ಚೆನ್ನಕೇಶವನ ದೇವಸ್ಥಾನದ ರೀತಿಯಲ್ಲೆ ಕೆತ್ತಲ್ಪಟ್ಟಿದೆ. ಇದರ ಕುರಿತು ಹೆಚ್ಚಿಗೆ ತಿಳಿಯಿರಿ.

ಚಿತ್ರಕೃಪೆ: Jonathan Freundlich

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ದೇವಗಂಗಾ ಕೊಳಗಳು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಿಂದ 18 ಕಿ.ಮೀ ದೂರದಲ್ಲಿರುವ ನಗರ ಹಳ್ಳಿಯಲ್ಲಿರುವ ಈ ರಚನೆಗಳು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Suma Sudhakiran

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಚತುರ್ಮುಖ ಗುಡಿ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಚತುರ್ಮುಖ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Prashant Soratur

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಮಧುಗಿರಿ ಕೋಟೆ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿರುವ ಮಧುಗಿರಿ ಕೋಟೆಯು ಒಂದು ಗಮ್ಯವಾದ ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Saurabh Sharan

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಇಲ್ಲಿಂದ ಧಾರವಾಡ ವಿಭಾಗದ ರಾಷ್ಟ್ರೀಯ ಸ್ಮಾರಕಗಳು ಆರಂಭವಾಗುತ್ತವೆ.

ಅಂಬಿಗೇರ್ಗುಡಿ: ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಐಹೊಳೆಯಲ್ಲಿರುವ ಈ ದೇವಸ್ಥಾನವು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Akshatha

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಲಾಡ್ ಖಾನ್ ದೇವಾಲಯ: ಐಹೊಳೆಯ ಗಳಗನಾಥ ದೇವಾಲಯ ಸಂಕೀರ್ಣದಲ್ಲಿರುವ ಲಾಡ್ ಖಾನ್ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Mukul Banerjee

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ರಾವಣ ಫಡಿ : ಐಹೊಳೆಯಲ್ಲಿರುವ ರಾವಣ ಫಡಿ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಇದೊಂದು ಆರನೇಯ ಶತಮಾನದಲ್ಲಿ ನಿರ್ಮ್ಮಿಸಲಾದ (ಕೆತ್ತಲ್ಪಟ್ಟ) ಗುಹಾ ದೇವಾಲಯವಾಗಿದೆ.

ಚಿತ್ರಕೃಪೆ: Meesanjay

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಹುಚ್ಚಪ್ಪಯ್ಯ ಮಠ: ಐಹೊಳೆಯಲ್ಲಿರುವ ಮತ್ತೊಂದು ಐತಿಹಾಸಿಕ ಹಾಗೂ ರಾಷ್ಟ್ರೀಯ ಸ್ಮಾರಕ ಹುಚ್ಚಪ್ಪಯ್ಯ ಮಠ.

ಚಿತ್ರಕೃಪೆ: Mukul Banerjee

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಭೂತನಾಥ ದೇವಾಲಯ ಸಂಕೀರ್ಣ: ಬಾಗಲಕೋಟೆ ಜಿಲ್ಲೆಯ ಬಾದಾಮಿ ಒಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇಲ್ಲಿರುವ ಭೂತನಾಥ ದೇವಾಲಯಗಳ ಸಂಕೀರ್ಣವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಬಾದಾಮಿಯ ಕುರಿತು ತಿಳಿಯಿರಿ.

ಚಿತ್ರಕೃಪೆ: SuchiDutta

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬಾದಾಮಿ ಗುಹೆಗಳು: ಬಾದಾಮಿಯಲ್ಲಿ ಕಂಡುಬರುವ ಬೆಟ್ಟದಲ್ಲಿ ಕೆತ್ತಲಾದ ಅದ್ಭುತ ಗುಹೆಗಳು ರಾಷ್ಟ್ರೀಯ ಸ್ಮಾರಕವಾಗಿದೆ. ದೇಶದ ಹಲವೆಡೆಗಳಿಂದ ಪ್ರವಾಸಿಗರು ಈ ಗುಹಾ ರಚನೆಗಳನ್ನು ವೀಕ್ಷಿಸುವ ಉದ್ದೇಶದಿಂದ ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Raamanp

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬಾದಾಮಿ ಕೋಟೆ ಸಂಕೀರ್ಣ: ಬಾದಾಮಿಯ ಭೂತನಾಥ ಹೊಂಡದ ಸುತ್ತಲಿರುವ ಚಾಲುಕ್ಯರ ಕಾಲದ ಶಿಥಿಲಗೊಂಡ ಕೋಟೆಯ ಅಳಿದುಳಿದ ರಚನೆಗಳು, ಗೋಡೆಗಳು ರಾಷ್ಟ್ರೀಯ ಮಹತ್ವವುಳ್ಳಸ್ಮಾರಕವಾಗಿದೆ.

ಚಿತ್ರಕೃಪೆ: Mukul Mhaskey

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬಾರಾಕಮಾನ: ಉತ್ತರ ಕರ್ನಾಟಕ ಭಾಗದಲ್ಲಿರುವ ಸುಪ್ರಸಿದ್ಧ ಐತಿಹಾಸಿಕ ಪಟ್ಟಣ ಬಿಜಾಪುರ. ಈ ಪಟ್ಟಣದಲ್ಲಿ ಪ್ರಖ್ಯಾತಿ ಪಡೆದ ಸಾಕಷ್ಟು ಐತಿಹಾಸಿಕ ರಚನೆಗಳಿವೆ. ಇಲ್ಲಿರುವ ಬಾರಾಕಮಾನ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Ksprabhukumar37

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಅಸರ್ ಮಹಲ್: ಬಿಜಾಪುರ ಪಟ್ಟಣದಲ್ಲಿರುವ ಅಸರ್ ಮಹಲ್ ಎಂಬ ಹೆಸರಿನ ಅರಮನೆ ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವಾಗಿದೆ.

ಚಿತ್ರಕೃಪೆ: Akshatha

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಗೋಲ ಗುಮ್ಮಟ/ಗುಂಬಜ: ವಿಶ್ವ ಪ್ರಖ್ಯಾತಿ ಪಡೆದ ಗೋಲಗುಮ್ಮಟ ಬಿಜಾಪುರ ಪಟ್ಟಣದ ಅತಿ ಪ್ರಮುಖ ಹೆಗ್ಗುರುತು ಎಂದೇ ಹೇಳಬಹುದು. ಭೇಟಿ ನೀಡಿದ ಪ್ರತಿಯೊಬ್ಬನಿಗೂ ಅಚ್ಚರಿ ಮೂಡಿಸುವ ಈ ಬೃಹತ್ ರಚನೆಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Mukul Banerjee

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಇಬ್ರಹಿಂ ರೌಜಾ: ಬಿಜಾಪುರದಲ್ಲಿರುವ ಮತ್ತೊಂಡು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆ. ಇದು ಕೂಡ ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Rahul240488

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಮಲ್ಲಿಕಾರ್ಜುನ ದೇವಸ್ಥಾನ: ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಒಂದು ಪ್ರಸಿದ್ಧ ಐತಿಹಾಸಿಕ ಆಕರ್ಷಣೆಗಳುಳ್ಳ ಪ್ರವಾಸಿ ಸ್ಥಳವಾಗಿದೆ. ಇಲ್ಲು ಕೂಡ ಕೆಲವು ರಾಷ್ಟ್ರೀಯ ಸ್ಮಾರಕಗಳಿವೆ. ಮಲ್ಲಿಕಾರ್ಜುನ ದೇವಸ್ಥಾನ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Mukul Banerjee

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ವಿರೂಪಾಕ್ಷ ದೇವಸ್ಥಾನ: ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷನ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ. ಅಲ್ಲದೆ ಇಲ್ಲಿರುವ ರಚನೆಗಳಲ್ಲಿ ವೈವೋಪೇತ ಹಾಗೂ ದೊಡ್ಡದಾದ ದೇಗುಲ ಇದಾಗಿದೆ. ಚಾಲುಕ್ಯ ವಾಸ್ತುಶೈಲಿಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Anil Kusugal

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಗಳಗನಥ ದೇವಾಲಯ: ಪಟ್ಟದಕಲ್ಲಿನ ಗಳಗನಾಥ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ. ಅಂತರಾಳ, ಮುಖಮಂಟಪಗಳನ್ನು ಹೊಂದಿರುವ ಈ ದೇಗುಲವು 8 ನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.

ಚಿತ್ರಕೃಪೆ: Mukul Banerjee

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬನಶಂಕರಿ ದೇವಸ್ಥಾನ: ಧಾರವಾಡದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಅಮರಗೋಳ ಎಂಬ ಹಳ್ಳಿಯಲ್ಲಿರುವ ಪುರಾತನ ಬನಶಂಕರಿ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ನಗರ ಶೈಲಿಯ ಈ ದೇಗುಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Siddharth Pujari

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಶಂಕರಲಿಂಗ ದೇವಸ್ಥಾನ: ಶಿವನಿಗೆ ಮುಡಿಪಾದ ಈ ದೆವಸ್ಥಾನವೂ ಸಹ ಅಮರಗೋಳದಲ್ಲಿದ್ದು, ರಾಷ್ಟ್ರೀಯ ಸ್ಮಾರಕದೆ ಹೆಗ್ಗಳಿಕೆ ಪಡೆದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮೂಲತಃ ಈ ದೇಗುಲವು ಸುಪ್ರಸಿದ್ಧ ಪುರಾತನ ಶಿಲ್ಪಿಯಾಗಿದ್ದ ಅಮರಶಿಲ್ಪಿ ಜಕಣಾಚಾರಿಯಿಂದ ನಿರ್ಮಿತವಾಗಿದೆ.

ಚಿತ್ರಕೃಪೆ: Siddharth Pujari

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಅಮೃತೇಶ್ವರ ದೇವಸ್ಥಾನ: ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಸ್ಥಾನವು ಒಂದು ಆಕರ್ಷಕ ವಾಸ್ತು ಶೈಲಿಯುಳ್ಳ ಶಿವನ ದೇವಾಲಯವಾಗಿದೆ. ಇದು ಒಂದು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವೂ ಹೌದು.

ಚಿತ್ರಕೃಪೆ: Sudeep m

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ದೊಡ್ಡಬಸಪ್ಪ ದೇವಸ್ಥಾನ: ಪಶ್ಚಿಮ ಚಾಲುಕ್ಯ ವಾಸ್ತುಶೈಲಿಯುಳ್ಳ ಗದಗ್ ಜಿಲ್ಲೆಯ ಡಂಬಳ ಎಂಬ ಗ್ರಾಮದಲ್ಲಿರುವ ಈ 12 ನೇಯ ಶತಮಾನದ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Dineshkannambadi

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ತಾರಕೇಶ್ವರ ದೇವಸ್ಥಾನ: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿರುವ ಶಿವನ ತಾರಕೇಶ್ವರ ದೇಗುಲವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Prashant Soratur

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಸರಸ್ವತಿ ದೇವಸ್ಥಾನ: ಗದಗ್ ಜಿಲ್ಲೆಯ ಗದಗ್ ಪಟ್ಟಣದಲ್ಲಿ ತ್ರಿಕೂಟೇಶ್ವರ ದೇವಸ್ಥಾನವನ್ನು ಕಾಣಬಹುದಾಗಿದೆ. ಈ ಸಂಕೀರ್ಣದಲ್ಲೆ ಸರಸ್ವತಿ ದೇವಿಗೆ ಮುಡಿಪಾದ ಅನನ್ಯ ಶಿಲ್ಪ ಕಲೆಯ ದೇಗುಲವೊಂದಿದೆ. ಇದನ್ನೆ ಸರಸ್ವತಿ ದೇವಾಲಯ ಎಂದು ಕರೆಯಲಾಗುತ್ತದೆ ಹಾಗೂ ಇದು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Siddharth Pujari

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಮಸ್ಕಿನ ಬಾವಿ: ಗದಗ್ ಜಿಲ್ಲೆಯ ಲಕ್ಕುಂಡಿ ಎಂಬ ಹಳ್ಳಿ ಬಳಿಯಿರುವ ಮಸ್ಕಿನ ಬಾವಿ ಎಂಬ ಹತ್ತನೇಯ ಶತಮಾನದ ವಿಶಿಷ್ಟ ವಿನ್ಯಾಸದ ಮೆಟ್ಟಿಲು ಬಾವಿಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Dineshkannambadi

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಚಂದ್ರಮೌಳೇಶ್ವರ ದೇವಸ್ಥಾನ: ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಒಂದು ಪ್ರದೇಶವಾಗಿದೆ ಉಣಕಲ್. ಉಣಕಲ್ ತನ್ನಲ್ಲಿರುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಚಾಲುಕ್ಯ ಶೈಲಿಯ ಈ ದೇಗುಲವು ಸುಮಾರು 900 ವರ್ಷಗಳಷ್ಟು ಪುರಾತನವಾಗಿದ್ದು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Chetuln

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಪಂಚಲಿಂಗೇಶ್ವರ ಗುಡಿ: ಬೆಳಗಾವಿ ಜಿಲ್ಲೆಯ ಹೂಲಿ ಗ್ರಾಮದಲ್ಲಿರುವ ಆಕರ್ಷಕ ವಾಸ್ತು ಶೈಲಿಯ ಪಂಚಲಿಂಗೇಶ್ವರ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Ktnkiran

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಸಾಫಾ ಮಸೀದಿ: ಬೆಳಗಾವಿ ನಗರ ಕೋಟೆ ಪ್ರದೇಶದಲ್ಲಿರುವ ಸಾಫಾ ಮಸೀದಿಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Manjunath nikt

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಮುಕ್ತೇಶ್ವರ ಜೈನ ದೇವಾಲಯ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ವಕ್ಕುಂಡ ಎಂಬ ಗ್ರಾಮದಲ್ಲಿರುವ ಈ ಜೈನ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Bchipre

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಬೀದರ್ ಕೋಟೆ: ಬಿದರ್ ಜಿಲ್ಲೆಯ ಬೀದರ್ ಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಬೀದರ್ ಕೋಟೆಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಬಹುಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣ ಮಾಡಲಾದ ಈ ಕೋಟೆಯು ಪರ್ಷಿಯಾದ ವಾಸ್ತು ಶೈಲಿಯಿಂದ ಪ್ರಭಾವಿತವಾಗಿದೆ.

ಚಿತ್ರಕೃಪೆ: Madhavi Kuram

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಗುಲಬರ್ಗಾ ಕೋಟೆ: ಗುಲಬರ್ಗಾ ನಗರದಲ್ಲಿರುವ ಗುಲಬರ್ಗಾ ಕೋಟೆಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Hashimpi

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಜೆಟ್ಟಪ್ಪ ನಾಯಕನ ಚಂದ್ರನಾಥೇಶ್ವರ ಬಸದಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಈ ಪುರಾತನ ಜೈನ ಬಸದಿಯು ಒಂದು ರಾಷ್ಟ್ರೀಯ ಸ್ಮಾರಕವಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Aafaaque

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಮಿರ್ಜಾನ್ ಕೋಟೆ: ಉತ್ತರ ಕನ್ನಡ ಚ್ಜಿಲ್ಲೆಯ ಪಶ್ಚಿಮ ಕರಾವಳಿ ತೀರದಲ್ಲಿ ಈ ಭವ್ಯ ಕೋಟೆಯ ನೆಲೆಯಿದೆ. 16 ನೇಯ ಶತಮಾನದಲ್ಲಿ ನಿರ್ಮಿತವಾದ ಈ ಕೋಟೆಯು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Sydzo

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ನಮ್ಮ ನಾಡಿನ ರಾಷ್ಟ್ರೀಯ ಸ್ಮಾರಕಗಳು:

ಅಶೋಕನ ಶಿಲಾಶಾಸನ: ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿರುವ ಒಂದು ಬೆಟ್ಟದ ತುದಿಯಲ್ಲಿ ಚಕ್ರವರ್ತಿ ಅಶೋಕನು ಬರಿಸಿದ್ದೆನ್ನಲಾದ ಶಿಲಾ ಶಾಸನಗಳು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಈ ತಾಣವನ್ನು ಗವಿನಾಥ ಹಾಗೂ ಪಾಲ್ಕಿಗುಂಡು ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Ravibhalli

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X