Search
  • Follow NativePlanet
Share
» »ತೀರ್ಥಯಾತ್ರೆ ಮಾಡೋದು ಯಾಕೆ? ತೀರ್ಥ ಸ್ನಾನದ ಫಲವೇನು?

ತೀರ್ಥಯಾತ್ರೆ ಮಾಡೋದು ಯಾಕೆ? ತೀರ್ಥ ಸ್ನಾನದ ಫಲವೇನು?

ಈಗಿನ ಕಾಲದಲ್ಲಂತೂ ಜನರು ದೇವಸ್ಥಾನಗಳಿಗೆ ಹೋಗೋದೇ ಕಡಿಮೆ. ಹಾಗಂತ ದೇವರ ಮೇಲೆ ಭಕ್ತಿ ಇಲ್ಲವೇನಲ್ಲ. ಬದಲಾಗಿ ಸಮಯದ ಅಭಾವ. ದೇವಸ್ಥಾನಕ್ಕೆ ಹೋಗಲು ಸಮಯಾನೇ ಸಿಗೋದಿಲ್ಲ. ತಮ್ಮ ಕೆಲಸಗಳಲ್ಲೇ ವ್ಯಸ್ಥವಾಗಿರುತ್ತಾರೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗೋದು, ತೀರ್ಥ ಸ್ನಾನಗಳನ್ನು ಮಾಡೋದರಿಂದ ಪುಣ್ಯ ಸಿಗುತ್ತದೆ. ಪಾಪ ಪರಿಹಾರವಾಗುತ್ತದೆ ಎನ್ನುತ್ತಾರೆ. ಅವಿಷ್ಟೇ ಅಲ್ಲ ದೇವಸ್ಥಾನಕ್ಕೆ ಹೋಗೋದರಿಂದ ತೀರ್ಥ ಸ್ನಾನ ಮಾಡುವುದರಿಂದ ಇನ್ನೂ ಅನೇಕ ಲಾಭಗಳಿವೆ.

ಆರೋಗ್ಯವಾಗಿರಿಸುತ್ತದೆ

ಆರೋಗ್ಯವಾಗಿರಿಸುತ್ತದೆ

PC:Dey.sandip

ತೀರ್ಥಸ್ನಾನ ಮಾಡುವುದರಿಂದ ಆರೋಗ್ಯವಾಗಿರುತ್ತಾರೆ ಎನ್ನಲಾಗುತ್ತದೆ. ಯಾಕೆಂದರೆ ಅಲ್ಲಿ ಮಂದಿರವಿರುತ್ತದೆ. ಮಂದಿರದ ಸುತ್ತಮುತ್ತಲ ವಾತಾವರಣವು ಆರೋಗ್ಯಕರವಾಗಿರುತ್ತದೆ. ಅಲ್ಲಿನ ವಾತಾವರಣವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಮಂದಿರದಲ್ಲಿ ಸಾಮಾನ್ಯವಾಗಿ ಮೆಟ್ಟಿಲುಗಳಿರುತ್ತದೆ. ಆ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರಿಂದ ನಿಮ್ಮ ಕಾಲಿಗೂ ವ್ಯಾಯಾಮವಾದಂತಾಗುತ್ತದೆ. ಭಜನೆ ಕೀರ್ತನೆಗಳಲ್ಲಿ ಪಾಲ್ಗೊಳ್ಳುವುದರಿಂದ ಅಂಗೈಯ ವ್ಯಾಯಾಮವೂ ಆಗುತ್ತದೆ. ಇದು ಒಂದು ರೀತಿಯ ಅಕ್ಯೂಪೆಂಟಚರ್ ಯೋಗವಾಗಿದೆ. ಅಕ್ಯೂಪೆಂಚರ್ ಅನೇಕ ರೋಗಗಳನ್ನು ಗುಣಮುಖವಾಗಿಸುತ್ತದೆ.

 ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ? ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ?

ಪುಣ್ಯ ಸ್ನಾನದ ಫಲ

ಪುಣ್ಯ ಸ್ನಾನದ ಫಲ

PC:Dineshkannambadi

ಬಹಳಷ್ಟು ಜನರು ತೀರ್ಥ ಸ್ನಾನಕ್ಕಾಗಿಯೇ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪುಣ್ಯ ಸ್ನಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಕೆಲವರದ್ದಾದರೆ, ಇಲ್ಲಿನ ನೀರಿನಿಂದ ರೋಗಗಳು ಗುಣಮುಖವಾಗುತ್ತವೆ ಎನ್ನುವುದು ಇನ್ನೂ ಕೆಲವರ ನಂಬಿಕೆ. ಹಾಗಾಗಿ ತೀರ್ಥ ಸ್ನಾನ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಎಳ್ಳಮವಾಸ್ಯೆ ದಿನವಂತೂ ಸಮುದ್ರದಲ್ಲಿ ಸ್ನಾನ ಮಾಡಲು ಸಾಕಷ್ಟು ಸಂಖ್ಯೆಯ ಭಕ್ತರು ಜಮಾಯಿಸುತ್ತಾರೆ.

ಸಕಾರಾತ್ಮಕ ಶಕ್ತಿ ಸಿಗುತ್ತದೆ

ಸಕಾರಾತ್ಮಕ ಶಕ್ತಿ ಸಿಗುತ್ತದೆ

PC: Ilya Mauter

ಮಂದಿರವನ್ನು ದೇವಸ್ಥಾನವನ್ನು, ತೀರ್ಥವನ್ನು ಸಕಾರಾತ್ಮಕ ಶಕ್ತಿಯ ಕೇಂದ್ರ ಎನ್ನಲಾಗುತ್ತದೆ. ಇದು ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ಬಹಳಷ್ಟು ಜನರು ದೇವಸ್ಥಾನದಲ್ಲಿ ಬಂದು ಜಪ ಮಾಡುತ್ತಾರೆ. ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಅವರ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ, ಶಾಂತಿ ಸಿಗುತ್ತದೆ. ಯಾರು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಾರೋ, ದೇವರ ದರ್ಶನ ಮಾಡುತ್ತಾರೋ ಅವರು ಯಾವಾಗಲೂ ಸಕಾರಾತ್ಮಕ ಯೋಚನೆಯನ್ನೇ ಹೊಂದಿರುತ್ತಾರೆ. ಅವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಸಕಾರಾತ್ಮಕ ಮನೋಭಾವದಿಂದ ಮಾಡುತ್ತಾರೆ.

ಹೊಸ ವ್ಯಕ್ತಿಗಳ ಭೇಟಿಯಾಗುತ್ತದೆ

ಹೊಸ ವ್ಯಕ್ತಿಗಳ ಭೇಟಿಯಾಗುತ್ತದೆ

ಹೊಸ ವ್ಯಕ್ತಿಗಳ ಭೇಟಿಯಾಗುತ್ತದೆತೀರ್ಥ ಯಾತ್ರೆಯ ಮೂಲಕ ನಾವು ನಮ್ಮ ಮನೆಯವರನ್ನು ಹೊರತುಪಡಿಸಿ ಹೊಸ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶವಿದೆ. ಹೊಸ ಮುಖಗಳ ಪರಿಚಯವಾಗುತ್ತದೆ. ತೀರ್ಥ ಯಾತ್ರೆಯ ಮೂಲಕ ಬೇರೆ ಬೇರೆ ಊರಿನ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿಸಬಹುದು.

ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ? ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ?

ದೇವಸ್ಥಾನದ ಪ್ರಸಾದ

ದೇವಸ್ಥಾನದ ಪ್ರಸಾದ

ಪ್ರತಿಯೊಂದು ದೇವಸ್ಥಾನದಲ್ಲೂ ವಿಭಿನ್ನ ಪ್ರಸಾದ ದೊರೆಯುತ್ತದೆ. ಅದರ ರುಚಿಯೂ ಭಿನ್ನವಾಗಿರುತ್ತದೆ. ಕೆಲವು ಮಂದಿರಗಳಲ್ಲಿ ಸಿಹಿ ಪ್ರಸಾದ ರೂಪದಲ್ಲಿ ಸಿಕ್ಕಿದರೆ, ಇನ್ನೂ ಕೆಲವು ಮಂದಿರಗಳಲ್ಲಿ ಖಾರ ಪ್ರಸಾದ ರೂಪದಲ್ಲಿ ಸಿಗುತ್ತದೆ. ತೀರ್ಥ ಯಾತ್ರೆಯ ಮೂಲಕ ವಿವಿಧ ದೇವಸ್ಥಾನಗಳ ವಿಶೇಷ ಪ್ರಸಾದವನ್ನು ಸವಿಯುವ ಅವಕಾಶವೂ ಸಿಗುತ್ತದೆ.

ಜ್ಞಾನವರ್ಧನೆಯಾಗುತ್ತದೆ

ಜ್ಞಾನವರ್ಧನೆಯಾಗುತ್ತದೆ

ಆರೋಗ್ಯದ ಜೊತೆಗೆ ಇದು ನಮ್ಮ ಆಧ್ಯಾತ್ಮಿಕ, ಬೌಗೋಳಿಕ ಹಾಗೂ ಐತಿಹಾಸಿಕ ಜ್ಞಾನವನ್ನು ಹೆಚ್ಚಿಸುತ್ತದೆ. ತೀರ್ಥ ಯಾತ್ರೆಯ ಮೂಲಕ ಅಲ್ಲಿನ ಇತಿಹಾಸಗಳ ಬಗ್ಗೆಯೂ ಜ್ಞಾನಸಿಗುತ್ತದೆ. ಬೇರೆ ಬೇರೆ ಊರಿನ ತೀರ್ಥ ಕ್ಷೇತ್ರವನ್ನು ಭೇಟಿ ಮಾಡುವ ಮೂಲಕ ಅಲ್ಲಿನ ಸಂಸ್ಕೃತಿ, ಪರಂಪರೆಯ ಬಗ್ಗೆಯೂ ತಿಳುವಳಿಕೆ ಮೂಡುತ್ತದೆ.

ಎಲ್ಲೆಲ್ಲಾ ತೀರ್ಥ ಸ್ನಾನಗಳಿವೆ

ಎಲ್ಲೆಲ್ಲಾ ತೀರ್ಥ ಸ್ನಾನಗಳಿವೆ

ಆಟಿ ಅಮಾವಾಸ್ಯೆಯಂದು ನರಹರಿ ಪರ್ವತದ ತುದಿಯಲ್ಲಿ ಸದಾಶಿವನ ಸಾನ್ನಿಧ್ಯದಲ್ಲಿರುವ ಪ್ರಾಕೃತಿಕವಾದ ಶಂಖ, ಚಕ್ರ, ಗದಾ ಮತ್ತು ಪದ್ಮದ ಆಕಾರದ ತೀರ್ಥಕೂಪದಲ್ಲಿ ಭಕ್ತರು ತೀರ್ಥಸ್ನಾನ ಮಾಡುತ್ತಾರೆ.
ಕುಂದಾಪುರ ತಾಲೂಕಿನ ಮದೂರು ಸಮೀಪದ ಬೆಳ್ಕಲ್ ಗೋವಿಂದ ತೀರ್ಥಕ್ಷೇತ್ರದಲ್ಲಿ ಎಳ್ಳುಅಮಾವಾಸ್ಯೆಯಂದು ತೀರ್ಥ ಸ್ನಾನ ಮಾಡುತ್ತಾರೆ.
ಮೇಲುಕೋಟೆಯಲ್ಲಿ ಶ್ರೀ ವೈರಮುಡಿ ಕಲ್ಯಾಣಿ ಯಲ್ಲಿ ಭಕ್ತರು ತೀರ್ಥಸ್ನಾನ ಮಾಡುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಸುಲ್ಲಮಲೆಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.
ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು.
ಧರ್ಮಸ್ಥಳದ ನೇತ್ರಾವತಿಯಲ್ಲಿ ಜನರು ತೀರ್ಥಸ್ನಾನ ಮಾಡುತ್ತಾರೆ.
ಕೂಡ್ಲು ತೀರ್ಥ, ಲಕ್ಷಣ ತೀರ್ಥ ಕೂಡಾ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X