Search
 • Follow NativePlanet
Share
» »ಕಣ್ಮನ ಸೆಳೆಯುವ ಹಾಸನದ ದೇವಾಲಯಗಳು ಮತ್ತು ಅಲ್ಲಿರುವ ಅಪ್ರತಿಮ ಕಲಾಕೃತಿಗಳ ಬಗ್ಗೆ ತಿಳಿಯೋಣ ಬನ್ನಿ

ಕಣ್ಮನ ಸೆಳೆಯುವ ಹಾಸನದ ದೇವಾಲಯಗಳು ಮತ್ತು ಅಲ್ಲಿರುವ ಅಪ್ರತಿಮ ಕಲಾಕೃತಿಗಳ ಬಗ್ಗೆ ತಿಳಿಯೋಣ ಬನ್ನಿ

ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳರ ಆಡಳಿತ ಸ್ಥಾನವಾದ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಅದರಲ್ಲೂ ವಿಶೇಷವಾಗಿ ದೇವಾಲಯಗಳು ಮತ್ತು ಇನ್ನಿತರ ಧಾರ್ಮಿಕ ತಾಣಗಳು ಪ್ರವಾಸಿಗರಲ್ಲಿ ಹೆಚ್ಚಿನ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಜಿಲ್ಲೆಯಲ್ಲಿರುವ ಪ್ರಧಾನ ದೇವತೆ ಹಾಸನಾಂಬೆಯ ದೇವಾಲಯವಿರುವ ಕಾರಣದಿಂದಾಗಿ ಈ ಸ್ಥಳಕ್ಕೆ ಅದೇ ಹೆಸರನ್ನಿಡಲಾಗಿದೆ.

ದಾಖಲೆಗಳ ಪ್ರಕಾರ ಹಾಸನದ ಇತಿಹಾಸವು ಬೆಳವಣಿಗೆ ಮತ್ತು ಯಶಸ್ಸಿನ ಉತ್ತುಂಗದಲ್ಲಿದ್ದ ಹೊಯ್ಸಳ ಸಾಮ್ರಜ್ಯಕ್ಕೂ ಹಳೆಯದಾಗಿದೆ. ನಂತರ, ಇದು ವಿಜಯನಗರ ಸಾಮ್ರಾಜ್ಯ ಮತ್ತು ಮೊಘಲ್ ಸಾಮ್ರಾಜ್ಯವನ್ನು ಒಳಗೊಂಡಂತೆ ಹಲವಾರು ಇತರ ರಾಜವಂಶಗಳಿಂದ ಆಳಲ್ಪಟ್ಟಿತು.

channakeshavachannakeshava

ಆದ್ದರಿಂದ, ಗತಕಾಲದ ದಂತಕಥೆಗಳನ್ನು ಪ್ರತಿಬಿಂಬಿಸುವ ಸಾಕಷ್ಟು ಐತಿಹಾಸಿಕ ಸ್ಮಾರಕಗಳನ್ನು ನೀವು ಅದರ ಗಡಿಗಳಲ್ಲಿ ಕಾಣಬಹುದು. ಆದಾಗ್ಯೂ, ಹೆಚ್ಚಿನ ಜನಪ್ರಿಯ ಪ್ರವಾಸಿ ತಾಣಗಳು ದೇವಾಲಯಗಳ ರೂಪದಲ್ಲಿ ಹೊಯ್ಸಳರ ಕಾಲದ ವಾಸ್ತುಶಿಲ್ಪದ ಅದ್ಭುತಗಳನ್ನು ಒಳಗೊಂಡಿವೆ. ಆದ್ದರಿಂದ, ಉತ್ತಮ ಕಲಾತ್ಮಕತೆಯ ನಿದರ್ಶನಗಳಾಗಿರುವ ಹಾಸನದ ಈ ಕಣ್ಮನ ಸೆಳೆಯುವ ದೇವಾಲಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

1. ಬುಸೇಶ್ವರ ದೇವಾಲಯ

ನಗರ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಕೊರವಂಗಲ ಎಂಬ ಸಣ್ಣ ಕುಗ್ರಾಮದಲ್ಲಿ ಬುಸೆಶ್ವರ ದೇವಾಲಯವು ಹೊಯ್ಸಳರ ಕಾಲದಲ್ಲಿ ರಚಿಸಲಾದ ಮೇರುಕೃತಿಗಳಲ್ಲಿ ಒಂದಾಗಿದೆ. ರಾಜನ ಪಟ್ಟಾಭಿಷೇಕವನ್ನು ಗೌರವಿಸುವ ಸಲುವಾಗಿ ಹೊಯ್ಸಳ ಸೈನ್ಯದ ಅಧಿಕಾರಿಯಾದ ಬುಸಿ 12 ನೇ ಶತಮಾನದ ಆರಂಭದಲ್ಲಿ ಈ ದೇವಾಲಯವನ್ನು ನಿರ್ಮಿಸಿದನು.

ಈ ದೇವಾಲಯದ ಹತ್ತಿರದಲ್ಲಿ ಇನ್ನೆರಡು ದೇವಾಲಯಗಳಿದ್ದು, ಇದನ್ನು ಬುಸಿಯ ಸಹೋದರರಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ದೇವಾಲಯಗಳ ಗೋಡೆಗಳು ಮತ್ತು ಸ್ತಂಭಗಳ ಮೇಲೆ ಸಂಕೀರ್ಣವಾದ ಮಾದರಿಗಳು ಮತ್ತು ಸುಂದರವಾದ ವಿನ್ಯಾಸಗಳ ಬಳಕೆಯನ್ನು ಪರಿಗಣಿಸಿ, ಈ ಎಲ್ಲಾ ದೇವಾಲಯಗಳು ಖಂಡಿತವಾಗಿಯೂ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ವಾಸ್ತುಶಿಲ್ಪದ ಸೌಂದರ್ಯವನ್ನು ಪ್ರದರ್ಶಿಸುತ್ತವೆ.

ಇಂದು, ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ ಹಾಗೂ ಇತಿಹಾಸ ಪ್ರಿಯರು ಮತ್ತು ಸಾವಿರಾರು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ದೇವಾಲಯದ ಸುತ್ತಲೂ ದಟ್ಟವಾದ ಹಸಿರು ವಾತಾವರಣವಿರುವುದರಿಂದ ದೇವಾಲಯಕ್ಕೆ ನೈಸರ್ಗಿಕ ಪರಿಸರವನ್ನು ಒದಗಿಸುತ್ತದೆ.

2. ಚೆನ್ನಕೇಶವ ದೇವಾಲಯ

ಹಾಸನ ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬೇಲೂರಿನಲ್ಲಿ ನೆಲೆಸಿರುವ ಚೆನ್ನಕೇಶವ ದೇವಾಲಯವು ನಿಸ್ಸಂದೇಹವಾಗಿಯೂ ಹಾಸನದ ಅತ್ಯಂತ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯಗಳಲ್ಲಿ ಒಂದಾಗಿದೆ. ಹನ್ನೆರಡನೆ ಶತಮಾನಕ್ಕಿಂತಲೂ ಹಿಂದಿನ ಇತಿಹಾಸವಿರುವ ಈ ದೇವಾಲಯವನ್ನು ಹೊಯ್ಸಳ ರಾಜ ವಿಷ್ಣುವರ್ಧನನು ನಿರ್ಮಿಸಿದನು.

ಈ ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲು ಸುಮಾರು 103 ವರ್ಷಗಳು ಬೇಕಾಯಿತು. ಈ ದೇವಾಲಯವು ವಿಷ್ಣು ದೇವರಿಗೆ ಅರ್ಪಿತವಾದುದಾಗಿದ್ದು, ಈ ದೇವಾಲಯದ ಉಲ್ಲೇಖವನ್ನು ಹಲವಾರು ಪ್ರಾಚೀನ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಆದುದರಿಂದ ಇದನ್ನು ಹಿಂದುಗಳಿಗೆ ಮಹತ್ವವಾದ ಯಾತ್ರಾಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಈ ದೇವಾಲಯವು ಯಗಾಚಿ ನದಿಯ ದಂಡೆಯಲ್ಲಿ ನೆಲೆಸಿದ್ದು, ದೇವಾಲಯ ಆವರಣದ ಹವಾಮಾನ ಆಹ್ಲಾದಕರವಾಗಿದ್ದು ಅನುಕೂಲಕರವಾಗಿದೆ.

ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಹೇಳಬೇಕೆಂದರೆ, ಈ ದೇವಾಲಯವು ಗಮನಾರ್ಹವಾದ ರಚನೆಯನ್ನು ಒಳಗೊಂಡಿದ್ದು ಇವುಗಳಲ್ಲಿ ವಿನ್ಯಾಸಗಳು, ಕೆತ್ತನೆಗಳು, ಶಾಸನಗಳು ಮತ್ತು ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ಸಾಮಾನ್ಯ ಜನರ ಜನಜೀವನ ಶೈಲಿ ಇತ್ಯಾದಿಗಳನ್ನು ಒಳಗೊಂಡಿರುವ ಚಿತ್ರಣಗಳು ಇವೆಲ್ಲವನ್ನೂ ಹೊಂದಿದೆ. ಎಂದಾದರೂ ನೀವು ಹಾಸನದಲ್ಲಿರುವಿರಿ ಎಂದಾದಲ್ಲಿ, ಈ ದೇವಾಲಯಕ್ಕೆ ಭೇಟಿ ಕೊಡುವುದನ್ನು ಮಾತ್ರ ತಪ್ಪಿಸಲೇಬಾರದು.

3. ಲಕ್ಷ್ಮೀ ನರಸಿಂಹ ದೇವಾಲಯ

ಹಳೆಯ ಕಾಲದ ಇನ್ನೊಂದು ಅದ್ಬುತ ಎಂದರೆ ಇಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯ ಈ ದೇವಾಲಯವು ಹಾಸನದಿಂದ 40 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿಯಾದ ಜಾವಗಲ್ ನಲ್ಲಿದ್ದು, ಈ ದೇವಾಲಯಕ್ಕೂ ಹದಿಮೂರನೇ ಶತಮಾನದ ಹಿಂದಿನ ಇತಿಹಾಸವಿದೆ. ಬೇರೆ ದೇವಾಲಯಗಳಂತೆ ಈ ದೇವಾಲಯವೂ ಕೂಡಾ ಹೊಯ್ಸಳ ಸಾಮ್ರಾಜ್ಯದ ಕಾಲಕ್ಕೆ ಸೇರಿದುದಾಗಿದೆ. ಮತ್ತು ಈ ದೇವಾಲಯವು ಇದರ ಅತ್ಯದ್ಬುತ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ವಿಷ್ಣುದೇವರ ಅವತಾರವಾದ ನರಸಿಂಹ ದೇವರಿಗೆ ಅರ್ಪಿತವಾದುದಾಗಿದ್ದು,ಇದನ್ನು ಎತ್ತರದ ವೇದಿಕೆಯಲ್ಲಿ ಸಮಾನ ಗಾತ್ರದ ಮೂರು ದೇವಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಹಲವಾರು ಶಿಲ್ಪಗಳು ಕೆತ್ತನೆಗಳು ಮತ್ತು ಚಿತ್ರಗಳೊಂದಿಗೆ ಅಲಂಕರಿಸಲಾಗಿದೆ.

kedareshwara

4. ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯವು 12 ನೇ ಶತಮಾನದ ಆರಂಭದಲ್ಲಿ ಹಾಸನದಿಂದ ಸ್ಥಳಾಂತರಗೊಂಡ ನಂತರ ಹೊಯ್ಸಳ ಸಾಮ್ರಾಜ್ಯದ ನಂತರದ ರಾಜಧಾನಿಯಾದ ಹಳೇಬೀಡುನಲ್ಲಿರುವ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇದು ಶಿವನಿಗೆ ಸಮರ್ಪಿತವಾಗಿದೆ. ಸೋಪು ಕಲ್ಲಿನಿಂದ ನಿರ್ಮಿಸಲಾದ ಈ ಅದ್ಭುತ ದೇವಾಲಯವು ಪಟ್ಟಿಯಲ್ಲಿರುವ ಇತರ ದೇವಾಲಯಗಳಂತೆಯೇ ಇದೆ, ಏಕೆಂದರೆ ಇದು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಮೂರು ದೇವಾಲಯಗಳನ್ನು ಒಳಗೊಂಡಿದೆ.

ಆದರೂ ಅದರ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾದ ಮಾದರಿಗಳು ಮತ್ತು ವಿನ್ಯಾಸಗಳು ಇತರ ದೇವಾಲಯಗಳಿಗಿಂತ ಭಿನ್ನವಾಗಿವೆ. ಸುಂದರವಾದ ಉದ್ಯಾನವನದಿಂದ ಆವೃತವಾಗಿರುವ ಕೇದಾರೇಶ್ವರ ದೇವಾಲಯದ ಪರಿಸರವು ಖಂಡಿತವಾಗಿಯೂ ನಿಮ್ಮಗೆ ವಿಶ್ರಾಂತಿಯ ಅನುಭವ ನೀಡುತ್ತದೆ ಆದ್ದರಿಂದ, ಈ ಮೇರುಕೃತಿಗೆ ಭೇಟಿ ನೀಡಿ ಮತ್ತು ಈ ಋತುವಿನಲ್ಲಿ ಅದರ ಇತಿಹಾಸವನ್ನು ಅನ್ವೇಷಿಸಿದರೆ ಹೇಗೆ?

hoysaleshwara

5. ಹೊಯ್ಸಳೇಶ್ವರ ದೇವಾಲಯ

ಹಾಸನದಿಂದ 30 ಕಿ.ಮೀ ದೂರದಲ್ಲಿರುವ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವು ಎಲ್ಲಕ್ಕಿಂತ ಪ್ರಸಿದ್ದವಾದ ದೇವಾಲಯವಾಗಿದೆ. ಈ ದೇವಾಲಯವು ಹೊಯ್ಸಳ ರಾಜ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟ ಮತ್ತೊಂದು ಅತ್ಯುತ್ತಮ ದೇವಾಲಯವಾಗಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು 12 ನೇ ಶತಮಾನದ ಆರಂಭದಲ್ಲಿನ ಇತಿಹಾಸವಿದೆ ಮತ್ತು ಆದ್ದರಿಂದ ಹೊಯ್ಸಳ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ., ಹಿಂದೆ ಹಲವಾರು ಮುಸ್ಲಿಂ ದಾಳಿಕೋರರು ಲೂಟಿ ಮಾಡಿದ ಕಾರಣ, ಈ ದೇವಾಲಯವು ಇಂದು ಪಾಳುಬಿದ್ದಿದ್ದರೂ ಸಹ, ಇದು ಇನ್ನೂ ಕರ್ನಾಟಕದಲ್ಲಿ ಅತಿ ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಪ್ರತಿಯೊಬ್ಬ ಇತಿಹಾಸ ಪ್ರೇಮಿ ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳು ಭೇಟಿ ನೀಡಲೇಬೇಕಾದ ಸ್ಮಾರಕವಾಗಿದೆ. ಹಾಗಾದರೆ, ಈಗ ಈ ಅದ್ಭುತ ಕಲಾಕೃತಿಯ ಪ್ರವಾಸವನ್ನು ಯೋಜಿಸುವ ಬಗ್ಗೆ ಯೋಚಿಸಿ.

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X