Search
  • Follow NativePlanet
Share
» »ಮುಂಬೈನಲ್ಲಿರುವ ಈ ಫೇಮಸ್ ಬಿಯರ್ ಅಡ್ಡಾದಲ್ಲಿ ಬಿಯರ್ ಕುಡಿದಿದ್ದೀರಾ?

ಮುಂಬೈನಲ್ಲಿರುವ ಈ ಫೇಮಸ್ ಬಿಯರ್ ಅಡ್ಡಾದಲ್ಲಿ ಬಿಯರ್ ಕುಡಿದಿದ್ದೀರಾ?

ಈಗಿನ ಕಾಲದಲ್ಲಿ ಬಿಯರ್ ಕುಡಿಯದೇ ಇರೋರು ಸಿಗೋದೇ ಅಪರೂಪ. ಯಾವುದೇ ಪಾರ್ಟಿ, ಸಮಾರಂಭಗಳಿರಲಿ ಡ್ರಿಂಕ್ಸ್ ಅಂತೂ ಇದ್ದೇ ಇರುತ್ತೆ. ಅದರಲ್ಲೂ ಬಿಯರ್ ಅನ್ನೋದು ಬಹಳ ಕಾಮನ್ ಡ್ರಿಂಕ್ ಆಗಿಬಿಟ್ಟಿದೆ. ಯುವಕ, ಯುವತಿಯರಿಗಂತೂ ಬಿಯರ್ ಇಲ್ಲದೆ ಪಾರ್ಟಿ ಕಿಕ್ ಬರೋದಿಲ್ಲ. ಹೀಗಿರುವಾಗ ಇಂದು ನಾವು ಮುಂಬೈಯಲ್ಲಿರುವ ಕೆಲವು ಬೆಸ್ಟ್ ಬಿಯರ್ ತಾಣಗಳ ಬಗ್ಗೆ ತಿಳಿಸಲಿದ್ದೇವೆ. ಇದು ನಿಮ್ಮ ಬಜೆಟ್‌ ಒಳಗೆ ಬಿಯರ್ ಪಾರ್ಟಿ ಮಾಡಲು ಸೂಕ್ತ ತಾಣವಾಗಿದೆ.

ಡೂಲಿಲಿ ಟ್ಯಾಪ್ರೂಮ್

ಇದು ಮೊದಲಿಗೆ ಪುಣೆಯಲ್ಲಿ ಪ್ರಾರಂಭವಾಯಿತು, ಅಲ್ಲಿಂದ ಅವರು ಪ್ರತಿ ದಿನ ತಮ್ಮ ತಾಜಾ ಬಿಯರ್‌ಗಳನ್ನು ಪಡೆಯುತ್ತಾರೆ. ನಂತರ ಅವರು ತಮ್ಮ ಶಾಖೆಯನ್ನು ಬಾಂದ್ರಾ ಮತ್ತು ಅಂಧೇರಿಗೆ ವಿಸ್ತರಿಸಿದ್ದಾರೆ. ಕ್ರಾಫ್ಟ್ ಬಿಯರ್‌ಗಳಿಗಾಗಿ ಈ ಸ್ಥಳಕ್ಕೆ ಭೇಟಿ ನೀಡಿ. ಹಿಮಾಲಯನ್ ಸೇಬುಗಳಿಂದ ಮಾಡಿದ ಜನಪ್ರಿಯ ಆಪಲ್ ಸೈಡರ್ ಸ್ವಾದವನ್ನು ನೀವು ಇಲ್ಲಿ ಟ್ರೈ ಮಾಡಲೇ ಬೇಕು. ಒಂದು ಸಿಪ್ ಕುಡಿದರೆ ಸಿಹಿ ಆಪಲ್ ಪರಿಮಳವನ್ನು ರುಚಿ ಮಾಡಬಹುದು ಮತ್ತು ಇದು ಇನ್ನೂ ಉತ್ತಮವಾದ ಹಾಗೂ ಹಳೆಯ ಬಿಯರ್ ಫಿಜ್ ಅನ್ನು ಉಳಿಸಿಕೊಳ್ಳಲು ನಿರ್ವಹಿಸುತ್ತದೆ. ಅಲ್ಲದೆ, ನೀವು ಓಟ್ ಮೀಲ್ ಸ್ಟೌಟ್ ಮತ್ತು ಪೋರ್ಟರ್ ಅನ್ನು ರುಚಿನೋಡಿ.

ವೈಟ್ ಔಲ್

ಮುಂಬೈನಲ್ಲಿರುವ ವೈಟ್ ಔಲ್ ಬಿಯರ್ ಪ್ರಿಯರಿಗೆ ಒಂದು ಅದ್ಭುತ ತಾಣವಾಗಿದೆ. ವಿವಿಧ ಶೈಲಿಯ ಬಿಯರ್‌ಗಳನ್ನು ಇಲ್ಲಿ ಸವಿಯಬಹುದು. ವೈಟ್ ಔಲ್ ಬಿಯರ್‌ನ ಪ್ರತಿಯೊಂದು ವಿಧವೂ ಸಣ್ಣ ಬ್ಯಾಚ್‌ಗಳಲ್ಲಿ ತಯಾರಿಸಲಾಗುತ್ತದೆ. ಅವರ ಪ್ರಸ್ತುತ ಪೋರ್ಟ್ಫೋಲಿಯೊವು ಎಂಟು ಶೈಲಿಗಳನ್ನು ಒಳಗೊಂಡಿದೆ. ಷಾಡೊ, ಇಂಗ್ಲಿಷ್ ಪೋರ್ಟರ್ , ಹಾಲ್ಸೊನ್, ಅಚ್ಚರಿಯ ಜನಪ್ರಿಯ ಜರ್ಮನ್ ಹೆಫ್ವೆಜೆನ್, ಟಾರ್ಪಿಡೋ, ಪಂಚ್ ಅಮೇರಿಕನ್ ಪೇಲ್ ಅಲೆ , ಡಯಾಬ್ಲೊ, ಐರಿಷ್ ರೆಡ್ ಅಲೆ ಏಸ್, ಫ್ರೆಂಚ್ ಆಪಲ್ ಸೈಡರ್ , ಪಾಲಿನಾ, ಜರ್ಮನ್ ಕೊಲ್ಷ್ ಮತ್ತು ಬೆಲ್ಜಿಯನ್ ವಿಟ್ .

ಬಾರ್ಕಿಂಗ್ ಡಿಯರ್

ಬಾರ್ಕಿಂಗ್ ಡಿಯರ್ ಬಿಯರ್ ಪ್ರೇಮಿಗಳು! ವಿವಿಧ ರೀತಿಯ ಬಿಯರ್ ಶೈಲಿಗಳನ್ನು ಸವಿಯಲಿ ಇಷ್ಟಪಡುವುದಾದರೆ ನೀವು ಬ್ರೂವರಿಯನ್ನು ಆಯ್ಕೆ ಮಾಡುವುದು ಉತ್ತಮ. ಇದೊಂದು ಪಬ್‌ ಆಗಿದ್ದು ಇಲ್ಲಿ ವಾರಾದ್ಯಂತ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಬುಧವಾರ ಲೇಡಿಸ್ ನೈಟ್ ಇದ್ದರೆ , ಗುರುವಾರ ಮ್ಯೂಸಿಶಿಯನ್‌ನ್ನು ಕರೆಸಲಾಗುತ್ತದೆ. ಶುಕ್ರವಾರ ರೆಟ್ರೋ ನೈಟ್ ಡಿಜೆ ಇರುತ್ತದೆ. ಶನಿವಾರ ಫುಟ್ಬಾಲ್ ಟೂರ್ನಮೆಂಟ್ ಹಾಗೆಯೇ ರವಿವಾರ ಲೈವ್ ಸ್ಫೋರ್ಟ್ ಇರುತ್ತದೆ. ಇಲ್ಲಿ ಬಿಯರ್ ಜೊತೆಗೆ ಮನರಂಜನೆಯನ್ನೂ ಅನುಭವಿಸಬಹುದು.

ಬ್ರೂಬಾಟ್ ಈಟರಿ ಹಾಗೂ ಬ್ರೇವರಿ

ಅಂದೇರಿಯಂತಹ ನಗರದಲ್ಲಿ ಬಿಯರ್‌ಗಾಗಿ ಗಂಟೆಗಟ್ಟಲೆ ಸಾಲು ನಿಲ್ಲುವುದು ಯಾರಿಗೆ ತಾನೇ ಇಷ್ಟ ಹೇಳಿ? ಆದರೆ ಬ್ರೂಬಾಟ್ ಈಟರಿ ಹಾಗೂ ಬ್ರೇವರಿ ಇದು ಅಮೆರಿಕನ್ ಬ್ರೂ ಮಾಸ್ಟರ್ ಜೂಲಿ ಬಗೆಟ್‌ನಿಂದ ತಯಾರಿಸಿದ ಕ್ಲಾಸಿಕ್ ಕ್ರಾಫ್ಟ್ ಬಿಯರ್‌ಗಳನ್ನು ನೀಡುತ್ತದೆ. ಇಲ್ಲಿನ ಮುಖ್ಯ ಆಕರ್ಷಣೆ ಸ್ಕೈವಾಕರ್. ಎಲ್ಲಾ ಸ್ಟಾರ್ ವಾರ್ಸ್ ಅಭಿಮಾನಿಗಳಿಗೆ ವಿಶೇಷವಾಗಿ ಕೋಲ್ಷ್ ಬಿಯರ್ ತಯಾರಿಸಲಾಗುತ್ತದೆ. ಅಲ್ಲದೆ, ಬ್ಲ್ಯಾಕ್ ಮಾಂಬ ಚಾಕೊಲೇಟ್ ಓಟ್ ಕ್ರೀಮ್ ಸ್ಟೌಟ್ ನೀಡಲಾಗುತ್ತದೆ. ಬಿಸಿ ಚಿಕನ್ ವಿಂಗ್ಸ್, ಕ್ಲಾಸಿಕ್ ಸಂಗೀತದೊಂದಿಗೆ ನಿಮ್ಮ ಬಿಯರ್‌ನ್ನು ಆನಂದಿಸಬಹುದು.

ಕೆಫೆ ಲಿಯೋಪೋಲ್ಡ್ಗೆ

ಮುಂಬೈನಲ್ಲಿರುವ ಕೆಫೆ ಲಿಯೋಪೋಲ್ಡ್ಗೆ ಭೇಟಿ ನೀಡದೆ ಮುಂಬೈ ಭೇಟಿ ಅಪೂರ್ಣ ಎಂದೇ ಹೇಳಬಹುದು. ಇಲ್ಲಿ ಸಂಜೆ 7ಗೆ ಬಂದರೆ ಮಾತ್ರ ಟೇಬಲ್ ಸಿಗುತ್ತದೆ. ಇನ್ನು ಸ್ಥಳದಲ್ಲೇ ಟೇಬಲ್ ಬುಕ್ ಮಾಡುತ್ತೇನೆ ಎಂದರೆ ಟೇಬಲ್ ಸಿಗೋದು ಕಷ್ಟ. ಅಷ್ಟೊಂದು ಪ್ರಸಿದ್ಧವಾಗಿದೆ ಈ ತಾಣ. ಕೆಳ ಮಟ್ಟದಲ್ಲಿ ಕುಳಿತು ಜನ ಸಾಮಾನ್ಯರ ಅಚ್ಚುಮೆಚ್ಚಿನ ಬಿಯರ್ ಕಿಂಗ್‌ಫಿಶರ್ ಗೋಪುರವನ್ನು ಆನಂದಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X