Search
  • Follow NativePlanet
Share
» »ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವಾಮಿಗೆ ನೈವೇದ್ಯವನ್ನು ಸಮರ್ಪಿಸುವುದೆಂದರೆ ಸೃಷ್ಟಿಯಲ್ಲಿ ಹ

ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವಾಮಿಗೆ ನೈವೇದ್ಯವನ್ನು ಸಮರ್ಪಿಸುವುದೆಂದರೆ ಸೃಷ್ಟಿಯಲ್ಲಿ ಹಸಿವಿನಿಂದ ಇರುವ ಜೀವಿಗಳಿಗೆ ಸಂತೃಪ್ತಿಗೊಳಿಸುವಂತಾಗುತ್ತದೆ ಎಂದು ನಮ್ಮ ಪುರಾಣಗಳು ತಿಳಿಸುತ್ತವೆ. ಕಲಿಯುಗ ದೈವವಾಗಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಿರುಮಲದಲ್ಲಿ ದಿನ ನಿತ್ಯ ಮೂರು ಬಾರಿ ನೈವೇದ್ಯವನ್ನು ಸಮರ್ಪಿಸುತ್ತಾರೆ. ತಿರುಮಲ ಗರ್ಭಗುಡಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಎಷ್ಟು ಪ್ರಮಾಣದಲ್ಲಿ ನೈವೇದ್ಯವನ್ನು ಸಮರ್ಪಿಸಬೇಕು ಎಂಬ ವಿಷಯವನ್ನು ಶಾಸ್ತ್ರದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ನೈವೇದ್ಯದ ಸಮಯದಲ್ಲಿ ಯಾವ ಯಾವ ಆಚಾರಗಳನ್ನು ಪಾಲಿಸುತ್ತಾರೆ ಎಂಬುದರ ಕುರಿತು ಲೇಖನದ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

ತಿರುಪತಿ

ತಿರುಪತಿ

ಸಾಮಾನ್ಯವಾಗಿ ತಿರುಪತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ತಿರುಪತಿಯ ಲಡ್ಡುಗಳು. ಅಂತಹ ಸ್ವಾದಿಷ್ಟವಾದ ಲಡ್ಡುಗಳು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ?. ಶ್ರೀ ವೆಂಕಟೇಶ್ವರ ಸ್ವಾಮಿಗೆ ಲಡ್ಡುವಿನ ಜೊತೆಗೆ ಮೂರು ಬಾರಿ ನೈವೇದ್ಯವನ್ನು ಸಮರ್ಪಿಸುತ್ತಾರೆ. ತದನಂತರ ಆ ಪ್ರಸಾದಗಳನ್ನು ಭಕ್ತರಿಗೆ ಹಂಚುತ್ತಾರೆ. ಬೆಳಗ್ಗೆ 6 ಗಂಟೆಯಿಂದ ಹಿಡಿದು ಆರುವರೆ ಗಂಟೆಯ ಒಳಗೆ ಸಮರ್ಪಿಸುವ ನೈವೇದ್ಯವನ್ನು 'ಬಾಲ ಭೋಗಂ" ಎಂದು ಕರೆಯುತ್ತಾರೆ. ಆ ಬಾಲ ಭೋಗಂ ನೈವೇದ್ಯದಲ್ಲಿ ಮೊಸರನ್ನ ಕೇಸರಿಭಾತ್, ಸಕ್ಕರೆ ಪೊಂಗಲ್, ಪುಳಿಯೋಗರೆ ಇರುತ್ತದೆ. ಹಾಗೆಯೇ ಮಧ್ಯಾಹ್ನಕ್ಕೆ ಸಮರ್ಪಿಸುವ ನೈವೇದ್ಯವನ್ನು "ರಾಜ ಭೋಗಂ" ಎಂದು ಕರೆಯುತ್ತಾರೆ.

PC:YOUTUBE

ರಾಜ ಭೋಗಂ

ರಾಜ ಭೋಗಂ

ಈ ರಾಜಭೋಗ ನೈವೇದ್ಯವನ್ನು 11 ಗಂಟೆಯಿಂದ 11.30 ಗಂಟೆಯೊಳಗೆ ಸಮರ್ಪಿಸುತ್ತಾರೆ. ಇದರಲ್ಲಿ ಪುಳಿಯೋಗರೆ ಸೇರಿದಂತೆ ಅನೇಕ ಸ್ವಾದಿಷ್ಟ ಅಡುಗೆಗಳನ್ನು ಸ್ವಾಮಿಗೆ ನೈವೇದ್ಯವಾಗಿ ಇಡುತ್ತಾರೆ. ಇನ್ನು ಸ್ವಾಮಿಗೆ ರಾತ್ರಿಯ ಸಮಯದಲ್ಲಿ ಸಮರ್ಪಿಸುವ ನೈವೇದ್ಯವನ್ನು "ಶಯನ ಭೋಗಂ" ಎಂದು ಕರೆಯುತ್ತಾರೆ. ರಾತ್ರಿಯ ಸಮಯದಲ್ಲಿ ಮೆಣಸಿನಿಂದ ತಯಾರಿಸಿದ ಅನ್ನ ,ಲಾಡು, ವಡೆಗಳನ್ನು ಹಾಗೂ ವಿವಿಧ ತರಕಾರಿಗಳಿಂದ ತಯಾರಿಸಿದ ಆಹಾರವನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಇದನ್ನು "ಶಾಖಾ ನಮ್" ಎಂದು ಕೂಡ ಕರೆಯುತ್ತಾರೆ. 7.00 ಗಂಟೆಯಿಂದ 8 ಗಂಟೆಯವರೆಗೆ ಸಮರ್ಪಿಸುವ ನೈವೇದ್ಯವನ್ನು "ಶಯನ ಭೋಗಂ" ಎಂದು ಕರೆಯುತ್ತಾರೆ.

PC:YOUTUBE

ಅಲ್ಪಾಹಾರ

ಅಲ್ಪಾಹಾರ

ಮೂರು ಹೊತ್ತಿನ ನೈವೇದ್ಯದ ಜೊತೆಗೆ ಅಲ್ಪಾಹಾರವನ್ನು ಸ್ವಾಮಿಗೆ ಸಮರ್ಪಿಸುತ್ತಾರೆ. ಉದಯ ಸುಪ್ರಭಾತವಾದ ನಂತರ ಸ್ವಚ್ಛವಾದ ಪಾತ್ರೆಯಲ್ಲಿ ಹಸುವಿನ ಹಾಲನ್ನು ಸಮರ್ಪಿಸುತ್ತಾರೆ. ಸಹಸ್ರನಾಮ ಅರ್ಚನೆಯಾದ ನಂತರ ಎಳ್ಳು ಹಾಗೂ ಬೆಲ್ಲವನ್ನು ನೈವೇದ್ಯವಾಗಿ ಇಡುತ್ತಾರೆ. ಅಲ್ಲಿಂದ ಸ್ವಾಮಿಗೆ ಅಲಂಕಾರ ಹಾಗೂ ಭಕ್ತರ ದರ್ಶನಕ್ಕೆ ಅವಕಾಶವನ್ನು ನೀಡುತ್ತಾರೆ.

PC:YOUTUBE

ರಾಜ ಭೋಗಂ

ರಾಜ ಭೋಗಂ

ಅಷ್ಟೋತ್ತರ ಶತಮಾನ ಅರ್ಚನೆಯಾದ ನಂತರ ರಾಜ ಭೋಗಂ ಸಮರ್ಪಣೆ ನಡೆಯುತ್ತದೆ. ಮತ್ತೆ ದರ್ಶನ ಪ್ರಾರಂಭವಾಗುತ್ತದೆ. ಸಂಜೆಯ ಸಮಯದಲ್ಲಿ ಆರಾಧನೆಯಾದ ನಂತರ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ತಾಜಾ ಹೂಗಳಿಂದ ಸ್ವಾಮಿಯನ್ನು ಅಲಂಕರಿಸುತ್ತಾರೆ. ಅರ್ಚನೆಯಾದ ನಂತರ ಶಯನ ಭೋಜನವನ್ನು ಸಮರ್ಪಿಸುತ್ತಾರೆ. ಅರ್ಧ ರಾತ್ರಿಯ ಸಮಯದಲ್ಲಿ ಬೆಲ್ಲದಿಂದ ತಯಾರಿಸಿದ ಅನ್ನವನ್ನು ಸಮರ್ಪಿಸುತ್ತಾರೆ. ಇನ್ನೂ ಸ್ವಾಮಿಯ ಏಕಾಂತ ಸಮಯದಲ್ಲಿ ಗೋಡಂಬಿ, ಬಾದಾಮಿ, ತಾಜಾ ಹಣ್ಣುಗಳು, ಬಿಸಿಯಾದ ಹಾಲು ಸಮರ್ಪಿಸುತ್ತಾರೆ.

PC:YOUTUBE

ಆಗಮ ಶಾಸ್ತ್ರದ ಪ್ರಕಾರ

ಆಗಮ ಶಾಸ್ತ್ರದ ಪ್ರಕಾರ

ಇನ್ನೂ ನೈವೇದ್ಯವನ್ನು ಏನನ್ನು ನೀಡಬೇಕು? ಎಷ್ಟನ್ನು ಸಮರ್ಪಿಸಬೇಕು? ಯಾರು ನೀಡಬೇಕು ? ಯಾವ ಸಮಯದಲ್ಲಿ ನೀಡಬೇಕು ? ಎಂಬ ಎಲ್ಲಾ ವಿಷಯವು ಸಂಕ್ಷಿಪ್ತವಾಗಿ ಆಗಮ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ನೈವೇದ್ಯವನ್ನು ಸಮರ್ಪಿಸುವ ಸಮಯದಲ್ಲಿ ವಾಸನೆಯನ್ನು ತೆಗೆದುಕೊಳ್ಳಬಾರದು ಎಂದು ಮೂಗಿಗೆ ಬಿಳಿ ವಸ್ತ್ರವನ್ನು ಅಡ್ಡವಾಗಿ ಕಟ್ಟಿಕೊಳ್ಳುತ್ತಾರೆ. ಸ್ವಾಮಿಗೆ ನೈವೇದ್ಯವನ್ನು ಸಮರ್ಪಿಸುವವರೆಗೂ ಹೊರಗಿನವರಿಗೆ ಕನಿಷ್ಠ ನೋಡುವುದಕ್ಕೂ ಕೂಡ ಅವಕಾಶವನ್ನು ನೀಡರು. ನೈವೇದ್ಯವನ್ನು ಸಮರ್ಪಿಸುವುದಕ್ಕಿಂತ ಮುಂಚೆ ಗರ್ಭಗುಡಿಯನ್ನು ಶುಚಿಗೊಳಿಸುತ್ತಾರೆ. ನೈವೇದ್ಯವನ್ನು ಸಮರ್ಪಿಸುವ ಸಮಯದಲ್ಲಿ ಆರ್ಚಕರು ಮಾತ್ರವೇ ಇರುತ್ತಾರೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X