Search
  • Follow NativePlanet
Share
» » ಭಾರತದ ಈ ಕೆಲವು ಬಿರಿಯಾನಿ ತಯಾರಿಸುವ ತಾಣಗಳಲ್ಲಿ ನಿಮ್ಮ ರುಚಿಯನ್ನು ಅನುಭವಿಸಿರಿ

ಭಾರತದ ಈ ಕೆಲವು ಬಿರಿಯಾನಿ ತಯಾರಿಸುವ ತಾಣಗಳಲ್ಲಿ ನಿಮ್ಮ ರುಚಿಯನ್ನು ಅನುಭವಿಸಿರಿ

By Manjula Balaraj Tantry

ಭಾರತದ ಯಾವುದೇ ಸ್ಥಳವಾಗಿರಲಿ ನೀವು ಮೂರು ಜನರಲ್ಲಿ ಒಬ್ಬರು ಬಿರಿಯಾನಿ ತಮ್ಮ ನೆಚ್ಚಿನ ಖಾದ್ಯವೆಂದು ಹೇಳುವುದನ್ನು ಕೇಳುವಿರಿ. ಇಂದು ಬಿರಿಯಾನಿಯು ಅಂತರಾಷ್ಟ್ರೀಯ ಖಾದ್ಯವೆನಿಸಿದ್ದು ಪ್ರಪಂಚಾದ್ಯಂತ ಇದರ ಮಳಿಗೆಗಳು ಹರಡಿವೆ. ಅದರಲ್ಲೂ ವಿಶೇಷವಾಗಿ ಏಷ್ಯಾದ ದಕ್ಷಿಣ ಭಾಗದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಅದರ ಸುವಾಸನೆ ಮತ್ತು ಅದ್ಬುತ ರುಚಿಯೊಂದಿಗೆ ಖಂಡಿತವಾಗಿಯೂ ಬಿರಿಯಾನಿ ಅಕ್ಕಿಯನ್ನು ಇಷ್ಟ ಪಡುವವರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತದೆ.

ಜಗತ್ತಿನ ಯಾವುದೇ ಭಾಗವಾಗಿರಲಿ ಬಿರಿಯಾನಿ ಪ್ರಿಯರು ಎಲ್ಲಾದರೂ ಈ ಅದ್ಬುತ ರುಚಿ ಹಾಗೂ ಸುವಾಸನೆವಿರುವ ಬಿರಿಯಾನಿ ಸಿಗುವ ಸ್ಥಳವನ್ನು ಕಂಡು ಹಿಡಿದೇ ಹಿಡಿಯುತ್ತಾರೆ. ಭಾರತದ ಎಲ್ಲಾ ಉಪ ಖಂಡಗಳಲ್ಲೂ ಹರಡಿರುವ ಈ ಬಿರಿಯಾನಿಯನ್ನು ಮಾಡುವ ನಾನಾ ಬಗೆಗಳಿವೆ ಅದರ ಮಾಡುವ ರೀತಿ ಬಳಸುವ ಪದಾರ್ಥಗಳು, ಮಸಾಲೆಗಳು ಉಪಯೋಗಿಸುವ ಮಾಂಸ ಅಥವಾ ತರಕಾರಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವ್ಯತ್ಯಾಸವಿದೆ.

ಬಿರಿಯಾನಿ ತಿನ್ನುವ ಕಡು ಬಯಕೆ ಹೊಂದಿರುವಿರಾ? ಹಾಗಾದರೆ ಇಲ್ಲಿ ಭಾರತದ ಕೆಲವು ಪ್ರಮುಖ ಸ್ಥಳಗಳನ್ನು ಪಟ್ಟಿ ಮಾಡಿದ್ದೇವೆ ಇಲ್ಲಿ ನೀವು ಅದ್ಬುತವಾದ ಮತ್ತು ಬಾಯಿನೀರೂರಿಸುವ ಬಿರಿಯಾನಿ ತಿನ್ನುವ ಬಯಕೆಯನ್ನು ಪೂರೈಸಿಕೊಳ್ಳ ಬಹುದು.

ದೆಹಲಿ

ದೆಹಲಿ

ನಿಮ್ಮ ಆಸೆ ಮತ್ತು ಬಯಕೆಗಳನ್ನು ಪೂರೈಸುವ ಒಂದು ಆದರ್ಶ ನಗರವೆನಿಸುವ ಖಂಡಿತವಾಗಿಯೂ . ಅಲ್ಲಿಯ ದಿನನಿತ್ಯದ ಜೀವನ ಶಾಪಿಂಗ್ ಅಥವಾ ಆಹಾರ ಪದ್ದತಿ ಯಾವುದೇ ಇರಲಿ ದೆಹಲಿಯು ನಿಮ್ಮ ಬಯಕೆಯನ್ನು ಪೂರ್ಣಗೊಳಿಸುತ್ತದೆ.

ಇಲ್ಲಿ ಮೊಘಲೈ ಖಾದ್ಯವು ಹೆಸರುವಾಸಿಯಾಗಿದೆ. ಮೊಘಲ್ ಅವಧಿಯಲ್ಲಿ ದೆಹಲಿಯನ್ನು ಬಿರಿಯಾನಿಯ ಜನ್ಮಸ್ಥಳ ಎಂದು ಕೆಲವೊಮ್ಮೆ ಪರಿಗಣಿಸಲಾಗುತ್ತದೆ. ಶಹಜಹಾನನ ಆಳ್ವಿಕೆಯ ಅವಧಿಯಲ್ಲಿ ಬಿರಿಯಾನಿಯನ್ನು ಪರಿಚಯಿಸಲಾಯಿತು ಎಂದು ಹೇಳಲಾಗುತ್ತದೆ. ಅಲ್ಲಿಂದ ಅವುಗಳನ್ನು ಮಾಡುವ ರೀತಿಯಲ್ಲಿ ರುಚಿ ಮತ್ತು ಸುವಾಸನೆಗಳಲ್ಲಿ ತರ ತರಹದ ಬದಲಾವಣೆ ಮಾಡಲಾಗಿ ಅದರ ಪ್ರಗತಿಯು ಸ್ಥಿರವಾಗಿದೆ.

ಇದನ್ನು ಮಸಾಲೆ ಮಿಶ್ರಿತ ಕರಿ ಮೆಣಸಿನಕಾಯಿಗಳು ಮತ್ತು ರಾಯಿತ ಜೊತೆಗೆ ಈ ಮೊಘಲೈ ಬಿರಿಯಾನಿಯನ್ನು ನಗರದ ವಿವಿಧ ಭಾಗಗಳಲ್ಲಿ ಸೇವಿಸಲಾಗುತ್ತದೆ . ಮೊಘಲೈ ಬಿರಿಯಾನಿ ಕೆಲವು ಸ್ಥಿರವಾದ ಪದಾರ್ಥಗಳನ್ನು ಹೊಂದಿದ್ದರೂ ಸಹ , ನಗರದ ಬೇರೆ ಬೇರೆ ಭಾಗಗಳಲ್ಲಿ ಅದರ ತಯಾರಿಕೆಯ ಶೈಲಿಯಲ್ಲಿ ತಮ್ಮದೇ ಆದ ವಿಭಿನ್ನ ವಿಶಿಷ್ಟತೆಯನ್ನು ಹೊಂದಿದೆ.

ನಿಜಾಮುದ್ದೀನ್ ಬಿರಿಯಾನಿಯನ್ನು ಮಾಂಸ ಮತ್ತು ಮಸಾಲೆಗಳ ಸೀಮಿತ ಬಳಕೆಯಿಂದ ತಯಾರಿಸಲಾಗುತ್ತದೆ. ಶಹಜಹಾನಬಾದ್ ಬಿರಿಯಾನಿಯನ್ನು ಆರೋಗ್ಯಕರ ಮಾಂಸಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಅಚಾರ್ ಬಿರಿಯಾನಿಯನ್ನು ವಿವಿಧ ಬಗೆಯ ಪದಾರ್ಥಗಳನ್ನು ಉಪಯೋಗಿಸಿ ದೆಹಲಿಯಲ್ಲಿ ತಯಾರಿಸಲಾಗುತ್ತದೆ.

ದೆಹಲಿಯಲ್ಲಿ ಹಲವಾರು ಬಿರಿಯಾನಿ ತಯಾರಿಸುವ ಸ್ಥಳಗಳಿದ್ದು ಇಲ್ಲಿ ನೀವು ಬಾಯಿ ಚಪ್ಪರಿಸಿ ತಿನ್ನಬಹುದಾದಂತಹ ಬಿರಿಯಾನಿಯ ರುಚಿಯನ್ನು ಸವಿಯಬಹುದು. ಅವುಗಳಲ್ಲಿ ಚಾಂದಿನಿ ಚೌಕ್, ಜಾಮಾ ಮಸ್ಜಿದ್ ನ್ಯಾಷನಲ್ ಮಾರುಕಟ್ಟೆ ಇತ್ಯಾದಿ ಸ್ಥಳಗಳು ಪ್ರಮುಖವಾದುದಾಗಿದೆ.

PC- Nundhaa

ಲಕ್ನೋ

ಲಕ್ನೋ

ವೈಭವೋಪೇತ ಆತಿಥ್ಯ ಮತ್ತು ಅವಧಿ ತಿನಿಸುಗಳಿಗೆ ನವಾಬರ ನಗರವಾದ ಲಕ್ನೋ ಬಿರಿಯಾನಿ ತಯಾರಿಸುವ ವಿಶ್ವದ ಹಳೆಯ ಸ್ಥಳಗಳಲ್ಲೊಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬಂದು ಇಲ್ಲಿಯ ನಗರದ ರಸ್ತೆ ರಸ್ತೆಗಳಲ್ಲಿ ತಯಾರಾಗುವ ಬಿರಿಯಾನಿ ಅಥವಾ ಗರಿ ಗರಿಯಾದ ಕಬಾಬ್ ನ ಸವಿಯನ್ನು ಸವಿಯದೇ ಇರಲು ಸಾಧ್ಯವೇ ಇಲ್ಲ.

ಲಕ್ನೋದ ಅವಧಿ ಬಿರಿಯಾನಿಯ ತಯಾರಿಕಾ ವಿಧಾನ ಮತ್ತು ಅದನ್ನು ಉಣ ಬಡಿಸುವ ಪದ್ದತಿ ಇನ್ನಿತರ ಬಿರಿಯಾನಿ ತಯಾರಿಕೆಗಳಿಗಿಂತ ವಿಭಿನ್ನವಾಗಿದೆ. ಇದು ನವಾಬರ ನಗರವಾದುದರಿಂದ ಇಲ್ಲಿ ಖಾದ್ಯಗಳನ್ನು ಬಡಿಸುವ ರೀತಿಯಲ್ಲೂ ವೈಭವೋಪೇತವಾಗಿರಬೇಕೆಂದು ಬಯಸುತ್ತಾರೆ.

ಇಲ್ಲಿ ಅನ್ನ ಮತ್ತು ಮಾಂಸವನ್ನು ಬೇರೆ ಬೇರೆಯಾಗಿ ಧಮ್ ಶೈಲಿಯಲ್ಲಿ ಬೇಯಿಸಲಾಗುತ್ತದೆ ಮತ್ತು ಮುಖ್ಯ ಪದಾರ್ಥಗಳನ್ನು ಪದರಗಳೊಂದಿಗೆ ಬಡಿಸಲಾಗುತ್ತದೆ. ಇದು ಬಳಸಲಾದ ಪದಾರ್ಥಗಳ ಸವಿ, ರುಚಿ ಮತ್ತುಅದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

ಲಖನೌದಲ್ಲಿರುವ ಹಲವು ಸ್ಥಳಗಳಲ್ಲಿ ನೀವು ಬಿರಿಯಾನಿಯ ಘಮ್ಮೆನ್ನುವ ಸುವಾಸನೆಯನ್ನು ಆನಂದಿಸಬಹುದು, ಇವುಗಳಲ್ಲಿ ಚೌಪತಿಯನ್ ಚೌಕ್, ಗೋಮತಿ ನಗರ, ಬಾಂಗ್ಲಾ ಬಜಾರ್ ಇತ್ಯಾದಿ. ಪ್ರಮುಖವಾದುದಾಗಿದೆ.


PC- Jbarta

ಹೈದರಾಬಾದ್

ಹೈದರಾಬಾದ್

ಆಗ್ರಾ ಬಿರಿಯಾನಿ ತಾಣಗಳ ಪಟ್ಟಿಯಲ್ಲಿ ಬಿರಿಯಾನಿ ರಾಜಧಾನಿ ಸೇರಿಸದಿರುವುದು ಆಕ್ಷೇಪಾರ್ಹ. ಹೈದರಾಬಾದ್, ಚಾರ್ಮಿನಾರ್ ಗೆ ಹೆಸರುವಾಸಿಯಾಗಿದ್ದು, ಇದು ಪಾಕ ಪದ್ದತಿ ಮತ್ತು ಕೌಶಲಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ನೀವು ಹಸಿದವರಾಗಿದ್ದು ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ರುಚಿ ನೋಡ ಬಯಸುವವರಾಗಿದ್ದಲ್ಲಿ ಖಂಡಿತವಾಗಿಯೂ ಹೈದರಾಬಾದಿನ ಹಳೇಯ ಬೀದಿಗಳಲ್ಲಿ ಅಡ್ಡಾಡಲೇ ಬೇಕು. ಇಲ್ಲಿ ನೀವು ಅತ್ಯಂತ ರುಚಿಕರವಾದ ಬಿರಿಯಾನಿಗಳನ್ನು ಸವಿಯಬಹುದಾಗಿದೆ.

ಈ ಖಾದ್ಯವನ್ನು ತಯಾರಿಸುವ ಬಗೆಯೇ ವಿಭಿನ್ನವಾದುದಾಗಿದೆ. ಮೊದಲು ಅನ್ನವನ್ನು ಬೇಯಿಸಲಾಗುತ್ತದೆ ಮಾಂಸವನ್ನು ಮಸಾಲೆಗಳ ಮಿಶ್ರಣದಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿಡಲಾಗುತ್ತದೆ ಮತ್ತು ಸುವಾಸನೆಯ ಅನ್ನವನ್ನು ಇದಕ್ಕೆ ಸೇರಿಸಲಾಗುತ್ತದೆ ಇಲ್ಲಿಗೆ ಅನ್ನವು ಇದರಲ್ಲಿರುವ ಎಲ್ಲಾ ಸುವಾಸನೆಗಳೊಂದಿಗೆ ಸಮನಾಗಿ ಮಿಶ್ರವಾಗುತ್ತದೆ. ಇದರಿಂದ ಒಂದು ವಿಭಿನ್ನ ಸುವಾಸನೆಯು ಹೊರಹೊಮ್ಮುತ್ತದೆ.

ಹೈದರಬಾದಿನ ಬಿರಿಯಾನಿ ಸಿಗುವ ಹಾಗೂ ಅನ್ವೇಷಿಸಬೇಕಾದ ಪ್ರಮುಖ ಸ್ಥಳಗಳೆಂದರೆ ಹೈದರ್ ಗುಡ, ನಲ್ಲಕುಂಟ, ಚಾರ್ ಮಿನಾರ್, ಸೈಫಾಬಾದ್ ಇತ್ಯಾದಿ.


PC- FoodPlate

ಕೊಲ್ಕತಾ

ಕೊಲ್ಕತಾ

ಕೊಲ್ಕತಾವು ಬಿರಿಯಾನಿ ತಯಾರಿಸುವ ಇನ್ನೊಂದು ಪ್ರಮುಖ ತಾಣವಾಗಿದೆ. ಕೊಲ್ಕತಾವು ಮಾಂಸದ ಬದಲಾಗಿ ಆಲೂಗಡ್ಡೆಯಿಂದ ತಯಾರಿಸಲಾಗುವ ಬಿರಿಯಾನಿಗೆ ಹೆಸರುವಾಸಿಯಾಗಿದೆ. ಕೊಲ್ಕತ್ತಾದಲ್ಲಿ ಮೊದಲ ಬಿರಿಯಾನಿ 19ನೇ ಶತಮಾನದಲ್ಲಿ ಮಾಡಲ್ಪಟ್ಟಿತು.

ಮಾಂಸವನ್ನು ಬಳಸಲು ಅಸಾಧ್ಯವಾದ ಈ ರಾಜ್ಯದ ಬಡ ಜನರು ಆಲೂಗಡ್ಡೆ ಮತ್ತು ಮೊಟ್ಟೆಗಳನ್ನು ಬಿರಿಯಾನಿಯಲ್ಲಿ ಪರಿಚಯಿಸಿದರು. ಇದರ ಪರಿಣಾಮವಾಗಿ, ವಿವಿಧ ರೀತಿಯ ಬಿರಿಯಾನಿಗಳ ತಯಾರಿಕೆಯ ಬೆಳವಣಿಗೆಗೆ ಕಾರಣವಾಯಿತು.

ಕೊಲ್ಕತಾ ಬಿರಿಯಾನಿಯ ಪ್ರಮುಖ ವಿಶೇಷತೆ ಈ ರುಚಿಕರ ಭಕ್ಷ್ಯವನ್ನು ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳಲ್ಲಿದೆ. ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗಗಳ ಬಳಕೆಯನ್ನು ಒಂದು ಬದಿಯಲ್ಲಿ ಅದರ ಪರಿಮಳವನ್ನು ಪ್ರತ್ಯೇಕಿಸಿದರೆ ಕೇಸರಿ ಜೊತೆಗೆ ಗುಲಾಬಿ ನೀರಿನೊಂದಿಗೆ ಬೇಯಿಸಲಾದ ಅಕ್ಕಿಯ ರುಚಿಯು ಮತ್ತೊಂದು ಬದಿಯಲ್ಲಿ ಅದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

ಪಾರ್ಕ್ ರಸ್ತೆ, ಸಾಲ್ಟ್ ಲೇಕ್, ಬಿಧಾನ್ ಸರಾನಿ, ಲೇಕ್ ಉದ್ಯಾನವನಗಳು ಮುಂತಾದ ಕಡೆ ನೀವು ಕೊಲ್ಕತಾದಲ್ಲಿ ವಿವಿಧ ಬಗೆಯ ಬಿರಿಯಾನಿಗಳನ್ನು ಸವಿಯಬಹುದು.

ಆದ್ದರಿಂದ, ನೀವು ನಿಮ್ಮ ರುಚಿಗನುಸಾರವಾಗಿ ಹಾಗೂ ವಿವಿಧ ಬಗೆಯ ಭಾರತದ ಪ್ರಮುಖ ಬಿರಿಯಾನಿ ತಯಾರಿಸುವ ಸ್ಥಳಗಳ ಅನ್ವೇಷಣೆ ಮಾಡಬಹುದಾಗಿದೆ. ನೀವು ಆಹಾರ ಪ್ರಿಯರಾಗಿದ್ದಲ್ಲಿ ಅದರಲ್ಲೂ ಬಿರಿಯಾನಿ ಪ್ರಿಯರಾಗಿದ್ದಲ್ಲಿ ಈ ಜಾಗಗಳಿಗೆ ಖಂಡಿತವಾಗಿಯೂ ಭೇಟಿ ನೀಡಬೇಕು. ಅತ್ಯಂತ ಉತ್ತಮವಾದ ಮತ್ತು ರುಚಿಕರ ಬಿರಿಯಾನಿಯನ್ನು ಸವಿಯುವ ಅದೃಷ್ಟವನ್ನು ತಪ್ಪಿಸದಿರಿ.

PC- Biswarup

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more