Search
  • Follow NativePlanet
Share
» »ಮಾನ್ಸೂನ್‌ನಲ್ಲಿ ಮುನ್ನಾರ್‌ಗೆ ಹೋಗೋ ಮಜಾನೇ ಬೇರೆ; ಮಳೆಯಲ್ಲಿ ಆನೆ ಸವಾರಿ ಮಾಡ್ಲೇ ಬೇಕು

ಮಾನ್ಸೂನ್‌ನಲ್ಲಿ ಮುನ್ನಾರ್‌ಗೆ ಹೋಗೋ ಮಜಾನೇ ಬೇರೆ; ಮಳೆಯಲ್ಲಿ ಆನೆ ಸವಾರಿ ಮಾಡ್ಲೇ ಬೇಕು

ದಕ್ಷಿಣ ಭಾರತದ ಅದ್ಭುತ ಹಿಲ್‌ ಸ್ಟೇಶನ್‌ಗಳಲ್ಲಿ ಕೇರಳದ ಮುನ್ನಾರ್‌ ಕೂಡಾ ಒಂದು. ಇಲ್ಲಿಗೆ ನೀವು ವರ್ಷದಲ್ಲಿ ಯಾವಾಗ ಬೇಕಾದರೂ ಹೋಗಬಹುದು. ಆದರೆ ಮಳೆಗಾಲದಲ್ಲಿ ಮುನ್ನಾರ್‌ಗೆ ಹೋಗುವ ಮಜಾನೆ ಬೇರೆ. ಮಳೆಗಾಲದಲ್ಲಿ ಮುನ್ನಾರ್‌ನಲ್ಲಿ ಅಷ್ಟೊಂದು ಸಂಖ್ಯೆಯ ಪ್ರವಾಸಿಗರು ಇರೋದಿಲ್ಲ. ಅಲ್ಲದೆ ಮಳೆಗಾಲದಲ್ಲಿ ಕಾಫಿಯ ಮಜಾವನ್ನೂ ಪಡೆಯಬಹುದು. ಹಾಗಿರುವಾಗ ಈ ಸೀಸನ್‌ನಲ್ಲಿ ಮುನ್ನಾರ್‌ಗೆ ಹೋಗುವ ಪ್ಲ್ಯಾನ್ ಮಾಡಲೇ ಬೇಕು.

ಕುಂಡಲಾ ಕರೆಯಲ್ಲಿ ಬೋಟಿಂಗ್

ಕುಂಡಲಾ ಕರೆಯಲ್ಲಿ ಬೋಟಿಂಗ್

PC: Ranjithsiji

ಮುನ್ನಾರ್ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ನೀವು ಸಾಮಾನ್ಯವಾದ ಸೈಟ್‌ಸೀಯಿಂಗ್‌ಗಿಂತ ಹೊಸತನ್ನೇನಾದರೂ ಮಾಡಬೇಕೆಂದೆನಿಸಿದಲ್ಲಿ ಮಳೆಗಾಲದಲ್ಲಿ ಬೋಟಿಂಗ್‌ನ ಮಜಾವನ್ನು ಪಡೆಯಬಹುದು. ಇದು ಮುಖ್ಯ ನಗರದಿಂದ ೨೦ ಕಿ.ಮೀ ದೂರದಲ್ಲಿ ಕುಂಡಲ ಕೆರೆ ಇದೆ. ಮುನ್ನಾರ್‌ನ ಪ್ರಾಕೃತಿಕ ಸೌಂದರ್ಯದ ನಡುವೆ ಬೋಟ್ ರೈಡಿಂಗ್ ಮಾಡುವ ಅನುಭವ ಉತ್ತಮವಾಗಿರುತ್ತದೆ.

ಜಲಪಾತ

ಜಲಪಾತ

PC:Amal94nath

ಮುನ್ನಾರ್‌ನಿಂದ 30 ಕಿ.ಮಿ ದೂರದಲ್ಲಿ ಒಂದು ಲಕ್ಕೋಮ್ ಜಲಪಾತವಿದೆ. ಎರಾವಿಕ್ಕುಲಮ್ ನ್ಯಾಷನಲ್ ಪಾರ್ಕ್ ಇದೆ. ಎರಾವಿಕ್ಕುಲಮ್ ನದಿಯಿಂದಾಗಿ ಈ ಜಲಪಾತ ನಿರ್ಮಾಣವಾಗಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ದಟ್ಟ ಕಾಡಿನ ಮಧ್ಯೆ ಹೋಗಬೇಕು. ಈ ಸ್ಥಳವು ಸಾಹಸಮಯ ತಾಣಗಳನ್ನು ಇಷ್ಟ ಪಡುವವರ ಮಧ್ಯೆ ಬಹಳ ಪ್ರಸಿದ್ಧಿ ಹೊಂದಿದೆ.

ಆನೆ ಸವಾರಿ

ಆನೆ ಸವಾರಿ

PC:Arshad.ka5

ನೀವು ಈ ಮೊದಲು ಆನೆ ಸವಾರಿ ಮಾಡಿರುವಿರಿ. ಹೀಗಿದ್ದರೂ ಕೂಡಾ ಮುನ್ನಾರ್‌ನಲ್ಲಿ ಆನೆ ಸವಾರಿಯನ್ನು ಮಾಡಲೇ ಬೇಕು. ಅದೂ ಕೂಡಾ ಮಳೆಗಾಲದಲ್ಲಿ ಆನೆಯ ಮೇಲೆ ಸವಾರಿ ಮಾಡೋದಂದರೆ ತುಂಬಾ ಖುಷಿ ನೀಡುತ್ತದೆ. ಆನೆಯ ಬೆನ್ನಮೇಲೆ ಕುಳಿತುಕೊಂಡು ಮುನ್ನಾರ್‌ನ ಕಾಡುಗಳಲ್ಲಿ ಎತ್ತರದ ಮರಗಿಡಗಳ ನಡುವೆ ಚಹ, ಕಾಫಿ ತೋಟಗಳ ನಡುವೆ ಸುತ್ತಾಡುವುದು ನಿಜಕ್ಕೂ ಬಹಳ ಸುಂದರವಾಗಿರುತ್ತದೆ.

ಮುನ್ನಾರ್‌ಗೆ ತಲುಪುವುದು ಹೇಗೆ?

ಮುನ್ನಾರ್‌ಗೆ ತಲುಪುವುದು ಹೇಗೆ?

PC: Aruna

ವಿಮಾನದ ಮೂಲಕ: ಮುನ್ನಾರ್‌ಗೆ ಯಾವುದೇ ಏರ್‌ಪೋರ್ಟ್ ಇಲ್ಲ. ಅಲ್ಲಿಗೆ ಸಮೀಪದ ಏರ್‌ಪೋರ್ಟ್ ಎಂದರೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಮುನ್ನಾರ್‌ನಿಂದ 110 ಕಿ.ಮಿ ದೂರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಮೂಲಕ ಮುನ್ನಾರ್‌ಗೆ ತಲುಪಬಹುದು. ಇದಲ್ಲವಾದರೆ ಮಧುರೈ ಏರ್‌ಪೋರ್ಟ್ ಮುನ್ನಾರ್‌ನಿಂದ 140 ಕಿ.ಮಿ ದೂರದಲ್ಲಿದೆ.

ರೈಲು ಮಾರ್ಗ

ರೈಲು ಮಾರ್ಗ

ಮುನ್ನಾರ್‌ಗೆ ಸಮೀಪದ ರೈಲು ನಿಲ್ದಾಣವೆಂದರೆ ಅಲೂವಾ ಅದು ಮುನ್ನಾರ್‌ನಿಂದ 110 ಕಿ.ಮೀ ದೂರದಲ್ಲಿದೆ. ಇನ್ನೂ ಏರ್ನಾಕುಲಂ ಏರ್‌ಪೋರ್ಟ್ ಮುನ್ನಾರ್‌ನಿಂದ130ಕಿ.ಮೀ ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮುನ್ನಾರ್‌ನ್ನು ತಲುಪಬಹುದು.
ಬಸ್‌: ಬಸ್‌ ಮೂಲಕ ಹೋಗುವುದಾದರೆ ಕೇರಳ, ತಮಿಳುನಾಡಿನ ಹೆಚ್ಚಿನ ಬಸ್‌ಗಳು ಮುನ್ನಾರ್‌ಗೆ ಹೋಗುತ್ತವೆ. ನೀವು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಮುನ್ನಾರ್‌ಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X