Search
  • Follow NativePlanet
Share
» »ಹರಿದ್ವಾರದ ಈ ಪೂಜ್ಯನೀಯ ದೇವಾಲಯಗಳಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸಿ

ಹರಿದ್ವಾರದ ಈ ಪೂಜ್ಯನೀಯ ದೇವಾಲಯಗಳಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸಿ

ಹಿಂದೂ ಭಕ್ತರ ಒಂದು ಅತ್ಯಂತ ಪ್ರಮುಖವಾದ ಸ್ಥಳವಾದ ಹರಿದ್ವಾರ, ಜಗತ್ತಿನ ಅತೀ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳ ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರಿಂದ ಭೇಟಿಕೊಡಲ್ಪಡುತ್ತದೆ. ಇದರ ನಿಖರವಾದ ಇತಿಹಾಸ ಇನ್ನೂ ತಿಳಿದಿಲ್ಲವಾದುದರಿಂದ ಇದು ಭಾರತದ ಅತ್ಯಂತ ಹಳೆಯ ಸ್ಥಳಗಳಲ್ಲಿ ಒಂದಾಗಿರಬಹುದು ಎಂದು ನಂಬಲಾಗುತ್ತದೆ.

ಇದು ವೇದಗಳ ಕಾಲದಿಂದಲೂ ಇದೆ ಎಂದು ಹೇಳಲಾಗುತ್ತದೆ. ಈ ಸ್ಥಳವನ್ನು ಪ್ರಾಚೀನ ಹಿಂದೂ ಗ್ರಂಥಗಳು ಮತ್ತು ಪುರಾಣಗಳಲ್ಲಿ ಅನೇಕ ಸಲ ಉಲ್ಲೇಖಿಸಲಾಗಿದೆ. ಆದುದರಿಂದ ಹಿಂದುಗಳಲ್ಲಿ ಮೋಕ್ಷ ಪಡೆಯಲು ಅತ್ಯುನ್ನತ ಸ್ಥಳವೆಂದು ನಂಬಲಾಗುತ್ತದೆ.

ಈ ದೇವಾಲಯಕ್ಕೆ ಯಾರು ಸಂಪೂರ್ಣ ಭಕ್ತಿ ಭಾವದಿಂದ ಬರುತ್ತಾರೋ ಅವರು ಇಲ್ಲಿ ಸಮೃದ್ದ ಮತ್ತು ಸುಖಮಯ ಜೀವನವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದುದರಿಂದ ಹರಿದ್ವಾರದ ಈ ದೇವಾಲಯಗಳು ಮೋಕ್ಷಕ್ಕೆ ದಾರಿ ತೋರಿಸುವ ಸ್ಥಳಗಳೆಂದು ನಂಬಲಾಗುತ್ತದೆ. ಈ ಅತ್ಯಮೂಲ್ಯವಾದಂತಹ ಸ್ಥಳಗಳನ್ನು ನೋಡಲು ನೀವು ಬಯಸುವುದಿಲ್ಲವೆ?

 ಹಾರ್ ಕಿ ಪೌರಿ

ಹಾರ್ ಕಿ ಪೌರಿ

PC:mckaysavage

ಇವೆಲ್ಲವುಗಳಲ್ಲಿ ಅತ್ಯಂತ ಪವಿತ್ರವಾದುದೆಂದರೆ ಅದು ಹಾರ್ ಕಿ ಪೌರಿ ಇದು ಹರಿದ್ವಾರದಲ್ಲಿರುವ ಗಂಗಾ ನದಿಯ ಪವಿತ್ರ ದಡವಾಗಿದೆ ಮತ್ತು ಈ ಜಾಗದಲ್ಲಿ ವೇದಗಳ ಕಾಲದಲ್ಲಿ ವಿಷ್ಣುದೇವರು ಮತ್ತು ಶಿವ ದೇವರು ಒಟ್ಟಿಗೆ ಪ್ರತ್ಯಕ್ಷವಾದ ಸ್ಥಳವೆಂದು ನಂಬಲಾಗುತ್ತದೆ. ಇದು ಗಂಗಾ ನದಿಯ ಪವಿತ್ರ ಜಲವು ಪರ್ವತಗಳನ್ನು ಬಿಟ್ಟು ಭಾರತದ ಬಯಲು ಪ್ರದೇಶಗಳಿಗೆ ಪ್ರವೇಶಿಸುವ ನಿಖರ ಸ್ಥಳವೆಂದು ಹೇಳಲಾಗುತ್ತದೆ.

ಇಂತಹ ಆಧ್ಯಾತ್ಮಿಕ ತಾಣಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಇಲ್ಲಿಯ ಸೌಂದರ್ಯತೆ ಮತ್ತು ಭವ್ಯತೆಯನ್ನು ಮತ್ತು ಜಗತ್ತಿನಾದ್ಯಂತದ ಯಾತ್ರಾರ್ಥಿಗಳು ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದನ್ನು ನೋಡುವುದು ಹೇಗಿರಬಹುದು? ಹಾರ್ ಕಿ ಪೌರಿಯ ಧಾರ್ಮಿಕ ಮಹತ್ವದಿಂದಾಗಿ ಈ ಸ್ಥಳಕ್ಕೆ ಭೇಟಿ ಕೊಡದೇ ಇದ್ದರೆ ಮತ್ತು ಇದರ ನೀರಿನಲ್ಲಿ ಒಮ್ಮೆ ಸ್ನಾನ ಮಾಡದೇ ಇದ್ದರೆ ನಿಮ್ಮ ಹರಿದ್ವಾರದ ಪ್ರವಾಸವು ಅಪೂರ್ಣವೆಂದು ಹೇಳಲಾಗುತ್ತದೆ.

ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಅತೀ ದೊಡ್ಡ ಹಿಂದೂ ಧಾರ್ಮಿಕ ಸಭೆಯಾದ ಕುಂಭ ಮೇಳವೂ ಕೂಡಾ ಹಾರ್ ಕಿ ಪೌರಿಯಲ್ಲಿಯೇ ಆಚರಿಸಲಾಗುತ್ತದೆ ಎಂಬುವುದು ನಿಮಗೆ ಗೊತ್ತಿದೆಯೇ ? ಆಧ್ಯಾತ್ಮಿಕತೆಯ ಮತ್ತು ಭಕ್ತಿಪರವಶತೆಯ ಕಣಿವೆಗಳಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳಲು ಇದೊಂದು ಸೂಕ್ತವಾದ ಸ್ಥಳವಲ್ಲವೆ?

ಯಾವುದೇ ಊರಿಗೆ ಹೋದ್ರೂ ಇದನ್ನು ಕೊಂಡೋಗೋದನ್ನಂತೂ ಮರೆಲೇ ಬಾರದು ಯಾವುದೇ ಊರಿಗೆ ಹೋದ್ರೂ ಇದನ್ನು ಕೊಂಡೋಗೋದನ್ನಂತೂ ಮರೆಲೇ ಬಾರದು

ಮನ್ಸಾ ದೇವಿ ದೇವಾಲಯ

ಮನ್ಸಾ ದೇವಿ ದೇವಾಲಯ

PC: Antoine Taveneaux

ಶಿವಾಲಿಕ್ ಬೆಟ್ಟದ ಮೇಲೆ ನೆಲೆಸಿರುವ ಮನ್ಸಾ ದೇವಿ ದೇವಾಲಯವು ಹರಿದ್ವಾರದ ಅತ್ಯಂತ ಭೇಟಿ ಕೊಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದು ಮನ್ಸಾ ದೇವಿಯ ವಾಸಸ್ಥಾನವೆಂದು ನಂಬಲಾಗುತ್ತದೆ. ಈ ದೇವಾಲಯದ ನಿಖರವಾದ ಇತಿಹಾಸವು ಇನ್ನೂ ತಿಳಿದಿಲ್ಲವಾದರೂ ಈ ದೇವಾಲಯವನ್ನು ಸಾವಿರಾರು ವರ್ಷಗಳ ಹಿಂದೆ ಮನ್ಸಾಳ ಮುಂದೆ ಶಿವ ದೇವರು ಪ್ರತ್ಯಕ್ಷವಾಗಿ ಅವಳಿಗೆ ಅನೇಕ ದೈವಿಕ ಶಕ್ತಿಗಳನ್ನು ಕರುಣಿಸಿ ಅವಳನ್ನು ದೇವಿಯಾಗಿ ಮಾರ್ಪಾಟು ಮಾಡಿ ಈ ದೇವಾಲಯವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ.

ಇಂದು ಹರಿದ್ವಾರದಲ್ಲಿಯ ಈ ದೇವಾಲಯವು ಪ್ರತೀವರ್ಷ ಲಕ್ಷಾಂತರ ಹಿಂದು ಯಾತ್ರಿಗಳಿಂದ ಮತ್ತು ಪ್ರವಾಸಿಗರಿಂದ ಭೇಟಿಕೊಡಲ್ಪಡುವ ಐದು ಪ್ರಮುಖ ಯಾತ್ರೀ ಸ್ಥಳಗಳಲ್ಲಿ ಒಂದಾಗಿದೆ. ಈ ಬೆಟ್ಟಗಳಲ್ಲಿ ಚಾರಣದ ಮೂಲಕ ಅಥವಾ ಹಗ್ಗದಲ್ಲಿಯ ಪ್ರಯಾಣ ಸೌಕರ್ಯದ ಮೂಲಕ ಹೇಗಾದರೂ ದೇವಾಲಯವನ್ನು ತಲುಪಬಹುದು.

ದೇವಾಲಯದ ಮೇಲ್ಭಾಗದಿಂದ ಗಂಗಾನದಿಯ ಮತ್ತು ಹರಿದ್ವಾರದ ಸುಂದರ ದೃಶ್ಯವನ್ನು ನೋಡಬಹುದಾಗಿದೆ ಇದೊಂದು ಸ್ವರ್ಗಸ್ವರೂಪವಾದ ತಾಣವೆಂದು ನಿಮಗನಿಸುವುದಿಲ್ಲವೆ? ಹೌದು ಎಂದಾದಲ್ಲಿ, ಹರಿದ್ವಾರಕ್ಕೆ ಪ್ರವಾಸ ಹೂಡಲು ಏಕೆ ಯೋಚಿಸುತ್ತಿರುವಿರಿ?

ಮಾಯಾ ದೇವಿ ದೇವಾಲಯ

ಮಾಯಾ ದೇವಿ ದೇವಾಲಯ

PC: World8115

11ನೇ ಶತಮಾನಗಳ ಇತಿಹಾಸವಿರುವ ಮಾಯಾ ದೇವಿ ದೇವಾಲಯವು ಶಕ್ತಿ ಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಈ ಸ್ಥಳದಲ್ಲಿ ವಿಷ್ಣು ದೇವರು ಶಿವ ದೇವರನ್ನು ಸತಿ ದೇವಿಯ ಮರಣದ ನೋವಿನಿಂದ ಪಾರುಗೊಳಿಸಲು ಶವದ ನಾಭಿ ಮತ್ತು ಹೃದಯವನ್ನು 52 ಭಾಗಗಳಾಗಿ ಕತ್ತರಿಸಿದಾಗ ಬಿದ್ದ ಸ್ಥಳವಿದು ಎಂದು ನಂಬಲಾಗುತ್ತದೆ.
ಶಕ್ತಿ ದೇವಿಯ ಸ್ವರೂಪವಾದ ಮಾಯಾ ದೇವಿಗೆ ಅರ್ಪಿತವಾದ ದೇವಾಲಯವಾಗಿರುವ ಇದು ಹರಿದ್ವಾರದ ಪವಿತ್ರ ದೇವಾಲಯಗಳಲ್ಲಿ ಒಂದೆನಿಸಿದೆ. ಈ ದೈವಿಕ ಮಹತ್ವವುಳ್ಳ ಮತ್ತು ಇಲ್ಲಿಗೆ ಭೇಟಿ ಕೊಡುವವರ ಕೋರಿಕೆಗಳನ್ನು ಈಡೇರಿಸುವ ಈ ದೇವಾಲಯಕ್ಕೆ ಯಾವುದೇ ಹಿಂದೂ ಭಕ್ತನೂ ಭೇಟಿ ಕೊಡದೆ ಇರಲು ಸಾಧ್ಯವಿಲ್ಲ.

ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯೂ ಸೇರಿದೆ. ಈ ಸುಂದರವಾದ ದೇವಾಲಯವು ಶಾಂತಿಯುತವಾದ ಮತ್ತು ಆಧ್ಯಾತ್ಮಿಕತೆಯ ಪರಿಸರದಲ್ಲಿರುವುದರಿಂದ ನಿಮಗೆ ಖಂಡಿತವಾಗಿಯೂ ಧ್ಯಾನ ಮಾಡಿ ಆತ್ಮವಿಶ್ವಾಸವನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ. ಆದುದರಿಂದ ಇನ್ನೂ ಏನು ಯೋಚನೆ ಮಾಡುತ್ತಿರುವಿರಿ ?ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಲು ಈ ಕೂಡಲೇ ಯೋಚನೆ ಮಾಡಿ.

ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ

ಚಾಂದಿ ದೇವಿ ದೇವಾಲಯ

ಚಾಂದಿ ದೇವಿ ದೇವಾಲಯ

PC:World8115

ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತಹ ಇನ್ನೊಂದು ಹರಿದ್ವಾರದಲ್ಲಿಯ ದೇವಾಲಯವೆಂದರೆ ಅದು ಚಾಂದಿ ದೇವಿ ದೇವಾಲಯ. ಇದು ಶಿವಾಲಿಕ ಪರ್ವತದ ವಿಸ್ತಾರದ ಮಧ್ಯೆ ನೀಲ ಪರ್ವತದ ಮೇಲೆ ಇದೆ ಇದನ್ನು 20ನೇ ಶತಮಾನದಲ್ಲಿ ಕಾಶ್ಮೀರದ ರಾಜನಿಂದ ನಿರ್ಮಿತವಾಯಿತು.

ಚಾಂದಿ ದೇವಿಯ ವಿಗ್ರಹವು ದೇವಾಲಯದ ಒಳಭಾಗದಲ್ಲಿ ಸ್ಥಾಪಿತವಾಗಿದ್ದು ಈ ದೇವಾಲಯಕ್ಕೆ 8ನೇ ಶತಮಾನಗಳಷ್ಟು ಹಳೆಯ ಇತಿಹಾಸವಿದೆ ಎಂದು ನಂಬಲಾಗುತ್ತದೆ. ಇದನ್ನು ಪ್ರಸಿದ್ದ ಹಿಂದೂ ಧರ್ಮ ಗುರುವಾದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲಾಯಿತು ಎಂದು ನಂಬಲಾಗುತ್ತದೆ. ಮಾನ್ಸಾ ದೇವಿ ದೇವಾಲಯದಂತೆ ಈ ದೇವಾಲಯವನ್ನು ತಲುಪಲೂ ಕೂಡಾ ಚಾರಣ ಅಥವಾ ಹಗ್ಗದ ಪ್ರಯಾಣದ ಸೇವೆಯ ಮೂಲಕ ತಲುಪಬಹುದಾಗಿದೆ.

ಧಕ್ಷೇಶ್ವರ ಮಹಾದೇವ್ ದೇವಾಲಯ

ಧಕ್ಷೇಶ್ವರ ಮಹಾದೇವ್ ದೇವಾಲಯ

PC:World8115

ಶಿವ ದೇವರಿಗೆ ಸಮರ್ಪಿತವಾದ ಈ ದೇವಾಲಯವು ಹರಿದ್ವಾರದ ಕೆಲವೇ ಕೆಲವು ಐತಿಹಾಸಿಕ ಪ್ರಾಮುಖ್ಯತೆಯನ್ನು ಒಳಗೊಂಡ ದೇವಾಲಯಗಳಲ್ಲೊಂದಾಗಿದೆ. ಇದನ್ನು 1810ರಲ್ಲಿ ಧಾನ್ ಕೌರ್ ರಾಣಿಯಿಂದ ನಿರ್ಮಿಸಲಾಯಿತು ಇಂದು ಇದು ಹರಿದ್ವಾರದ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಯಾತ್ರೀ ಸ್ಥಳದಲ್ಲಿ ಒಂದೆನಿಸಿದ್ದು ಶೈವ ಪಂಥದವರಿಗೆ ಇದು ಪವಿತ್ರ ಸ್ಥಳವಾಗಿದೆ.

ಈ ದೇವಾಲದ ಸ್ಥಳವು ಸತಿ ದೇವಿಯ ತಂದೆಯಾದ ದಕ್ಷ ಪ್ರಜಾಪತಿ ವಾಸವಿದ್ದ ಸ್ಥಳವಾಗಿದ್ದು ಇಲ್ಲಿ ಸಾವಿರಾರು ವರ್ಷಗಳ ಹಿಂದೆ ಯಜ್ಞ ನಡೆಸಲಾಗಿತ್ತು ಎಂದು ಹೇಳಲಾಗುತ್ತದೆ ಈ ದೇವಾಲಯಕ್ಕೆ ದಕ್ಷರಾಜನ ಹೆಸರನ್ನೇ ಇಡಲಾಗಿದೆ.

ಈ ಸುಂದರವಾದ ಪ್ರಾಚೀನ ಸೌಂದರ್ಯತೆಯಲ್ಲಿ ಮತ್ತು ಆಧ್ಯಾತ್ಮಿಕತೆಯ ಸೆಳೆವಿರುವ ಜಾಗದಲ್ಲಿ ನೀವು ಭೇಟಿ ಕೊಟ್ಟು ಅಲ್ಲಿಯ ಆಧ್ಯಾತ್ಮಿಕ ಸೆಳೆತದಲ್ಲಿ ಕಳೆದು ಹೋದರೆ ಹೇಗಿರಬಹುದು? ಇಲ್ಲಿಯ ಶಾಂತಿಯುತವಾದ ಪರಿಸರ ಮತ್ತು ದೇವಾಲಯದ ನೈಸರ್ಗಿಕ ಸುತ್ತಮುತ್ತಲು ಖಂಡಿತವಾಗಿಯು ನಿಮ್ಮ ಮನಸ್ಸು ಜೀವ ಮತ್ತು ದೇಹವನ್ನು ತೃಪ್ತಿಪಡಿಸುವಲ್ಲಿ ಸಂಶಯವೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X