Search
  • Follow NativePlanet
Share
» »ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ಚಿಕ್ಕಮಗಳೂರಿನಲ್ಲೊಂದು ವಿಶೇ‍ಷವಾದ ದೇವಿಯ ದೇವಸ್ಥಾನವಿದೆ. ಬೆಟ್ಟದ ಮೇಲಿರುವ ಈ ದೇವಸ್ಥಾನದ ವಿಶೇಷತೆ ಎಂದರೆ ಜಾತ್ರೆ ವೇಳೆ ದೇವಾಲಯದ ಮುಚ್ಚಿದ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಈ ದೃಶ್ಯವನ್ನು ನೋಡಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನಿಡುತ್ತಾರೆ.

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

PC: Deepak.pcw

ಚಿಕ್ಕಮಗಳೂರಿನಿಂದ 20ಕಿ.ಮೀ ದೂರದಲ್ಲಿರುವ ಮಲ್ಲೇನಹಳ್ಳಿಯ ಬಿಂಡಿಗಾ ಗ್ರಾಮದಲ್ಲಿ 3 ಸಾವಿರ ಅಡಿ ಎತ್ತರದ ಬೆಟ್ಟವಿದೆ. ಇದನ್ನು ದೇವಿರಮ್ಮ ಬೆಟ್ಟ ಎಂದೇ ಕರೆಯಲಾಗುತ್ತದೆ. ಇದು ರಾಜ್ಯದ ಎತ್ತರ ಶಿಖರಗಳಲ್ಲಿ ಒಂದಾಗಿದೆ. ರಾಜ್ಯದ ಎತ್ತರದ ಶಿಖರವಾದ ಮುಳ್ಳಯ್ಯನ ಗಿರಿಗೆ ಹೊಂದಿಕೊಂಡಿದೆ. .

 ಊರ ದೇವತೆ ದೇವಿರಮ್ಮ

ಊರ ದೇವತೆ ದೇವಿರಮ್ಮ

PC:Sneha Sevashrama Samsthe

ಸುತ್ತಲೂ ಹಚ್ಚಹಸಿರಿನ ನಿಸರ್ಗದ ಸೌಂದರ್ಯದ ನಡುವೆ ಚಿಕ್ಕಮಗಳೂರಿನ ಊರ ದೇವತೆ ದೇವಿರಮ್ಮ ಇದ್ದಾಳೆ. ನರಕಚತುರ್ದಶಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬೆಟ್ಟದಲ್ಲಿ ಹೊತ್ತಿ ಉರಿಯುವ ದೀಪವನ್ನು ನೋಡಿದ ನಂತರವೇ ಊರವರು ಮನೆಯಲ್ಲಿ ದೀಪಾವಳಿ ಆಚರಿಸುತ್ತಾರೆ. ದೇವಿರಮ್ಮನಿಗೂ ಮೈಸೂರಿನ ಚಾಮುಂಡೇಶ್ವರಿಗೂ ಸಂಬಂಧವಿದೆಯಂತೆ.

ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಬರೀ ಗಾಲಲ್ಲಿ ಬೆಟ್ಟ ಹತ್ತಬೇಕು

ಬರೀ ಗಾಲಲ್ಲಿ ಬೆಟ್ಟ ಹತ್ತಬೇಕು

PC:Sneha Sevashrama Samsthe

ಹಬ್ಬದ ಮರುದಿನ ತನ್ನಿಂದ ತಾನೇ ದೇಗುಲದ ಬಾಗಿಲು ತೆರೆಯುತ್ತದೆ. ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಆಸೆ ಈಡೇರುತ್ತದಂತೆ. ಅದಕ್ಕಾಗಿ ಜನರು ಬರೀ ಗಾಲಲ್ಲಿ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಿರಮ್ಮ ಬೆಟ್ಟಕ್ಕೆ ಹೋಗುವವರು ಉಪವಾಸ ಮಾಡುತ್ತಾರೆ. ಬರೀಗಾಲಲ್ಲೇ ನಡೆಯಬೇಕು. ಸಾವಿರಾರು ಎತ್ತರದ ಪ್ರದೇಶದಲ್ಲಿ ದೇವಿ ನೆಲೆಸಿರುವುದರಿಂದ ಭಕ್ತರು ಬೆಟ್ಟಗುಡ್ಡಗಳನ್ನು ಹತ್ತಿಕೊಂಡೇ ಹೋಗಬೇಕು. ಕಲ್ಲು ಮುಲ್ಲಿನ ದಾರಿಯಲ್ಲಿ ಚಪ್ಪಲಿ ಧರಿಸದೆ ನಡೆದರಷ್ಟೇ ದೇವಿಯ ಕೃಪೆಗೆ ಪಾತ್ರರಾಗಲು ಸಾಧ್ಯ ಎನ್ನುತ್ತಾರೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

800 ವರ್ಷಗಳ ಹಿಂದೆ ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಈ ಐದು ಜನ ತಪಸ್ವಿಗಳು. ಜನ ೫ ಜನ ತಪಸ್ವಿಗಳು ಚಂದ್ರದ್ರೋಣ ಪರ್ವತದಲ್ಲಿ ನೆಲೆಸುತ್ತಿದ್ದರಂತೆ. ಆಗ ದೇವಿರಮ್ಮ ಇವರ ಬಳಿಗೆ ಬಂದು ತನಗೆ ನೆಲೆಸಲು ಸ್ಥಳ ನೀಡುವಂತೆ ಕೋರಿದಳಂತೆ. ತಾವು ಐದು ಜನರು ಪುರುಷರಾಗಿದ್ದರಿಂದ ತಮ್ಮಿಂದ ಸ್ವಲ್ಪ ಅಣತಿ ದೂರದಲ್ಲಿ ನೆಲೆಸುವಂತೆ ಈ ಬೆಟ್ಟವನ್ನುತೋರಿಸುತ್ತಾರೆ. ಅಂತೆಯೇ ದೇವಿರಮ್ಮ ಆ ಬೆಟ್ಟದಲ್ಲಿ ಹೋಗಿ ನೆಲೆಸುತ್ತಾಳೆ. ಅಂದಿನಿಂದ ಈ ಬೆಟ್ಟವನ್ನು ದೇವಿರಮ್ಮ ಬೆಟ್ಟ ಎನ್ನಲಾಗುತ್ತದೆ.

ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ದೇವಿರಮ್ಮನ ದರ್ಶನ

ದೇವಿರಮ್ಮನ ದರ್ಶನ

ದೇವಿರಮ್ಮ ಅಲ್ಲೆ ಜಪ ತಪಗಳನ್ನು ಮಾಡುತ್ತ ಐಕ್ಯವಾದಳು ಎನ್ನಲಾಗುತ್ತದೆ. ಬೆಟ್ಟದ ಮೇಲಿನಿಂದ ದೇವಿರಮ್ಮ ಊರ ಜನರನ್ನು ರಕ್ಷಿಸುತ್ತಿದ್ದಾಳೆ ಎನ್ನಲಾಗುತ್ತದೆ. ಬಿಂಡಿಗಾ ಗ್ರಾಮದಲ್ಲಿ ದೇವಸ್ಥಾನವಿದ್ದರೂ ಭಕ್ತರು ಅದರ ಮೂಲಸ್ಥಾನಕ್ಕೆ ಹೋಗಿಯೇ ದೇವಿರಮ್ಮನ ದರ್ಶನ ಪಡೆಯುತ್ತಾರೆ. ಚಿಕ್ಕಮಗಳೂರಿನಿಂದ ತರಿಕೆರೆಗೆ ಸಾಗುವ ದಾರಿಯಲ್ಲಿ ಈ ದೇವಸ್ಥಾನವಿದೆ. ೨೦ ಕಿ.ಮಿ ವಾಹನದ ಮೂಲಕ ಸಾಗಿದರೆ ೮ ಕಿ. ನಡೆಯಬೇಕು. ಇಲ್ಲಿ ಯಾವುದೇ ರಸ್ತೆಇಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more